Mysuru Top 5 News: ದಸರಾ ಗಜಪಡೆಗೆ ಸಿಡಿಮದ್ದು ತಾಲೀಮು, ಮೇಯರ್​​ಗೆ ಕುದುರೆ ಸವಾರಿ ತರಬೇತಿ, ಬೆಳಗಲಿಲ್ಲ ಯಾಕೆ ಅರಮನೆ ದೀಪಗಳು; ಮೈಸೂರಿನ ಟಾಪ್ ನ್ಯೂಸ್

ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ದಸರಾದ ಕಲರವ ಶುರುವಾಗಿದೆ. ಈ ಹಿನ್ನೆಲೆ ವಿವಿಧ ಚಟುವಟಿಕೆಗಳು ನಡೆಯುತ್ತಿವೆ. ಮೈಸೂರಿನ ಇವತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ.

ಮೈಸೂರು ಅರಮನೆ

ಮೈಸೂರು ಅರಮನೆ

  • Share this:
1.ಮೈಸೂರು ನೂತನ ಮೇಯರ್​ಗೆ ಕುದುರೆ ಸವಾರಿ ತರಬೇತಿ

ಮೈಸೂರು ದಸರಾಗೆ (Mysuru Dasara) ದಿನಗಣನೆ ಶುರುವಾಗಿದ್ದು, ಜಂಬೂ ಸವಾರಿ (Jamboo Savari) ಕಣ್ತುಂಬಿಕೊಳ್ಳಲು ನಾಡಿನ ಜನರು ಕಾತುರರಾಗಿದ್ದಾರೆ.  ಜಂಬೂ ಸವಾರಿ ಮೆರವಣಿಗೆಯಲ್ಲಿ ಮೈಸೂರಿನ ನೂತನ ಮೇಯರ್ ಶಿವಕುಕುಮಾರ್ (Mysuru Mayor Shivakumar) ಅಶ್ವಾರೋಹಿಯಾಗಲಿದ್ದಾರೆ. ಈ ಹಿನ್ನೆಲೆ ಶಿವಕುಮಾರ್ ಅವರಿಗೆ ಚಾಮುಂಡಿ ಬೆಟ್ಟದಲ್ಲಿರುವ (Chamundi Hill) ಹಾರ್ಸ್​ ಪಾರ್ಕ್​ನಲ್ಲಿ (Horse Park) ಕುದುರೆ ಸವಾರಿ ತರಬೇತಿ (Horse Riding Training) ನೀಡಲಾಯ್ತು. ಕುದುರೆ ಸವಾರಿ ವೇಳೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿಯನ್ನು ಶಿವಕುಮಾರ್ ಅವರ ಅಶ್ವಾರೋಹಿ ದಳದ ಸಿಬ್ಬಂದಿ ತಿಳಿಸಿಕೊಟ್ಟರು.

ಕುದುರೆ ಸವಾರಿ ತರಬೇತಿ ಬಳಿಕ ಮಾತನಾಡಿದ ಮೇಯರ್ ಶಿವಕುಮಾರ್, ಮಹಾಪೌರನಾಗಿ ಆಯ್ಕೆಯಾಗುತ್ತಿದ್ದಂತೆ ನಾಡ ಹಬ್ಬ ಬಂದಿದೆ. ವಿಜಯದಶಮಿಯಂದು (Vijayadashami) ಕುದುರೆ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Mysuru today news update 12th September 2022 mrq
ಮೇಯರ್ ಕುದುರೆ ತರಬೇತಿ (ಫೋಟೋ ಕೃಪೆ- ಫೇಸ್​ಬುಕ್)


2.ಮೈಸೂರು To ಗೋವಾ ರೈಲು ಸೇವೆಗೆ ಕಟೀಲ್​​ಗೆ  ಮನವಿ

ಮೈಸೂರು ಸಾಂಸ್ಕೃತಿಕ ಜಿಲ್ಲೆ. ಇಲ್ಲಿಯ ಪ್ರತಿಯೊಂದು ಸ್ಥಳವೂ ಪ್ರವಾಸಿ ತಾಣವಾಗಿದೆ. ದೇಶದ ವಿವಿಧ ಭಾಗಗಳಿಂದ ಮೈಸೂರಿಗೆ ಪ್ರವಾಸಿಗರು ಆಗಮಿಸುತ್ತಾರೆ. ಆದ್ರೆ ಗೋವಾಗೆ ನೇರ ರೈಲುಗಳಿಲ್ಲ. ಆದ್ದರಿಂದ ಮೈಸೂರಿನಿಂದ ಗೋವಾಗೆ ರೈಲು ಸಂಪರ್ಕ ಕಲ್ಪಿಸುವಂತೆ ಮೈಸೂರು ರೈಲ್ವೇ ಹೋರಾಟ ಸಮಿತಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್​ ಕಟೀಲ್ ಅವರಿಗೆ ಮನವಿ ಸಲ್ಲಿಸಲಾಯ್ತು.

Mysuru today news update 12th September 2022 mrq
ಗಜಪಡೆಗೆ ಸಿಡಿಮದ್ದು ತಾಲೀಮು (ಫೋಟೋ ಕೃಪೆ-ಫೇಸ್​​ಬುಕ್)


3.ಅರಮನೆ ಮೈದಾನದಲ್ಲಿ ಪಟಾಕಿ ಸಿಡಿಸಿ ಆನೆಗಳಿಗೆ ತಾಲೀಮು

ದಸರಾ ಹಬ್ಬ ಹಿನ್ನೆಲೆ ಜಂಬೂಸವಾರಿಯಲ್ಲಿ ಭಾಗಿಯಾಗುವ ಆನೆಗಳಿಗೆ ತಾಲೀಮು ನೀಡಲಾಗ್ತಿದೆ. ಇಂದು ನಗರದಲ್ಲಿ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಆನೆಗಳ ಉಪಸ್ಥಿತಿಯಲ್ಲಿ ಫಿರಂಗಿ ಸಿಡಿಸಿ ತಾಲೀಮು ನಡೆಸಲಾಯ್ತು. ಇಂದು ನಡೆದ ತಾಲೀಮಿನಲ್ಲಿ 14 ಆನೆಗಳು ಮತ್ತು 43 ಅಶ್ವಗಳು ಭಾಗವಗಹಿಸಿದ್ದವು. ಈ ಬಾರಿ ಮೊದಲ ಬಾರಿಗೆ 18 ವರ್ಷದ ಆನೆ ಪಾರ್ಥ ಸಾರಥಿ ಭಾಗಿಯಾಲಿದ್ದಾನೆ.

Mysuru today news update 12th September 2022 mrq
ಗಜಪಡೆಗೆ ಸಿಡಿಮದ್ದು ತಾಲೀಮು (ಫೋಟೋ ಕೃಪೆ-ಫೇಸ್​​ಬುಕ್)


ಇಂದು ನಡೆದ ತಾಲೀಮಿನಲ್ಲಿ ಪಾರ್ಥಸಾರಥಿ ಸಿಡಿಮದ್ದು ಸಿಡಿಯುತ್ತಿದ್ದಂತೆ ಹಿಂದೆ ಸರಿದನು. ಇನ್ನುಳಿದಂತೆ ಹಿರಿಯ ಆನೆಗಳಾದ ಶ್ರೀರಾಮ, ಸುಗ್ರೀವ ಆರಂಭದಲ್ಲಿ ಭಯಗೊಂಡು ಹಜ್ಜೆಯನ್ನು ಹಿಂದಕ್ಕೆ ಎತ್ತಿಟ್ಟರು. ನಂತರ ಆನೆಗಳನ್ನು ಮಾವುತರು ನಿಯಂತ್ರಣಕ್ಕೆ ತಂದರು. ಒಟ್ಟು ಮೂರು ಸುತ್ತಿನಲ್ಲಿ 21 ಫಿರಂಗಿ ಸಿಡಿಸಲಾಯ್ತು.

ಇದನ್ನೂ ಓದಿ:  Karnataka Politics: ನನ್ನನ್ನು ಲೂಟಿ ಅನ್ನೋ ಇವ್ರೇನು ಸತ್ಯಹರಿಶ್ಚಂದ್ರನ ಮಕ್ಕಳಾ? ಸಿಟಿ ರವಿ, ಸಿದ್ದು ನಡುವೆ ಟಾಕ್​ ವಾರ್!

4.ಜಿಲ್ಲಾಡಳಿತದ ಮೇಲೆ ಟಾಂಗಾವಾಲಾಗಳ ಅಸಮಾಧಾನ

ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆ ದಸರಾ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ಈ ಬಾರಿ ಜಿಲ್ಲಾಡಳಿತ ತಮಗೆ ವಿಶೇಷ ಕೊಡುಗೆ, ಹಣಕಾಸಿನ ಸಹಾಯದ ನಿರೀಕ್ಷೆಯಲ್ಲಿ ಟಾಂಗಾವಾಲಗಳಿದ್ದರು. ಆದ್ರೆ ಇದುವರೆಗೂ ಜಿಲ್ಲಾಡಳಿತ ಈ ಸಂಬಂಧ ಯಾವುದೇ ಅಧಿಕೃತ ಆದೇಶ ಹೊರಡಿಸದ ಹಿನ್ನೆಲೆ ಟಾಂಗಾವಾಲಾಗಳು ಅಸಮಾಧಾನ ಹೊರಹಾಕಿದ್ದಾರೆ.

Mysuru today news update 12th September 2022 mrq
ಟಾಂಗಾವಾಲಗಳು (ಫೋಟೋ ಕೃಪೆ-ಫೇಸ್​​ಬುಕ್)


ದಸರಾ ದಿನದಂದು ಅರಮನೆ ಆವರಣದೊಳಗೆ ಟಾಂಗಾ ಓಡಿಸಲು ಅನುಮತಿ ನೀಡಲಾಗುತ್ತಿತ್ತು. ಆದ್ದರಿಂದ ಸಾರಥಿಗಳು ಟಾಂಗಾಗಳಿಗೆ ಬಣ್ಣ ಬಳಿದು ಸುಂದರಗೊಳಿಸಿರುತ್ತದೆ. ಆದ್ರೆ ಈ ಪದ್ಧತಿಯನ್ನು ಕಳೆದ ಮೂರು ವರ್ಷಗಳಿಂದ ನಿಲ್ಲಿಸಲಾಗಿದೆ. ನಗರದಲ್ಲಿ ಟಾಂಗಾಗಳ ಸಂಖ್ಯೆ ಸಹ ಇಳಿಮುಖವಾಗ್ತಿದೆ.

Mysuru today news update 12th September 2022 mrq
ಟಾಂಗಾವಾಲಗಳು (ಫೋಟೋ ಕೃಪೆ-ಫೇಸ್​​ಬುಕ್)


ಇದನ್ನೂ ಓದಿ:  Lokayukta Raid: ಪಶ್ಚಿಮ ವಿಭಾಗದ ಬಿಬಿಎಂಪಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ; ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಅಧಿಕಾರಿ!

5.ರಾಣಿ ಎಲಿಜೆಬೆತ್ ನಿಧನ ಶೋಕಾಚರಣೆ, ಉರಿಯಲಿಲ್ಲ ಅರಮನೆಯ ದೀಪಗಳು

ರಾಣಿ ಎಲೆಜೆಬೆತ್​ ನಿಧನ ಹಿನ್ನೆಲೆ ರಾಜ್ಯದಲ್ಲಿ ಒಂದು ದಿನದ ಶೋಕಾಚರಣೆ ಪ್ರಕಟಿಸಲಾಗಿತ್ತು. ಈ ಹಿನ್ನೆಲ್ಲೆ ಭಾನುವಾರ ರಾತ್ರಿ ಮೈಸೂರು ಅರಮನೆಯ ದೀಪಗಳನ್ನು ಬೆಳೆಗಿರಲಿಲ್ಲ. ಮೈಸೂರು ಅರಮನೆಯನ್ನು ಒಂದು ಲಕ್ಷಕ್ಕೂ ಅಧಿಕ ವಿದ್ಯುತ್ ದೀಪಾಲಂಕರದಿಂದ ಅಲಂಕೃತಗೊಳಿಸಲಾಗುತ್ತದೆ.

Mysuru today news update 12th September 2022 mrq
ಟಾಂಗಾವಾಲಗಳು (ಫೋಟೋ ಕೃಪೆ-ಫೇಸ್​​ಬುಕ್)


ಅದರಲ್ಲಿಯೂ ನಿನ್ನೆ ಭಾನುವಾರ ಆಗಿದ್ದರಿಂದ ಪ್ರವಾಸಿಗರ ಸಂಖ್ಯೆ ತುಸು ಹೆಚ್ಚಾಗಿಯೇ ಇತ್ತು. ಆದರೆ ದೀಪಗಳು ಬೆಳಗದ ಹಿನ್ನೆಲೆ ಪ್ರವಾಸಿಗರು ನಿರಾಶೆಯಿಂದ ಹೋಗುವಂತಾಯ್ತು.
Published by:Mahmadrafik K
First published: