ಮೈಸೂರು: ಬೆಂಗಳೂರು-ಮೈಸೂರು ದಶಪಥ (Bengaluru Mysuru Expressway) ರಸ್ತೆ ಲೋಕಾರ್ಪಣೆ ಕಾರ್ಯಕ್ರಮ ಮಾರ್ಚ್ 11 ಅಥವಾ 12 ರಂದು ನಡೆಯಲಿದ್ದು, ಪ್ರಧಾನಿ ಮೋದಿಯವರಿಂದ (PM Modi) ಉದ್ಘಾಟನೆಗೆ ಸಿದ್ಧವಾಗಿದೆ. ಈಗಾಗಲೇ ಎಲ್ಲಾ ಕಾಮಗಾರಿ ಪೂರ್ಣಗೊಂಡಿದ್ದು, ಮಂಡ್ಯದಲ್ಲಿಯೇ (Mandya) ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಆ ಮೂಲಕ ಮಂಡ್ಯ ಜಿಲ್ಲೆಯಲ್ಲಿ ನಮ್ಮ ಜನಪ್ರತಿನಿಧಿಗಳು ಇಲ್ಲದಿದ್ದರೂ ನಾವು ಅಭಿವೃದ್ಧಿ (Development ) ವಿಚಾರದಲ್ಲಿ ಮಂಡ್ಯದ ಪರ ಇದ್ದೇವೆ. ಇಂಡಾವಳು ಸೇರಿದಂತೆ ಕೆಲವು ವ್ಯಾಪ್ತಿಯಲ್ಲಿ ಕಾಮಗಾರಿ ಚುರುಕುಗೊಂಡಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (MP Pratap Simha) ಹೇಳಿದ್ದಾರೆ.
ರಾಜಕೀಯದಲ್ಲಿ ಮುಂದಿವರಿಯ ಬೇಕಾ ಬೇಡವಾ ಅಂತ ತೀರ್ಮಾನ ಮಾಡ್ತೀನಿ
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಮೈಸೂರು ಕುಶಲನಗರ ಹೈವೇಗೆ ಶಂಕುಸ್ಥಾಪನೆ ಕೂಡ ನಡೆಯಲಿದೆ. ಪ್ರಧಾನಿ ಮೋದಿ ಅವರು ಶಂಕು ಸ್ಥಾಪನೆ ಮಾಡಿ, ಕಾಮಗಾರಿ ಪೂರ್ಣಗೊಂಡು ಅವರೇ ಉದ್ಘಾಟನೆ ಮಾಡುತ್ತಿದ್ದಾರೆ. ವೇಗವಾಗಿ ಕಾಮಗಾರಿ ನಡೆಸಿರುವುದು ಇದೇ ಮೊದಲು ಅಂತ ಹೇಳಬಹುದು ಎಂದರು.
ಇದನ್ನೂ ಓದಿ: Bengaluru Mysuru Expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣಿಕರಿಗೆ ಟ್ರಾಫಿಕ್ ಸಮಸ್ಯೆ!
ಇದೇ ವೇಳೆ ರಾಜ್ಯ ರಾಜಕಾರಣಕ್ಕೆ ಬರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನನ್ನ ದೇವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಅವರ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಲಾಂಗ್ ಟೈಂ ಪಾಲಿಟಿಕ್ಸ್ ಮಾಡಲು ಇಷ್ಟ ಪಡುವುದಿಲ್ಲ. 2029 ರವರೆಗೂ ರಾಜಕಾರಣದಲ್ಲಿ ಇರುತ್ತೇನೆ. ಅಮೇಲೆ ರಾಜಕೀಯದಲ್ಲಿ ಮುಂದಿವರಿಯ ಬೇಕಾ ಬೇಡವಾ ಅಂತ ತೀರ್ಮಾನ ಮಾಡ್ತೀನಿ ಎಂದರು.
ಮೈಮರೆತರೆ ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಬರಲಿದೆ!
ಬಿಜೆಪಿ ಕಾರ್ಯಕರ್ತರು ಮೈಮರೆತರೆ ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಬರಲಿದೆ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಅಭಿವೃದ್ಧಿಗೆ ನನ್ನ ಮೊದಲ ಅಧ್ಯತೆ. ಒಳ್ಳೆಯ ಅಭಿವೃದ್ಧಿಯ ಕೆಲಸಮಾಡಬೇಕು. ನಿನ್ನೆ ನಾನು ಕಾಂಗ್ರೆಸ್ ನಾಯಕರಿಗೆ ಹೇಳಿದ್ದೇನೆ.
ಕಾಂಗ್ರೆಸ್ ಅಧಿಕಾರ ಬಂದರೆ ತಾಲಿಬಾನ್ ಅವಳಿ ಆಗುತ್ತೆ. ಅವರ ಸರ್ಕಾರದ ಅವಧಿಯಲ್ಲಿ ಪಿಎಫ್ಐ ಕೇಸ್ಗಳನ್ನು ವಜಾ ಮಾಡಿದ್ದರು. ಪೊಲೀಸ್ ಇಲಾಖೆಯ ವಿರೋಧ ಇದ್ದರೂ ಕೂಡ ಕೇಸ್ ಕ್ಲೀಯರ್ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ. ಹೀಗಾಗಿ ನಮ್ಮ ಕಾರ್ಯಕರ್ತರಿಗೆ ಮೈ ಮರಿಯಬೇಡಿ ಅಂತ ಕರೆ ನೀಡಿದ್ದೇನೆ ಎಂದರು.
ಸಕ್ರಿಯ ರಾಜಕಾರಣದಲ್ಲಿ ಬಿಎಸ್ವೈ ಇರ್ತಾರೆ
ಯಡಿಯೂರಪ್ಪ ಚುನಾವಣ ರಾಜಕೀಯ ನಿವೃತ್ತಿ ಬಗ್ಗೆ ಪ್ರತಿಕ್ರಿಯೆ ನೀಡಿ, ಸಕ್ರಿಯ ರಾಜಕಾರಣದಲ್ಲಿ ಯಡಿಯೂರಪ್ಪ ಇರುತ್ತಾರೆ. ಸಿದ್ದರಾಮಯ್ಯ ಹಾಗೂ ಉಳಿದವರ ರಾಜಕಾರಣವನ್ನೆಲ್ಲ ಮುಗಿಸುತ್ತಾರೆ. ನಂತರ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ. ಅವರು ಸಕ್ರಿಯ ರಾಜಕಾರಣದಲ್ಲಿ ಇರುತ್ತಾರೆ ಎಂದರು.
ನಿನ್ನೆ ಮೈಸೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರತಾಪ್ ಸಿಂಹ ಅವರು, ಬಿಜೆಪಿ ಕಾರ್ಯಕರ್ತರು ಮೈಮರೆತರೆ ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ಆದ್ದರಿಂದ ಮತ್ತೊಮ್ಮೆ ಬಿಜೆಪಿ ನೇತೃತ್ವದ ರಾಷ್ಟ್ರೀಯವಾದಿ ಸರ್ಕಾರವನ್ನು ತರಲು ಪ್ರಯತ್ನ ಮಾಡಿ ಕರೆ ನೀಡಿದ್ದರು. ಅಲ್ಲದೇ ಈಗ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಹವಣಿಸುತ್ತಿದ್ದಾರೆ. ಒಂದು ವೇಳೆ ನಮ್ಮ ಕಾರ್ಯಕರ್ಯರು ಈ ವೇಳೆ ಮೈಮರೆತರೆ, ರಾಜ್ಯದಲ್ಲಿ ಮತ್ತೆ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಇದಕ್ಕೆ ನಮ್ಮ ಕಾರ್ಯಕರ್ತರು ಅವಕಾಶ ನೀಡಬಾರದು ಎಂದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ