• Home
  • »
  • News
  • »
  • state
  • »
  • Mysuru Top 5 News: ಯುವ ದಸರೆಯಲ್ಲಿ ಒಂದು ದಿನ ಅಪ್ಪುಗಾಗಿ ಮೀಸಲು, ತುತ್ತೂರಿ ಮಾರಾಟ ನಿಷೇಧ; ಮೈಸೂರಿನ ಟಾಪ್ ನ್ಯೂಸ್​​ಗಳು

Mysuru Top 5 News: ಯುವ ದಸರೆಯಲ್ಲಿ ಒಂದು ದಿನ ಅಪ್ಪುಗಾಗಿ ಮೀಸಲು, ತುತ್ತೂರಿ ಮಾರಾಟ ನಿಷೇಧ; ಮೈಸೂರಿನ ಟಾಪ್ ನ್ಯೂಸ್​​ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೈಸೂರು ದಸರಾಗೆ ಎರಡು ದಿನ ಮಾತ್ರ ಬಾಕಿ ಉಳಿದಿದೆ. ಕಾರ್ಯಕ್ರಮಗಳ ತಯಾರಿ ಅಂತಿಮ ಹಂತ ತಲುಪಿದ್ದು, ಮೈಸೂರಿನ ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಇದರ ಜೊತೆ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಜ್ಜೆ ಹಜ್ಜೆಗೂ ಪೊಲೀಸರನ್ನು ನಿಯೋಜಿಸಲಾಗಿದೆ. ಇಂದಿನ ಮೈಸೂರು ದಸರೆಯ ಪ್ರಮುಖ ಸುದ್ದಿಗಳು ಇಲ್ಲಿವೆ.

ಮುಂದೆ ಓದಿ ...
  • Share this:

1.ಈ ಬಾರಿ 5 ದಿನದಿಂದ 7 ದಿನಕ್ಕೆ ದಸರಾ ವಿಸ್ತರಣೆ, ಎರಡನೇ ಅಪ್ಪುಗಾಗಿ ಮೀಸಲು


ಇನ್ನೆರಡು ದಿನಗಳಲ್ಲಿ ನಾಡಹಬ್ಬ ಮೈಸೂರು ದಸರಾಗೆ (Mysuru Dasara 2022) ವಿದ್ಯುಕ್ತ ಚಾಲನೆ ಸಿಗಲಿದೆ. ಈ ಹಿನ್ನೆಲೆ ದಸರಾ ಕಾರ್ಯಕ್ರಮಗಳ (Dasara Program) ತಯಾರಿ ವೇಗವಾಗಿ ನಡೆಯುತ್ತಿದೆ. ಯುವ ದಸರೆಗೆ ಬೃಹತ್ ವೇದಿಕೆ ನಿರ್ಮಾಣ ಕಾರ್ಯ ನಡೆದಿದೆ. ಈ ಬಾರಿ 5 ದಿನಗಳಿಗೆ ಬದಲಾಗಿ 7 ದಿನಗಳಿಗೆ ಯುವ ದಸರಾ (Yuva Dasara) ವಿಸ್ತರಣೆ ಮಾಡಲಾಗಿದೆ. ಏಳು ದಿನಗಳ ಕಾರ್ಯಕ್ರಮಕ್ಕಾಗಿ ಮಹರಾಜ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಝಗಮಗಿಸೋ ಲೈಟ್​, ಜರ್ಮನ್ ಪೆಂಡಾಲ್ ಹಾಕಲಾಗುತ್ತಿದೆ. ಸುಮಾರು 50 ಸಾವಿರದಿಂದ 1 ಲಕ್ಷ ಜನರು ಸೇರುವ ಸಾಧ್ಯತೆಗಳಿವೆ. ದಸರಾ ಎರಡನೇ ದಿನವನ್ನು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ (Power Star Puneeth Rajkumar) ಅವರಿಗಾಗಿ ಮೀಸಲಿರಿಸಲಾಗಿದೆ.


mysuru today news update 24 september 2022 mrq
ದಸರಾ ಆನೆಗಳು


2.ಹದಿನಾರು ತಂಡಗಳಿಂದ ಉದ್ಘಾಟನಾ ಕಾರ್ಯಕ್ರಮ ಪರಿಶೀಲನೆ, ಹೆಜ್ಜೆ ಹೆಜ್ಜೆಗೂ ಪೊಲೀಸರು


ಭದ್ರತೆ ಮತ್ತು ವಿಜಯ ದಶಮಿ ಮೆರವಣಿಗೆ ಸಂಬಂಧ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸುದ್ದಿಗೋಷ್ಠಿ ನಡೆಸಿದರು. ಅಹಿತಕರ ಘಟನೆ ನಡೆಯದಂತೆ ಮತ್ತು ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ.  ಉದ್ಘಾಟನೆ ಕಾರ್ಯಕ್ರಮಕ್ಕೆ 16 ತಂಡಗಳು ಪರಿಶೀಲನೆ ಮಾಡುತ್ತಿವೆ.


mysuru today news update 24 september 2022 mrq
ಮೈಸೂರು ದಸರಾ


ಡ್ರೋಣ್ ಸರ್ವಲೆನ್ಸ್ ಮಾಡಿದ್ದೇವೆ. ನಗರದಿಂದ 1,255, ಹೊರ ಜಿಲ್ಲೆಯಿಂದ 3,580, ಗೃಹ ರಕ್ಷಕ ದಳದ 650 ಸಿಬ್ಬಂದಿ ಸೇರಿ 5,485 ಅಧಿಕಾರಿ ಮತ್ತು ಸಿಬ್ಬಂದಿ ಬಂದೋಬಸ್ತ್‌ಗೆ ನೇಮಕ ಮಾಡಲಾಗಿದೆ. ಅರಮನೆ ಸುತ್ತ ಮೊಬೈಲ್ ಕಮಾಂಡ್ ಸೆಂಟರ್ ಬಸ್ ಕಣ್ಗಾವಲು ಇರಲಿದೆ ಎಂದು ಮಾಹಿತಿ ನೀಡಿದರು.


ಇದನ್ನೂ ಓದಿ:  Electricity Rate Rise: ನವರಾತ್ರಿಗೆ ಶುಭಾಶಯ ಹೇಳಬೇಕಿದ್ದ ಸರಕಾರ, ಕರೆಂಟ್‌ ಶಾಕ್ ಕೊಟ್ಟಿದೆ; ಹೆಚ್ ಡಿ ಕುಮಾರಸ್ವಾಮಿ


3.ಪ್ರವಾಸಿಗರ ಮಾಹಿತಿ ಪಡೆದು ರೂಂ ಕೊಡಿ; ಲಾಡ್ಜ್ ಮಾಲೀಕರಿಗೆ ಸೂಚನೆ


ವಿದ್ಯುತ್ ದೀಪ ನೋಡಲು ನಡೆದುಕೊಂಡು ಬನ್ನಿ.  ವಾಹನಗಳಲ್ಲಿ ಬಂದರೆ ಸಂಚಾರಕ್ಕೆ ತೊಂದರೆ ಆಗುತ್ತೆ. ವಾಹನ ಹೆಚ್ಚಾದರೆ ನಡೆಯುವವರಿಗೆ ತೊಂದರೆ ಆಗುತ್ತೆ. ಪೊಲೀಸ್ ಜನರಿಗೆ ಕಾಣಿಸಬೇಕು.  ಇದಕ್ಕಾಗಿ 50 ಕಡೆ ಎತ್ತರದ ಜಾಗದಲ್ಲಿ ಪೊಲೀಸರನ್ನು ನಿಲ್ಲಿಸುತ್ತೇವೆ. ಅಪರಾಧ ಮಾಡುವವರನ್ನು ಪೊಲೀಸರು ಗಮನಿಸುತ್ತಾರೆ.


mysuru today news update 24 september 2022 mrq
ವಿದ್ಯುತ್ ದೀಪಾಲಂಕಾರ (ಫೋಟೋ ಕೃಪೆ: ಟ್ವಿಟರ್)


ಲಾಡ್ಜ್, ತಂಗುದಾಣದಿಂದ ಮಾಹಿತಿ ಸಂಗ್ರಹ ಆಗುತ್ತಿದೆ. ಗುರುತು, ಮಾಹಿತಿ ಪಡೆದು ರೂಂ ಕೊಡಲು ಸೂಚಿಸಿದ್ದೇವೆ. 13 ಸಾವಿರ ಸಿಸಿ ಟಿವಿ ಕ್ಯಾಮೆರಾಗಳನ್ನು ಈಗಾಗಲೇ ನಗರದಾದ್ಯಂತ ಖಾಸಗಿಯವರು ಅಳವಡಿಸಿದ್ದಾರೆ.  ಪೊಲೀಸ್ ಇಲಾಖೆಯ 59 ಸಿಸಿ ಕ್ಯಾಮರಾ ಇದೆ. ಜಂಬೂ ಸವಾರಿ ಮೆರವಣಿಗೆ ನಡೆಯುವ ಜಾಗದಲ್ಲಿ 110 ಹೆಚ್ಚುವರಿ ಸಿಸಿ ಕ್ಯಾಮರಾ ಅಳವಡಿಸುತ್ತೇವೆ ಎಂದು ಡಾ.ಚಂದ್ರಗುಪ್ತ ತಿಳಿಸಿದರು.


4.ತುತ್ತೂರಿ ಅಥವಾ ಉವುಝುಲ್ಲಾ ನಿಷೇಧ


ತುತ್ತೂರಿ ಅಥವಾ ಉವುಝುಲ್ಲಾ ನಿಷೇಧಿಲಾಗಿದ್ದು, ಮಾರಾಟ ಮಾಡುವವರ ಮೇಲೂ ಕ್ರಮ ಜರುಗಿಸಲಾಗುವುದು. ಪ್ರವಾಸಿಗರಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಗನ್‌ಹೌಸ್‌ನಿಂದ ಕೆ.ಆರ್.ವೃತ್ತದವರೆಗೆ ಸಂಪೂರ್ಣ ವಾಹನ ಸಂಚಾರ ನಿರ್ಬಂಧಕ್ಕೆ ತೀರ್ಮಾನಿಸಿದ್ದೇವೆ.


mysuru today news update 24 september 2022 mrq
ವಿದ್ಯುತ್ ದೀಪಾಲಂಕಾರ (ಫೋಟೋ ಕೃಪೆ: ಟ್ವಿಟರ್)


ವಸ್ತು ಪ್ರದರ್ಶನ - ಅರಮನೆಗೆ ಅಂಡರ್ ಪಾಸ್ ಇದೆ. ಅದನ್ನು ಬಿಟ್ಟು ಬೇರೆ ದಾರಿಯಲ್ಲಿ ರಸ್ತೆ ದಾಟಲು ಬಿಡಲ್ಲ.  ಅಂಬಾರಿ ಟೂರಿಸಂ ಮಾರ್ಗಕ್ಕೆ ನಿರ್ಬಂಧ ಅನ್ವಯ ಆಗುವುದಿಲ್ಲ ಎಂದು ಡಾ.ಚಂದ್ರಗುಪ್ತ ಹೇಳಿದ್ದಾರೆ.


ಇದನ್ನೂ ಓದಿ:  Basavaraj Bommai: ಪೇಸಿಎಂ ಅಭಿಯಾನ ಡರ್ಟಿ ಪಾಲಿಟಿಕ್ಸ್; ಕಾಂಗ್ರೆಸ್​ಗೆ ವಾರ್ನಿಂಗ್​ ಕೊಟ್ಟ ಸಿಎಂ ಬೊಮ್ಮಾಯಿ


5.ಕುಪ್ಪಣ್ಣ ಪಾರ್ಕಿನಲ್ಲಿ ಫಲಪುಷ್ಪ ಪ್ರದರ್ಶನ


ಮೈಸೂರು ದಸರಾ ಅಂಗವಾಗಿ  ನಿಶಾದ್ ಭಾಗ್ ಕುಪ್ಪಣ್ಣ ಪಾರ್ಕ್​ನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5ರವರೆಗೆ ಫಲಪುಷ್ಪ ಪ್ರದರ್ಶನ ಇರಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಬಿ.ಆರ್. ತಿಳಿಸಿದ್ದಾರೆ.


mysuru today news update 24 september 2022 mrq
ಪೋಸ್ಟರ್ ಬಿಡುಗಡೆ (ಫೋಟೋ ಕೃಪೆ: ಟ್ವಿಟರ್


75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ರಾಷ್ಟ್ರಪತಿ ಭವನವನ್ನು ಕೆಂಪು, ಬಿಳಿ ಗುಲಾಬಿ ಹಾಗೂ ಸೇವಂತಿ ಗಳಿಂದ ಸುಮಾರು 20 ಅಡಿ ಎತ್ತರದಲ್ಲಿ ಗಾಜಿನ ಮನೆಯಲ್ಲಿ ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ನಟ ಪುನೀತ್ ರಾಜ್​ಕುಮಾರ್ ಅವರ ಸ್ಪರಣಾರ್ಥ ವಿವಧ ಪುತ್ಥಳಿಗಳನ್ನು ಹೂವಿನಿಂದ ಅಲಂಕರಿಸಲಾಗುತ್ತಿದೆ.

Published by:Mahmadrafik K
First published: