• Home
  • »
  • News
  • »
  • state
  • »
  • Mysuru: ಗುಂಬಜ್​ ದಂಗಲ್​ನಲ್ಲಿ ರಾಮದಾಸ್ Vs ಪ್ರತಾಪ್ ಸಿಂಹ ವಾರ್; ಸಂಸದರ ಆರೋಪಕ್ಕೆ ಶಾಸಕರ ತಿರುಗೇಟು

Mysuru: ಗುಂಬಜ್​ ದಂಗಲ್​ನಲ್ಲಿ ರಾಮದಾಸ್ Vs ಪ್ರತಾಪ್ ಸಿಂಹ ವಾರ್; ಸಂಸದರ ಆರೋಪಕ್ಕೆ ಶಾಸಕರ ತಿರುಗೇಟು

ಬಸ್​ ನಿಲ್ದಾಣ ವಿವಾದ

ಬಸ್​ ನಿಲ್ದಾಣ ವಿವಾದ

ಅರಮನೆ ಮಾದರಿಯಲ್ಲಿ ನಿರ್ಮಾಣವಾಗಿರುವ ಕಟ್ಟಡವನ್ನ ಮಸೀದಿಗೆ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  • News18 Kannada
  • Last Updated :
  • Mysore, India
  • Share this:

Mysuru Bus Shelter: ಮೈಸೂರಿನ ಜೆಎಸ್​ಎಸ್​ ಕಾಲೇಜ್ (JSS College) ಬಳಿಯ ಊಟಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯ (National Highway) ಬದಿಯಲ್ಲಿರುವ ಗುಂಬಜ್ ಮಾದರಿಯಲ್ಲಿ (Gumbaz Model) ನಿರ್ಮಾಣವಾಗಿರುವ ಬಸ್​ ನಿಲ್ದಾಣ ರಾಜಕೀಯ ನಾಯಕರ (Political Leaders) ನಡುವೆ ವಾಕ್ಸಮರ ಏರ್ಪಟ್ಟಿದೆ. ಒಂದೇ ಪಕ್ಷದ ನಾಯಕರಾಗಿರುವ ಶಾಸಕ ರಾಮದಾಸ್ (MLA Ramdas) ಮತ್ತು ಸಂಸದ ಪ್ರತಾಪ್ ಸಿಂಹ (MP Pratap Simha) ನಡುವೆ ಶೀತಲ ಸಮಯ ಏರ್ಪಟ್ಟಿದೆ. ಗುಂಬಜ್ ತೆರವುಗೊಳಿಸಲು ಸಂಸದ ಪ್ರತಾಪ್ ಸಿಂಹ ನೀಡಿರುವ ಗಡುವು ಇಂದು ಮುಕ್ತಾಯವಾಗಲಿದೆ. ಆದ್ರೆ ರಾತ್ರೋರಾತ್ರಿ ಬಸ್​ ಶೆಲ್ಟರ್ ಮೇಲ್ಭಾಗ ನಿರ್ಮಾಣ ಮಾಡಿರುವ ಮೂರು ಗುಂಬಜ್​ಗಳ ಪೈಕಿ ಒಂದರ ಬಣ್ಣ ಬದಲಾಗಿದೆ.


ಇದರ ಜೊತೆಗೆ ಸುತ್ತೂರು ಶ್ರೀ, ವೀರಸಿಂಹಾಸನ ಮಠದ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿ ಸ್ವಾಮೀಜಿ, ಲಿಂಗೈಕ್ಯ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ, ಪ್ರಧಾನಿ ನರೇಂದ್ರ ಮೋದಿ, ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ ಫೋಟೋ ಅಳವಡಿಕೆ ಮಾಡಲಾಗಿದೆ.


ಪ್ರತಾಪ್ ಸಿಂಹ ಆರೋಪಕ್ಕೆ ತಿರುಗೇಟು


ಈ ಎಲ್ಲಾ ಬೆಳವಣಿಗೆಗಳ ನಡುವೆ ಶಾಸಕ ರಾಮದಾಸ್​ ಗುಂಬಜ್ ವಿವಾದದ ಕುರಿತು ಮೌನ ಮುರಿದಿದ್ದಾರೆ. ಇಂದು ಪತ್ರದ ಮೂಲಕ ಮಾಧ್ಯಮಗಳ ಹೇಳಿಕೆ ನೀಡಿರುವ ಶಾಸಕರು, ಅರಮನೆ ಮಾದರಿಯಲ್ಲಿ ನಿರ್ಮಾಣವಾಗಿರುವ ಕಟ್ಟಡವನ್ನ ಮಸೀದಿಗೆ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


mysuru gumbaz bus shelter, gumbaz bus shelter photos, mysuru bus shelter, kannada news, karnataka news, ಮೈಸೂರು ಗುಂಬಜ್ ಬಸ್ ನಿಲ್ದಾಣ, ಮೈಸೂರು ಬಸ್ ನಿಲ್ದಾಣ ವಿವಾದ
ವಿವಾದಿತ ಬಸ್ ನಿಲ್ದಾಣ


ಸಂಸದರು ಒಡೆಯುತ್ತೀನಿ ಎಂದ‌ ಮೇಲೆ ಕಲಶ ನಿರ್ಮಿಸಿಲ್ಲ. ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಪ್ರತಾಪ್ ಸಿಂಹ ಹೇಳಿರುವಂತೆ ರಾತ್ರೋರಾತ್ರಿ ಕಲಶ ನಿರ್ಮಾಣ ಮಾಡಿಲ್ಲ. ಯಾವುದೇ ಧರ್ಮದ ಆಧಾರದ ಮೇಲೆ ಬಸ್ ನಿಲ್ದಾಣ ನಿರ್ಮಿಸಿಲ್ಲ ಎಂದು ಪ್ರತಾಪ್ ಸಿಂಹ ಆರೋಪಕ್ಕೆ ತಿರುಗೇಟು ನೀಡಿದರು.


ಮೈಸೂರು ಅರಮನೆಯ ಮಾದರಿಯಲ್ಲಿ ನಿರ್ಮಾಣ


ಮೈಸೂರಿನ ಪಾರಂಪರಿಕ ಮಹತ್ವ ಸಾರಲು ಮೈಸೂರು ಅರಮನೆಯ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಆರೋಪಿಸಿದರು. ಈ ಸಂಬಂಧ ಪೋಲಿಸ್ ಕಮಿಷನರ್​​ಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.


ಇದನ್ನೂ ಓದಿ:  Udupi: ಅಜಾನ್​​ಗೆ ಮಕ್ಕಳಿಂದ ನೃತ್ಯ; ಹಿಂದೂ ಸಂಘಟನೆಗಳ ಆಕ್ರೋಶ


ತಜ್ಞರ ಸಮಿತಿ ರಚಿಸಲಿ


10 ಲಕ್ಷ ವೆಚ್ಚದ ಬಸ್ ನಿಲ್ದಾಣ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಇದನ್ನು ಮಹದೇವ್ ಎಂಬ ಗುತ್ತಿಗೆದಾರನಿಗೆ ನೀಡಲಾಗಿದೆ. ಬಸ್ ನಿಲ್ದಾಣಗಳ ವಿನ್ಯಾಸಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚಿಸಲಿ. ಸಮಿತಿ ವರದಿಯಲ್ಲಿ ತಪ್ಪಿದ್ದರೆ ಬದಲಾವಣೆ ಮಾಡಲು ನಮ್ಮ ಅಭ್ಯಂತರ ಇಲ್ಲ ಎಂದು ಪತ್ರದ ಮೂಲಕ ಸ್ಪಷ್ಟನೆ ನೀಡಿದರು.


mysuru gumbaz bus shelter, gumbaz bus shelter photos, mysuru bus shelter, kannada news, karnataka news, ಮೈಸೂರು ಗುಂಬಜ್ ಬಸ್ ನಿಲ್ದಾಣ, ಮೈಸೂರು ಬಸ್ ನಿಲ್ದಾಣ ವಿವಾದ
ವಿವಾದಿತ ಬಸ್​ ನಿಲ್ದಾಣ


ಪಾಲಿಕೆಗೆ ನೋಟಿಸ್


ಇನ್ನು ಬಸ್​ ನಿಲ್ದಾಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಧ್ಯ ಪ್ರವೇಶಿಸಿದ್ದು, ಪಾಲಿಕೆ ನೋಟಿಸ್ ನೀಡಿದೆ. ಊಟಿ ಮಾರ್ಗದ ಬಲಭಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಬಸ್​ ನಿಲ್ದಾಣವನ್ನು ಒಂದು ವಾರದೊಳಗೆ ತೆರವುಗೊಳಿಸುವಂತೆ ನೋಟಿಸ್ ನೀಡಿದೆ.


ಇದನ್ನೂ ಓದಿ:   Mysuru: ಬಸ್ ಶೆಲ್ಟರ್ ವಿವಾದಕ್ಕೆ ನಾಟಕೀಯ ತಿರುವು; ಸ್ವಾಮೀಜಿ, ಪ್ರಧಾನಿ, ಸಿಎಂ ಫೋಟೋ ಅಳವಡಿಕೆ


ಸಿಎಂ ಭೇಟಿಯಾದ ರಾಮದಾಸ್


ಇನ್ನು ಗುಂಬಜ್ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ರಾಮದಾಸ್ ಅವರು ಇಂದು ಆರ್.ಟಿ.ನಗರದಲ್ಲಿರುವ ನಿವಾಸದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸುಮಾರು 45 ನಿಮಿಷಗಳ ಕಾಲ ಮಾತನಾಡಿದ್ದಾರೆ. ಈ ವೇಳೆ ಗುಂಬಜ್ ಮಾದರಿಯ ಬಸ್ ನಿಲ್ದಾಣ ನಿರ್ಮಾಣದ ಕುರಿತ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.


ಗುಂಬಜ್ ಮಾದರಿಯ ಬಸ್ ನಿಲ್ದಾಣ ನಾನೇ ಜೆಸಿಬಿ ತೆಗೆದುಕೊಂಡು ಹೋಗಿ ಒಡೆದು ಹಾಕುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಗುಡುಗಿದ್ದರು.

Published by:Mahmadrafik K
First published: