• Home
  • »
  • News
  • »
  • state
  • »
  • Mysuru Dasara 2022: ಜಂಬೂಸವಾರಿ ಮೆರವಣಿಗೆ ವೇಳೆ 47 ಸ್ತಬ್ಧಚಿತ್ರ ಪ್ರದರ್ಶನ; ಜಿಲ್ಲಾವಾರು, ಇಲಾಖಾವಾರು ಪಟ್ಟಿ ಇಲ್ಲಿದೆ

Mysuru Dasara 2022: ಜಂಬೂಸವಾರಿ ಮೆರವಣಿಗೆ ವೇಳೆ 47 ಸ್ತಬ್ಧಚಿತ್ರ ಪ್ರದರ್ಶನ; ಜಿಲ್ಲಾವಾರು, ಇಲಾಖಾವಾರು ಪಟ್ಟಿ ಇಲ್ಲಿದೆ

ಜಂಬೂ ಸವಾರಿ

ಜಂಬೂ ಸವಾರಿ

ಅರಮನೆಯಿಂದ ಕೆ.ಆರ್ ಸರ್ಕಲ್, ಸಯ್ಯಾಜಿ ರಾವ್, ರಸ್ತೆ, ಆಯುರ್ವೇದಿಕ್ ವೃತ್ತ, ಆರ್.ಎಂ.ಸಿ, ತಿಲಕ್ ನಗರ ರಸ್ತೆ ಮೂಲಕ ಜಂಬೂ ಸವಾರಿ ಬನ್ನಿ ಮಂಟಪ ತಲುಪಲಿದೆ. ಜಂಬೂಸವಾರಿ ಮೆರವಣಿಗೆ ವೇಳೆ 47 ಸ್ತಬ್ಧಚಿತ್ರ ಪ್ರದರ್ಶನವಾಗಲಿವೆ.

  • Share this:

ಎರಡು ವರ್ಷ ಕೊರೊನಾದಿಂದ (Corona Virus) ಕಳೆಗುಂದಿದ್ದ ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara 2022) ಮಹೋತ್ಸವ ಈ ಬಾರಿ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ಸಾಂಸ್ಕೃತಿಕ ನಗರಿ ವಿದ್ಯುತ್​ ದೀಪಗಳಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು (Tourist) ಕೈಬೀಸಿ ಕರೆಯುತ್ತಿದೆ. ಇಂದು ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿ (Jambu Savari) ಆರಂಭವಾಗಲಿದೆ. ಜಿಲ್ಲಾಡಳಿತ ಈಗಾಗಲೇ ಜಂಬೂ ಸವಾರಿಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಮಧ್ಯಾಹ್ನ 2.36 ರಿಂದ 02:50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ನಂದಿ ಧ್ವಜ ಕಂಬಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ನಂತರ ಪೂಜೆ ಬಳಿಕ ಸಂಜೆ 05:07 ರಿಂದ 5.18ರ ವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿ ಮೆರವಣಿಗೆ ಪ್ರಾರಂಭವಾಗುತ್ತದೆ.


ಅರಮನೆಯಿಂದ ಕೆ.ಆರ್ ಸರ್ಕಲ್, ಸಯ್ಯಾಜಿ ರಾವ್, ರಸ್ತೆ, ಆಯುರ್ವೇದಿಕ್ ವೃತ್ತ, ಆರ್.ಎಂ.ಸಿ, ತಿಲಕ್ ನಗರ ರಸ್ತೆ ಮೂಲಕ ಜಂಬೂ ಸವಾರಿ ಬನ್ನಿ ಮಂಟಪ ತಲುಪಲಿದೆ. ಜಂಬೂಸವಾರಿ ಮೆರವಣಿಗೆ ವೇಳೆ 47 ಸ್ತಬ್ಧಚಿತ್ರ ಪ್ರದರ್ಶನವಾಗಲಿವೆ.


ಜಂಬೂ ಸವಾರಿ ವೀಕ್ಷಣೆಗೆ 50 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಿಐಪಿ ಹಾಗೂ ವಿವಿಐಪಿಗಳಿಗೆ ಅರಮನೆಯ ಮೊದಲನೇ ಮಹಡಿಯ ಪ್ರಾಂಗಣದಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ.


ಜಿಲ್ಲಾವಾರು ಸ್ತಬ್ಧಚಿತ್ರಗಳ ಪಟ್ಟಿ


1.ಬಾಗಲಕೋಟೆ- ಮುಧೋಳ ಶ್ವಾನಗಳು, ಇಳಕಲ್‌ ಸೀರೆ


2.ಬಳ್ಳಾರಿ- ದುರ್ಗಮ್ಮ ದೇವಸ್ಥಾನ


3.ಬೆಳಗಾವಿ- ರೇಣುಕಾದೇವಿ ದೇವಸ್ಥಾನ, ಕಮಲ ಬಸದಿ


4.ಬೆಂಗಳೂರು(ಗ್ರಾ)- ಕಪಿಲೇಶ್ವರ ದೇವಸ್ಥಾನ, ಜೈನ ಬಸದಿ


5.ಬೆಂಗಳೂರು(ನ)- ಕಡಲೆಕಾಯಿ ಪರಷೆ, ಬಸವನಗುಡಿ


6.ಬೀದರ್‌- ಅನುಭವ ಮಂಟಪ


7.ಚಾಮರಾಜನಗರ- ವನ್ಯಧಾಮ, ಶ್ರೀ ಮಹದೇಶ್ವರ ವಿಗ್ರಹ, ಪುನೀತ್‌ ರಾಜ್‌ ಕುಮಾರ್‌ ಪ್ರತಿಮೆ


8.ಚಿಕ್ಕಬಳ್ಳಾಪುರ- ಗ್ರೀನ್‌ ನಂದಿ, ಭೋಗನಂದೀಶ್ವರ ದೇವಸ್ಥಾನ


9.ಚಿಕ್ಕಮಗಳೂರು- ಸಪ್ತನದಿಗಳ ತವರು


10.ಚಿತ್ರದುರ್ಗ- ವಾಣಿ ವಿಲಾಸ ಜಲಾಶಯ, ಒನಕೆ ಓಬವ್ವ, ಕುದುರೆ ಮೇಲೆ ಆಸೀನರಾಗಿರುವ ಮದಕರಿ ನಾಯಕ ಪ್ರತಿಮೆ, ದೀಪಸ್ಥಂಭ


11.ದಕ್ಷಿಣ ಕನ್ನಡ- ಕಂಬಳ, ಹುಲಿವೇಷ, ಭೂತಕೋಲ


12.ದಾವಣಗೆರೆ- ಸಂತೆ ಬೆನ್ನೂರು, ಪುಷ್ಕರಣೆ


13.ಧಾರವಾಡ- ಸಂಗೀತ ದಿಗ್ಗಜರು


14.ಗದಗ- ಶ್ರೀಕ್ಷೇತ್ರ ಶ್ರೀಮಂತಗಢ, ಹೊಳಲಮ್ಮ ದೇವಿ, ಶಿವಾಜಿ


15.ಹಾಸನ- ಬೇಲೂರು, ಹಳೆಬೀಡು, ಶ್ರವಣ ಬೆಳಗೊಳ ಗೊಮ್ಮಟಗಿರಿ


16.ಹಾವೇರಿ- ಗುರುಗೋವಿಂದ ಭಟ್ಟರು, ಸಂತ ಶಿಶುನಾಳ ಶರೀಫರು, ಮುಕ್ತೇಶ್ವರ ದೇವಾಲಯ


17.ಕಲಬುರಗಿ- ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ


18.ಕೊಡಗು- ಬ್ರಹ್ಮಗಿರಿ ಬೆಟ್ಟ, ಬೃಗಂಡೇಶ್ವರ ದೇವಾಲಯ, ತಲಕಾವೇರಿ ತೀರ್ಥೋದ್ಭವ


19.ಕೋಲಾರ- ಬಿ.ಕೆ.ಎಸ್‌ ಅಯ್ಯಂಗಾರ್‌ ಯೋಗಥಾನ್‌, ಅಂತರಗಂಗೆ ಬೆಟ್ಟ


20.ಕೊಪ್ಪಳ- ಆನೆಗುಂದಿ ಬೆಟ್ಟ, ಕಿನ್ನಾಳ ಗೊಂಬೆಗಳು, ಅಂಜನಾದ್ರಿ ಬೆಟ್ಟ


21.ಮಂಡ್ಯ- ಮಂಡ್ಯ ಜಿಲ್ಲೆಯ ದೇವಾಲಯಗಳು


22.ಮೈಸೂರು- ಮೈಸೂರು ಜಿಲ್ಲೆಯ ವಿಶೇಷತೆಗಳು


23.ರಾಯಚೂರು- ಸಿರಿಧಾನ್ಯಗಳ ಬೆಳೆಗಳ ಅಭಿಯಾನ


24.ರಾಮನಗರ- ರಾಮದೇವರ ಬೆಟ್ಟ, ರಣಹದ್ದು ಪಕ್ಷಿಧಾಮ


25.ಶಿವಮೊಗ್ಗ- ಅಕ್ಕಮಹಾದೇವಿ ಜನ್ಮಸ್ಥಳ, ಉಡುತಡಿ, ಶಿಕಾರಿಪುರ


26.ತುಮಕೂರು- ನಿಟ್ಟೂರಿನ ಎಚ್‌ಎಎಲ್‌ ತಯಾರಿಕಾ ಘಟಕ, ಪಾವಗಡದ ಬೃಹತ್‌ ಸೋಲಾರ್‌ ಪಾರ್ಕ್‌


27.ಉಡುಪಿ- ಜಿ.ಐ.ಟ್ಯಾಗ್‌ ಹೊಂದಿರುವ ಕೈಮಗ್ಗ ಸೀರೆ ನೇಯ್ಗೆ, ಸಾಂಪ್ರದಾಯಿಕ ಕಲೆಗಳ ಪ್ರದರ್ಶನ


28.ಉತ್ತರ ಕನ್ನಡ- ಕಾರವಾರ ನೌಕಾಶಾಲೆ


29.ವಿಜಯಪುರ- ಸಿದ್ದರಾಮೇಶ್ವರ ದೇವಸ್ಥಾನ


30.ವಿಜಯನಗರ- ಉಗ್ರ ನರಸಿಂಹ, ದರೋಜಿ ಕರಡಿಧಾಮ, ಕಲ್ಲಿನ ರಥ


31.ಯಾದಗಿರಿ- ಸುರಪುರ ಕೋಟೆ


ಸ್ತಬ್ಧಚಿತ್ರಗಳ ಉಪಸಮಿತಿ


32.ಅರಮನೆ ವಾದ್ಯಗೋಷ್ಠಿ


33.ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಸೋಮನಾಥಪುರ ದೇವಾಲಯ


34.ಆಜಾದಿ ಕಾ ಅಮೃತ ಮಹೋತ್ಸವ


ಇಲಾಖಾವಾರು ಸ್ತಬ್ಧಚಿತ್ರಗಳ ಪಟ್ಟಿ


35.ಸಮಾಜ ಕಲ್ಯಾಣ ಇಲಾಖೆ- ಸಾಮಾಜಿಕ ನ್ಯಾಯ


36.ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ- ಐಟಿಐ, ಜಿಟಿಟಿಸಿ, ಕೌಶಲ ತರಬೇತಿ


37.ಹಾಲು ಉತ್ಪಾದಕರ ಮಹಾಮಂಡಲ- ನಂದಿನಿ ಕ್ಷೀರಧಾರೆ, ಉತ್ಪನ್ನಗಳು


38.ಮೈಸೂರು ವಿಶ್ವವಿದ್ಯಾಲಯ- 106 ವರ್ಷಗಳ ಇತಿಹಾಸ


39.ಕಾವೇರಿ ನೀರಾವರಿ ನಿಗಮ- ರೈತರು ಮತ್ತು ಸಾರ್ವಜನಿಕರಿಗೆ ಆಗುವ ಅನುಕೂಲಕಗಳು


40.ಸೆಸ್ಕ್-‌ ಡಿಡಿಯು ಯೋಜನೆ, ಬೆಳಕು ಯೋಜನೆ, ಪರಿವರ್ತಕ ಅಭಿಯಾನ


41.ವಾರ್ತಾ ಮತ್ತು ಪ್ರಚಾರ ಇಲಾಖೆ- ಇಲಾಖೆ ಕಾರ್ಯಕ್ರಮಗಳು


42.ಡಾ.ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮ- ಲಿಡ್ಕರ್‌ ಉತ್ಪನ್ನಗಳು


43.ಅಖಿಲ ಭಾರತ ವಾಕ್‌ ಮತ್ತು ಶ್ರಾವಣ ಸಂಸ್ಥೆ- ಎಲ್ಲರಿಗೂ ದಯೆ ಮತ್ತು ಪ್ರೀತಿಗಾಗಿ


44.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- ಆರ್ಥಿಕ ಹೊರಯಿಂದ ರಕ್ಷಣೆ, ನಮ್ಮ ಕ್ಲಿನಿಕ್‌


45.ಸಹಕಾರ ಇಲಾಖೆ- ಸಹಕಾರ ಕ್ಷೇತ್ರದ ಯೋಜನೆಗಳು


46.ಮಂಡ್ಯ ಜಿಲ್ಲೆ ಮಹಾ ಕುಂಭ ಮೇಳ- ಪುಣ್ಯ ಸ್ನಾನ ಮತ್ತು ಶ್ರೀ ಮಹದೇಶ್ವರ ಜ್ಯೋತಿ ಸ್ವೀಕಾರ


47.ಪ್ರವಾಸೋದ್ಯಮ ಇಲಾಖೆ- ಚನ್ನಕೇಶವ ದೇವಾಲಯ, ಬೇಲೂರು, ಹಂಪಿ ಆನೆಲಾಯ


ಇದನ್ನೂ ಓದಿ:  PFI, SDPI ಮುಖಂಡರಿಗೆ ಷರತ್ತು ಬದ್ಧ ಜಾಮೀನು ಮಂಜೂರು; ಪೊಲೀಸರ ಬಲೆಗೆ ಬೀಳದ ನವೀದ್ ಕಟಗಿ


ಧಾರವಾಡದಲ್ಲಿ ಜಂಬೂ ಸವಾರಿ


ಧಾರವಾಡದಲ್ಲಿ ದಸರಾ ಜಂಬೂ ಸವಾರಿ ಸಂಭ್ರಮ ಕಳೆಗಟ್ಟಿದೆ. ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿಯಿಂದ ಜೋಡಿ ಆನೆಗಳ ಮೇಲೆ ಅಂಬಾರಿಯಿಟ್ಟು ಜಂಬೂ ಸವಾರಿ ಮೆರವಣಿಗೆ ಮಾಡಲಾಯ್ತು. ಗಾಂಧಿ ನಗರ, ಗವಳಿ ಗಲ್ಲಿ,  ಮಾಳಮಡ್ಡಿ, ಎಮ್ಮಿಕೇರಿ, ಹೊಸ ಯಲ್ಲಾಪುರ, ಕೋರ್ಟ್ ಸರ್ಕಲ್, ಜ್ಯುಬಿಲಿ ಸರ್ಕಲ್‌ನಲ್ಲಿ ಜಂಬೂ ಸವಾರಿ ಮೆರವಣಿಗೆ ನಡೆಯಿತು.


ಇನ್ನು ಕೊಪ್ಪಳದ ಐತಿಹಾಸಿಕ ಹೇಮಗುಡ್ಡದಲ್ಲಿ ದುರ್ಗಾಪರಮೇಶ್ವರಿ ಮೂರ್ತಿ ಹೊತ್ತು ಜಂಬೂ ಸವಾರಿ ಸಾಗಿತು. ವಿಜಯನಗರ ಕಾಲದ ಪೂರ್ವದಲ್ಲಿಯೂ ಇಲ್ಲಿ ಜಂಬೂಸವಾರಿ ನಡೆಯುತ್ತಿತ್ತು ಅನ್ನೋ ವಾಡಿಕೆ ಇದೆ. ಅಲ್ಲದೇ ಮೈಸೂರಿನ ಚಿನ್ನದ ಅಂಬಾರಿ ಮೂಲತಃ ಈ ಭಾಗದ್ದು ಎನ್ನುವ ನಂಬಿಕೆ ಭಕ್ತರದ್ದಾಗಿದೆ.


ನವರಾತ್ರಿ ಪೂಜಾ ಉತ್ಸವ ಅಂಗವಾಗಿ ಯಾದಗಿರಿ ತಾಲೂಕಿನ ಅಬ್ಬೆತುಮಕೂರಿನ ವಿಶ್ವರಾಧ್ಯರ ಸಿದ್ದ ಸಂಸ್ಥಾನ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದ್ರು.


ಇದನ್ನೂ ಓದಿ:  Karnataka Weather Report: ಮುಂದಿನ ಮೂರು ದಿನ ಈ ಭಾಗದಲ್ಲಿ ಮಳೆಯ ಅಲರ್ಟ್


ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನವರಾತ್ರಿ


ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ನವರಾತ್ರಿಯ ಸಂಭ್ರಮ ಜೋರಾಗಿದೆ. ಏರ್ಪೊಟ್​ನ ಟರ್ಮಿನಲ್ ಹೊರ ಭಾಗದಲ್ಲಿ ದಸರಾ ಅಂಗವಾಗಿ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.


ಉಚ್ಚಿಲ ಕ್ಷೇತ್ರದಲ್ಲಿ ದಸರಾ ವೈಭವ


ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲ ಕ್ಷೇತ್ರದಲ್ಲಿ ದಸರಾ ವೈಭವ ಕಳೆಗಟ್ಟಿದೆ. ಉಚ್ಚಿಲ ದೇವಸ್ಥಾನದ ರಾಜ ಗೋಪುರ ಮತ್ತು ನವದುರ್ಗೆಯರ ಮಂಟಪ ವಿದ್ಯುದೀಪಾಲಂಕಾರದಿಂದ ಸಿಂಗಾರಗೊಂಡು ದೇವಾಲಯದ ಸಭಾಂಗಣದಲ್ಲಿರುವ ನವದುರ್ಗೆಯರ ಮೂರ್ತಿಗಳು ನೋಡುಗರ ಕಣ್ಮನ ಸೆಳೆಯಿತು. ಇನ್ನು ಸಭಾಂಗದಲ್ಲಿ ನವದುರ್ಗೆಯರಿಗೆ ಪೂಜೆ, ಕುಂಕುಮಾರ್ಚನೆ ನಡೆದ ಬಳಿಕ ಭರತನಾಟ್ಯ, ಜಾನಪದ ನೃತ್ಯ, ಹುಲಿವೇಷ, ಭಜನಾ ತಂಡಗಳ ಕಲರವ ಮೆರೆಗು ನೀಡಿತು.

Published by:Mahmadrafik K
First published: