Mysuru Top 5 News: ಸಿಂಹಾಸನ ಜೋಡಣೆ, ಪ್ರವಾಸಿಗರಿಗೆ ಕಾಂಬೋ ಟಿಕೆಟ್, ಮನೆ ಮನೆ ದಸರಾಗೆ ಅನುದಾನ; ಮೈಸೂರಿನ ಟಾಪ್ ನ್ಯೂಸ್​ಗಳು

ಇಂದು ಬೆಳಗ್ಗೆ ಅರಮನೆಯಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಯಿತು. ಪ್ರವಾಸಿಗರಿಗಾಗಿ ಕಾಂಬೋ ಟಿಕೆಟ್ ಪರಿಚಯಿಸಲಾಗಿದೆ. ಇವತ್ತಿನ ಮೈಸೂರು ದಸರಾ ಕುರಿತ ಪ್ರಮುಖ ಸುದ್ದಿಗಳು ಇಲ್ಲಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಅರಮನೆಯಲ್ಲಿ ನಡೆಯಿತು ಸಿಂಹಾಸನ ಜೋಡಣೆ ಕಾರ್ಯ

  ವಿಶ್ವವಿಖ್ಯಾತ ದಸರಾ (Mysuru Dasara 2022) ಹಿನ್ನೆಲೆ ಇಂದು ಬೆಳಗ್ಗೆ ಮೈಸೂರಿನ ಅರಮನೆಯಲ್ಲಿ (Mysuru Palace) ರಾಜವಂಶಸ್ಥರ ಸಮ್ಮುಖದಲ್ಲಿ ಸಿಂಹಾಸನ ಜೋಡಣೆ (Golden Throne Assembled) ಮಾಡಲಾಯ್ತು.ಎಂದಿನಂತೆ ಸಾಂಪ್ರದಾಯಿಕವಾಗಿ ಮೈಸೂರಿನ ತಾಲ್ಲೂಕಿನ ಗೆಜ್ಜೆಗಳ್ಳಿ ಗ್ರಾಮಸ್ಥರಿಂದಲೇ ಸಿಂಹಾಸನ ಜೋಡಣೆ ಕಾರ್ಯ ನಡೆಯಿತು. ನವರಾತ್ರಿ ವೇಳೆ ಸಿಂಹಾಸನದ ಮೇಲೆ ಕುಳಿತು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ದರ್ಬಾರ್ ನಡೆಸಲಿದ್ದಾರೆ. ಸಿಂಹಾಸನ ಜೋಡಣೆ ಕಾರ್ಯ ಹಿನ್ನೆಲೆ ಇಂದು ಅರಮನೆಯ ಪ್ರವೇಶಕ್ಕೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಹಾಕಲಾಗಿತ್ತು. ಇಡೀ ವರ್ಷ ಸಿಂಹಾಸನ ಮತ್ತು ಅದರ ಬಿಡಿ ಭಾಗಗಳು (ಆಸನ, ಮೆಟ್ಟಿಲು, ಛತ್ರಿ) ಅರಮನೆಯ ನೆಲಮಹಡಿಯಲ್ಲಿರುತ್ತವೆ.

  Mysuru today news update 20 September 2022 mrq
  ಮೈಸೂರು ಸಿಂಹಾಸನ (ಫೋಟೋ ಕೃಪೆ-ಫೇಸ್​​ಬುಕ್​​)


  ನವರಾತ್ರಿಯ (Navaratri) ಶುಭ ಮುಹೂರ್ತದಲ್ಲಿ ಸಿಂಹದ ಮೂರ್ತಿಯನ್ನು ಆಸನಕ್ಕೆ ಒರಗಿಸಿ ಇಟ್ಟು ವೇದ ವಿದ್ವಾಂಸರು ಸಿಂಹ ಶಕ್ತಿಯ ಆರೋಹಣ ಮಾಡಲಾಗುತ್ತದೆ.

  2.ಅದ್ಧೂರಿ ಮನೆ ಮನೆ ದಸರಾಗೆ ಅನುದಾನ

  ಈ ಬಾರಿ ದಸರಾವನ್ನ ಅದ್ಧೂರಿಯಾಗಿ ಆಚರಿಸಲು ಜಿಲ್ಲಾಡಳಿತ ಮತ್ತು ಸರ್ಕಾರ ನಿರ್ಧರಿಸಿದೆ. ದಸರಾ ಹಬ್ಬದ ಹಿನ್ನೆಲೆ ಸಭೆ ನಡೆಸಿದ ಮೇಯರ್ ಶಿವಕುಮಾರ್, ಮನೆ ಮನೆ ದಸರಾ ಆಚರಣೆಗೆ ಕರೆ ಕೊಟ್ಟರು. 556 ಸದಸ್ಯರುಳ್ಳ ಪುರಸಭೆತ ಪ್ರತಿ ವಾರ್ಡ್​​ಗೆ 2 ಲಕ್ಷ ರೂಪಾಯಿ ಅನುದಾನ ನೀಡುವ ಕುರಿತು ಮಾಹಿತಿ ನೀಡಿದರು. ದಸರಾ ವೀಕ್ಷಿಸಲು ದೇಶ ವಿದೇಶಗಳಿಂದಲೂ ಜನರು ಮೈಸೂರು ನಗರಕ್ಕೆ ಬರಲಿದ್ದಾರೆ. ಆದ್ದರಿಂದ ನಗರದಲ್ಲಿ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಕಾರ್ಯ ತ್ವರಿತಗತಿಯಿಂದ ನಡೆಯಬೇಕು. ಶೀಘ್ರದಲ್ಲಿಯೇ ಈ ಕೆಲಸ ನಡೆಯಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

  Mysuru today news update 20 September 2022 mrq
  ಮೇಯರ್ ಶಿವಕುಮಾರ್ ಸಬೆ


  ಇದೇ ವೇಳೆ ಫುಟ್​ಪಾತ್ ಅತಿಕ್ರಮಣ ತೆರವುಗೊಳಿಸಲು ಸಹ ಸೂಚನೆ ನೀಡಲಾಗಿದೆ. ಮೊಬೈಲ್ ಶೌಚಾಲಯ  ಸ್ಪಾಪಿಸಲಾಗುವುದು ಎಂದು ಮೇಯರ್ ಶಿವಕುಮಾರ್ ಹೇಳಿದರು.

  3.ಮೈಸೂರು ದಸರಾ ವೀಕ್ಷಣೆಗೆ ಕಾಂಬೋ ಟಿಕಟ್ ಬುಕ್ ಮಾಡ್ಕೊಳ್ಳಿ

  ಈ ಬಾರಿ ದಸರಾಗೆ ಬರುವ ಪ್ರವಾಸಿಗರಿಗಾಗಿ ಜಿಲ್ಲಾಡಳಿತ ಏಕ ಟಿಕೆಟ್ ವ್ಯವಸ್ಥೆ ಪರಿಚಯಿಸುತ್ತಿದೆ. ಒಂದು ಟಿಕೆಟ್ ಖರೀದಿಸಿ ಮೈಸೂರಿನ ಎಲ್ಲಾ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಇದರಿಂದ ಪ್ರವಾಸಿಗರು ಕ್ಯೂನಲ್ಲಿ ನಿಲ್ಲೋದು ತಪ್ಪಲಿದೆ. ಇಂದಿನಿಂದ ಅಕ್ಟೋಬರ್ 5ರವರೆಗೆ ಈ ಕಾಂಬೋ ಟಿಕೆಟ್ ಲಭ್ಯವಿರಲಿದೆ ಎಂದು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿದೆ. ಈ ಒಂದು ಟಿಕೆಟ್ ಖರೀದಿಸಿ  ಮೈಸೂರು ಅರಮನೆ, ಕೆಆರ್‌ಎಸ್, ಮೃಗಾಲಯ, ಚಾಮುಂಡೇಶ್ವರಿ ದೇವಸ್ಥಾನ ಮತ್ತು ರೈಲ್ವೆ ಮ್ಯೂಸಿಯಂಗೆ ತೆರಳಬಹುದಾಗಿದೆ.

  Mysuru today news update 20 September 2022 mrq
  ದಸರಾ ಆಹ್ವಾನ ಪತ್ರಿಕೆ


  ಟಿಕೆಟ್ ಬೆಲೆ ವಯಸ್ಕರಿಗೆ 500 ರೂ ಮತ್ತು ಮಕ್ಕಳಿಗೆ 250 ರೂ.ಇರಲಿದೆ. ಒಬ್ಬರು ಒಂದು ಟಿಕೆಟ್ ಪಡೆಯಬಹುದಾಗಿದೆ. ನಾಳೆಯಿಂದ ಕೆಎಸ್‌ಆರ್‌ಟಿಸಿ ಉಪನಗರ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಕೆಎಸ್‌ಟಿಡಿಸಿ ಹೋಟೆಲ್, ಸಿಟಿ ರೈಲ್ವೆ ನಿಲ್ದಾಣ, ಚಾಮುಂಡಿ ಬೆಟ್ಟ, ಮೃಗಾಲಯ, ಕೆಆರ್‌ಎಸ್‌ನ ಎರಡು ಸ್ಥಳಗಳಲ್ಲಿ ಕಾಂಬೋ ಟಿಕೆಟ್​ಗಳು ಲಭ್ಯವಾಗಲಿವೆ.

  4.ಹೆಚ್​ಡಿ ಕೋಟೆ ತಹಶೀಲ್ದಾರ್ ಫುಲ್ ಅವಾಜ್

  ದೂರು ನೀಡಲು ಬಂದವರಿಗೆ ಮೈಸೂರು (Mysuru) ಜಿಲ್ಲೆಯ ಹೆಚ್.ಡಿ.ಕೋಟೆಯ ತಹಶೀಲ್ದಾರ್ (HD Kote Tahshiladar) ರತ್ನಾಂಬಿಕಾ ಅವಾಜ್ ಹಾಕಿರುವ ಘಟನೆ ವಿನಿ ವಿಧಾನಸೌಧದಲ್ಲಿ ನಡೆದಿದೆ. ಅವಾಜ್ ಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಇರೋದು. ಅವರೇ ಹೀಗೆ ಮಾಡಿದ್ರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

  ರೈತ ಸಂಘದ ಮುಖಂಡ ಶಿವಕುಮಾರ್ ಎಂಬವರು ದೂರು ಸಲ್ಲಿಸಲು ಹೋದ ವೇಳೆ ಘಟನೆ ನಡೆದಿದೆ. ಸ್ಥಳೀಯ ಕಂದಾಯ ಅಧಿಕಾರಿ (Revenue Inspector) ಮತ್ತು ಗ್ರಾಮ ಲೆಕ್ಕಾಧಿಕಾರಿಗಳು (Village Accountant) ಲಂಚ ಪಡೆಯುತ್ತಿರುವ ಬಗ್ಗೆ ದೂರು ಸಲ್ಲಿಸಲು ಶಿವಕುಮಾರ್ ತೆರಳಿದ್ದರು. ಈ ವೇಳೆ ಗರಂ ಆದ ತಹಶೀಲ್ದಾರ್ ಟೇಬಲ್ ಮೇಲಿದ್ದ ದಾಖಲೆಗಳನ್ನ ಎಸೆದು ಕೂಗಾಡಿದ್ದಾರೆ.

  ಇದನ್ನೂ ಓದಿ: Consumer Court: ಹೀಗೇ ಹೊಲಿ ಅಂದ್ರೆ ಹೇಗ್ ಹೇಗೋ ಹೊಲಿದ ಟೈಲರ್! ಬಟ್ಟೆ ಕೆಡಿಸಿದ್ದಕ್ಕೆ ಬಿತ್ತು 10 ಸಾವಿರ ದಂಡ!

  5.ಮೈಸೂರು ಅಂಬಾರಿಯ ಬಗ್ಗೆ ನಿಮಗೆಷ್ಟು ಗೊತ್ತು?

  ಮೈಸೂರು ದಸರಾದಲ್ಲಿ ಎಲ್ಲರ ಆಕರ್ಷಣೆಯೇ ಚಿನ್ನದ ಅಂಬಾರಿ. ತಲತಲಾಂತರದಿಂದಲೂ ದೇವಿಯ ಮೂರ್ತಿಯ ಮೆರವಣಿಗೆ ಮಾಡಲು ಇದೇ ಅಂಬಾರಿಯನ್ನು ಬಳಸಲಾಗುತ್ತಿದೆ. ಅಂಬಾರಿಯು 14ನೇ ಶತಮಾನದ ಪ್ರಾರಂಭದಲ್ಲಿ ಕಂಪಿಲರಾಯನ ಆಡಳಿತದ ಕುಮ್ಮಟ ದುರ್ಗದಲ್ಲಿತ್ತು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಮಹಾರಾಷ್ಟ್ರದ ದೇವಗಿಯಲ್ಲಿ ಮೂಲತಃ ಈ ರತ್ನ ಖಚಿತ ಅಂಬಾರಿ ಇತ್ತಂತೆ. ದೇವಗಿರಿ ನಾಶವಾದ ಮೇಲೆ ಇದನ್ನು ರಾಜ ಮುಮ್ಮಡಿ ಸಿಂಗ ನಾಯಕನಿಗೆ ಹಸ್ತಾಂತರಿಸಲಾಗಿದೆ.

  Mysuru today news update 20 September 2022 mrq
  ಜಂಬೂ ಸವಾರಿ


  ಇದನ್ನೂ ಓದಿ: ಮೈಸೂರು ದಸರಾ ಫೋಟೋ ಅಲ್ಬಂ

  ಈ ಅಂಬಾರಿಯನ್ನು ಹೊರಲು ಪ್ರತಿವರ್ಷ ಗಜಪಡೆಯೇ ಬೇಕು ಏಕೆಂದರೆ ಇದು ತುಂಬಾ ಬಾರವಾಗಿರುತ್ತದೆ. ಆನೆಯ ಮೇಲೆ ಅಂಬಾರಿಯನ್ನು ನೋಡುವುದೇ ಒಂದು ಖುಷಿ. ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯ ವಿಗ್ರಹದ ಮೆರವಣಿಗೆ ಮಾಡಲಾಗುತ್ತದೆ.
  Published by:Mahmadrafik K
  First published: