Mysuru Top 5 News: ದಸರಾಗೆ ಪ್ರಧಾನಿ ಮೋದಿ, ಕಾಡಿನ ಮಕ್ಕಳ ಕಲರವ, 23 ವಿದ್ಯುತ್ ದೀಪಗಳ ದುರಸ್ತಿ; ಮೈಸೂರಿನ ಟಾಪ್ ನ್ಯೂಸ್​

Mysuru Top 5 News: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ದಸರಾದ ಕಲರವ ಶುರುವಾಗಿದೆ. ಈ ಹಿನ್ನೆಲೆ ವಿವಿಧ ಚಟುವಟಿಕೆಗಳು ನಡೆಯುತ್ತಿವೆ. ಮೈಸೂರಿನ ಇವತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.ಐತಿಹಾಸ ಕ್ಷಣಕ್ಕೆ ಸಾಕ್ಷಿಯಾಗಲಿದೆ ಮೈಸೂರು ದಸರಾ

ಕೊರೊನಾ (Corona Virus) ಬಳಿಕ ಅದ್ಧೂರಿಯಾಗಿ ನಡೆಯುತ್ತಿರುವ ದಸರಾ (Dasara 2022) ಈ ಬಾರಿ ಹಲವು ವಿಶೇಷಗಳಿಗೆ ಸಾಕ್ಷಿಯಾಗಲಿದೆ. ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳು ದಸರಾ ಉದ್ಘಾಟನೆ ಮಾಡಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಸೆ.26ರಂದು ದಸರಾ ಉದ್ಘಾಟಿಸಲಿದ್ದಾರೆ. ಇನ್ನು ಮತ್ತೊಂದು ವಿಶೇಷ ಅಂದ್ರೆ ದಸರಾ ಜಂಬೂ ಸವಾರಿ ಮೆರವಣಿಗೆಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ (PM Narendra Modi) ಚಾಲನೆ ನೀಡಲಿದ್ದಾರೆ. ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿ ತಾಯಿಗೆ (Goddess Chamundeshwari) ಪುಷ್ಪಾರಾರ್ಚನೆ ನೆರವೇರಿಸಲಿದ್ದಾರೆ. ರಾಜ್ಯ ಸರ್ಕಾರ ನೀಡಿದ ಆಹ್ವಾನವನ್ನು ಪ್ರಧಾನಿಗಳು ಒಪ್ಪಿದ್ದಾರೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ವರದಿ ಮಾಡಿದೆ.

2.ಸೆಪ್ಟೆಂಬರ್ 18ರಂದ ಕುಸ್ತಿಪಟುಗಳ ಜೋಡಿ ಕಟ್ಟುವ ಕಾರ್ಯ

ಮೈಸೂರು ದಸರಾ ಅಂಗವಾಗಿ ಆಯೋಜನೆ ಮಾಡಿರುವ ನಾಡಕುಸ್ತಿ ಪಂದ್ಯಾವಳಿಗೆ ಸೆ.18ರಂದು ವಸ್ತುಪ್ರದರ್ಶನ ಆವರಣದ ಬಿ.ವಿ.ಕಾರಂತ ರಂಗಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಜೋಡಿ ಕಟ್ಟುವ ಕಾರ್ಯ ನಡೆಯಲಿದೆ. ಸೆಪ್ಟೆಂಬರ್ 26ರಿಂದ ಆಕ್ಟೋಬರ್ 2ರವರೆಗೆ ಏಳು ದಿನ ಡಿ. ದೇವರಾಜು ಅರಸು ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿಗಳು ನಡೆಯಲಿದೆ.

Mysuru today news update 15th September 2022 mrq
ಕುಸ್ತಿ ಪಂದ್ಯಾವಳಿ


ಕುಸ್ತಿಯಲ್ಲಿ ಭಾಗವಹಿಸಲು ಇಚ್ಛಿಸುವ ಸ್ಪರ್ಧಾಳುಗಳು ಇತ್ತೀಚಿನ ಎರಡು ಪಾಸ್​​ಪೋರ್ಟ್​ ಅಳತೆಯ ಕಲರ್ ಫೋಟೋ ಮತ್ತು ಕುಸ್ತಿ ಸಮವಸ್ತ್ರದಲ್ಲಿರುವ ಭಾವಚಿತ್ರದೊಂದಿಗೆ ಬರಬೇಕು. ಸ್ಪರ್ಧಾಳುಗಳು ನಿಗಧಿತ ಅರ್ಜಿಯನ್ನು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್​​ಬುಕ್​ ದಾಖಲೆಯೊಂದಿಗೆ ಭರ್ತಿ ಮಾಡಿದ ನಂತರ ಜೋಡಿ ಕಟ್ಟುವ ಕೆಲಸ ನಡೆಯಲಿದೆ.

ಇದನ್ನೂ ಓದಿ: Gadi Mari: ಈ ದೇವಿಗೆ ರಸ್ತೆಬದಿಯೇ ಗತಿ! ಊರಿಂದೂರಿಗೆ ಕಸ ಸಾಗಿಸುವ ದೇವರು!

3.ದಸರಾ ದೀಪಾಲಂಕಾರದ ಪೋಸ್ಟರ್ ಬಿಡುಗಡೆ

ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2022ರ ದಸರಾ ದೀಪಾಲಂಕಾರಕ್ಕೆ ಸಂಬಂಧಿಸಿದಂತೆ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳಾದ ಡಾ. ಬಗಾದಿ ಗೌತಮ್ ರವರು , ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಯವಿಭವ ಸ್ವಾಮಿ ರವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚಿಸುವ ಸಂಬಂಧವಾಗಿ ಇಂದು ಮೈಸೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಸಭೆ ನಡೆಸಲಾಯಿತು. ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2022ರ ದಸರಾ ದೀಪಾಲಂಕಾರಕ್ಕೆ ಸಂಬಂಧಿಸಿದಂತೆ ಪೋಸ್ಟರ್ ಬಿಡುಗಡೆ ಮಾಡಲಾಯಿತು.

Mysuru today news update 15th September 2022 mrq
ಪೋಸ್ಟರ್ ಬಿಡುಗಡೆ


ಜಿಲ್ಲಾಧಿಕಾರಿಗಳಾದ ಡಾ. ಬಗಾದಿ ಗೌತಮ್ ರವರು , ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಯವಿಭವ ಸ್ವಾಮಿ ರವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು. ಪೂಜ್ಯ ಮಹಾಪೌರರಾದ ಶ್ರೀ ಶಿವಕುಮಾರ್ ರವರು, ಉಪ ಮೇಯರ್ ಶ್ರೀಮತಿ ಡಾ ಜಿ.ರೂಪ ಯೋಗೀಶ್, ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಲಕ್ಷ್ಮೀಕಾಂತ್ ರೆಡ್ಡಿ ರವರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

4.ಮೈಸೂರು ಅರಮನೆಯ 23 ಸಾವಿರ ವಿದ್ಯುತ್ ದೀಪಗಳು ಬದಲಿ ಕಾರ್ಯ

ದಸರಾ ಹಿನ್ನೆಲೆ ಸಾಂಸ್ಕೃತಿಕ ನಗರ ವಧುವಿನಂತೆ ಸಿಂಗಾರಗೊಳ್ಳುತ್ತಿದೆ. ಮೈಸೂರು ನಗರದ ಆಕರ್ಷಣೆಯ ಕೇಂದ್ರ ಬಿಂದು ಅರಮನೆಯನ್ನು ಸಿಂಗರಿಸಲಾಗುತ್ತಿದೆ. ಅರಮನೆಯ ಆಕರ್ಷಣೆ ಹೆಚ್ಚಿಸಲು ವಿದ್ಯುತ್ ದೀಪಾಲಂಕರ ಪರಿಶೀಲನೆ ಕಾರ್ಯ ನಡೆಯುತ್ತಿದೆ. 50ಕ್ಕೂ ಹೆಚ್ಚು ಕಾರ್ಮಿಕರು ಅರಮನೆ ಆವರಣವನ್ನ ದಸರಾಗಾಗಿ ಸಿದ್ಧಗೊಳಿಸುತ್ತಿದ್ದಾರೆ. 12ಕ್ಕೂ ಅಧಿಕ ಕಾರ್ಮಿಕರು ವಿದ್ಯುತ್ ದೀಪಗಳ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ. ಅರಮನೆಗೆ ಸುಮಾರು 1 ಲಕ್ಷ ದೀಪಗಳನ್ನು ಅಳವಡಿಸಲಾಗಿರುತ್ತದೆ. ಪ್ರತಿವರ್ಷ 15 ರಿಂದ 20 ಸಾವಿರ ದೀಪಗಳು ಹಾನಿಯಾಗಿರುತ್ತವೆ. ಈ ಬಾರಿ 23 ಸಾವಿರ ದೀಪಗಳ ದುರಸ್ತಿ ಕಾರ್ಯ ನಡೆಯಲಿದೆ.

Mysuru today news update 15th September 2022 mrq
ಮೈಸೂರು ಅರಮನೆ


ಇದನ್ನೂ ಓದಿ:  Basangouda Patil Yatnal: ಸಿಎಂಗೆ ಧಮ್ ಇದ್ದರೆ ಎನ್​​ಕೌಂಟರ್ ಮಾಡಲಿ; ಶಾಸಕ ಯತ್ನಾಳ್

5.ಅರಮನೆ ಆವರಣದಲ್ಲಿ ಕಾಡಿನ ಮಕ್ಕಳ ಕಲರವ

ನಾಡಹಬ್ಬ ದಸರಾ ಹಿನ್ನಲೆ ಅರಮನೆ ಆವರಣದಲ್ಲಿ ಕಾಡಿನ ಮಕ್ಕಳ ಕಲರವ ಶುರುವಾಗಿದೆ. ಕಾಡಿನ ಮಕ್ಕಳಿಗಾಗಿ ಶುರುವಾದ ಶಾಲೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.  ಯಾವ ಸರ್ಕಾರಿ ಶಾಲೆಗೂ ಕಡಿಮೆ ಇಲ್ಲ ಎಂಬಂತೆ ಟೆಂಟ್​ನಲ್ಲಿ ಶಾಲೆ ನಡೆಯುತ್ತಿದೆ. ಎಲ್ಲಾ ರೀತಿಯ ಕಲಿಕಾ ಸಾಮಾಗ್ರಿಗಳಿಂದ  1 ರಿಂದ 9ನೇ ತರಗತಿಯ ಕಾಡಿನ ಮಕ್ಕಳಿಗೆ ವಿಧ್ಯಾಭ್ಯಾಸ ನೀಡಲಾಗುತ್ತಿದೆ. ಪಠ್ಯದ ಚಟುವಕೆ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿಯೂ ಮಕ್ಕಳು ಭಾಗಿಯಾಗುತ್ತಿದ್ದಾರೆ. ಕಾಡಿನ ಮಕ್ಕಳಿಗಾಗಿಯೇ ಪ್ರತ್ಯೇಕ 5 ಮಂದಿ ಶಿಕ್ಷಕರ ನೇಮಕ ಮಾಡಲಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರ ಶೇಖರ್ ಸ್ವಾಮಿ ಹೇಳಿದ್ದಾರೆ.
Published by:Mahmadrafik K
First published: