ಮೈಸೂರಿನ ಬಿಷಪ್ ವಿಲಿಯಮ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಉಲ್ಟಾ ಹೊಡೆದು ಪೇಚಿಗೆ ಸಿಲುಕಿದ ಸಂತ್ರಸ್ತೆ

ಈ ಪ್ರಕರಣ ಇಡೀ ಮೈಸೂರು ಪ್ರಾಂತ್ಯದ ಕ್ರೈಸ್ತ ಸಮುದಾಯದಲ್ಲಿ ತಲ್ಲಣಕ್ಕೆ ಕಾರಣವಾಗಿತ್ತು. ಅಲ್ಲದೆ, ಹಲವರು ಮೈಸೂರು ಬಿಷಪ್ ಬದಲಾವಣೆಯಾಗಬೇಕು ಎಂದು ಪ್ರತಿಭಟನೆಯನ್ನೂ ನಡೆಸಿದ್ದರು. ಆದರೆ, ಸಂತ್ರಸ್ತೆ ಇಂದು ಉಲ್ಟಾ ಹೊಡೆಯುವ ಮೂಲಕ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.

ಮೈಸೂರು ಬಿಷಪ್ ಕೆ.ಎಂ. ವಿಲಿಯಮ್.

ಮೈಸೂರು ಬಿಷಪ್ ಕೆ.ಎಂ. ವಿಲಿಯಮ್.

  • Share this:
ಮೈಸೂರು (ಡಿಸೆಂಬರ್ 13): ಮೈಸೂರಿನ ಬಿಷಪ್ ಕೆ.ಎಂ. ವಿಲಿಯಮ್ಸ್ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದ್ದ ಮಹಿಳೆಯೊಬ್ಬರು ಇತ್ತೀಚೆಗೆ ತಾವು ಆರೋಪ ಮಾಡುವ ಸೆಲ್ಫಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ನನ್ನ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಕಣ್ಣೀರು ಹಾಕಿದ್ದರು. ಅಲ್ಲದೆ, ತಮ್ಮದೇ ಹಸ್ತಾಕ್ಷರದಲ್ಲಿ ದೂರನ್ನೂ ಸಹ ದಾಖಲು ಮಾಡಿದ್ದರು.

ಈ ಪ್ರಕರಣ ಇಡೀ ಮೈಸೂರು ಪ್ರಾಂತ್ಯದ ಕ್ರೈಸ್ತ ಸಮುದಾಯದಲ್ಲಿ ತಲ್ಲಣಕ್ಕೆ ಕಾರಣವಾಗಿತ್ತು. ಅಲ್ಲದೆ, ಹಲವರು ಮೈಸೂರು ಬಿಷಪ್ ಬದಲಾವಣೆಯಾಗಬೇಕು ಎಂದು ಪ್ರತಿಭಟನೆಯನ್ನೂ ನಡೆಸಿದ್ದರು. ಆದರೆ, ಸಂತ್ರಸ್ತೆ ಇಂದು ಉಲ್ಟಾ ಹೊಡೆಯುವ ಮೂಲಕ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.

ತನ್ನ ವಕೀಲರ ತಂಡದ ಜೊತೆ ಇಂದು ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಸಂತ್ರಸ್ತೆ, “ನನಗೆ ಬಿಷಪ್ ಕೆ.ಎಂ. ವಿಲಿಯಮ್ ಕಡೆಯಿಂದ ಯಾವುದೇ ತೊಂದರೆ ಆಗಿಲ್ಲ. ಯಾರೋ ಬಲವಂತವಾಗಿ ನನ್ನ ಬಳಿ ವಿಡಿಯೋ ಮಾಡಿಸಿಕೊಂಡು ದೂರು ಬರೆಸಿಕೊಂಡಿದ್ದಾರೆ. ಈ ವೇಳೆ ನನಗೆ ಜೀವ ಬೆದರಿಕೆ ಒಡ್ಡಲಾಗಿತ್ತು. ಹೀಗಾಗಿ ನಾನು ಇಂತಹ ಹೇಳಿಕೆ ನೀಡಿದ್ದೆ. ಆದರೆ, ಈಗ ಅದೇ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಲಕ್ಷ ಲಕ್ಷ ರೂಪಾಯಿಗೆ ಮಾರಾಟವಾಗುತ್ತಿದೆ.

ಇದರಿಂದ ಅನವಶ್ಯಕವಾಗಿ ಬಿಷಪ್ ವಿಲಿಯಮ್ , ಫಾದರ್ ಲೆಸ್ಲಿ ಮೋರಾಸ್ ಹಾಗೂ ವಿಜಯ್ ಕುಮಾರ್ ಅವರ ಹೆಸರಿಗೆ ಕಳಂಕವಾಗುತ್ತಿದೆ. ಈ ಷಡ್ಯಂತ್ರದ ಹಿಂದೆ 37 ಮಂದಿ ಪಾದ್ರಿಗಳಿದ್ದಾರೆ” ಎಂದು ಆರೋಪಿಸುವ ಮೂಲಕ ಸಂತ್ರಸ್ತೆ ಉಲ್ಟಾ ಹೊಡೆದಿದ್ದಾಳೆ.

“ಈಗ ಬಿಷಪ್ ಅಥವಾ ಇನ್ಯಾರದೇ ಒತ್ತಡಕ್ಕೆ ಮಣಿದು ಹೇಳಿಕೆ ಕೊಡುತ್ತಿಲ್ಲ. ಈಗಲೂ ನನಗೆ ಜೀವ ಬೆದರಿಕೆ ಇದೆ. ಜೀವ ಬೆದರಿಕೆಯ ನಡುವೆಯೇ ಬದುಕುತ್ತಿದ್ದೇನೆ. ಹಾಗಾಗಿ ಯಾರ ವಿರುದ್ಧವೂ ದೂರು ಕೊಡಲ್ಲ. ರಾಬರ್ಟ್ ರೋಸೋರಿಯಾ ಕೊಟ್ಟ ದೂರಿನ ಅನ್ವಯ ತನಿಖೆ ನಡೆಯುತ್ತಿದೆ. ನಾನು ಈಗಾಗಲೇ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಮೈಸೂರು ಬಿಷಪ್​​​ ಕೇಸ್​​: ಲೈಂಗಿಕ ದೌರ್ಜನ್ಯ ಆರೋಪ ಬೆನ್ನಲೇ ಪ್ರಾಣ ಬೆದರಿಕೆ ಇದೆ ಎಂದು ಯುವತಿ ದೂರು
Published by:MAshok Kumar
First published: