• Home
  • »
  • News
  • »
  • state
  • »
  • Kodagu Rains: ತಡೆಗೋಡೆ ಕುಸಿಯುವ ಆತಂಕ; ಕೊಡಗು ಜಿಲ್ಲಾಡಳಿತ ಭವನ ಗಢ ಗಢ

Kodagu Rains: ತಡೆಗೋಡೆ ಕುಸಿಯುವ ಆತಂಕ; ಕೊಡಗು ಜಿಲ್ಲಾಡಳಿತ ಭವನ ಗಢ ಗಢ

ಕುಸಿಯುತ್ತಿರುವ ತಡೆಗೋಡೆ

ಕುಸಿಯುತ್ತಿರುವ ತಡೆಗೋಡೆ

2018 ರಲ್ಲಿಯೂ ಇದೇ ರೀತಿ ಹೆದ್ದಾರಿಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದವು. ನಂತರ ಎಲ್ಲೆಡೆ ಕುಸಿದು ಹೋಗಿತ್ತು. ಇದೀಗ ಇಲ್ಲಿಯೂ ಅದೇ ರೀತಿ ಕುಸಿದು ಹೋಗುತ್ತಾ ಎನ್ನುವ ಆತಂಕವಿದೆ.

  • Share this:

ಕೊಡಗು : ಕೊಡಗು ಜಿಲ್ಲೆಯಲ್ಲಿ ಮಳೆಯ (Kodagu Rainfall) ಪ್ರಮಾಣ ಒಂದಷ್ಟು ತಗ್ಗಿದ್ದರೂ ಆಗುತ್ತಿರುವ ಸಮಸ್ಯೆಗಳು ಮಾತ್ರ ಕಡಿಮೆ ಏನಲ್ಲ. ಜಿಲ್ಲೆಯ ಮಳೆಹಾನಿಯನ್ನು ನಿಭಾಯಿಸಲು ಸಜ್ಜಾಗಿರುವ ಜಿಲ್ಲಾಡಳಿತ ಭವನದ ಬುಡದಲ್ಲಿಯೇ ಸಮಸ್ಯೆ ಎದುರಾಗಿದೆ. 2018 ರಲ್ಲಿ ಸಣ್ಣ ಪ್ರಮಾಣದಲ್ಲಿ ಜಿಲ್ಲಾಡಳಿತ ಭವನದ  (Kodagu DC Office) ಮುಂಭಾಗದಲ್ಲಿ ಕುಸಿತವಾಗಿತ್ತು. ಅದು ಮತ್ತಷ್ಟು ಕುಸಿಯದಂತೆ ಕೋಟ್ಯಂತರ ರೂಪಾಯಿ ವ್ಯಯಿಸಿ ತಡೆಗೋಡೆ (Wall) ಮಾಡಲಾಗುತ್ತಿತ್ತು. ಆದರೆ ಕಾಮಗಾರಿ (Construction) ಪೂರ್ಣಗೊಳ್ಳುವ ಮೊದಲೇ ಇಲ್ಲಿ ತಡೆಗೋಡೆ ಕುಸಿದು ಬೀಳುವ ಸ್ಥಿತಿ ಎದುರಾಗಿದೆ. ತಡೆಗೋಡೆಗೆ ಅಳವಡಿಸಿದ್ದ ಸ್ಲ್ಯಾಬ್ ಗಳು ಸಂಪೂರ್ಣ ಹೊರಕ್ಕೆ ಭಾಗಿದ್ದು ಯಾವುದೇ ಕ್ಷಣದಲ್ಲಾದರೂ ಹೆದ್ದಾರಿ 275 ಕ್ಕೆ ಅಡ್ಡಲಾಗಿ ತಡೆಗೋಡೆ ಕುಸಿದು ಬೀಳುವ ಸಾಧ್ಯತೆ ನಿಚ್ಚಳವಾಗಿದೆ.


ತಡೆಗೋಡೆಯಲ್ಲಿ ಬಿರುಕು ಮೂಡಿದ್ದ ಹಿನ್ನೆಲೆಯಲ್ಲಿ ಸ್ಲ್ಯಾಬ್ ಗಳಿಗೆ ರಂಧ್ರಗಳನ್ನು ಕೊರೆದು ಅವುಗಳಿಗೆ ಕೆಲವು ಬೋಲ್ಟ್ ಗಳನ್ನು ಹಾಕಲು ಪ್ರಯತ್ನಿಸಲಾಗಿತ್ತು. ಆದರೆ ಅವುಗಳು ಅತೀ ಹೆಚ್ಚು ಹೊರಕ್ಕೆಬಾಗಿದ್ದರಿಂದ ತಕ್ಷಣವೇ ಎಚ್ಚೆತ್ತುಕೊಂಡು ಅಧಿಕಾರಿಗಳು ಅಷ್ಟಕ್ಕೇ ಕೆಲಸವನ್ನು ನಿಲ್ಲಿಸಿ ಮಡಿಕೇರಿಯಿಂದ ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಿದ್ದರು.


ಪರ್ಯಾಯ ಮಾರ್ಗ ಹೀಗಿದೆ


ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿಯೇ ಮಂಗಳೂರು ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಲಾಗಿದೆ. ಬದಲಾಗಿ ಮಡಿಕೇರಿಯಿಂದ ವಿರಾಜಪೇಟೆ ರಸ್ತೆಯಲ್ಲಿ ಮೇಕೇರಿವರೆಗೆ ಸಾಗಿ ನಂತರ ಭಾಗಮಂಡಲ ರಸ್ತೆಗೆ ಹೋಗಿ ಪುನಃ ಮಂಗಳೂರು ರಸ್ತೆಗೆ ಬಂದು ಸೇರಬೇಕಾಗಿದೆ.


Mysuru Madikeri Mangaluru National Highway bandh rsk mrq
ಹೆದ್ದಾರಿ ಬಂದ್


ಇದನ್ನೂ ಓದಿ:  Selfie Death: ಸೆಲ್ಫಿ ಹುಚ್ಚಾಟ, ನೀರಸಾಗರದಲ್ಲಿ ಕೊಚ್ಚಿ ಹೋದ ಯುವಕ


ಕೋಟಿ ಕೋಟಿ ವ್ಯಯಿಸಿ ಮಾಡುತ್ತಿದ್ದ ತಡೆಗೋಡೆ ಕುಸಿದು ಬಿದ್ದಿದ್ದೇ ಆದಲ್ಲಿ ಹೆದ್ದಾರಿಯ ಕೆಳಭಾಗದಲ್ಲೇ ಇರುವ ಐದಾರು ಮನೆಗಳು ಸಾವಿರಾರು ಲೋಡ್ ಮಣ್ಣಿನಲ್ಲಿ ಸಮಾಧಿಯಾಗಿ ಬಿಡುವ ಆತಂಕವಿದೆ. ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಪ್ರಕರಣಗಳು 2018 ರಿಂದಲೂ ನಿರಂತರವಾಗಿ ನಡೆಯುತ್ತಲೇ ಇವೆ.


ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಬಿರುಕು


ಇದೀಗ ಮಡಿಕೇರಿ ತಾಲ್ಲೂಕಿನ ಕೊಯಿನಾಡು ಸಮೀಪದ ದೇವರಕೊಲ್ಲಿಯಲ್ಲಿ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಬಿರುಕು ಮೂಡಿದೆ. ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ. ದೇವರಕೊಲ್ಲಿಯಲ್ಲಿ ಹೆದ್ದಾರಿ ಬಿರುಕು ಬಿಟ್ಟಿರುವುದರಿಂದ ರಸ್ತೆಯ ಒಂದು ಭಾಗಕ್ಕೆ ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿಯಂತ್ರಿಸಲಾಗಿದೆ. ಆದರೆ ದ್ವಿಮುಖ ರಸ್ತೆಯ ಎರಡು ಭಾಗದಲ್ಲೂ ನಿಧಾನವಾಗಿ ಕುಸಿಯುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ.




ಹೆದ್ದಾರಿಯ ಒಂದು ಭಾಗದಲ್ಲಿ ಕೊಲ್ಲಿ ಇದ್ದು ಅಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಮತ್ತೊಂದು ಭಾಗದಲ್ಲಿ ಬೆಟ್ಟ ಇರುವುದರಿಂದ ಹೆದ್ದಾರಿ 275 ದೇವರಕೊಲ್ಲಿಯಲ್ಲಿ ಬಿರುಕು ಮೂಡಿರುವುದಕ್ಕೆ ಕಾರಣವಾಗಿರಬಹುದು ಎನ್ನುವುದು ಪ್ರಾಥಮಿಕವಾಗಿ ಗೊತ್ತಾಗುತ್ತದೆ.


2018ರ ರೀತಿ ಹೆದ್ದಾರಿ ಕುಸಿದು ಹೋಗುತ್ತಾ?


2018 ರಲ್ಲಿಯೂ ಇದೇ ರೀತಿ ಹೆದ್ದಾರಿಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದವು. ನಂತರ ಎಲ್ಲೆಡೆ ಕುಸಿದು ಹೋಗಿತ್ತು. ಇದೀಗ ಇಲ್ಲಿಯೂ ಅದೇ ರೀತಿ ಕುಸಿದು ಹೋಗುತ್ತಾ ಎನ್ನುವ ಆತಂಕವಿದೆ.


ಆತಂಕದ ಪರಿಸ್ಥಿತಿ ನಿರ್ಮಾಣ


ಒಂದು ವೇಳೆ ಹೆದ್ದಾರಿ ಕುಸಿದಿದ್ದೇ ಆದಲ್ಲಿ ಮಂಗಳೂರು ಮತ್ತು ಮಡಿಕೇರಿ ನಡುವಿನ ಸಂಚಾರ ಬಂದ್ ಆಗುತ್ತದೆ. ಇದರಿಂದಾಗಿ ಸಾವಿರಾರು ಜನರು ಸಾಕಷ್ಟು ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.


ಇದನ್ನೂ ಓದಿ:  Karnataka Weather Report: ರಾಜ್ಯದ ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್; ಇಂದು ಬೆಂಗಳೂರಿನಲ್ಲಿ ಮಳೆ ಆಗುತ್ತಾ?


ರಸ್ತೆ ಮೇಲೆ 5 ಅಡಿಯಷ್ಟು ನೀರು


ಇನ್ನು ಮಡಿಕೇರಿ ತಾಲ್ಲೂಕಿನ ಚೆರಿಯಪರಂಬು ಗ್ರಾಮ ಬಹುತೇಕ ಜಲಾವೃತವಾಗಿದ್ದು, ಕಲ್ಲುಮೊಟ್ಟೆ ರಸ್ತೆ ಮೇಲೆ ಐದು ಅಡಿಯಷ್ಟು ಎತ್ತರದ ಪ್ರವಾಹದ ನೀರು ಹರಿಯುತ್ತಿದೆ. ಇದರಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಪ್ರಮಾಣದಲ್ಲಿ ಹರಿಯುತ್ತಿರುವ ಪ್ರವಾಹದ ನೀರಿನಲ್ಲಿ ಓಡಾಡುವುದಕ್ಕೂ ಸಾಧ್ಯವಾಗದೆ ಜನರು ತೆಪ್ಪ ಬಳಸಿ ಹಗ್ಗ ಕಟ್ಟಿ ಅದರ ಸಹಾಯದಿಂದ ಓಡಾಡುತ್ತಿದ್ದಾರೆ.

Published by:Mahmadrafik K
First published: