• Home
  • »
  • News
  • »
  • state
  • »
  • Mysuru Top 5 News: ಮಧುವಣಗಿತ್ತಿಯಂತೆ ಸಿಂಗಾರಗೊಂಡ ಮೈಸೂರು, ಮಹಿಷ ದಸರಾ ಆಚರಣೆ; ಮೈಸೂರಿನ ಟಾಪ್ ನ್ಯೂಸ್​

Mysuru Top 5 News: ಮಧುವಣಗಿತ್ತಿಯಂತೆ ಸಿಂಗಾರಗೊಂಡ ಮೈಸೂರು, ಮಹಿಷ ದಸರಾ ಆಚರಣೆ; ಮೈಸೂರಿನ ಟಾಪ್ ನ್ಯೂಸ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೈಸೂರು ದಸರಾ ಮಹೋತ್ಸವದ ದಸರಾ ಉದ್ಘಾಟನೆಗೆ ರಾಷ್ಟಪತಿಗಳು ಆಗಮಿಸುವ ಹಿನ್ನಲೆ ಇಂದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿಗೆ ಆಗಮಿಸಿದ್ದಾರೆ. ಇವತ್ತಿನ ಮೈಸೂರು ದಸರಾಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳು ಇಲ್ಲಿವೆ

  • Share this:

1.ನಾಳೆ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ


ವಿಶ್ವ ವಿಶ್ವವಿಖ್ಯಾತ  ನಾಡಹಬ್ಬ ಮೈಸೂರು ದಸರಾ (Mysuru Dasara 2022) ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಝಗಮಗಿಸುವ ವಿದ್ಯುತ್ ಬೆಳಕಿನಲ್ಲಿ ಪಾರಂಪರಿಕ ನಗರಿ ಮೈಸೂರು (Mysuru) ಕಂಗೊಳಿಸುತ್ತಿದೆ. ಮೈಸೂರಿನ ಚಾಮುಂಡಿ ಬೆಟ್ಟದ (Chamundi Hill) ಸನ್ನಿಧಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ನಾಳೆ ಬೆಳಗ್ಗೆ 9 ಗಂಟೆ 45 ನಿಮಿಷದಿಂದ 10 ಗಂಟೆ 5 ನಿಮಿಷದೊಳಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ (Goddess Chamundeshwari) ಪುಷ್ಪಾರ್ಚನೆ ಮಾಡುವ ಮೂಲಕ ಶರನ್ನವರಾತ್ರಿಯ 9 ದಿನಗಳ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಇದಕ್ಕೂ ಮೊದಲು ರಾಷ್ಟಪತಿಗಳು ಶಕ್ತಿ ದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದು ಅಗ್ರಪೂಜೆ ಸಲ್ಲಿಸುವರು.


mysuru today news update 25 september 2022 mrq
ವಿದ್ಯುತ್ ದೀಪಾಲಂಕಾರ (ಫೋಟೋ ಕೃಪೆ: ಟ್ವಿಟರ್)


ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಲಿದ್ದಾರೆ. ದಸರಾ ಆರಂಭದ ಮೊದಲ ದಿನವಾದ ನಾಳೆ ಚಾಮುಂಡೇಶ್ವರಿ ದೇವಿಗೆ ಬ್ರಾಹ್ಮಿ ಅಲಂಕಾರ ಮಾಡಿ ವಜ್ರಾಭರಣಗಳಿಂದ ಸಿಂಗರಿಸಲಾಗುತ್ತದೆ.


2.ಚಾಮುಂಡಿ ಬೆಟ್ಟದಲ್ಲಿ ಕೋತಿಗಳ ಹಾವಳಿಗೆ ಜಿಲ್ಲಾಡಳಿತದಿಂದ ಬ್ರೇಕ್


ನಾಳೆ ಚಾಮುಂಡಿ ಬೆಟ್ಟಕ್ಕೆ ರಾಷ್ಟ್ರಪತ ದ್ರೌಪದಿ ಮುರ್ಮು  ಆಗಮಿಸುತ್ತಿರುವ ಹಿನ್ನೆಲೆ ಇಲ್ಲಿಯ ಕೋತಿಗಳನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದರು. ಬೆಟ್ಟದಲ್ಲಿ ಕೋತಿಗಳ ಹಾವಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ಅದ್ದರಿಂದ ಜಿಲ್ಲಾಡಳಿತ ಇಂದು ನಾಗರಹೊಳೆ, ಬಂಡೀಪುರ ಅರಣ್ಯಗಳಿಂದ ಕೋತಿ ಹಿಡಿಯುವ ನಿಪುಣರನ್ನು ಕರೆಸಿತ್ತು.


mysuru today news update 25 september 2022 mrq
(ಫೋಟೋ ಕೃಪೆ: ಟ್ವಿಟರ್


ಭಕ್ತಾಧಿಗಳು ಮತ್ತು ನಾಳೆ ಗಣ್ಯರಿಗೆ ಈ ಕೋತಿಗಳು ತೊಂದರೆ ನೀಡುವ ಸಾಧ್ಯತೆಗಳಿವೆ. ಇಂದು ಬೆಳಗ್ಗೆಯಿಂದಲೇ ಕಡ್ಲೆಕಾಯಿ, ಮಜ್ಜಿಗೆ ಪ್ಯಾಕೆಟ್ ತೋರಿಸಿ ಬೋನ್​ ಇಡಲಾಗಿತ್ತು. ಇಲ್ಲಿ ಹಿಡಿಯುವ ಕೋತಿಗಳನ್ನು ಬಂಡೀಪುರ ಅಥವಾ ನಾಗರಹೊಳೆ ಅರಣ್ಯ ಪ್ರದೇಶಕ್ಕೆ ರವಾನೆ ಮಾಡಲಾಗುತ್ತದೆ.


3.ಪ್ರಗತಿಪರರಿಂದ ಮಹಿಷ ದಸರಾ ಆಚರಣೆ


ಪ್ರಗತಿಪರರ ದಸರೆಗೆ ವ್ಯತಿರಿಕ್ತವಾಗಿ ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ಮಾಡಿದರು. ಮಹಿಷನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ನಗರದ ಅಶೋಕಪುರಂನ ಡಾ. ಬಿ.ಆರ್.ಅಂಬೇಡ್ಕರ್ ಪಾರ್ಕ್​​ನಲ್ಲಿ ನಡೆದ  ಕಾರ್ಯಕ್ರಮದಲ್ಲಿ  ಭಾನುಪ್ರಕಾಶ್ ಸ್ವಾಮೀಜಿ, ಪ್ರೊ. ಕೆ ಎಸ್ ಭಗವಾನ್, ಮಾಜಿ ಮೇಯರ್ ಪುರುಷೋತ್ತಮ್, ಇತಿಹಾಸ ತಜ್ಞ ಪ್ರೊ.ನಂಜೇರಾಜ ಅರಸ್ ಸೇರಿದಂತೆ ಹಲವರು ಭಾಗಿಯಾಗಿ ಮಹಿಷ ದಸರಾಗೆ ಚಾಲನೆ ನೀಡಿದರು. ನಾಳೆ ದಸರಾ ಆಚರಣೆ ನಡೆಸಲಾಗುವುದು.


mysuru today news update 25 september 2022 mrq
ಸಚಿವರಿಂದ ಪರಿಶೀಲನೆ


ಇದನ್ನೂ ಓದಿ:  ನವರಾತ್ರಿ​ಗೆ ಬಂಪರ್ ಆಫರ್ ಘೋಷಿಸಿದ KSRTC


ದಸರಾ ಉದ್ಘಾಟನೆಗೆ ಹೋಗಬೇಕಾದರೆ ಮುಖಮಂತ್ರಿಗಳು ಯಾವ ಮಾರ್ಗದಲ್ಲಿ ತೆರಳುತ್ತಾರೆ? ಮಹಿಷನ ದರ್ಶನ ಪಡೆದೆ ಹೋಗಬೇಕು. ಆದರೆ ಮಹಿಷ ದಸರಾ ಆಚರಣೆಗೆ ತಡೆವೊಡ್ಡುತ್ತಾರೆ. ಇಂದು ಸಂಜೆ ವೇಳೆಗೆ ಚಾಮುಂಡಿಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸುತ್ತೇವೆ. ಬೆಟ್ಟಕ್ಕೆ ಅಸ್ಪೃಶ್ಯರು ಬರಬೇಡಿ ಎಂದು ಹೇಳಿಬಿಡಿ ಮುಂದೆ ನಾವು ನೋಡಿಕೊಳ್ಳುತ್ತೇವೆ. ಪುತ್ಥಳಿ ಮುಚ್ಚಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಚಾಮುಂಡಿ ದರ್ಶನಕ್ಕೆ ಬರುತ್ತೇವೆ. ನಾಳೆಯೂ ಬರುತ್ತೇವೆ ಒಂದು ವೇಳೆ ನಮ್ಮನ್ನ ಬಿಡದಿದ್ದರೆ ಅಸ್ಪೃಶ್ಯತೆ ಆಚರಣೆ ಮಾಡಿದಂತೆ ಎಂದರು.


mysuru today news update 25 september 2022 mrq
ರಾಜವಂಶಸ್ಥರಿಗೆ ಅಧಿಕೃತ ಆಹ್ವಾನ


4.ದಸರಾ ಆಚರಣೆಗೆ ಅಗತ್ಯವಾದ ಭದ್ರತೆ


ದಸರಾ ಆಚರಣೆಗೆ ಅಗತ್ಯವಾದ ಭದ್ರತೆ ಒದಗಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು. ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು,  ಮೈಸೂರು ದಸರಾ ಮಹೋತ್ಸವವನ್ನು ಸೆ.26 ರಿಂದ ಅ.5 ರವರೆಗೆ ಆಯೋಜಿಸಲಾಗಿದ್ದು, ನಗರದ ವಿವಿಧೆಡೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಲು, ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ನಿಗಾ ವಹಿಸಲಾಗಿದೆ ಎಂದು ಡಾ.ಚಂದ್ರಗುಪ್ತ ತಿಳಿಸಿದ್ದಾರೆ.


mysuru today news update 25 september 2022 mrq
ಪರಿಶೀಲನೆ


ಇದನ್ನೂ ಓದಿ:  Shivamogga: ನೀರಿನ ತೊಟ್ಟಿಗೆ ಬಿದ್ದು 11 ತಿಂಗಳ ಮಗು ಸಾವು; ಮೊದಲ ಹುಟ್ಟುಹಬ್ಬಕ್ಕೆ ಕಾದಿತ್ತು ಆಘಾತ


5.ಸಚಿವರಿಂದ ಪೂರ್ವ ಸಿದ್ಧತೆ ಪರಿಶೀಲನೆ


ಚಾಮುಂಡೇಶ್ವರಿ ಬೆಟ್ಟದಲ್ಲಿ ನಾಳೆ ಮಾನ್ಯ ರಾಷ್ಟ್ರಪತಿಗಳು ದಸರಾ ಮಹೋತ್ಸವ -22ಕ್ಕೆ ಚಾಲನೆ ನೀಡುತ್ತಿರುವ ಹಿನ್ನೆಲೆಯಲ್ಲಿ ಪೂರ್ವಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು. ಮೈಸೂರಿನ ಕುಪ್ಪಣ್ಣ ಪಾರ್ಕ್ ನ ಗಾಜಿನ ಮನೆಯ ಫಲಪುಷ್ಪ ಪ್ರದರ್ಶನದ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್​​ಟಿ ಸೋಮಶೇಖರ್ ಸಿದ್ಧತೆಗಳನ್ನು ಪರಿಶೀಲಿಸಿದೆ. ಈ ಬಾರಿ ರಾಷ್ಟ್ರಪತಿ ಭವನದ ಪ್ರತಿರೂಪ, ವಿಶೇಷ ಪ್ರಭೇದದ ಸಸ್ಯಗಳು ಇರಲಿದೆ.  ಸುದರ್ಶನ್ ಜವಳಿ ಅಂಗಡಿಗೆ ಭೇಟಿ ನೀಡಿದ ಸಚಿವರು ದಸರಾ ಹಬ್ಬಕ್ಕೆ ವಿಶೇಷ ಬಟ್ಟೆಗಳನ್ನು ಖರೀದಿಸಿದರು.

Published by:Mahmadrafik K
First published: