Mysuru Top-5 News: ಸಿಂಹಾಸನ ಜೋಡಣೆ, ಈ ದಿನ ಅರಮನೆಗಿಲ್ಲ ಎಂಟ್ರಿ, ಮೇಯರ್ ಸಿಟಿ ರೌಂಡ್ಸ್​; ಮೈಸೂರಿನ ಟಾಪ್ ನ್ಯೂಸ್

ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ದಸರಾದ ಕಲರವ ಶುರುವಾಗಿದೆ. ಜಿಲ್ಲಾಡಳಿತ ಈ ಸಂಬಂಧ ಎಲ್ಲಾ ಸಿದ್ಧತೆಗಳನ್ನು ಸಹ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆ ವಿವಿಧ ಚಟುವಟಿಕೆಗಳು ನಡೆಯುತ್ತಿವೆ. ಇದೆಲ್ಲದರ ಕುರಿತ ಅಪ್​​ಡೇಟ್ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.ಸೆ.20ರಂದು ಸಿಂಹಾಸನ ಜೋಡಣೆ, ಮಧ್ಯಾಹ್ನ 1 ಗಂಟೆವರೆಗೆ ಪ್ರವಾಸಿಗರಿಗೆ ನಿರ್ಬಂಧ

ದಸರಾ (Mysuru Dasara-2022) ಹಿನ್ನೆಲೆ ಅರಮನೆಯಲ್ಲಿ (Mysuru Palace) ಚಟುವಟಿಕೆಗಳು ಗರಿಗೆದರಿವೆ.  ಸೆ.20ರಂದು ಅಂದ್ರೆ ಸೋಮವಾರ ಮೈಸೂರು ಅರಮನೆಯಲ್ಲಿ ಸಿಂಹಾಸನ ಜೋಡಣೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆ ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಅರಮನೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ. ಮೈಸೂರಿನ ಗೆಜ್ಜಗಳ್ಳಿ ಗ್ರಾಮದ ನುರಿತರು ಸಿಂಹಾಸನ (Mysuru Simhasana) ಜೋಡಣೆ ಮಾಡಲಿದ್ದಾರೆ. ಸೆ.20ರಂದು ಅರಮನೆಯ ನೆಲಮಾಳಿಗೆಯ ಸ್ಟ್ರಾಂಗ್ ರೂಮ್​ನಲ್ಲಿರುವ (Mysuru Palace Strong Room) ರತ್ನ ಖಚಿತ ಸಿಂಹಾಸನವನ್ನು ದರ್ಬಾರ್ ಹಾಲ್​ಗೆ ತರಲಾಗುತ್ತದೆ. ಇದಕ್ಕೂ ಮುನ್ನ ಹೋಮ ಶಾಂತಿ ಬಳಿಕವೇ ಸ್ಟ್ರಾಂಗ್ ರೂಮ್ ತೆರೆಯಲಾಗುತ್ತದೆ. ಈ ಹಿನ್ನೆಲೆ  ಅರಮನೆ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.

Mysuru today news update 13 September 2022 mrq
ಮೈಸೂರು ಸಿಂಹಾಸನ (ಫೋಟೋ ಕೃಪೆ-ಫೇಸ್​​ಬುಕ್​​)


ಸ್ಟ್ರಾಂಗ್ ರೂಮ್ ತೆರೆಯುವ ವೇಳೆ ಎಲ್ಲಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಮೊಬೈಲ್ (Mobile) ತರದಂತೆ ಸೂಚನೆ ನೀಡಲಾಗಿದೆ. ಈ ವೇಳೆ ಸಿಸಿಟಿವಿ ಕ್ಯಾಮೆರಾಗಳಿಗೂ (CCTV Camera) ಪರದೆ ಹಾಕಲಾಗಿರುತ್ತದೆ.

Mysuru today news update 13 September 2022 mrq
ಸಿಂಹಾಸನ ಜೋಡಣೆ ಕಾರ್ಯ (ಫೋಟೋ ಕೃಪೆ-ಫೇಸ್​​ಬುಕ್​​)


2.ಪ್ರವಾಸಿಗರೇ ಗಮನಿಸಿ, ಈ ಮೂರು ದಿನ ಸಾರ್ವಜನಿಕರಿಗೆ ಅರಮನೆಗಿಲ್ಲ ಎಂಟ್ರಿ

ಸೆ.26, ಆ.4 ಮತ್ತು ಆ.5ಂದು ಮೂರು ದಿನಗಳ ಕಾಲ ಅರಮನೆಗೆ ಸಾರ್ವಜನಿಕರ ಪ್ರವೇಶ ಇರಲ್ಲ. ಈ ಸಂಬಂಧ ಮೈಸೂರು ಅರಮನೆ ಮಂಡಳಿ ಆದೇಶ ಹೊರಡಿಸಿದ್ದಾರೆ. ಸೆ‌.26 ರಂದು ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯುವ ವಿಶೇಷ ಪೂಜೆ ಕಾರ್ಯ ನಡೆಯಲಿದೆ. ಆದ್ದರಿಂದ  ಸೆ.26 ರಂದು ಬೆಳಗ್ಗೆ 10 ರಿಂದ 1.30 ಗಂಟೆ ತನಕ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಅರಮನೆಯಲ್ಲಿ ಅ. 4 ರಂದು ರಾಜವಂಶಸ್ಥ ಯದುವೀರ್ ಅವರ ಆಯುಧ ಪೂಜೆ ನಡೆಯಲಿದ್ದು, ಬೆಳಗ್ಗೆ 10 ರಿಂದ 1.30 ಗಂಟೆವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಇರಲಿದೆ.

Mysuru today news update 13 September 2022 mrq
ಸಿಂಹಾಸನ ಜೋಡಣೆ ಕಾರ್ಯ (ಫೋಟೋ ಕೃಪೆ-ಫೇಸ್​​ಬುಕ್​​)


ಅ.5 ರಂದು ಅರಮನೆಯಲ್ಲಿ  ವಿಜಯದಶಮಿಯ ಪೂಜಾ ಕೈಂಕರ್ಯ  ಹಿನ್ನೆಲೆ ಇಡೀ ದಿನ ಸಾರ್ವಜನಿಕರಿಗೆ ಪ್ರವೇಶ ಇರಲ್ಲ ಅಂತಿಮವಾಗಿ ಅ.20 ರಂದು ಸಿಂಹಾಸನ ವಿಸರ್ಜನೆ ನಡೆಯುವ ಕಾರಣ ‌ಬೆಳಗ್ಗೆ 10 ರಿಂದ 1.30 ಗಂಟೆ ತನಕ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.

3.ಬೆಟ್ಟದ ದೇವಸ್ಥಾನಕ್ಕೆ ಚಾಮುಂಡಿ ತಾಯಿಯ ವಿಗ್ರಹ ಶಿಫ್ಟ್

ಮೈಸೂರು ಅರಮನೆ ಮಂಡಳಿಯ ಬಳಿಯಲ್ಲಿರುವ ಚಾಮುಂಡೇಶ್ವರಿ ತಾಯಿಯ ವಿಗ್ರಹವನ್ನು ಸೋಮವಾರ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ವರ್ಗಾಯಿಸಲಾಯ್ತು. ಪ್ರಧಾನ ದೇವತೆಯ ವಿಗ್ರಹ ಅರಮನೆಯ ವಸ್ತು ಸಂಗ್ರಹಾಲಯದಲ್ಲಿರುತ್ತದೆ. ದಸರಾ ಹಬ್ಬದ ಹಿನ್ನೆಲೆ ಮುಜರಾಯಿ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ. ವಿಗ್ರಹವನ್ನು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದರಾಜು ಅವರಿಗೆ ಹಸ್ತಾಂತರಿಸುವ ಮುನ್ನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯ್ತು.

ಇದನ್ನೂ ಓದಿ:  Navratri 2022: ನವರಾತ್ರಿ ಸಂಭ್ರಮಕ್ಕೆ ದಿನಗಣನೆ; ದುರ್ಗೆ 9 ಅವತಾರಗಳ ಪರಿಚಯ ಇಲ್ಲಿದೆ

Mysuru today news update 13 September 2022 mrq ಚಾಮುಂಡೇಶ್ವರಿ ತಾಯಿ ವಿಗ್ರಹ (ಫೋಟೋ ಕೃಪೆ-ಫೇಸ್​​ಬುಕ್​​)

ಈ ವೇಳೆ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ. ಮುಜರಾಯಿ ತಹಶೀಲ್ದಾರ್ ಕೃಷ್ಣ, ಅರಮನೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸತೀಶ್ ಸೇರಿದಂತೆ ಇತರರರು ಉಪಸ್ಥಿತರಿದ್ದರು.

4.ಮೈಸೂರು ಮೇಯರ್​ ಶಿವಕುಮಾರ್ ಸಿಟಿ ರೌಂಡ್ಸ್

ಇಂದು ಬೆಳಗ್ಗೆ ಮೈಸೂರು ನೂತನ ಮೇಯರ್​​ ಶಿವಕುಮಾರ್ ನಗರ ಪ್ರದಕ್ಷಿಣೆ ಮಾಡಿದರು. ದಸರಾ ಹಿನ್ನೆಲೆ ನಗರಕ್ಕೆ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಿಟಿಯ ಹೃದಯ ಭಾಗ ಸ್ವಚ್ಛವಾಗಿ ನೋಡಿಕೊಳ್ಳುವಂತೆ ಸೂಚನೆ ನೀಡಿದರು. ನಗರದಲ್ಲಿ ಕೆಲ ಅವ್ಯವಸ್ಥೆ ನೋಡುತ್ತಿದ್ದಂತೆ ಗರಂ ಆದ ಮೇಯರ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಇದೇ ವೇಳೆ ಮ್ಯಾನ್ ಹೋಲ್​​ ತೆರೆದಿರೋದನ್ನು ಗಮನಿಸಿದ ಮೇಯರ್, ಇಂಜಿನಿಯರ್​ಗಳನ್ನು ತರಾಟೆಗೆ ತೆಗೆದುಕೊಂಡರು.

Mysuru today news update 13 September 2022 mrq
ಮೇಯರ್ ಸಿಟಿ ರೌಂಡ್ಸ್​ (ಫೋಟೋ ಕೃಪೆ-ಫೇಸ್​​ಬುಕ್)


ನಗರದ ಹೃದಯ ಭಾಗದಲ್ಲಿ ಯುಜಿಡಿ ಸಮಸ್ಯೆ ಮತ್ತು ಕೆಲ ಸ್ವಚ್ಛತೆ ಸಮಸ್ಯೆಗಳು ಕಂಡು ಬಂದಿವೆ. ಕೂಡಲೇ ಸಮಸ್ಯೆ ಸರಿಪಡಿಸಿ ಫೋಟೋ ಸಹಿತ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಶಿವಕುಮಾರ್ ತಿಳಿಸಿದರು.

ಇದನ್ನೂ ಓದಿ:  Navratri 2022: ನವರಾತ್ರಿಯ 9 ದಿನಗಳು ದೇವಿಗೆ ಈ ನೈವೇದ್ಯ ಮಾಡಿದ್ರೆ ಬಹಳ ಒಳ್ಳೆಯದಂತೆ

5.ದಸರಾ ಗಜಪಡೆಗೆ ಪೌಷ್ಠಿಕ ಆಹಾರ

ದಸರಾ ಹಿನ್ನೆಲೆ ಗಜಪಡೆ ಮೈಸೂರಿಗೆ ಆಗಮಿಸಿದ್ದು, ತಾಲೀಮು ಸಹ ಆರಂಭಗೊಂಡಿದೆ. ಗಜಪಡೆಗಳಿಗೆ ವೈದ್ಯರು ನೀಡಿದ ಮೆನುವಿನ ಪ್ರಕಾರ ಎಲ್ಲಾ ರೀತಿಯ ಪೌಷ್ಟಿಕಾಂಶ ಆಹಾರ ನೀಡಲಾಗುತ್ತಿದೆ. ಜಂಬೂಸವಾರಿ ದಿನ ಅಭಿಮನ್ಯು 750 ಕೆಜಿಯ ಅಂಬಾರಿ ಹೊರಲಿದ್ದಾನೆ. ಈ ಹಿನ್ನೆಲೆ ಅಭಿಮನ್ಯು ಸೇರಿದಂತೆ ಎಲ್ಲಾ 14 ಆನೆಗಳು ಆರೋಗ್ಯವಾಗಿರುವಂತೆ ನೋಡಿಕೊಳ್ಳಲಾಗುತ್ತದೆ.
Published by:Mahmadrafik K
First published: