Narendra Modi: ನಮೋಗೆ ರೇಷ್ಮೆ ನೂಲು, ಬನಾರಸ್ ಮುತ್ತುಗಳಿಂದ ಮಾಡಿದ ಮೈಸೂರು ಪೇಟ; ಸ್ವರ್ಣ ಲೇಪಿತ ಅಕ್ಷರದ ಫೋಟೋ ಗಿಫ್ಟ್

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ನಡೆಯುವ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಈ ಅತ್ಯಾಕರ್ಷಕ ಪೇಟ ಧರಿಸಲಿದ್ದಾರೆ. ಇದಲ್ಲದೆ ಮೈಸೂರಿನ ಆಭರಣ ವ್ಯಾಪಾರಿಯೊಬ್ಬರು ಸ್ವರ್ಣಾಕ್ಷರವಿರುವ ಬಂಗಾರ ಲೇಪಿತ ಫಲಕದ ಉಡುಗೊರೆಯನ್ನು ನರೇಂದ್ರ ಮೋದಿ ಅವರಿಗೆ ನೀಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

  • Share this:
ಮೈಸೂರು (ಜೂ 20): ಸಾಂಸ್ಕ್ರತಿಕ ನಗರಿ ಮೈಸೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಆಗಮಿಸುತ್ತಿರುವ ಹಿನ್ನೆಲೆ ಅರಮನೆ ನಗರಿ ದಸರಾ ಸಂಭ್ರಮವೇ ಮನೆಮಾಡಿದಂತೆ ಸಿಂಗಾರಗೊಂಡಿಗೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತ ಮಾಡಿಕೊಳ್ಳಲು  ಜಿಲ್ಲಾಡಳಿತ (District Administration) ಸಕಲ ರೀತಿಯಲ್ಲೂ ಸಜ್ಜಾಗಿದೆ. ಮೋದಿಗೆ ವಿಶೇಷ ಉಡುಗೊರೆಗಳು (Gift) ಕೂಡ ರೆಡಿಯಾಗಿದೆ. ಸಂಸದ ಪ್ರತಾಪ್ ಸಿಂಹ (Pratap Simha) ಅವರು ಮೋದಿಗೆ ಉಡುಗೊರೆ ನೀಡಲಿದ್ದಾರೆ. ಉಡುಗೊರೆ ಜೊತೆ ಪ್ರಧಾನಿ ಮೋದಿಗಾಗಿ ಮೈಸೂರು ಪೇಟ ನೀಡಿ ಗೌರವಿಸಲಾಗುತ್ತದೆ. ಪ್ರಧಾನಿಗಳಿಗೆ ತೊಡಿಸೋ ಪೇಟ ಹಲವು ವೈಶಿಷ್ಟ್ಯತೆಯನ್ನು ಒಳಗೊಂಡಿದೆ. ಮೈಸೂರು ರೇಷ್ಮೆ ನೂಲು, ಬನಾರಸ್ (Banaras) ಮುತ್ತುಗಳಿಂದ ಮಾಡಿರುವ ಕೆಂಪು ಹಾಗೂ ಗೋಲ್ಡನ್ ಕಲರ್ ಇರುವ ಸಾಂಪ್ರದಾಯಿಕ ಶೈಲಿಯ ಮೈಸೂರು ಪೇಟವನ್ನು (Mysuru Peta) ನರೇಂದ್ರ ಮೋದಿ ಅವರಿಗೆ ಇಂದು ನೀಡಲಾಗುತ್ತಿದೆ.

ಸ್ವರ್ಣಾಕ್ಷರವಿರುವ ಬಂಗಾರ ಲೇಪಿತ ಫಲಕ

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ನಡೆಯುವ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಈ ಅತ್ಯಾಕರ್ಷಕ ಪೇಟ ಧರಿಸಲಿದ್ದಾರೆ. ಇದಲ್ಲದೆ ಮೈಸೂರಿನ ಆಭರಣ ವ್ಯಾಪಾರಿಯೊಬ್ಬರು ಸ್ವರ್ಣಾಕ್ಷರವಿರುವ ಬಂಗಾರ ಲೇಪಿತ ಫಲಕದ ಉಡುಗೊರೆಯನ್ನು ನರೇಂದ್ರ ಮೋದಿ ಅವರಿಗೆ ನೀಡಲಿದ್ದಾರೆ.

gold plated letter photo gift to prime minister modi
ಮೋದಿಗೆ ವಿಶೇಷ ಉಡುಗೊರೆ


ಮೈಸೂರು ಅರಮನೆ, ಮೋದಿ ಅವರ ಯೋಗದ ಭಂಗಿ ಹಾಗೂ ಭಾವಚಿತ್ರವಿರುವ ಈ ಉಡುಗೊರೆಯಲ್ಲಿ ಸ್ವರ್ಣಾಕ್ಷರದ ಶ್ಲೋಕಗಳಿವೆ. ಇದನ್ನು ಥೈಲ್ಯಾಂಡ್ ನಲ್ಲಿ ಮಾಡಿಸಲಾಗಿದೆ. ನಾಳೆ ನಡೆಯುವ ಯೋಗ ಕಾರ್ಯಕ್ರಮದ ವೇಳೆ ಈ ಗಿಫ್ಟ್​ನನ್ನು ನರೇಂದ್ರ ಮೋದಿ ಅವರಿಗೆ ನೀಡಲಾಗುತ್ತಿದೆ.

ಇದನ್ನೂ ಓದಿ:  Assembly Election: 2023ಕ್ಕೆ ಚನ್ನಪಟ್ಟಣ ಕ್ಷೇತ್ರ ತೊರೆಯುತ್ತಾರಾ? ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ

ಚಾಮುಂಡೇಶ್ವರಿಗೆ ನಮೋ ಪೂಜೆ

ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡಿನ ಅಧಿದೇವತೆ ಚಾಮುಂಡಿದೇವಿಗೆ
ಪೂಜೆ ಸಲ್ಲಿಸಲಿದ್ದಾರ. ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಿರುವ ಭಾರತದ ಮೊದಲ ಪ್ರಧಾನಿ ಮೋದಿಯವರಾಗಲಿದ್ದಾರೆ. ಅವರ ಭೇಟಿಯ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯ ಬಳಿಕ ಭಕ್ತಾದಿಗಳು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ.

ಮಾಲ್​, ಅಂಗಡಿ ಮುಂಗಟ್ಟು ಬಂದ್​

ನರೇಂದ್ರ ರ್ಯಾಡಿಸನ್ ಬ್ಲೂ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮೈಸೂರಿನಲ್ಲಿರುವ ಮಾಲ್​ಗಳು ಕಂಪ್ಲೀಟ್​ ಕ್ಲೋಸ್​ ಮಾಡಲಾಗುತ್ತದೆ. 2 ದಿನಗಳ ಕಾಲ ಮಾಲ್​ಗಳು ಕಂಪ್ಲೀಟ್​ ಬಂದ್ ಮಾಡಲಾಗಿದೆ. ಪ್ರಧಾನಿ ಮೋದಿ ಸಂಚರಿಸುವ, ಆಗಮಿಸುವ ಕಾರ್ಯಕ್ರಮಗಳಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದೆ.

ರ್ಯಾಡಿಸನ್ ಬ್ಲೂ ಹೋಟೆಲ್​ನಲ್ಲಿ ಬುಕ್ಕಿಂಗ್​ ಬಂದ್​

ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನಲೆ ರ್ಯಾಡಿಸನ್ ಬ್ಲೂ ಹೋಟೆಲ್​ನಲ್ಲಿ ಬುಕ್ಕಿಂಗ್ ಬಂದ್  ಮಾಡಲಾಗಿದೆ. ರ್ಯಾಡಿಸನ್ ಬ್ಲೂ ಸ್ಟಾರ್ ಹೋಟೆಲ್​ನಲ್ಲ ಪ್ರಧಾನಿ ನರೇಂದ್ರ ಮೋದಿ ವಾಸ್ತವ್ಯಕ್ಕೆ ಹೂಡಲಿದ್ದಾರೆ. ಇಂದಿನಿಂದ ರ್ಯಾಡಿಸನ್ ಬ್ಲೂ ಫ್ಲಾಜಾ ಬುಕ್ಕಿಂಗ್ ಸ್ಟಾಪ್ ಮಾಡಲಾಗಿದೆ. ಭದ್ರತಾ ಪಡೆ.ಇಡೀ ಹೋಟೆಲ್ ಅನ್ನು ಖಾಲಿ ಮಾಡಿಸುತ್ತಿದೆ.  ಇತರ ಗ್ರಾಹಕರಿಗೆ ಬೇರೆಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ರ್ಯಾಡಿಸನ್​ ಹೋಟೆಲ್​ನಲ್ಲಿ ಒಟ್ಟು 141 ಕೊಠಡಿ ಇರುವ ಹೋಟೆಲ್. ಕಳೆದ ಬಾರಿ ಮೈಸೂರಿಗೆ ಬಂದಾಗ ಮೋದಿ ಅವರು ಹೋಟೆಲ್‌ನ ಪ್ರೆಸಿಡೆಂಟ್ ಸೂಟ್‌ನಲ್ಲಿ ತಂಗಿದ್ದರು.

ಇದನ್ನೂ ಓದಿ: PM Modi: ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಪರ್ಯಾಯ ಮಾರ್ಗ ಸೂಚಿಸಿದ ಪೊಲೀಸರು

ಬಸ್ ಸಂಚಾರ, ನಿಲ್ದಾಣಗಳಲ್ಲೂ ಬದಲಾವಣೆ

ಮೋದಿ ಆಗಮನ ಹಾಗೂ ಯೋಗ ಕಾರ್ಯಕ್ರಮದ ಹಿನ್ನೆಲೆ, ಬಸ್ ಸಂಚಾರ ಹಾಗೂ ನಿಲ್ದಾಣಗಳಲ್ಲಿ  ಬದಲಾವಣೆ ಮಾಡಲಾಗಿದೆ. ಹೊರಭಾಗದಿಂದ ಬಸ್ ಗಳು ಸಿಟಿ ಪ್ರವೇಶ ಮಾಡದಂತೆ ಮಾರ್ಗ ಬದಲಾವಣೆ ಮಾಡಿದೆ. ದ್ವಿಚಕ್ರ, ನಾಲ್ಕೂ ಚಕ್ರ ಹಾಗೂ ಬಸ್ ನಿಲುಗಡೆಯಲ್ಲೂ ಬದಲಾವಣೆಯಾಗಿದೆ. ಮೈಸೂರು ನಗರಕ್ಕೆ ನಾಲ್ಕು ದಿಕ್ಕುಗಳಿಂದ ಆಗಮಿಸುವ ಬಸ್ , ಕಾರ್ ತಾತ್ಕಾಲಿಕ ಬಸ್ ನಿಲುಗಡೆಗೆ ಸ್ಥಳ ನಿಗದಿ ಮಾಡಲಾಗಿದೆ.
Published by:Pavana HS
First published: