ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದ ದ್ರೋಣ ಆನೆ ಇನ್ನಿಲ್ಲ!

ಆನೆ ಸಾವಿಗೆ ನಿಖರವಾದ ಕಾರಣ ಏನು ಎಂಬುದು ಇನ್ನು ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕವಷ್ಟೇ ಸಾವಿಗೆ ಕಾರಣ ಏನು ಎಂಬುದು ಗೊತ್ತಾಗಬೇಕಾಗಿದೆ. 

news18
Updated:April 27, 2019, 2:10 PM IST
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದ ದ್ರೋಣ ಆನೆ ಇನ್ನಿಲ್ಲ!
ಮೃತಪಟ್ಟ ದ್ರೋಣ ಆನೆ
  • News18
  • Last Updated: April 27, 2019, 2:10 PM IST
  • Share this:
ವಿರಾಜಪೇಟೆ: ಹಲವು ವರ್ಷಗಳಿಂದ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಭಾಗವಹಿಸಿ ಅಂಬಾರಿ ಜೊತೆಗೆ ಸಾಗುತ್ತಿದ್ದ ದ್ರೋಣ ಹೆಸರಿನ ಆನೆ ಅನಾರೋಗ್ಯ ಕಾರಣದಿಂದ ನೆನ್ನೆ ಅಸುನೀಗಿದ್ದಾನೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಮತ್ತಿಗೋಡು ಸಾಕಾನೆ ಶಿಬಿರದಲ್ಲಿದ್ದ 39 ವರ್ಷದ ದ್ರೋಣ ಆನೆ ಬೆಳಿಗ್ಗೆಯಿಂದಲೂ ಎಂದಿನಂತೆ ಆರೋಗ್ಯವಾಗಿಯೇ ಲವಲವಿಕೆಯಿಂದಲೇ ಇತ್ತು. ಆದರೆ ಬೆಳಿಗ್ಗೆ 10: 30 ಸಂದರ್ಭದಲ್ಲಿ ಸ್ವಲ್ಪ ಬಳಲಿದಂತೆ ಕಂಡು ಬಂದ ದ್ರೋಣನಿಗೆ ನೀರು ಕುಡಿಸಲು ಮಾವುತರು ಪ್ರಯತ್ನಿಸಿದ್ದಾರೆ. ಆದು ಪ್ರಯೋಜನವಾಗದೆ ದ್ರೋಣ ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

ಇದನ್ನು ಓದಿ: ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಬೆನ್ನಟ್ಟಿದ ಆನೆ; ವಿಡಿಯೋ ವೈರಲ್​​

ಆನೆ ಸಾವಿಗೆ ನಿಖರವಾದ ಕಾರಣ ಏನು ಎಂಬುದು ಇನ್ನು ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕವಷ್ಟೇ ಸಾವಿಗೆ ಕಾರಣ ಏನು ಎಂಬುದು ಗೊತ್ತಾಗಬೇಕಾಗಿದೆ.  ಒಟ್ಟಿನಲ್ಲಿ ಹಲವು ವರ್ಷಗಳಿಂದ ವಿಶ್ವವಿಖ್ಯಾತ ದಸರಾದಲ್ಲಿ ಭಾಗವಹಿಸುತ್ತಿದ್ದ ದ್ರೋಣ ಇನ್ನಿಲ್ಲಾ ಎಂಬುದು ಮಾತ್ರ ವಿಪರ್ಯಾಸ ಎಂದು ಅರಣ್ಯ ಇಲಾಖೆ  ಪಶುವೈದ್ಯ ಡಾ.ಮಜೀದ್​ ತಿಳಿಸಿದ್ದಾರೆ.

First published: April 27, 2019, 2:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading