• Home
  • »
  • News
  • »
  • state
  • »
  • Elephant Died: ಕಾಡಾನೆ ದಾಳಿ, ಮೈಸೂರು ಗಜಪಡೆಯ ಗೋಪಾಲಸ್ವಾಮಿ ಆನೆ ಸಾವು

Elephant Died: ಕಾಡಾನೆ ದಾಳಿ, ಮೈಸೂರು ಗಜಪಡೆಯ ಗೋಪಾಲಸ್ವಾಮಿ ಆನೆ ಸಾವು

ಗೋಪಾಲಸ್ವಾಮಿ ಆನೆ ಸಾವು

ಗೋಪಾಲಸ್ವಾಮಿ ಆನೆ ಸಾವು

ಮಂಗಳವಾರ ಮಧ್ಯಾಹ್ನದಿಂದ ನಾಲ್ಕು ವೈದ್ಯರ ತಂಡ ಗೋಪಾಲಸ್ವಾಮಿ ಆನೆಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮಧ್ಯಾಹ್ನ 1 ಗಂಟೆ ವೇಳೆ ಸಾವನ್ನಪ್ಪಿದೆ.

  • News18 Kannada
  • Last Updated :
  • Karnataka, India
  • Share this:

ಮೈಸೂರು (ನ.23): ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದ ಗೋಪಾಲಸ್ವಾಮಿ (Gopalaswamy) ಸಾಕಾನೆಯು ಕಾಡಾನೆ ದಾಳಿಗೆ ತುತ್ತಾಗಿ ಮೃತಪಟ್ಟಿದೆ. ನಾಗರಹೊಳೆ (Nagarhole) ರಾಷ್ಟ್ರೀಯ ಉದ್ಯಾನದ ಕೊಳುವಿಗೆ ಬಳಿ ಅರಣ್ಯ ಪ್ರದೇಶದಲ್ಲಿ ಗೋಪಾಲಸ್ವಾಮಿ ಸಾಕಾನೆಯು ಮೃತ ಪಟ್ಟಿದ್ದು, ಮಂಗಳವಾರದಂದು ನೇರಳಕುಪ್ಪೆ ಬಿ ಹಾಡಿಯ ಕ್ಯಾಂಪ್​ನಿಂದ ಮೇಯಲು ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ವೇಳೆ ಕಾಡಾನೆಗಳು ದಾಳಿ ನಡೆಸಿದೆ. 


ಗೋಪಾಲಸ್ವಾಮಿ ಮೇಲೆ ಕಾಡಾನೆ ಅಯ್ಯಪ್ಪ ದಾಳಿ


ಹುಣಸೂರು ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಘಟನೆ ನಡೆದಿದೆ. ಗೋಪಾಲಸ್ವಾಮಿ ಮೇಲೆ ಕಾಡಾನೆ ಅಯ್ಯಪ್ಪ ದಾಳಿ ನಡೆಸಿದೆ. ದಾಳಿಯಲ್ಲಿ ಆನೆ ತೀವ್ರಗಾಗಿ ಗಾಯಗೊಂಡಿದ್ದು, ಗೋಪಾಲಸ್ವಾಮಿ ಆನೆಯ ಚಿರಾಟ ಕೇಳಿ ಮಾವುತರು ಕಾಡಿಗೆ ಹೋಗಿ ನೋಡಿದ್ದಾರೆ. ಆಗ ಗೋಪಾಲಸ್ವಾಮಿ ಆನೆ ಗಾಯಗೊಂಡು ಕೆಳಗೆ ಬಿದ್ದಿತ್ತು.


Mysuru dasara elephant died after wild elephant attack pvn


ಚಿಕಿತ್ಸೆ ಫಲಿಸದೆ ಗೋಪಾಲಸ್ವಾಮಿ ಸಾವು


ಮಂಗಳವಾರ ಮಧ್ಯಾಹ್ನದಿಂದ ನಾಲ್ಕು ವೈದ್ಯರ ತಂಡ ಗೋಪಾಲಸ್ವಾಮಿ ಆನೆಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮಧ್ಯಾಹ್ನ 1 ಗಂಟೆ ವೇಳೆ ಸಾವನ್ನಪ್ಪಿದೆ. ಸ್ಥಳಕ್ಕೆ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಎಸಿಎಫ್ ದಯಾನಂದ್ ಸೇರಿದಂತೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದರು. ಇಂದು ಸಂಜೆ ಕೊಳುವಿನ ಬಳಿ ಅಂತ್ಯಸಂಸ್ಕಾರ ನಡೆಸಲಾಯಿತು.


ಈ ಹಿಂದೆ ಕಬಿನಿ ಶಕ್ತಿಮಾನ್ ಸಾವು


ಮೈಸೂರು: ಜೂನ್​ 12 ರಂದು ಕಬಿನಿ ಶಕ್ತಿಮಾನ್ ಎಂದೇ ಖ್ಯಾತಿ ಪಡೆದಿದ್ದ ನೀಳ ದಂತದ, ಸುಂದರ ನಡಿಗೆಯ ಭೋಗೇಶ್ವರ ಹೆಸರಿನ ಆನೆ ನಿಧನ ಹೊಂದಿದೆ. ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಆನೆಯ ಕಳೆಬರಹ ಪತ್ತೆಯಾಗಿದ್ದು, ಕಬಿನಿ ಹಿನ್ನಿರಿನಲ್ಲಿ ಪ್ರವಾಸಿಗರಿಗೆ ದರ್ಶನ ನಿಡ್ತಿದ್ದ ಭೋಗೇಶ್ವರ ವಯೋಸಹಜ ನಿಧನ ಹೊಂದಿದೆ. 60 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದ ಕಬಿನಿಯ ಹಿರಿಯಣ್ಣ, ಸುಮಾರು 4 ಅಡಿಗೂ ಉದ್ದದ ನೀಳ ದಂತ, ಸುಂದರ ನಡಿಗೆ ಮೂಲಕವೇ ಪ್ರಾಣಿಪ್ರಿಯರ ಮನಗೆದ್ದಿತ್ತು.


'ಭೋಗೇಶ್ವರ' ಆನೆ ಎಲ್ಲರ ನೆಚ್ಚಿನ ಆನೆಯಾಗಿತ್ತು


ನೀಳ ದಂತ, ಸುಂದರ ನಡಿಗೆಯ ಮೂಲಕ ಕಬಿನಿ ಹಿನ್ನೀರಿನಲ್ಲಿ ಪ್ರವಾಸಿಗರಿಗೆ ದರ್ಶನ ಭಾಗ್ಯ ಕೊಡುತ್ತಿದ್ದ. 'ಭೋಗೇಶ್ವರ' ಆನೆ ಎಲ್ಲರ ನೆಚ್ಚಿನ ಆನೆಯಾಗಿತ್ತು ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಕಳೆಬರ ಪತ್ತೆಯಾಗಿದೆ. ಕಬಿನಿ ಶಕ್ತಿಮಾನ್ ಎಂದೇ 'ಭೋಗೇಶ್ವರ' ಖ್ಯಾತಿಗಳಿಸಿದ್ದ.ಅಂದಾಜು 60 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದ ಕಬಿನಿಯ ಹಿರಿಯಣ್ಣನಿಗೆ ಸುಮಾರು 4 ಅಡಿಗೂ ಉದ್ದದ ಸುಂದರವಾದ ನೀಳ ದಂತವಿತ್ತು. ವಯೋಸಹಜವಾಗಿ ಆನೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.


ನೀಳ ದಂತ, ರಾಜ ಗಾಂಭೀರ್ಯದ ನಡಿಗೆ..!


ಭೋಗೇಶ್ವರ ಆನೆಯನ್ನು ನೋಡಿ ಪ್ರವಾಸಿಗರು ಸಕತ್ ಖುಷಿ ಪಡುತ್ತಿದ್ರು. ಎಲ್ಲರ ಫೇವರೇಟ್ ಆನೆಯಾಗಿದ್ದ ಭೋಗೇಶ್ವರ ಸೌಂದರ್ಯಕ್ಕೆ ಜನರು ಮಾರು ಹೋಗಿದ್ರು. ರಾಜ ಗಾಂಭೀರ್ಯ ದ ನಡಿಗೆ ಆಕರ್ಷಣೀಯ ಕೇಂದ್ರಬಿಂದು ಆಗಿತ್ತು. ಇದೀಗ ಆನೆ ಸಾವನಪ್ಪಿದ್ದು ಪ್ರಾಣಿಪ್ರಿಯರಲ್ಲಿ ಬೇಸರ ಮನೆಮಾಡಿದೆ.


ಇದನ್ನೂ ಓದಿ: Snake Everywhere: ರಾಯಚೂರಿನ ಮಠದಲ್ಲಿ ನಾಗರ ಹಾವು ಪ್ರತ್ಯಕ್ಷ; ತುಮಕೂರಲ್ಲೂ ಕಾಣಿಸಿಕೊಂಡ ಬುಸ್ ಬುಸ್ ನಾಗಪ್ಪ


ಸೋಶಿಯಲ್ ಮೀಡಿಯಾ ಸೆನ್ಸೇಷನ್..!


ಭೋಗೇಶ್ವರ ಆನೆ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಸೆನ್ಸೇಶನ್ ಸೃಷ್ಟಿಸಿತ್ತು. ಎಲ್ಲಾ ಜಾಲತಾಣಗಳಲ್ಲಿ ಭೋಗೇಶ್ವರ ಫೋಟೋ ಸಾಕಷ್ಟು ಸದ್ದು ಮಾಡಿತ್ತು. ಭೋಗೇಶ್ವರ ಫೋಟೋ ಲಕ್ಷಾಂತರ ಲೈಕ್ ಪಡೆದಿತ್ತು. ದಂತವನ್ನ ನೋಡಿದ ಜನ ನಿಬ್ಬೆರಗಾಗಿದ್ರು. ಅಷ್ಟು ಹೆಸರು ವಾಸಿಯಾಗಿದ್ದ ಆನೆ ಸಾವನಪ್ಪಿದ್ದು , ಕಬಿನಿ ಕಾಡು ಬಡವಾಗಿದೆ.

Published by:ಪಾವನ ಎಚ್ ಎಸ್
First published: