Mysuru Dasara 2022: ದಸರಾ ಗಜಪಡೆಗೆ 5 ಹೊಸ ಆನೆ; ಜಂಬೂ ಪಡೆಗೆ ಭರ್ಜರಿ ತಾಲೀಮು

ಕಳೆದ 2 ವರ್ಷಗಳಿಂದ ಕೊರೊನಾ ಹಿನ್ನೆಲೆ 8 ಆನೆಗಳನ್ನು ಕರೆತಂದು ಜಂಬೂ ಸವಾರಿ ನಡೆಸಲಾಗುತ್ತಿತ್ತು. ಈ ಬಾರಿಯೂ ಹೆಚ್ಚುವರಿ ಆನೆಗಳನ್ನು ಒಳಗೊಂಡಂತೆ ದಸರಾ ಮೆರವಣಿಯನ್ನು ಅದ್ಧೂರಿಯಾಗಿ ಆಯೋಜಿಸಲು ಸರ್ಕಾರ ತೀರ್ಮಾನಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೈಸೂರು (ಜು. 11) : ಕೊರೊನಾ (Corona) ಹಿನ್ನಲೆ 2 ವರ್ಷಗಳಿಂದ ನಾಡಹಬ್ಬ ದಸರಾವನ್ನು ಸರಳವಾಗಿಯೇ ಆಚರಿಸಲಾಗಿತ್ತು. ಈ ಬಾರಿ ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ದಸರಾ (Dasara) ಮೆರುಗನ್ನು ಮತ್ತಷ್ಟು ಹೆಚ್ಚಿಸಲು ಹೊಸ ಜಂಬೋ ಪಡೆ ಆಗಮಿಸುತ್ತಿದೆ. ಈ ಬಾರಿ ದಸರಾಗೆ ಐದು ಹೊಸ ಆನೆಗಳು (New Elephant) ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲಿವೆ. ಐದು ಹೊಸ ಆನೆಗಳನ್ನೇ 2ನೇ ಹಂತದ ಸಿದ್ಧತೆಗೆ ಕರೆ ತರಲು ತೀರ್ಮಾನಿಸಲಾಗಿದೆ ಎಂದು ಡಿಸಿಎಫ್‌ ವಿ. ಕರಿಕಾಳನ್‌ ತಿಳಿಸಿದ್ದಾರೆ. ದಸರಾ ಹಬ್ಬದಲ್ಲಿ ಜಂಬೂ ಸವಾರಿಯೇ ವಿಶೇಷ ಆಕರ್ಷಣೆಯಾಗಿದೆ.

ಈ ಬಾರಿ ಅದ್ಧೂರಿ ಜಂಬೂ ಸವಾರಿ

2019ರಲ್ಲಿ ದಸರಾ ಆಚರಿಸಿದಾಗ 14 ರಿಂದ 15 ಆನೆಗಳನ್ನು ತಂದು ಬೃಹತ್‌ ಜಂಬೂ ಸವಾರಿ ನಡೆಸಿದ್ರು. ಆದ್ರೆ ಕಳೆದ 2 ವರ್ಷಗಳಿಂದ ಕೊರೊನಾ ಹಿನ್ನೆಲೆ 8 ಆನೆಗಳನ್ನು ಕರೆತಂದು ಜಂಬೂ ಸವಾರಿ ನಡೆಸಲಾಗುತ್ತಿತ್ತು. ಈ ಬಾರಿಯೂ ಹೆಚ್ಚುವರಿ ಆನೆಗಳನ್ನು ಒಳಗೊಂಡಂತೆ ದಸರಾ ಮೆರವಣಿಯನ್ನು ಅದ್ಧೂರಿಯಾಗಿ ಆಯೋಜಿಸಲು ಸರ್ಕಾರ ತೀರ್ಮಾನಿಸಿದೆ.

ಕ್ಯಾಂಪ್‌ಗಳಲ್ಲಿ 115ಕ್ಕೂ ಹೆಚ್ಚು ಆನೆ

ನಾಗರ ಹೊಳೆಯ ತಿತಿಮತಿ ಹಾಗೂ ಸುತ್ತಮುತ್ತಲಿನ ಆನೆ ಶಿಬಿರ, ಕೊಡಗು ಜಿಲ್ಲೆಯ ದಾರ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಾಪುರ ಆನೆ ಶಿಬಿರ ಸೇರಿದಂತೆ ಈ ಎಲ್ಲಾ ಕ್ಯಾಂಪ್‌ಗಳಲ್ಲಿ 115ಕ್ಕೂ ಹೆಚ್ಚು ಆನೆಗಳಿವೆ. ಇದರಲ್ಲಿ ದಸರೆಗೆ 20 ಆನೆಗಳ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಇವುಗಳಲ್ಲಿ 15 ಆನೆಯನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. 9 ಆನೆಗಳು ಈ ಹಿಂದೆ ದಸರೆಯಲ್ಲಿ ಪಾಲ್ಗೊಂಡ ಅನುಭವಿಗಳಿರುತ್ತವೆ. ಇನ್ನುಳಿದ ಆನೆಗಳನ್ನು ಹೊಸದಾಗಿಯೇ ಆಯ್ಕೆ ಮಾಡಿಕೊಳ್ಳಲಾಗ್ತಿದೆ. ಜುಲೈ 30ರೊಳಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ.

ಇದನ್ನೂ ಓದಿ: Karnataka Politics: ಇದು ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮ ಉರುಸ್​; ಯತ್ನಾಳ್ ವ್ಯಂಗ್ಯ

ಚಿನ್ನದ ಅಂಬಾರಿ ಹೊರುವ ಅಭಿಮನ್ಯು

ಜಂಬೂ ಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಆನೆ ವಯಸ್ಸು 60 ವರ್ಷ ಮೀರುವಂತಿಲ್ಲ. ಅಂತೆಯೆ 60 ವರ್ಷ ಪೂರೈಸಿದ ಅರ್ಜುನನ ನಂತರ ಇದೀಗ ಅಭಿಮನ್ಯು ಅಂಬಾರಿ ಹೊರುವ ಕಾರ್ಯ ನಿರ್ವಹಿಸುತ್ತಿದೆ. ಅಭಿಮನ್ಯುವಿಗೂ 57 ವರ್ಷ ತುಂಬುತ್ತಿದ್ದು, ಮುಂದಿನ ಮೂರು ವರ್ಷವಷ್ಟೇ ಅಭಿಮನ್ಯು ಅಂಬಾರಿ ಹೊರುವ ಅವಕಾಶ ಪಡೆಯಲಿದ್ದಾನೆ. ನಂತರ ಮತ್ತೊಂದು ಆನೆ ಈ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ.

ಹೊಸ ಆನೆಗಳಿಗೆ ತಯಾರಿ

ಇದಲ್ಲದೇ ನಿಶಾನೆ ಆನೆ ಸೇರಿದಂತೆ ಇನ್ನಿತರ ಜವಾಬ್ದಾರಿ ನಿರ್ವಹಣೆ ಮಾಡಲು ಜನರ ನಡುವೆ ಗಾಬರಿಗೊಳ್ಳದೇ ಪಟಾಕಿ, ಸಿಡಿಮದ್ದಿಗೆ ಹೆದರದೇ ಸಾಗುವ 2ನೇ ಹಂತದ ಆನೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಹೊಸಬರಿಗೆ ತಯಾರಿ ನೀಡುವ ಉದ್ದೇಶದಿಂದಲೇ ಈ ಬಾರಿ ದಸರೆಗೆ 2 ತಿಂಗಳು ಬಾಕಿ ಇರುವಂತೆಯೇ ಆನೆಗಳನ್ನು ಅರಮನೆ ಆವರಣದ ಶಿಬಿರಕ್ಕೆ ಕರೆತರಲಾಗುತ್ತದೆ.

ಅಂಬಾರಿ ಹೊರಲು 3-5 ವರ್ಷ ತಾಲೀಮು

ಅಂಬಾರಿ ಹೊರುವ ಆನೆಗೆ ಕನಿಷ್ಠ 3 ರಿಂದ 5 ವರ್ಷ ಅಭ್ಯಾಸ ಮಾಡುವುದು ಅಗತ್ಯ. ಅದಕ್ಕಾಗಿ ಈ ಬಾರಿಯಿಂದಲೇ ಅಭಿಮನ್ಯುವಿಗೆ ಪರ್ಯಾಯವಾಗಿ 2ನೇ ಹಂತದ ಆನೆಗಳಾಗಿ ಮಹೇಂದ್ರ, ಭೀಮ, ಅಶ್ವತ್ಥಾಮ, ಕೃಷ್ಣ ಆನೆಗಳಿಗೆ ತರಬೇತಿ ನೀಡಲಾಗುತ್ತಿದೆ.

ಇದನ್ನೂ ಓದಿ: Mekedatu Project: ಮೇಕೆದಾಟು ಯೋಜನೆ ವಿರೋಧಿಸಿ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ತಮಿಳುನಾಡು

ಜಂಬೂ ಸವಾರಿಗೆ ತಾಲೀಮು

ಜಂಬೂ ಸವಾರಿಯಲ್ಲಿ ಯಾವುದೇ ಅಡೆತಡೆಗೆ ಬಗ್ಗದೆ ಮುನ್ನಡೆಯಲು ಸಿದ್ಧವಾಗಿರಲು ಬಲರಾಮನಿಗೆ ಸುಮಾರು 750 ಕೆ.ಜಿ. ತೂಕದ ಮರದ ಅಂಬಾರಿಯನ್ನು ಉಳಿದ ಆನೆಗಳಿಗೆ ಮರಳಿನ ಮೂಟೆಯನ್ನು ಕಟ್ಟಿ ದಿನಕ್ಕೊಮ್ಮೆ ಅರಮನೆಯಿಂದ ಸಯ್ಯಾಜಿರಾವ್ ರಸ್ತೆಯಲ್ಲಿ ಬನ್ನಿ ಮಂಟಪದವರೆಗೆ ಕಡ್ಡಾಯ ಮಾರ್ಚ್‌ಫಾಸ್ಟ್ ನಡೆಯುತ್ತದೆ. ಈ ಗಜಪಡೆಯ ಉಸ್ತುವಾರಿಗೆ ಮಾವುತರು, ಕಾವಡಿಗರು ಇರುವುದರೊಂದಿಗೆ ಪಶುವೈದ್ಯಾಧಿಕಾರಿಗಳಿಂದ ಆಗಾಗ್ಗೆ ತಪಾಸಣೆಯೂ ನಡೆಯುತ್ತಿರುತ್ತದೆ. ಈ ಗಜಪಡೆಯನ್ನು ಜತನದಿಂದ ನೋಡಿಕೊಳ್ಳಲು ಮಾವುತರ ಕುಟುಂಬಗಳಿಗೆ ಅರಮನೆಯ ಆವರಣದಲ್ಲಿಯೇ ಶೆಡ್ ಹಾಕಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗುತ್ತದೆ.

ಸುಮಾರು ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ದಿನನಿತ್ಯ ಕಠಿಣ ತಾಲೀಮು ನಡೆಸಿ ದಸರಾ ದಿನದಂದು ಕಣ್ಣು ಕುಕ್ಕಿಸುವಂತಹ ವೇಷಭೂಷಣಗಳಿಂದ ಕಂಗೊಳಿಸುತ್ತಾ ಗಾಂಭೀರ್ಯದ ಹೆಜ್ಜೆಯನ್ನಿಡುತ್ತಾ ಮೆರವಣಿಗೆಯಲ್ಲಿ ಸಾಗುತ್ತೆ ಗಜಪಡೆಗಳು
Published by:Pavana HS
First published: