ಚಾಮುಂಡೇಶ್ವರಿ ಬೆಟ್ಟದ ತಪ್ಪಲಿನಲ್ಲಿ ಯುವತಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತಮಿಳುನಾಡಿನಲ್ಲಿ ಕಿರಾತಕನ ಸೆರೆ ಹಿಡಿಯಲಾಗಿದೆ. 6 ನೇ ಆರೋಪಿಯನ್ನ ಬಂಧಿಸಿರುವ ಮೈಸೂರು ಪೊಲೀಸರು.ಮತ್ತೊಬ್ಬನಿಗಾಗಿ ತೀವ್ರ ಶೋಧ ನಡೆಸುತ್ತಿದ್ದು ಶೀಘ್ರ 7 ನೇ ಆರೋಪಿಯನ್ನ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಡೀ ರಾಜ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದ ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿಗೆ ಕಳಂಕ ತಂದಿದ್ದ ಈ ಪ್ರಕರಣವನ್ನು ಭೇದಿಸಲು ಏಳು ತಂಡಗಳನ್ನು ರಚಿಸಲಾಗಿತ್ತು. ಸಂತ್ರಸ್ಥೆಯಿಂದ ಯಾವುದೇ ರೀತಿಯ ಪೂರಕ ಮಾಹಿತಿ ಸಿಗದ ಕಾರಣ, ಈ ಪ್ರಕರಣದ ಆರೋಪಿಗಳನ್ನು ಹಿಡಿಯುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಈ ದುರ್ಘಟನೆ ನಡೆಯುವ ವೇಳೆ ಜೊತೆಯಲ್ಲಿ ಇದ್ದ ಸ್ನೇಹಿತನಿಂದ ಸಿಕ್ಕ ಅಲ್ಪ ಮಾಹಿತಿಯನ್ನು ಪಡೆದ ಪೊಲೀಸರು ಸಾಕಷ್ಟು ಚುರುಕುತನದಿಂದ ಕೆಲಸ ಮಾಡಿ ಆರೋಪಿಗಳನ್ನು ಬಲೆಗೆ ಬೀಳಿಸಿದ್ದರು. ಗೃಹ ಸಚಿವರ ಸೂಚನೆಯಂತೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ 5 ಲಕ್ಷ ಬಹುಮಾನ ನೀಡಲಾಗಿದೆ.
ಈಗ ಬಲೆಗೆ ಬಿದ್ದಿರುವ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಹಲವು ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ.: ಆರೋಪಿಗಳ ಹಿನ್ನಲೆಯ ಬಗ್ಗೆ ಈಗ ಅಸ್ಪಷ್ಟ ಮಾಹಿತಿ ಇರುವ ಕಾರಣ, ಅವರ ಪೂರ್ವಾಪರ, ಕೆಲಸ ಹಾಗೂ ಅಪರಾಧ ಪ್ರಕರಣಗಳಲ್ಲಿ ಈ ಹಿಂದೆ ಭಾಗಿಯಾಗಿದ್ದರೆ ಹಾಗೂ ಪ್ರಸ್ತುತ ಅಪರಾಧ ಪ್ರಕರಣದಲ್ಲಿನ ಭಾಗಿತ್ವದ ಬಗ್ಗೆ ಪೂರಕ ಸಾಕ್ಷ್ಯಾಧಾರಗಳನ್ನ ಕಲೆಹಾಕಲಾಗುತ್ತಿದೆ.
ಇದನ್ನೂ ಓದಿ: ಶಾಸಕರ ಮಗನ ವಿರುದ್ಧ ದೂರು ನೀಡಿದ ಪ್ರತ್ಯಕ್ಷದರ್ಶಿ; ಘಟನೆ ನೋಡಿದಾತ ಹೇಳಿದ್ದೇನು?
ಇನ್ನು ಪ್ರಕರಣ ಸಂಬಂಧ ಪೊಲೀಸರಿಗೆ ಮತ್ತೊಂದು ಚಾಲೆಂಜ್ ಎದುರಾಗಿದೆ.. ಸಂತ್ರಸ್ಥ ಯುವತಿಯಿಂದ ಹೇಳಿಕೆ ಪಡೆಯುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಆದರೆ ಸ್ವಲ್ಪ ದಿನದ ಬಳಿಕ ಹೇಳಿಕೆ ಕೊಡಿಸುವುದಾಗಿ ಯುವತಿಯ ಪೋಷಕರು ಹೇಳಿದ್ದಾರೆ. ಘಟನೆ ಕುರಿತು ಹೇಳಿಕೆ ನೀಡಲು ಕಾಲಾವಕಾಶ ನೀಡುವಂತೆ ಪೋಷಕರು ಪೊಲೀಸರ ಬಳಿ ಮನವಿ ಮಾಡಿದ್ದಾರೆ.
ಇನ್ನು ಬಂಧಿತರು 7-8ನೇ ತರಗತಿ ಓದಿದ್ದಾರೆ. ವೈರಿಂಗ್ ಮಾಡುವವರು, ಡ್ರೈವರ್ಸ್, ಕಾರ್ಮಿಕರು ಆಗಿದ್ದಾರೆ. ಒಬ್ಬನಿಗೆ 17 ವರ್ಷ ಆಗಿದೆ. ಇವರು ಆಗಾಗ್ಗೆ ಮೈಸೂರಿಗೆ ಬಂದು ಪಾರ್ಟಿ ಮಾಡುತ್ತಿದ್ದರು. ಕಂಠಪೂರ್ತಿ ಕುಡಿಯುತ್ತಿದ್ದರು. ಸಂತ್ರಸ್ಥ ಯುವತಿ ಮತ್ತು ಆಕೆಯ ಗೆಳೆಯ ಇದ್ದಾಗ ಇದೇ ಘಟನೆ ನಡೆದಿತ್ತು.
ಈ ಅತ್ಯಾಚಾರ ಪ್ರಕರಣ ರಾಜಕಿಯ ಜಿದ್ದಾಜಿದ್ದಿಗೆ ಸಹ ಕಾರಣವಾಗಿತ್ತು, ಪ್ರಕರಣದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ್ದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.ಅಲ್ಲದೇ ಘಟನೆ ಸಂಭವಿಸಿದಾಗಿನಿಂದ ಮೈಸೂರು ಸೇರಿ ಅನೇಕ ಕಡೆ ಪ್ರತಿಭಟನೆಗಳು ನಡೆದಿದ್ದವು.. ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಡ ಹೇರಲಾಗಿತ್ತು. ನಟಿಯರಾದ ರಮ್ಯಾ, ಶೃತಿ ಸೇರಿದಂತೆ ಅನೇಕರು ಗ್ಯಾಂಗ್ ರೇಪ್ ಘಟನೆ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ