• Home
  • »
  • News
  • »
  • state
  • »
  • Mysuru Top 5 News: ದಸರಾಗೆ ಚಾಲನೆ, ಮೈಸೂರಿನಲ್ಲಿ ಹಬ್ಬದ ಸಂಭ್ರಮ, ಖಾಸಗಿ ದರ್ಬಾರ: ಟಾಪ್ ನ್ಯೂಸ್​ಗಳು

Mysuru Top 5 News: ದಸರಾಗೆ ಚಾಲನೆ, ಮೈಸೂರಿನಲ್ಲಿ ಹಬ್ಬದ ಸಂಭ್ರಮ, ಖಾಸಗಿ ದರ್ಬಾರ: ಟಾಪ್ ನ್ಯೂಸ್​ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂದಿನಿಂದ ದಸರಾಗೆ ವಿದ್ಯುಕ್ತ ಚಾಲನೆ ನೀಡಲಾಗಿದೆ. ಇವತ್ತಿನ ಮೈಸೂರು ದಸರಾಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳು ಇಲ್ಲಿವೆ

  • Share this:

1.ನಾಡಹಬ್ಬಕ್ಕೆ ಚಾಲನೆ ನೀಡಿದ ರಾಷ್ಟ್ರಪತಿಗಳು, ಅರಮನೆಯಲ್ಲಿ ಖಾಸಗಿ ದರ್ಬಾರ್


ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ನಾಡದೇವಿ ಚಾಮುಂಡೇಶ್ವರಿಗೆ (Goddess Chamundeshwari Devi) ಪುಷ್ಪಾರ್ಚನೆ ಮಾಡುವ ನಾಡಹಬ್ಬ ದಸರೆಗೆ ಚಾಲನೆ ನೀಡಿದರು. ಈ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸೇರಿದಂತೆ ಸಚಿವರು ಉಪಸ್ಥಿತರಿದ್ದರು. ಇತ್ತ ಅರಮನೆಯಲ್ಲಿ ಖಾಸಗಿ ದರ್ಬಾರ್ (Darbar) ನಡೆಯಿತು. ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರು 7ನೇ ಬಾರಿ ಖಾಸಗಿ ದರ್ಬಾರ್ ನಡೆಸಿದರು. ಬೆಳಗ್ಗೆ 11.15ರಿಂದ ಆರಂಭವಾದ ಖಾಸಗಿ ದರ್ಬಾರ್ 45 ನಿಮಿಷಗಳಲ್ಲಿ ಮುಕ್ತಾಯವಾಯ್ತು. ಸಾಂಪ್ರದಾಯಿಕ ರಾಜ ಪೋಷಾಕಿನಲ್ಲಿ‌ ನವರಾತ್ರಿ ದರ್ಬಾರ್ ನಡೆಸಿದರು. ರಾಜಮನೆತನದ ಪಟ್ಟದ ಕತ್ತಿಯೊಂದಿಗೆ ಸಿಂಹಾಸನ ಅಲಂಕರಿಸಿದರು. ದರ್ಬಾರ್ ಸಂದರ್ಭದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ (Pramodadevi Wadiyar), ರಾಜಕುಮಾರಿ ತ್ರಿಷಿಕಾ (Trishika Wadiyar) ಹಾಜರಿದ್ದರು.


mysuru today news update 26 september 2022 mrq
ಒಡೆಯರ್ ಕುಟುಂಬ


2.ರಾಜಮನೆತನದ ಫೋಟೋ ವೈರಲ್


ಖಾಸಗಿ ದರ್ಬಾರ್​ಗೂ ಮುನ್ನ ರಾಜವಂಶಸ್ಥರು ಕುಟುಂಬ ಸಮೇತರಾಗಿ ಕಾಣಿಸಿಕೊಂಡರು. ಈ ವೇಳೆ ಕ್ಲಿಕ್ಕಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೇದ- ಘೋಷಗಳೊಂದಿಗೆ ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದ ನಂತರ ಯುದುವೀರ್ ಒಡೆಯುರ್ ದರ್ಬಾರ್ ನಡೆಸಿದರು. ರಾಜ ವಂಶಸ್ಥರಾದ ರಾಜಮಾತೆ ಪ್ರಮೋದಾದೇವಿ ಒಡೆಯರ್, ಯದುವೀರ್ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್, ಪುತ್ರ ಆದ್ಯವೀರ್ ಒಡೆಯರ್ ಜೊತೆಯಾಗಿ ಕ್ಲಿಕ್ಕಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಖಾಸಗಿ ದರ್ಬಾರ್ ವೇಳೆ ಯದುವೀರ್ ಅವರಿಗೆ 23 ದೇವಾಲಯಗಳ ಪ್ರಸಾದ ನೀಡುವ ಮೂಲಕ ಶುಭ ಕೋರಲಾಯ್ತು.


mysuru today news update 26 september 2022 mrq
ಖಾಸಗಿ ದರ್ಬಾರ್


ಇದನ್ನೂ ಓದಿ: Viral Video: ಆಟೋ ಚಾಲಕನಿಗೆ ಕನ್ನಡದಲ್ಲಿ ಖಡಕ್ ಅವಾಜ್ ಹಾಕಿದ ಜರ್ಮನ್ ಯುವತಿ, ವೈರಲ್ ಆಯ್ತು ವಿಡಿಯೋ


3.ಉದ್ಘಾಟನ ವೇದಿಕೆಯಲ್ಲಿ ಮಹಾಪೌರರಿಗೆ ಇರಲಿಲ್ಲ ಸ್ಥಾನ


ಇಂದು ದಸರಾ ಉದ್ಘಾಟನೆ ವೇದಿಕೆಯಲ್ಲಿ ಮೈಸೂರಿನ ಪ್ರಥಮ ಪ್ರಜೆ, ಮಹಾಪೌರರ ಶಿವಕುಮಾರ್​ ಅವರಿಗೆ ಸ್ಥಾನ ನೀಡದಿರೋದು ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರತಿಗಳ ಜೊತೆ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್​ ಗೆಹ್ಲೋಟ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಎಸ್.ಟಿ.ಸೋಮಶೇಖರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಸುನಿಲ್ ಕುಮಾರ್ ಉಪಸ್ಥಿತರಿದ್ದರು. ಶಾಸಕ ಜಿ.ಟಿ.ದೇವೇಗೌಡರು ಮತ್ತು ಮಹಾಪೌರ ಶಿವಕುಮಾರ್ ಗಣ್ಯರ ಗ್ಯಾಲರಿಯಲ್ಲಿ ಕುಳಿತಿದ್ದರು.
4.ಮೈಸೂರು ಸಿಲ್ಕ್ ಸೀರೆ ಧರಿಸಿ ಬಂದಿದ್ದ ರಾಷ್ಟ್ರಪತಿಗಳು


ಮೈಸೂರು ದಸರಾಗೆ (Mysuru Dasara) ವಿಜೃಂಭಣೆಯಿಂದ ಚಾಲನೆ ನೀಡಲಾಗಿದೆ. ದೇಶದ ಮೊದಲ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು (draupadi murmu) ಇಂದು ಚಾಲನೆ ನೀಡಿದ್ದು, ಸದ್ಯ ಅವರು ಉಟ್ಟಿರುವ ಸೀರೆ (Saree) ಮೇಲೆ ಎಲ್ಲರ ಕಣ್ಣು ಬಿದ್ದಿದೆ.  ಇಂದು ರಾಷ್ಟ್ರಪತಿ ಮುರ್ಮು ಅವರು, ಬಿಳಿ ಹಾಗೂ ಗೋಲ್ಡನ್ ಬಾರ್ಡ್​ ಜೊತೆ ಚಕ್ಸ್​ ಇದ್ದ ಸೀರೆ ಉಟ್ಟಿದ್ದು, ಅದಕ್ಕೆ ಗೋಲ್ಡನ್ ಕಲರ್ ಬ್ಲೌಸ್ ಹಾಕಿದ್ದಾರೆ. ಇದು ಮೈಸೂರು ಸಿಲ್ಕ್​ ಸೀರೆ (Mysuru Silk). ಹೌದು, ಮೈಸೂರು ದಸರಾ ಉದ್ಘಾಟನೆಗೆ, ಚೆಂದದ ಮೈಸೂರು ಸಿಲ್ಕ್ ಸೀರೆಯನ್ನೇ ಉಟ್ಟು ಬಂದಿದ್ದರು.


President Draupadi Murmu inaugurated Dasara mrq
ರಾಷ್ಟ್ರಪತಿಗಳನ್ನು ಸ್ವಾಗತಿಸಿದ ಸಿಎಂ ಬೊಮ್ಮಾಯಿ


ಇದನ್ನೂ ಓದಿ: ರಾಷ್ಟ್ರಪತಿಗಳು ಇಂದು ಧರಿಸಿದ್ದಸೀರೆಯ ಬೆಲೆ ಎಷ್ಟು? ಈ ಮಾದರಿ ಸೀರೆ ಖರೀದಿಸೋದು ಹೇಗೆ? ಇಲ್ಲಿದೆ ಮಾಹಿತಿ


5.ಈ ನಾಡು ಸುಭಿಕ್ಷವಾಗಿರಲಿ: ಸಿಎಂ ಬೊಮ್ಮಾಯಿ


ದಸರಾ ಉದ್ಘಾಟನೆ ಬಳಿಕ ವೇದಿಕೆಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಈ ಬಾರಿ ದಸರಾ ಹಲವಾರು ವಿಶೇಷವಾಗಿ ಕೂಡಿದೆ. ಕಳೆದೆರಡು ವರ್ಷಗಳಲ್ಲಿ ಈ ಬಾರಿ ಗತವೈಭವವನ್ನ ಸೃಷ್ಠಿಸುವ ರೀತಿ ಆಚರಣೆ ಮಾಡಲಾಗುತ್ತಿದೆ. ನಮ್ಮ ನಾಡಿನ ಸಾಮಾನ್ಯ ಜನರು, ರೈತರು ಈ ದಸರಾವನ್ನ ಆಚರಣೆ ಮಾಡುತ್ತಾರೆ. ಈ ನಾಡು ಸುಭಿಕ್ಷವಾಗಿರಲಿ ಎಂದು ದಸರಾ ಆಚರಣೆ ಮಾಡುತ್ತವೆ ಎಂದು ತಿಳಿಸಿದರು. ಚಾಮುಂಡೇಶ್ವರಿ ನಾಡಿಗೆ ಶಕ್ತಿಯನ್ನ ನೀಡಲಿದ್ದಾಳೆ. ನೈಸರ್ಗಿಕ ಸವಾಲುಗಳನ್ನ ಸಮರ್ಪಕವಾಗಿ ಎದುರಿಸಿದ್ದನ್ನು ತಾವೆಲ್ಲ ಗಮನಿಸಿದ್ದೀರಿ. ರಾಷ್ಟ್ರಪತಿಗಳು ಆಗಮಿಸಿರೋದು ಸಂತೋಷದ ವಿಚಾರ. ಈ ಹಿಂದೆ ಯಾವಾಗಲೂ ರಾಷ್ಟ್ರಪತಿಗಳು ದಸರಾ ಉದ್ಘಾಟನೆಗೆ ಬಂದಿದ್ದು ಇತಿಹಾಸ ಇಲ್ಲ. ಅತ್ಯಂತ ಸಂತೋಷದಿಂದ ದಸರಾ ಉದ್ಘಾಟಿಸಲು ರಾಷ್ಟ್ರಪತಿಗಳು ಒಪ್ಪಿದ್ದರು ಎಂದು ಮ ಹೇಳಿದರು.

Published by:Mahmadrafik K
First published: