Mysuru Top 5 News: ಜಂಬೂ ಸವಾರಿಗೆ ಬರಲ್ಲ ಮೋದಿ, ದಸರಾ ಮಾಹಿತಿ ನೀಡಿದ ಎಸ್​ಟಿಎಸ್; ಮೈಸೂರು ಟಾಪ್ ನ್ಯೂಸ್

ಈ ಬಾರಿ ಮೈಸೂರು ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ಮತ್ತು ಜಿಲ್ಲಾಡಳಿತ ಸಜ್ಜಾಗಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಸಚಿವ ಎಸ್.ಟಿ.ಸೋಮಶೇಖರ್ ದಸರಾ ಆಚರಣೆಯ ಮಾಹಿತಿ ನೀಡಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.ದಸರಾ ಜಂಬೂ ಸವಾರಿ ಪುಷ್ಪಾರ್ಚನೆಗೆ ಪ್ರಧಾನಿ ಮೋದಿ ಬರುವುದಿಲ್ಲ

ಈ ಬಾರಿಯ ದಸರಾ ಜಂಬೂ ಸವಾರಿಯ (Mysuru Jamboo Savari) ಪುಷ್ಪಾರ್ಚನೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬರುವದಿಲ್ಲ ಎಂದು ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ (Minister ST Somashekhar) ಹೇಳಿದ್ದಾರೆ. ರಾಷ್ಟ್ರಪತಿಗಳು ಭಾಗವಹಿಸುವ ಕಾರ್ಯಕ್ರಮದ ಪಟ್ಟಿ ಅಂತಿಮವಾಗುತ್ತಿದೆ. ಅರಮನೆಯ ಭೇಟಿ ಬಗ್ಗೆ ಮಾಹಿತಿ ಕೇಳಲಾಗಿದೆ. ಇನ್ನೂ ರಾಷ್ಟ್ರಪತಿಗಳಿಂದ (President Draupadi Murmu) ಅದಕ್ಕೆ ಅಧಿಕೃತ ಒಪ್ಪಿಗೆ ಸಿಕ್ಕಿಲ್ಲ. ಕೇಂದ್ರದ ನಾಲ್ಕು ಮಂತ್ರಿಗಳು ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಬರುವ ಸಾಧ್ಯತೆ ಇದೆ. ಅದರ ಆಧಾರದ ಮೇಲೆ ವೇದಿಕೆ ಮೇಲೆ ಕೂರುವವರ ಪಟ್ಟಿ ಅಂತಿಮಗೊಳ್ಳುತ್ತದೆ. ದಸರಾ ಪಾಸ್ (Dasara Pass) ಮತ್ತು ಗೋಲ್ಡ್ ಕಾರ್ಡ್ ನೀಡುವ ಬಗ್ಗೆ ಇಂದು ತೀರ್ಮಾನ ಮಾಡಲಾಗುತ್ತದೆ. ಈ ಬಾರಿಯ ದಸರಾಗೆ ಹಣ ಬಿಡುಗಡೆ ಮಾಡಿರುವುದಾಗಿ ಸ್ವತಃ ಸಿಎಂ ಹೇಳಿದ್ದಾರೆ. ವಿದ್ಯುತ್ ದೀಪಾಲಂಕರಕ್ಕೆ 4.5 ಕೋಟಿ ರೂ. ನಿಗದಿ ಮಾಡಲಾಗಿದೆ. ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡುತ್ತೇವೆ ಎಂದು ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

2.ರಂಗೇರಿದೆ ಮೈಸೂರು ದಸರಾ ಸಡಗರ

ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮ ಮನೆ ಮಾಡಿದೆ. ದಸರಾ ಕಾರ್ಯಕ್ರಮದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಈ ಬಾರಿ ಇಂಗ್ಲೀಷ್ ನಲ್ಲಿ ಆಹ್ವಾನ ಪತ್ರಿಕೆ ಇರಲಿದೆ.  8 ದಿನಗಳ ಕಾಲ ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. 26ಕ್ಕೆ ಯೋಗ ದಸರಾ ನಡೆಯಲಿದ್ದು, 7 ದಿನಗಳ ಯೋಗ ದಸರಾ ನಡೆಯಲಿದೆ ಎಂದು ಎಸ್​.ಟಿ ಸೋಮಶೇಖರ್​ ತಿಳಿಸಿದ್ದಾರೆ. 10 ದಿನಗಳ ಆಹಾರ ಮೇಳ ನಡೆಯಲಿದೆ. ಯುವ ದಸರಾ ಉದ್ಘಾಟಕರು ಸೇರಿದಂತೆ ಕಾರ್ಯಕ್ರಮದ ಕುರಿತ ಸೋಮವಾರ ಅಂತಿಮ ಪಟ್ಟಿ ಸಿದ್ದವಾಗಲಿದೆ. ಚಲನಚಿತ್ರೋತ್ಸವ ಕಾರ್ಯಕ್ರಮವನ್ನ ಅಶ್ವಿನಿ ಪುನೀತ್ ರಾಜ್ ಕುಮಾರ್ ಉದ್ಘಾಟಿಸಲಿದ್ದಾರೆ.

Preparations begin for Dasara Festivities
ಸಾಂದರ್ಭಿಕ ಚಿತ್ರ


3.ಯುವ ಸಂಭ್ರಮಕ್ಕೆ ರಂಗು ತುಂಬಿದ ಡಾಲಿ ಧನಂಜಯ್

ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮ ಮನೆ ಮಾಡಿದೆ. ಯುವ ದಸರಾಗೆ ಮುನ್ನುಡಿ ಬರೆಯುವ ಯುವ ಸಂಭ್ರಮಕ್ಕೆ ಇದೀಗ ಚಾಲನೆ ಸಿಕ್ಕಿದೆ. ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ದೀಪ ಬೆಳೆಗುವ ಮೂಲಕ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.

ಇದನ್ನೂ ಓದಿ: Basavaraj Bommai: ಹೈದ್ರಾಬಾದ್‌ನಲ್ಲಿ ಬಸವರಾಜ ಬೊಮ್ಮಾಯಿಗೆ ಅಪಮಾನ, 40% ಸಿಎಂಗೆ ಸ್ವಾಗತ ಅಂತ ಫ್ಲೆಕ್ಸ್ ಹಾಕಿದ ಟಿಆರ್‌ಎಸ್!

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಟ ಡಾಲಿ ಧನಂಜಯ್ ಭಾಗಿಯಾಗಿದ್ರು.  ನಾಗರಿ, ಕಂಸಾಳೆ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದ್ರು. ಸಾಂಪ್ರದಾಯಿಕ ಉಡುಗೆ ಬಿಳಿಯ ಶರ್ಟ್, ಪಂಚೆ ಧರಿಸಿ ತೊಟ್ಟು ಯುವ ಸಂಭ್ರಮಕ್ಕೆ ನಟ ಡಾಲಿ ಧನಂಜಯ್ ಆಗಮಿಸಿದ್ರು.

Mysuru today news update 17th September 2022 mrq
ಯುವ ಸಂಭ್ರಮ


4.ಸ್ವಚ್ಛ ಭಾರತದೆಡೆಗೆ ಮೈಸೂರಿನ ನಡಿಗೆ

ಮೈಸೂರು ನಗರದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ್ ಅಂಗವಾಗಿ ಹಮ್ಮಿಕೊಂಡಿದ್ದ "ಸ್ವಚ್ಛ ಭಾರತದೆಡೆಗೆ ಮೈಸೂರಿನ ನಡಿಗೆ" ಕಾರ್ಯಕ್ರಮಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸುಮಾರು ಮುನ್ನೂರು ಅಧಿಕ ಸ್ವಯಂ ಕಾರ್ಯಕರ್ತರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದರು. ‘ನಮ್ಮ ಪಾರಂಪರಿಕ ನಗರವನ್ನು ಸ್ವಚ್ಛವಾಗಿಡುವ ಮೂಲಕ ಸುಂದರಗೊಳಿಸೋಣ’ ಈ ಅಭಿಯಾನದ ಧ್ಯೇಯ ವಾಕ್ಯವಾಗಿತ್ತು.

Mysuru today news update 17th September 2022 mrq
ಸ್ವಚ್ಛತಾ ಕಾರ್ಯಕ್ರಮ


5.ಮೋದಿ ಯುಗ ಉತ್ಸವ-2022 ಮಾಜಿ ಸಿಎಂ ಎಸ್​.ಎಂ.ಕೃಷ್ಣ ಚಾಲನೆ

ನಗರದ ರಾಮಲಿಂಗೇಶ್ವರ ಉದ್ಯಾನವನದಲ್ಲಿ ನಡೆಯುತ್ತಿರುವ ಮೋದಿ ಯುಗ ಉತ್ಸವ-2022 ಮಾಜಿ ಸಿಎಂ ಎಸ್​.ಎಂ.ಕೃಷ್ಣ ಚಾಲನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆ ಶಾಸಕ ಎಸ್​ಎ ರಾಮದಾಸ್ ಈ ಉತ್ಸವ ಆಯೋಜಿಸಿದ್ದಾರೆ.

ಇದನ್ನೂ ಓದಿ:  BDA Scam: ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಗ ವಿಜಯೇಂದ್ರ ವಿರುದ್ಧ FIR ದಾಖಲು

ಈ ಉತ್ಸವದ ಮೂಲಕ ಜನರಿಗೆ ಮೋದಿ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ತಲುಪಿಸುವ ಗುರಿ ಹೊಂದಲಾಗಿದೆ.
Published by:Mahmadrafik K
First published: