Mysuru Top 5 News: ಅಂತಾರಾಜ್ಯ ವಾಹನಗಳಿಗೆ ತೆರಿಗೆ ವಿನಾಯ್ತಿ, ಗಜಪಡೆಗೆ ತಾಲೀಮು; ಮೈಸೂರಿನ ಟಾಪ್ ನ್ಯೂಸ್​ಗಳು

ನಾಡಹಬ್ಬ ದಸರೆಗೆ ಭರ್ಜರಿ ಸಿದ್ಧತೆಗಳು ನಡೆದಿವೆ. ಇಂದು ಗಜಪಡೆಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಯ್ತು. ಅಂತಾರಾಜ್ಯ ಪ್ರವಾಸಿಗರ ವಾಹನಗಳಿಗೆ ತೆರಿಗೆ ವಿನಾಯ್ತಿ ನೀಡಲಾಗಿದೆ. ಇವತ್ತಿನ ಮೈಸೂರು ದಸರಾಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳು ಇಲ್ಲಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.ಅಂತಾರಾಜ್ಯ ವಾಹನಗಳಿಗೆ ತೆರಿಗೆ ವಿನಾಯ್ತಿ

ವಿಶ್ವ ವಿಖ್ಯಾತ ದಸರಾ  (Mysuru Dasara 2022) ಕಣ್ತುಂಬಿಕೊಳ್ಳಲು ಬೇರೆಯ ರಾಜ್ಯಗಳಿಂದಲೂ ಜನರು ಮೈಸೂರು (Mysuru) ನಗರ ಮತ್ತು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ (Tourist) ಬರುತ್ತಾರೆ. ಈ ಸಮಯದಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿರುತ್ತದೆ. ಮೈಸೂರು ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಈಗಾಗಲೇ ಮೈಸೂರು ನಗರಕ್ಕೆ ಮೂರು ವಿಶೇಷ ರೈಲುಗಳನ್ನು (Railways) ಕಲ್ಪಿಸಲಾಗಿದೆ. ಬೇರೆ ರಾಜ್ಯಗಳಿಂದ ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ, ಕೆಆರ್‌ಎಸ್‌ ವೀಕ್ಷಿಸಲು ಆಗಮಿಸುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ (Tax) ನೀಡಿ ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 6ರವರೆಗೆ ಈ ವಿನಾಯಿತಿ ಸೌಲಭ್ಯ ಇರಲಿದೆ.

2.ಕೈಗಾರಿಕಾ ದಸರಾ, ಬ್ಯುಸಿನೆಸ್ ಮಾಡೋರಿಗೆ ಭಾರೀ ಅನುಕೂಲ

ಕೈಗಾರಿಕಾ ದಸರಾವು ಇದೇ ಸೆಪ್ಟಂಬರ್ 26ರಿಂದ ಆರಂಭವಾಗಿ ಸೆಪ್ಟೆಂಬರ್ 30ರ ವರೆಗೆ ನಡೆಯಲಿದೆ. ಇದೇ ಮೊದಲ ಬಾರಿಗೆ ‘ಕೈಗಾರಿಕಾ ದಸರಾ‘ವನ್ನು ಆಯೋಜಿಸಲಾಗಿದ್ದು, ಕೈಗಾರಿಕಾ ವಲಯ ಮೇಲಿನ ಆಸಕ್ತಿ, ಹೂಡಿಕೆದಾರರನ್ನು ಆಕರ್ಷಿಸಲು ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ‘ಕೈಗಾರಿಕಾ ದಸರಾ‘ ಆಯೋಜಿಸಲಾಗಿದೆ. ಕೈಗಾರಿಕಾ ದಸರಾವು ಇದೇ ಸೆಪ್ಟಂಬರ್ 26ರಿಂದ ಆರಂಭವಾಗಿ ಸೆಪ್ಟೆಂಬರ್ 30ರ ವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಚಾರ ಸಂಕೀರಣ, ಮಾಹಿತಿ ಕಾರ್ಯಾಗಾರಗಳು ನಡೆಯಲಿವೆ.

Mysuru today news update 23 September 2022 mrq
ಗಜಪಡೆಗೆ ಸಿಡಿಮದ್ದು ತಾಲೀಮು (ಫೋಟೋ ಕೃಪೆ-ಫೇಸ್​​ಬುಕ್)


ಸ್ವಯಂ ಉದ್ಯೋಗ ಪ್ರಾರಂಭಿಸಬಯಸುವವರು, ಈಗ ಕಾರ್ಯ ನಿರ್ವಹಿಸುತ್ತಿರುವ ಉದ್ದಿಮೆದಾರರಿಗೆ ಅನುಕೂಲವಾಗುವಂತೆ ಕೈಗಾರಿಕಾ ಅಭಿವೃದ್ಧಿಗೆ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆ, ಬ್ಯಾಂಕ್ ಅಧಿಕಾರಿಗಳು ಅಗತ್ಯ ಮಾಹಿತಿ ನೀಡಲಿದ್ದಾರೆ.

3.ಇಂದು ಮರದ ಅಂಬಾರಿ ಹೊರಿಸಿ ಆನೆಗೆ ತಾಲೀಮು

ಇಂದು ದಸರಾ ಆನೆಗಳಿಗೆ ತಾಲೀಮು ‌ನಡೆಸಲಾತ್ತು. ಅ.5 ರಂದು ಸಂಜೆ 5 ಗಂಟೆಗೆ ಜಂಬೂ ಸವಾರಿಗೆ ಚಾಲನೆ‌ ಸಿಗಲಿದೆ. ಆದ್ದರಿಂದ ಆನೆ ಗೋಪಾಲಸ್ವಾಮಿಗೆ ಮರದ ಅಂಬಾರಿ ಹೊರಿಸಿ ತಾಲೀಮು ಮಾಡಿಸಲಾಯ್ತು. ಇತ್ತ ನಗರ ಮತ್ತು ಅರಮನೆಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಇಂದು ನಡೆದ ತಾಲೀಮಿನಲ್ಲಿ ಮರದ ಅಂಬಾರಿಗೆ ಹಲವೆಡೆ ವಿದ್ಯುತ್ ದೀಪದ ವೈರ್​ಗಳು ತಾಗಿದವು. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಅಂಬಾರಿ ಸಾಗುವ ಮಾರ್ಗ ಮಧ್ಯೆ ಕೆಳಹಂತದಲ್ಲಿ ಹಾಕಲಾಗಿರು ತಂತಿ ಮತ್ತು ವೈರ್​​ಗಳನ್ನು ತೆಗೆಯುವಂತೆ ಸೂಚಿಸಲಾಯ್ತು. ಇನ್ನು ಮೊದಲ ಬಾರಿಗೆ ಅಶ್ವಾರೋಹಿ ದಳ ತಾಲೀಮಿನಲ್ಲಿ ಭಾಗಿಯಾಯ್ತು.

Mysuru today news update 23 September 2022 mrq
ಗಜಪಡೆ


4.ಮೈಸೂರು ಪ್ರವೇಶಿಸುವ ಮತ್ತು ನಿರ್ಗಮಿಸುವ ಬಸ್​ಗಳ ಮಾರ್ಗ ಬದಲಾವಣೆ

ದಸರಾ ಅಂಗವಾಗಿ ಒಂದು ವಾರಕ್ಕೂ ಹೆಚ್ಚು ಮೈಸೂರು ನಗರದಲ್ಲಿ ವಾಹನಗಳ ಸಂಚಾರ ಹೆಚ್ಚಾಗುತ್ತದೆ. ಈ ಹಿನ್ನೆಲೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ KSRTC ಗ್ರಾಮಾಂತರ ಮತ್ತು ನಗರ ಸಾರಿಗೆಗಳಿಗೆ ಅನ್ವಯವಾಗುವಂತೆ ಮಾರ್ಗದಲ್ಲಿ ಕೆಲವು ಬದಲಾವಣೆಗಳನ್ನ ಮಾಡಲಾಗಿದೆ. 26-09-2022 ರಿಂದ 03-10-2022 ರವರೆಗೆ  ಪ್ರತಿದಿನ ಸಂಜೆ 4 ರಿಂದ ರಾತ್ರಿ 11 ಗಂಟೆಗಳವೆಗೆರೆ ಈ ಮಾರ್ಗ ಬದಲಾವಣೆ ಇರಲಿದೆ. ಮಾರ್ಗ ಬದಲಾವಣೆ ಹೀಗಿದೆ.

ಸಾಂದರ್ಭಿಕ ಚಿತ್ರ


ಮೈಸೂರು -ಬೆಂಗಳೂರು ಮಾರ್ಗವಾಗಿ  ಆಗಮಿಸುವ, ನಿರ್ಗಮಿಸುವ ಬಸ್‌ಗಳ ಮಾರ್ಗ :

ಆಗಮನ

ಬೆಂಗಳೂರು ರಸ್ತೆ-ನಾಡಪ್ರಭು ಕೆಂಪೇಗೌಡ ವೃತ್ತ- ಎಡ ತಿರುವು- ರಿಂಗ್ ರಸ್ತೆ  ಮೂಲಕ ಮಹದೇವಪುರ ರಿಂಗ್ ಜಂಕ್ಷನ್ (ಸಾತಗಳ್ಳಿ ಬಸ್ ಡಿಪೋ)- ಮಹದೇವಪುರ ರಸ್ತೆ-ನೆಕ್ಸಸ್ ಸೆಂಟರ್ ಸಿಟಿ ಮಾಲ್ ಜಂಕ್ಷನ್-ಕಾಳಿಕಾಂಬಾ ದೇವಸ್ಥಾನ ರಸ್ತೆ ಜಂಕ್ಷನ್- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್-ನವಾಬ್ ಹೈದರಾಲಿ ಖಾನ್ ವೃತ್ತ-ಬಿಎನ್ ರಸ್ತೆ-KSRTC ಬಸ್ ನಿಲ್ದಾಣ (ಸಿದ್ದಲಿಂಗಪುರ ಬಳಿ ಎಡಭಾಗದ ಸರ್ವಿಸ್ ರಸ್ತೆಯಲ್ಲಿ ಏಟ್ರಿಯಂ ಹೋಟೆಲ್ ಮುಂಭಾಗ ಬಂದು ನಾಡಪ್ರಭು ಜಂಕ್ಷನ್​ಲ್ಲಿ Free Left Turn ತೆಗೆದುಕೊಳ್ಳುವುದು)

ಇದನ್ನೂಓದಿ:  H D Kumaraswamy: ಸಚಿವ ಅಶ್ವತ್ಥ ನಾರಾಯಣ ತಲೆದಂಡ ಆಗಲೇಬೇಕು; 3 ಬೇಡಿಕೆ ಮುಂದಿಟ್ಟ ಎಚ್​ಡಿಕೆ!

ನಿರ್ಗಮನ

KSRTC ಬಸ್ ನಿಲ್ದಾಣ, ನವಾಬ್ ಹೈದರಾಲಿ ಖಾನ್ ವೃತ್ತ-ಸರ್ಕರಿ ಭವನದ ಉತ್ತರ ದ್ವಾರದ ಜಂಕ್ಷನ್-ಡಾ.ಬಿ.ಆರ್.ಅಂಬೇಡ್ಕರ್ ವೃತ್ತ (FTS))-ಡಾ ರಾಜ್​​ಕುಮಾರ್ ವೃತ್ತ (ಫೌಂಟೇನ್ ಸರ್ಕಲ್)- ಟಿಎನ್ ನರಸಿಂಹಮೂರ್ತಿ ವೃತ್ತ(LIC ವೃತ್ತ)-ಬನ್ನಿ ಮಂಟಪ ರಸ್ತ-ನಂದಿ ಬಸಪ್ಪ ಗೋರಿ ಜಂಕ್ಷನ್-ಟೋಲ್ ಗೇಟ್-ನಾಡಪ್ರಭು ಕೆಂಪೇಗೌಡ ವೃತ್ತ- ಬೆಂಗಳೂರು ರಸ್ತೆ ಮೂಲಕ ಸಾಗುವುದು

ಮಡಿಕೇರಿ, ಹಾಸನ ಕಡೆಯಿಂದ ಹುಣಸೂರು ಮಾರ್ಗವಾಗಿ ಮೈಸೂರು ನಗರಕ್ಕೆ ಆಗಮಿಸುವ, ನಿರ್ಗಮಿಸುವ ಬಸ್​​ಗಳ ಮಾರ್ಗ :

ಆಗಮನ ಮತ್ತು ನಿರ್ಗಮನ

ಹುಣಸೂರು ರಸ್ತೆ-ಫೀಲ್ಡ್​ ಮಾರ್ಷಲ್ ಕಾರ್ಯಪ್ಪ ವೃತ್ತ (ಮೆಟ್ರೋಪೋಲ್ ವೃತ್ತ)-ದಾಸಪ್ಪ ವೃತ್ತ-ಬಾಬು ಜಗಜೀವನರಾಂ ವೃತ್ತ (ರೈಲ್ವೇ ನಿಲ್ದಾಣ ವೃತ್ತ)-ಪುಟ್ಟು ಗೋಪಾಲಕೃಷ್ಣ ಶೆಟ್ಟಿ ವೃತ್ತ (ಜೆಕೆ ಗ್ರೌಂಡ್)-ಶೇಷಾದ್ರಿ ಅಯ್ಯರ ರಸ್ತೆ- ಸುಭಾಸ್ ಚಂದ್ರ ಭೋಸ್ ವೃತ್ತ(ಆರ್​ಎಂಸಿ) ಅಬ್ದುಲ್ ಕಲಾಂ ಅಜಾದ್ ವೃತ್ತ (ಹೈವೇ ಸರ್ಕಲ್)- ನೆಲ್ಸನ್ ಮಂಡೇಲಾ ವೃತ್ತ- ಟಿಎನ್ ನರಸಿಂಹಮೂರ್ತಿ ವೃತ್ತ (LIC ವೃತ್ತ)-ಲಿಂಕ್ ರಸ್ತೆ-ಟಿಪ್ಪು ವೃತ್ತ- ಡಾ ರಾಜ್​​ಕುಮಾರ್ ವೃತ್ತ- ಸರ್ಕಾರಿ ಭವನದ ಉತ್ತ ದ್ವಾರದ ಜಂಕ್ಷನ್-ನವಾಜ್ ಹೈದರಾಲಿ ಖಾನ್ ವೃತ್ತ- ಬಿಎನ್ ರಸ್ತೆ- KSRTC ಬಸ್ ನಿಲ್ದಾಣ

Mysuru today news update 23 September 2022 mrq
ದಸರಾಗೆ ತಯಾರಿ


ಇದನ್ನೂ ಓದಿ:  Hubballi: ತಾಯಿ ಅಗಲಿಕೆಯ ನೋವಲ್ಲೂ ಕರ್ತವ್ಯಕ್ಕೆ ಹಾಜರಾದ ಇನ್ಸ್​ಪೆಕ್ಟರ್​; ಕುಖ್ಯಾತ ಕಳ್ಳನ ಹೆಡೆಮುರಿ ಕಟ್ಟಿದ ಪಿಐ

5.ಶ್ರೀರಂಗಪಟ್ಟಣಕ್ಕೆ ಐದು ದಸರಾ ಆನೆಗಳು

ಶ್ರೀರಂಗಪಟ್ಟಣ ದಸರೆಗೆ 5 ಆನೆಗಳು ಬೇಕು ಎಂದು ಕೇಳಿದ್ದಾರೆ. ಅರಣ್ಯ ಇಲಾಖೆಯ ಮುಖ್ಯಸ್ಥರಿಂದ ಈ ಬಗ್ಗೆ ನಮಗೆ ಮಾಹಿತಿ ಸಿಕ್ಕಿಲ್ಲ. ಆನೆಗಳನ್ನ ಕಳುಹಿಸಬೇಕಾದರೆ ಈ ಬಾರಿ ಎಸ್ಓಪಿ ತಯಾರು ಮಾಡಿದ್ದೇವೆ. ಆನೆಗಳ ಸುತ್ತಲೂ 10 ಅಡಿ ಅಂತರದಲ್ಲಿ ಯಾರು ಬಾರದಂತೆ ಜಾಗ್ರತೆ ವಹಿಸಬೇಕು. ಪಟಾಕಿ ಸಿಡಿಸುವುದು, ಡ್ರೋನ್ ಬಳಸುವುದು, ಜನರು ಹತ್ತಿರ ಬರುವುದನ್ನ ನಿಷೇದಿಸಿದ್ದೇವೆ. ನಮ್ಮ ವೈದ್ಯರು, ಸಿಬ್ಬಂದಿಯು ಕೂಡ  ಅಲ್ಲಿ ಇರಲಿದ್ದಾರೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಆಯೋಜಕರು ವಹಿಸಬೇಕು. ಈ ಬಾರಿ ಮಹೇಂದ್ರ ಆನೆಗಳೊಂದಿಗೆ ಇತರೆ ನಾಲ್ಕು ಆನೆಗಳನ್ನ ಕಳುಹಿಸಲಾಗುವುದು ಮೈಸೂರಿನಲ್ಲಿ ಡಿಸಿಎಫ್ ಡಾ. ಕರಿಕಾಳನ್ ಹೇಳಿದ್ದಾರೆ.
Published by:Mahmadrafik K
First published: