Crime News: ಮೈಸೂರಿನ ವೈದ್ಯರೊಬ್ಬರ ಹತ್ಯೆ ಪ್ರಕರಣ - ಆರೋಪಿ ಬರೋಬ್ಬರಿ 350 ಕೋಟಿ ರೂ ಆಸ್ತಿ ಒಡೆಯನಂತೆ

Murder case: ಇನ್ನು ಮೂಲಗಳ ಪ್ರಕಾರ ಆರೋಪಿ ಗಲ್ಫ್ ನಲ್ಲಿ ಕೆ ಡೀಸೆಲ್ ವ್ಯಾಪಾರ ಮಾಡುತ್ತಿದ್ದ ವಿಚಾರ ತಿಳಿದು ಬಂದಿದ್ದು, 2015 ರಲ್ಲಿ, ಸುಲ್ತಾನ್ ಬತ್ತೇರಿಯ ಪುತನಕುನ್ನು ಎಂಬಲ್ಲಿ ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ಐಶಾರಾಮಿ ಮನೆಯನ್ನು ಸಹ ಕಟ್ಟಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೈಸೂರಿನ (Mysuru) ವಸಂತನಗರದಲ್ಲಿ ಕೆಲ ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ನಾಟಿವೈದ್ಯ ಶಾಬಾ ಷರೀಫ್ (Doctor) ಹತ್ಯೆಯಾಗಿದ್ದು, ನಾಲ್ವರು ಆರೋಪಿಗಳನ್ನು ಕೇರಳದ (Kerala) ಮಲಪ್ಪುರಂ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ವಸಂತನಗರದಲ್ಲಿ ಮೂಲವ್ಯಾಧಿಗೆ ನಾಟಿ ಔಷಧ ನೀಡುತ್ತಿದ್ದ ಈ ವೈದ್ಯಯ ಬಳಿ ಕೇರಳದಿಂದ ಸಹ ಹಲವಾರು ಜನರು ಬಂದು ಔಷಧಿ ಪಡೆದು ಹೋಗುತ್ತಿದ್ದು, ಹಾಗಾಗಿ ಕೇರಳದಲ್ಲಿ ಸಹ ಹೆಚ್ಚು ಪ್ರಸಿದ್ದಿ ಪಡೆದಿದ್ದ ಇವರ ಔಷಧಿಯೇ ಇವರ ಪ್ರಾಣಕ್ಕೆ ಮುಳುವಾಯಿತು ಎಂದು ಸದ್ಯದ ತನಿಖೆಯಲ್ಲಿ ತಿಳಿದುಬಂದಿದೆ.

ಔಷಧ ರಹಸ್ಯ ತಿಳಿಯಲು ಹತ್ಯೆ

ಆರೋಪಿಯು ವೈದ್ಯ ನೀಡುತ್ತಿದ್ದ ಈ ಔಷಧದ ರಹಸ್ಯ ತಿಳಿದುಕೊಂಡು ದುಬೈ ಸೇರಿದಂತೆ ವಿದೇಶದಲ್ಲಿ ಮಾರಾಟ ಮಾಡಿ ಈ ಔಷಧದಿಂದ ಹಣ ಮಾಡುವ ಆಲೋಚನೆಯಲ್ಲಿದ್ದ, ಹಾಗಾಗಿ ವೈದ್ಯಯ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಕೆಲ ವರ್ಷದಿಂದ ನಾಪತ್ತೆಯಾಗಿದ್ದ ಹಾಗೂ 2020ರಲ್ಲಿ ಕೊಲೆಯಾಗಿ ಪತ್ತೆಯಾಗಿದ್ದ ವೈದ್ಯೆಯ ಕೊಲೆ ರಹಸ್ಯ ಬಹಿರಂಗವಾಗಿದ್ದು ಸಹ ಒಂದು ಅಪರಾಧ ಪ್ರಕರಣದ ತನಿಖೆಯಲ್ಲಿ ಎಂಬುದು ರೋಚಕ. ಹೌದು, ಕೇರಳದ ಉದ್ಯಮಿ ಮನೆಯಲ್ಲಿ ಏ.24 ರಂದು ದರೋಡೆಯಾಗಿತ್ತು, ಈ ಸಂಬಂಧ ಕೆಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆ ಸಮಯದಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ವೈದ್ಯ ಶಬಾ ಷರೀಫ್ ಕೊಲೆ ಪ್ರಕರಣ ಹೊರಬಿದ್ದಿದೆ.

ಲಾರಿ ಚಾಲಕ ಈಗ ಬರೋಬ್ಬರಿ 350 ಕೋಟಿ ಒಡೆಯ

ಈ ತನಿಖೆಯಲ್ಲಿ ಬಹಿರಂಗವಾದ ಮತ್ತೊಂದು ಅಚ್ಚರಿಯ ವಿಚಾರವೆಂದರೆ ಆರೋಪಿ ಶೈಬಿನ್ ಅಶ್ರಫ್ 350 ಕೋಟಿ ರೂಪಾಯಿ ಆಸ್ತಿಯ ಒಡೆಯ ಎಂಬುದು. ಹೌದು, ಸ್ವತಃ ಆತನೇ ನೀಡಿರುವ ಹೇಳಿಕೆ ಪ್ರಕಾರ ವಯನಾಡ್ ಮೂಲದ ಆರೋಪಿ ಶೈಬಿನ್ ಅಶ್ರಫ್ ವಿಚಾರಣೆ ವೇಳೆ ತನ್ನ ಜೀವನದ ಕೆಲ ಸತ್ಯಗಳನ್ನು ಹೊರಹಾಕಿದ್ದು, ತಾನು ಕೋಟ್ಯಾಧಿಪತಿ ಎಂದು ತಿಳಿಸಿದ್ದಾರೆ.

ಆರೋಪಿ ಶೈಬಿನ್ ಕೆಲವೇ ತಿಂಗಳುಗಳ ಸಮಯದಲ್ಲಿ ಈ ಕೋಟ್ಯಂತರ ಆಸ್ತಿ ಸಂಪಾದನೆ ಮಾಡಿರುವ ಬಗ್ಗೆ ತಿಳಿದುಬಂದಿದ್ದು, ಈ ಕುರಿತು ತನಿಖೆ ಮಾಡಬೇಕಿದೆ. ಶೈಬಿನ್‌ನ ಆರ್ಥಿಕ ಮೂಲಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮಲಪ್ಪುರಂ ಜಿಲ್ಲಾ ಪೊಲೀಸ್ ಮುಖ್ಯಸ್ಥ ಸುಜಿತ್ ದಾಸ್ ಮಾಹಿತಿ ನೀಡಿದ್ದಾರೆ.

ಕೇರಳದ ಮೈತಾನಿಕುನ್ನು ಎಂಬಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಈ ಆರೋಪಿ, ಈ ಹಿಂದೆ ಲಾರಿ ಕ್ಲೀನರ್ ಮತ್ತು ಆಟೋರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ, ಆದರೆ ಆತನ ತಾಯಿ ಗಲ್ಫ್‌ಗೆ ಕೆಲಸಕ್ಕೆ ಹೋದ ನಂತರ ಅವರ ಅದೃಷ್ಟ ಬದಲಾಯಿತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲದೇ, ಆತನ ಕೂಡ ಒಮ್ಮೆ ಹೊರದೇಶಕ್ಕೆ ಹೋಗಿ ಬಂದ ನಂತರ ಅವರ ಕುಟುಂಬದ ಸ್ಥಿತಿ ಸಂಪೂರ್ಣ ಬದಲಾಯಿತು ಎಂದು ಮಾಹಿತಿ ದೊರೆತಿದೆ.

ಇನ್ನು ಮೂಲಗಳ ಪ್ರಕಾರ ಆರೋಪಿ ಗಲ್ಫ್ ನಲ್ಲಿ ಕೆ ಡೀಸೆಲ್ ವ್ಯಾಪಾರ ಮಾಡುತ್ತಿದ್ದ ವಿಚಾರ ತಿಳಿದು ಬಂದಿದ್ದು,  2015 ರಲ್ಲಿ, ಸುಲ್ತಾನ್ ಬತ್ತೇರಿಯ ಪುತನಕುನ್ನು ಎಂಬಲ್ಲಿ ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ಐಶಾರಾಮಿ ಮನೆಯನ್ನು ಸಹ ಕಟ್ಟಲಾಗಿದೆ.

ಇದನ್ನೂ ಓದಿ: ಕೃಷಿ ಕಾಯ್ದೆ ವಿರೋಧಿ ಹೋರಾಟದ ರಾಕೇಶ್ ಟಿಕಾಯತ್ ಭಾರತೀಯ ಕಿಸಾನ್ ಯೂನಿಯನ್​ನಿಂದ ವಜಾ!

ಒತ್ತೆಯಾಳಾಗಿಟ್ಟುಕೊಂಡು ಹತ್ಯೆ

ಇನ್ನು ವೈದ್ಯ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ತನಿಖಾ ತಂಡವು ಪೊಲೀಸರಿಗೆ ಈ ಹತ್ಯೆ ಅಪರಾಧದ ರಹಸ್ಯ ಬಿಚ್ಚಿಟ್ಟ ಸುಲ್ತಾನ್ ಬತ್ತೇರಿ ಮೂಲದ ಮತ್ತೊಬ್ಬ ಆರೋಪಿ ನೌಶಾದ್ ತಂಗಳತ್ ನನ್ನು ನಿಲಂಬೂರಿನ ಶೈಬಿನ್ ಮನೆಗೆ ಕರೆದೊಯ್ದಿದ್ದು, ಶಾಬಾನನ್ನು ಒಂದು ವರ್ಷದಿಂದ ಒತ್ತೆಯಾಳಾಗಿ ಇಟ್ಟುಕೊಂಡು ಹತ್ಯೆ ಮಾಡಲಾಗಿತ್ತು ಎಂಬ ಸ್ಫೋಟಕ ಸತ್ಯವನ್ನು ಆತ ಬಹಿರಂಗಪಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಸಾಕ್ಷ್ಯ ಸಂಗ್ರಹ ಮಾಡಲು ತನಿಖಾ ತಂಡ ಆರಂಭಿಸಿದ್ದರೂ ಸಹ ಯಾವುದೇ ಮಹತ್ವದ ಸಾಕ್ಷಿ ಸಿಕ್ಕಿರಲಿಲ್ಲ. ಅವುಗಳ ಸಂಗ್ರಹವು ಆರಂಭಿಕ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿದೆ ಎಂದು ನಿಲಂಬೂರು ಪೊಲೀಸ್ ನಿರೀಕ್ಷಕ ಸುನೀಲ್ ಪಿ. ತಿಳಿಸಿದ್ಧಾರೆ.

ಇದನ್ನೂ ಓದಿ:ಅಡುಗೆ ಮಾಡೋಕೆ ಬರಲ್ಲ ಎಂದು ನಿತ್ಯ ಗಲಾಟೆ; ಮದುವೆ ವಾರ್ಷಿಕೋತ್ಸವದ ದಿನ ಹೆಂಡತಿಯನ್ನೇ ಕೊಂದು ಗಂಡ ಎಸ್ಕೇಪ್

ಶಾಬಾ ಷರೀಫ್ ಅವರನ್ನು 2020 ರ ಅಕ್ಟೋಬರ್ನಲ್ಲಿ ಈ ಗ್ಯಾಂಗ್ ಹತ್ಯೆ ಮಾಡಿತ್ತು. ಆರೋಪಿಗಳು ಅವರ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ಎಡವಣ್ಣ ಬಳಿಯ ಚಾಲಿಯಾರ್ನಲ್ಲಿ ಬಿಸಾಕಿ ಹೋಗಿದ್ದರು. ಇದೀಗ ಈ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Published by:Sandhya M
First published: