Mysuru Top 5 News: ದಸರಾ ಕಲರವ, ಶಾಲೆಗಳಿಗೆ ರಜೆ ಘೋಷಣೆ, 10 ದಿನ ಫಲಪುಷ್ಪ ಪ್ರದರ್ಶನ; ಮೈಸೂರಿನ ಟಾಪ್ ನ್ಯೂಸ್

ಕೊರೊನಾ ಬಳಿಕ ಅದ್ಧೂರಿಯಾಗಿ ನಡೆಯುತ್ತಿರುವ ದಸರಾ ಇದಾಗಿದೆ. ಇದರ ಜೊತೆಗೆ ರಾಷ್ಟ್ರಪತಿಗಳ ಆಗಮನದ ಹಿನ್ನೆಲೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಇಂದಿನ ಮೈಸೂರಿನ ದಸರಾಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳು ಇಲ್ಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Dasara Holidays: ಶಾಲಾ ಕಾಲೇಜುಗಳಿಗೆ ದಸರಾ ರಜೆ ಘೋಷಣೆ; ಮೈಸೂರಿನಲ್ಲಿ ಇಷ್ಟು ದಿನ ರಜೆ

ಮೈಸೂರು ಜಿಲ್ಲೆಯ ಶಾಲಾ ಕಾಲೇಜುಗಳಿಗೆ (School And Colleges) ಸೆಪ್ಟೆಂಬರ್ 26ರಿಂದ ಅಕ್ಟೋಬರ್ 9ರವರೆಗೆ ದಸರಾ ಹಬ್ಬದ ರಜೆ  (Dasara Holiday) ಘೋಷಣೆ ಮಾಡಲಾಗಿದೆ. ಈ ರಜೆಯ ಮಧ್ಯ ನಡೆಯಲಿರುವ ಗಾಂಧಿ ಜಯಂತಿ (Gandhi Jayanti) ಮತ್ತು ವಾಲ್ಮೀಕಿ ಜಯಂತಿಯನ್ನು (Valmiki Jayanti) ಎಲ್ಲ ಶಾಲೆಗಳಲ್ಲೂ ಕಡ್ಡಾಯವಾಗಿ ಆಚರಿಸಲು ಶಿಕ್ಷಣ ಇಲಾಖೆ (Department Of Education) ಸೂಚನೆ ನೀಡಿದೆ. ಪ್ರತಿ ಜಿಲ್ಲೆಗಳಿಗೂ ಸ್ಥಳೀಯವಾಗಿ ಹಬ್ಬದ ಆಚರಣೆ ಗಮನಿಸಿ ದಸರಾ ರಜೆ ನೀಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 10 ರವೆಗೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ

mysuru today news update 18 september 2022 mrq
ಮಾವುತರ ಮಕ್ಕಳಿಗೆ ಪಾಠ


2.ಹತ್ತು ದಿನಗಳ ಕಾಲ ನಡೆಯಲಿದೆ ಫಲಪುಷ್ಪ ಪ್ರದರ್ಶನ

ನಾಡಹಬ್ಬ ದಸರಾ ಹಿನ್ನೆಲೆ ಸೆಪ್ಟೆಂಬರ್ 26 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಈಗಾಗಲೇ ಯುವ ಜನೋತ್ಸವಕ್ಕೆ ಚಾಲನೆ ನೀಡಲಾಗಿದೆ. ಇದರ ಜೊತೆಗೆ ಮೈಸೂರು ಅರಮನೆಯಲ್ಲಿ ಸೆಪ್ಟೆಂಬರ್ 26 ರಿಂದ 10 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಇದು ವಿವಿಧ ಕಾರ್ಯಕ್ರಮಗಳಲ್ಲಿ ಆಕರ್ಷಣೆಯ ಕೇಂದ್ರ ಬಿಂದು ಆಗಿರಲಿದೆ. ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 32 ಜಾತಿಯ ಹೂವಿನ ಗಿಡಗಳು ಇರಲಿವೆ.  ಪಿಂಗ್ ಪಾಂಗ್, ಕಾರ್ನೆಷನ್ ಸೇರಿದಂತೆ ಸುಮಾರು 4 ಲಕ್ಷ ಹೂಗಳು ಮತ್ತು 15 ಸಾವಿರ ವಿಭಿನ್ನವಾಗಿ ಹೂವಿನ ಕುಂಡಗಳಿಂದ ಅರಮನೆ ಅಂಗಳವನ್ನು ಅಲಂಕರಿಸಲಾಗುತ್ತದೆ. ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಫಲಪುಷ್ಪ ಪ್ರದರ್ಶನದ ಪೋಸ್ಟರ್ ಬಿಡುಗಡೆಗೊಳಿಸಿದರು.

mysuru today news update 18 september 2022 mrqmysuru today news update 18 september 2022 mrq
ಸಚಿವರಿಂದ ಪರಿಶೀಲನೆ


3.ಕಾವಾಡಿಗ, ಮಾವುತರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ ಸಚಿವರು

ಜಂಬೂ ಸವಾರಿಯ ಆನೆಗಳನ್ನು ನೋಡಿಕೊಳ್ಳುತ್ತಿರುವ ಕಾವಾಡಿಗ ಮತ್ತು ಮಾವುತರನ್ನು ಭೇಟಿಯಾದ ಸಚಿವ ಎಸ್.ಟಿ.ಸೋಮಶೇಖರ್ ಎಲ್ಲರ ಜೊತೆ ಕೆಲ ಸಮಯ ಕಳೆದು, ಯೋಗಕ್ಷೇಮ ವಿಚಾರಿಸಿದರು. ಇದೇ ವೇಳೆ ಎಲ್ಲರ ಕಾರ್ಯವನ್ನು ಪ್ರಶಂಸಿದರು. ಈ ವೇಳೆ ಮಾವುತ ಮತ್ತು ಕಾವಾಡಿಗರ ಮಕ್ಕಳಿಗೆ ಆಟಿಕೆ ವಿತರಿಸಿದ ಸಚಿವರು, ಅರಮನೆ ಆವರಣದಲ್ಲಿ ತಾತ್ಕಲಿಕವಾಗಿ ತೆರೆದಿರುವ ಆರೋಗ್ಯ ತಪಾಸಣೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ:  B S Yediyurappa: ಏಕಾಂಗಿಯಾದ್ರಾ ಯಡಿಯೂರಪ್ಪ? BSY ಸ್ವಾಗತಕ್ಕೆ ಬರಲಿಲ್ಲ ಹುಬ್ಬಳ್ಳಿ ಬಿಜೆಪಿ ನಾಯಕರು!

ಈ ವೇಳೆ ಮಾತನಾಡಿದ ಸಚಿವರು, ನಾಳೆ ಸಂಜೆಯೊಳಗೆ ದಸರಾ ಕಾರ್ಯಕ್ರಮದ ವೇಳಾಪಟ್ಟಿ ಅಂತಿಮಗೊಳ್ಳಲಿದೆ ಎಂದು ತಿಳಿಸಿದರು.

mysuru today news update 18 september 2022 mrq
ಪೋಸ್ಟರ್ ಬಿಡುಗಡೆ


4.ಅರಮನೆಯಲ್ಲಿ ಮಾವುತರ ಮಕ್ಕಳಿಗೆ ಪಾಠ

ಜಂಬೂ ಸವಾರಿ ಹಿನ್ನೆಲ ಮೈಸೂರಿಗೆ ಆಗಮಿಸಿರುವ ಮಾವುತರ ಮಕ್ಕಳಿಗೆ ಅರಮನೆ ಮೈದಾನದಲ್ಲಿ ಪಾಠ ಮಾಡಲಾಗುತ್ತಿದೆ.  ಪಾಠದ ಜೊತೆಗೆ ಮಕ್ಕಳಿಗೆ ಸಂಗೀತ, ನೃತ್ಯ ಸೇರಿದಂತೆ ಪಠ್ಯೇತರ ಚಟುವಟಿಕೆಗಳನ್ನು ಸಹ ಹೇಳಿಕೊಡಲಾಗುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ತೆರೆದಿರುವ ತಾತ್ಕಲಿಕ ಶಾಲೆಯಲ್ಲಿ 20 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ.  ಈ ಶಾಲೆಗೆ ಒಟ್ಟು 5 ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ಸಹ ನೀಡಲಾಗುತ್ತಿದೆ. ಮಕ್ಕಳಿಗೆ 150ಕ್ಕೂ ಅಧಿಕ ವಿವಿಧ ಪುಸ್ತಕಗಳನ್ನು ವಿತರಿಸಲಾಗಿದೆ.

mysuru today news update 18 september 2022 mrq
ಕುಸ್ತಿ


5.ಸಚಿವರು, ಸಂಸದ, ಶಾಸಕರು ಮತ್ತು ಅಧಿಕಾರಿಗಳಿಂದ ದಸರಾ ಸಿದ್ಧತೆ ಪರಿಶೀಲನೆ

ದಸರಾ ಸಮೀಪಿಸುತ್ತಿರುವ ಹಿನ್ನೆಲೆ ಇಂದು ಅಧಿಕಾರಿಗಳ ಕಾರ್ಯಕ್ರಮಗಳ ಸಿದ್ಧತೆಯ ಪರಿಶೀಲನೆ ನಡೆಸಿದರು. ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳು ದಸರಾ ಉದ್ಘಾಟನೆಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆ ರಾಷ್ಟ್ರಪತಿಗಳು ಭೇಟಿ ನೀಡುವ ಸ್ಥಳದ ಪರಿಶೀಲನೆ ಖುದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವರೇ ಪರಿಶೀಲನೆ ನಡೆಸಿದರು. ಇಂದು ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ನಗರದಲ್ಲಿ ಸಂಚರಿಸಿ ಕಾರ್ಯಕ್ರಮಗಳ ಮಾಹಿತಿ ಪಡೆದುಕೊಂಡರು.

ಇದನ್ನೂ ಓದಿ:  Karnataka Politics: ಮೈಸೂರು ಭಾಗದಲ್ಲಿ ಕಾಂಗ್ರೆಸ್​ನಿಂದ ಅಖಾಡಕ್ಕಿಳೀತಾರೆ ಬಿಗ್ ಲೇಡಿ ಲೀಡರ್; ಡಿಕೆಶಿ ಹೇಳಿದ ಆ ನಾಯಕಿ ಯಾರು?

ಮೈಸೂರು ದಸರಾ ಮಹೋತ್ಸವ - 2022 ರ ಅಂಗವಾಗಿ ವಸ್ತುಪ್ರದರ್ಶನದ ಆವರಣದ ಪಿ. ಕಳಿಂಗರಾವ್ ಗಾನ ಮಂಟಪದಲ್ಲಿ ಮೈಸೂರು ದಸರಾ ಮಹೋತ್ಸವ ಕುಸ್ತಿ ಉಪಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ನಾಡಕುಸ್ತಿ ಜೋಡಿ ಕಟ್ಟುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
Published by:Mahmadrafik K
First published: