Pariksha Pe Charcha ಕಾರ್ಯಕ್ರಮಕ್ಕೆ ಮೈಸೂರು ವಿದ್ಯಾರ್ಥಿ ಆಯ್ಕೆ; ಏ.1 ರಂದು ಮಕ್ಕಳೊಂದಿಗೆ ಮೋದಿ ಸಂವಾದ

ಪ್ರಧಾನಿ ನರೇಂದ್ರ ಮೋದಿ ಅವರ ಐದನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಎಂ.ಬಿ. ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿ ತರುಣ್  ಆಯ್ಕೆಯಾಗಿದ್ದಾರೆ.

ಏಪ್ರಿಲ್​ 1 ರಂದು ಪರೀಕ್ಷಾ ಪೇ ಚರ್ಚೆ

ಏಪ್ರಿಲ್​ 1 ರಂದು ಪರೀಕ್ಷಾ ಪೇ ಚರ್ಚೆ

  • Share this:
ಪ್ರಧಾನಿ ನರೇಂದ್ರ ಮೋದಿ (PM Narendra Modi)  ಅವರು ಏಪ್ರಿಲ್ 1 ರಂದು ಪರೀಕ್ಷಾ ಪೇ ಚರ್ಚಾ (Pariksha Pe Charcha) 2022ರ ಭಾಗವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ವಿದ್ಯಾರ್ಥಿಗಳೊಂದಿಗಿನ 'ಪರೀಕ್ಷಾ ಪೇ ಚರ್ಚಾ' ಸಂವಾದದಲ್ಲಿ ಪ್ರಧಾನಿ ಮೋದಿ ವಿದ್ಯಾರ್ಥಿಗಳು ಮುಂಬರುವ ಬೋರ್ಡ್ ಪರೀಕ್ಷೆ ಮತ್ತು ಪ್ರವೇಶ ಪರೀಕ್ಷೆಯನ್ನ ತೆಗೆದುಕೊಳ್ಳುವ ಹಾದಿಯಲ್ಲಿರುವ ಮಕ್ಕಳ (Children) ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಗಮನವಹಿಸಿ ಮಾತನಾಡಲಿದ್ದಾರೆ. PPC 2022 ರ ಐದನೇ ಆವೃತ್ತಿಯು ನವದೆಹಲಿಯ ತಾಲ್ಕೋಟ್ರಾ ಸ್ಟೇಡಿಯಂನಲ್ಲಿ ನಡೆಯಲಿದೆ. ರಾಜ್ಯದ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.  ಸಂವಾದದಲ್ಲಿ ಮೈಸೂರು (Mysore) ವಿದ್ಯಾರ್ಥಿನಿ (Student) ಭಾಗಿಯಾಗಿ ಮೋದಿ ಜೊತೆ ಮಾತಾಡಲಿದ್ದಾರೆ.

PPC 20022 ಕಾರ್ಯಕ್ರಮಕ್ಕೆ ಮೈಸೂರು ವಿದ್ಯಾರ್ಥಿ ಆಯ್ಕೆ

ಪ್ರಧಾನಿ ನರೇಂದ್ರ ಮೋದಿ ಅವರ ಐದನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಎಂ.ಬಿ. ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿ ತರುಣ್  ಆಯ್ಕೆಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ  ಭಾಗವಹಿಸುತ್ತಿರುವ ಕರ್ನಾಟಕದ ಏಕೈಕ ವಿದ್ಯಾರ್ಥಿ ಇವರಾಗಿದ್ದಾರೆ.  ದೇಶದಾದ್ಯಂತ ವಿದ್ಯಾರ್ಥಿಗಳೊಂದಿಗೆ ಏ.1ರಂದು ನಡೆಸಲಿರುವ ಪರೀಕ್ಷಾ ಪೇ ಚರ್ಚಾ  ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಭಾಗಿಯಾಗಲಿದ್ದು  ವರ್ಚುವಲ್‌ ಮೂಲಕವೇ  'ತರಗತಿಯಲ್ಲಿ ಡಿಜಿಟಲ್‌ ಸಂವಾದ' ಎಂಬ ವಿಷಯದ ಬಗ್ಗೆ ಪ್ರಧಾನಿ ಅವರೊಟ್ಟಿಗೆ ಮಾತನಾಡಲಿದ್ದಾರೆ.

ತಾಲ್ಕಾಟ್ರಾ ಸ್ಟೇಡಿಯಂನಲ್ಲಿ ಕಾರ್ಯಕ್ರಮ

PPC 2022 ದಿನಾಂಕ ಮತ್ತು ಸಮಯವನ್ನು ಪ್ರಕಟಿಸುವಾಗ, ಶಿಕ್ಷಣ ಸಚಿವಾಲಯವು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡುವ ಮೂಲಕ ಪ್ರಕಟಿಸಿದೆ. “ಕಾಯುವಿಕೆ ಈಗ ಮುಗಿದಿದೆ! #PPC2022 ರ 5 ನೇ ಆವೃತ್ತಿಯು 1 ನೇ ಏಪ್ರಿಲ್, 2022 ರಂದು ನವದೆಹಲಿಯ  ತಾಲ್ಕೋಟ್ರಾ ಸ್ಟೇಡಿಯಂನಲ್ಲಿ ನಡೆಯಲಿದೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಪರೀಕ್ಷೆಯ ಒತ್ತಡವನ್ನು ಹೇಗೆ ಸೋಲಿಸುವುದು ಎಂಬುದರ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಳ್ಳುತ್ತಾರೆ. ಕಾಯ್ತಾ ಇರಿ!” ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: 'ನಡೆದಾಡುವ ದೇವರು' Siddaganga Sri ಪಾತ್ರದಲ್ಲಿ ಅಭಿನಯಿಸುತ್ತಾರಾ ಅಮಿತಾಬ್ ಬಚ್ಚನ್?

ವಿದ್ಯಾರ್ಥಿಗಳು, ಶಿಕ್ಷಕರ ಜೊತೆ ಮೋದಿ ಚರ್ಚೆ

ಪ್ರಧಾನಿ ಮೋದಿಯವರ ಪರೀಕ್ಷಾ ಪೇ ಚರ್ಚಾವನ್ನು 2018 ರಿಂದ ವಾರ್ಷಿಕವಾಗಿ ನಡೆಸಲಾಗುತ್ತಿದೆ. ಇಲ್ಲಿ ಪ್ರಧಾನ ಮಂತ್ರಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ನೇರವಾಗಿ ಸಂವಾದ ಮಾಡುತ್ತಾರೆ. ದೇಶದಲ್ಲಿ ಪರೀಕ್ಷೆಯ ಋತುವಿನ ಪ್ರಾರಂಭದಲ್ಲಿ ಈವೆಂಟ್ ನಡೆಯುತ್ತದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಸೇರಿದಂತೆ ಹಲವಾರು ಬೋರ್ಡ್‌ಗಳು ಏಪ್ರಿಲ್ 26 ರಿಂದ ಟರ್ಮ್ 2 ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತವೆ. ಜಂಟಿ ಪ್ರವೇಶ ಪರೀಕ್ಷೆ (JEE) ಮುಖ್ಯ ಸೇರಿದಂತೆ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳು ಸಹ ಏಪ್ರಿಲ್‌ನಲ್ಲಿ ನಡೆಯಲಿದೆ. PPC 2022 ಕ್ಕೆ 12.12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 2.71 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಈ ವರ್ಷದ PPC ಗಾಗಿ ನೋಂದಾಯಿಸಿಕೊಂಡಿದ್ದಾರೆ.

ಪರೀಕ್ಷಾ ಪೇ ಚರ್ಚಾಗೆ ಆಯ್ಕೆ ಹೇಗೆ?

‘ಪರೀಕ್ಷಾ ಪೇ ಚರ್ಚಾ’ಗೆ ಪ್ರವೇಶವು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಕೆಲವು ಆನ್‌ಲೈನ್ ಸ್ಪರ್ಧೆಗಳನ್ನು ಆಧರಿಸಿರುತ್ತದೆ. ವಿಜೇತರು ನೇರವಾಗಿ ಪ್ರಧಾನ ಮಂತ್ರಿಯೊಂದಿಗೆ ಸಂವಾದ ನಡೆಸುವ ಅವಕಾಶವನ್ನು ಪಡೆಯುತ್ತಾರೆ. ಈ ವಿಶೇಷ ವಿಜೇತರು ತಮ್ಮ ಹಸ್ತಾಕ್ಷರದ ಛಾಯಾಚಿತ್ರದ ಡಿಜಿಟಲ್ ಸ್ಮರಣಿಕೆಯನ್ನು ಪಡೆಯುತ್ತಾರೆ. ಅವರಿಗೆ ಭಾಗವಹಿಸುವಿಕೆ ಪ್ರಮಾಣ ಪತ್ರವನ್ನೂ ನೀಡಲಾಗುವುದು.

ಇದನ್ನೂ ಓದಿ: Narendra Modi: ಮೋದಿ ಫೋಟೋ ಇಟ್ಟುಕೊಂಡ ಮುಸ್ಲಿಂ ವ್ಯಕ್ತಿಗೆ ಹೊಡೆದು ಮನೆ ಖಾಲಿ ಮಾಡುವಂತೆ ಬೆದರಿಸಿದ ಮಾಲೀಕ

ನರೇಂದ್ರ ಮೋದಿ ಟ್ವೀಟ್  ಕೂಡ ಮಾಡಿದ್ರು

ಪ್ರಧಾನಿ ನರೇಂದ್ರ ಮೋದಿ ಕೂಡ 'ಪರೀಕ್ಷಾ ಪೇ ಚರ್ಚಾ 2022' ಕುರಿತು ಟ್ವೀಟ್ ಕೂಡ ಮಾಡಿದ್ದರು. ಈ ಚರ್ಚೆಯು ಅವರ ಶಕ್ತಿಯುತ ಯುವಕರೊಂದಿಗೆ ಸಂಪರ್ಕ ಸಾಧಿಸಲು, ಅವರ ಸವಾಲುಗಳು ಮತ್ತು ಆಕಾಂಕ್ಷೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅವಕಾಶವನ್ನು ನೀಡುತ್ತದೆ ಎಂದು ಬರೆದಿದ್ದರು. ಕಳೆದ ವರ್ಷ 2.62 ಲಕ್ಷ ಶಿಕ್ಷಕರು ಮತ್ತು 93,000 ಪೋಷಕರು ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿದ್ದರು.
Published by:Pavana HS
First published: