Mysuru Top 5 News: ಚಲನಚಿತ್ರೋತ್ಸವದಲ್ಲಿ ಅಪ್ಪು ಸಿನಿಮಾ, ಮೃಗಾಲಯಕ್ಕೆ ಮೂರನೇ ಸ್ಥಾನ; ಮೈಸೂರಿನ ಟಾಪ್​​ ನ್ಯೂಸ್​​ಗಳು

Mysuru Dasara 2022: ಈ ಬಾರಿ ಮೈಸೂರು ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ಮತ್ತು ಜಿಲ್ಲಾಡಳಿತ ಸಜ್ಜಾಗಿದೆ. ಮೈಸೂರು ದಸರಾ ವೇಳೆ ನಡೆಯುವ ವಿವಿಧ ಕಾರ್ಯಕ್ರಮಗಳ ವೇಳಾಪಟ್ಟಿ ಪ್ರಕಟವಾಗುತ್ತಿದೆ. ಇಂದು ಚಲಚಿತ್ರೋತ್ಸವ, ರೈತ ದಸರಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.ಗಜಪಡೆಗೆ ಎರಡನೇ ಹಂತದ ತಾಲೀಮು, 14ರ ಪೈಕಿ 12 ಆನೆಗಳು ಭಾಗಿ

ಮೈಸೂರು ದಸರಾ (Mysuru Dasara 2022) ಸಮೀಪಿಸುತ್ತಿದ್ದು, ಗಜಪಡೆಗೆ (Elephants) ಎರಡನೇ ಹಂತದ ತಾಲೀಮು ನಡೆಸಲಾಯ್ತು. ಈ ಬಾರಿ ಸಿಡಿಮದ್ದು ತಾಲೀಮನ್ನು ವಸ್ತು ಪ್ರದರ್ಶನ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು. ಅರಮನೆ (Palace) ಹಾಗೂ ಕೋಟೆಗಳ ಪುರಾತನ ಕಟ್ಟಡಗಳಿಗೆ (An Ancient building And Forts) ಧಕ್ಕೆ ಉಂಟಾಗುವ ಸಾಧ್ಯತೆಗಳಿರುವ ಹಿನ್ನೆಲೆ ತಾಲೀಮನ್ನು ಅರಮನೆ ಆಡಳಿತ ಮಂಡಳಿಯ ಸೂಚನೆ ಮೇರೆಗೆ  ವಸ್ತು ಪ್ರದರ್ಶನ ಪಾರ್ಕಿಂಗ್ ಆವರಣ ಸ್ಥಳಾಂತರಿಸಲಾಗಿತ್ತು. ಎರಡನೇ ತಾಲೀಮಲ್ಲಿ 21 ಕುಶಾಲತೋಪುಗಳನ್ನು ಸಿಡಿಸಲಾಯ್ತು ಎಂದು ಡಿಸಿಎಫ್ ಕರಿಕಾಲನ್ ಮಾಹಿತಿ ನೀಡಿದರು. ಇಂದು ನಡೆದ ತಾಲೀಮಿನಲ್ಲಿ 12 ಆನೆಗಳು ಭಾಗಿಯಾಗಿದ್ದವು. 12 ಆನೆಗಳ ಪೈಕಿ ಪಾರ್ಥ ಸಾರಥಿ ಮಾತ್ರ ಹೆದರಿದ್ದನು. ಕುಶಾಲತೋಪು ಸಿಡಿಸಿದಾಗ ಸುಮಾರು ಸರಾಸರಿ 92.2 ಡೆಸಿಬಲ್ ಶಬ್ಧ ಹೊರ ಹೊಮ್ಮಿದೆ. ಇಂದು ನಡೆದ ತಾಲೀಮಿನಲ್ಲಿ 12 ಆನೆಗಳ ಜೊತೆ 41 ಆಶ್ವಾರೋಹಿ ದಳದ ಕುದುರೆಗಳು (Horses) ಸಹ ಭಾಗವಹಿಸಿದ್ದವು.

2.ವಿಶೇಷ ವಿಶೇಷತೆಯೊಂದಿಗೆ ಸೆಪ್ಟೆಂಬರ್ 30 ರಿಂದ ರೈತರ ದಸರಾ

ನಗರದ ಜೆಕೆ ಮೈದಾನದಲ್ಲಿ ಸೆಪ್ಟೆಂಬರ್ 30 ರಿಂದ ಅಕ್ಠೋಬರ್ 3ರವರೆಗೆ ರೈತ ದಸರೆ ನಡೆಯಲಿದೆ. ಈ ಬಾರಿಯ ಗ್ರಾಮೀಣ ಕ್ರೀಡಾ ಸ್ಪರ್ಧೆಗಳು ಓವೆಲ್ ಮೈದಾನ ಮತ್ತು ಸಿದ್ದಲಿಂಗಪುರದಲ್ಲಿ ನಡೆಯಲಿವೆ. ಸೆಪ್ಟೆಂಬರ್ 30ರ ಬೆಳಗ್ಗೆ ಎತ್ತಿನ ಬಂಡಿಯ ಮೆರವಣಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಚಾಲನೆ ನೀಡಲಿದ್ದಾರೆ.  ಕೃಷಿ ವಸ್ತು ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಗಾಟಿಸಲಿದ್ದಾರೆ. ಕೃಷಿ ವಸ್ತು ಪ್ರದರ್ಶನದಲ್ಲಿ ಕೃಷಿ, ರೇಷ್ಮೆ, ಮೀನುಗಾರಿಕೆ, ತೋಟಗಾರಿಕೆ, ಪಶುಪಾಲನಾ ಇಲಾಖೆಯ 50ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ.

Mysuru today news update 16 September 2022 mrq
ಗಜಪಡೆ


3.ಸೆ.26 ರಿಂದ 7 ದಿನ ದಸರಾ ಚಲನಚಿತ್ರೋತ್ಸವ

ಮೈಸೂರು ದಸರಾ ಅಂಗವಾಗಿ ನಡೆಯುವ ಚಲನಚಿತ್ರೋತ್ಸವ ಸೆಪ್ಟೆಂಬರ್ 26ರಿಂದ ನಡೆಯಲಿದೆ.  ಇಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಗಳಿಸಿರುವ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ. ಸೆಪ್ಟೆಂಬರ್ 26ರ ಬೆಳಗ್ಗೆ 11 ಗಂಟೆಗೆ ಚಲನಚಿತ್ರೋತ್ಸವವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಹಿರಿಯ ನಟ ಶಿವರಾಜ್ ಕುಮಾರ್ ಉದ್ಘಾಟಿಸಲಿದ್ದಾರೆ. ಸೆ.26 ರಿಂದ ಅಕ್ಟೀಬರ್ 3ರವರೆಗೆ ನಡೆಯುವ ಚಲನಚಿತ್ರೋತ್ಸವದಲ್ಲಿ 112 ಚಿತ್ರಗಳು ಪ್ರದರ್ಶನಗೊಳ್ಳಲಿವೆ. 28 ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾಗಳು 3 ಐನಾಕ್ಸ್​​ ಮತ್ತು 1 DRC ಸ್ಕ್ರೀನ್​ನಲ್ಲಿ ಪ್ರದರ್ಶನಗೊಳ್ಳಲಿವೆ. ಪುನೀತ್​ ರಾಜ್​​ಕುಮಾರ್ ಅಭಿನಯದ ಬೆಟ್ಟದ ಹೂ, ಮೈತ್ರಿ, ಅಂಜನಿಪುತ್ರ,ಮ ರಾಜಕುಮಾರ, ಯುವರತ್ನ ಮತ್ತು ಪೃಥ್ವಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇದರ ಜೊತೆಗೆ ಸಂಚಾರಿ ವಿಜಯ್ ಅಭಿನಯದ ಆಕ್ಟ್ 1978, ತಲೆದಂಡ ಮತ್ತು ಪುಕ್ಸಟ್ಟೆ ಲೈಫ್ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

Mysuru today news update 16 September 2022 mrq
ನಟ ಪುನೀತ್ ರಾಜ್​ಕುಮಾರ್


ಇದನ್ನೂ ಓದಿ:  Mysuru Dasara 2022: ದಸರೆಗಾಗಿ ಬಂದಿದ್ದ ಆನೆ, ಮರಿ ಹಾಕಿದಾಗಲೇ ಗೊತ್ತಾಯ್ತು ಗರ್ಭಧಾರಣೆ ವಿಚಾರ! ಇದೆಂಥಾ ನಿರ್ಲಕ್ಷ್ಯ?

4.ಕಿವುಡರ ರಾಷ್ಟ್ರಮಟ್ಟದ ಟಿ-20 ಕ್ರಿಕೆಟ್ ಪಂದ್ಯ

ಸೆ. 18 ರಿಂದ 24 ರವರೆಗೆ ಮೈಸೂರಿನ ಆರ್​ಬಿಐ ಮೈದಾನದಲ್ಲಿ ಕಿವುಡರ ರಾಷ್ಟ್ರಮಟ್ಟದ ಟಿ-20 ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಮೈಸೂರು ಜಿಲ್ಲಾ ಕಿವುಡರ ಸಂಸ್ಥೆ ವತಿಯಿಂದ ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.  ಇಲ್ಲಿ ನಡೆಯುವ ಪಂದ್ಯಗಳಲ್ಲಿ ಚೆನ್ನಾಗಿ ಆಡುವ ಆಟಗಾರ ಕೇರಳದ ತಿರುವನಂತಪುರದಲ್ಲಿಮ ನಡೆಯುವ ವಿಶ್ವ ಕಿವುಡದ ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಆಡಲು ಆಯ್ಕೆ ಆಗುತ್ತಾರೆ.

Mysuru today news update 16 September 2022 mrq
ಮೈಸೂರು ಮೃಗಾಲಯ


ಇದನ್ನೂ ಓದಿ:  Murder: ಗಂಡ ಬಿಟ್ಟವಳಿಗೆ ಅವನ ಮೇಲೆ ಪ್ರೇಮ, ಇವನ ಮೇಲೆ ಮೋಹ! ಅಕ್ರಮ ಸಂಬಂಧಕ್ಕೆ ನಡೆಯಿತು ಮಹಿಳೆ ಕೊಲೆ

5.ಮೈಸೂರು ಮೃಗಾಲಯಕ್ಕೆ ಮೂರನೇ ಸ್ಥಾನ

ಮೈಸೂರಿನ ಮೃಗಾಲಯ ದೇಶದ ಅತ್ಯುನ್ನತ ಮೃಗಾಲಯಗಳಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರ (CZA) ದೇಶದ ಅತ್ಯುತ್ತಮ ಮೃಗಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಮತ್ತು ಎರಡನೇ ಸ್ಥಾನದಲ್ಲಿ ಡಾರ್ಜಲಿಂಗ್ ಮೃಗಾಲಯ ಹಾಗೂ ಚೆನ್ನೈ ಮೃಗಾಲಯಗಳಿವೆ.
Published by:Mahmadrafik K
First published: