Mysuru Dasara 2022: ರಂಗೇರಿದೆ ಮೈಸೂರು ದಸರಾ ಸಡಗರ; ಈ ಬಾರಿ ಇಂಗ್ಲಿಷ್ ನಲ್ಲಿ ಆಹ್ವಾನ ಪತ್ರಿಕೆ

ಈ ಬಾರಿ ಇಂಗ್ಲಿಷ್​ನಲ್ಲಿ ಆಹ್ವಾನ ಪತ್ರಿಕೆ ಇರಲಿದೆ. ರಾಷ್ಟ್ರಪತಿಗಳು ದಸರಾ ಉದ್ಘಾಟನೆಯಲ್ಲಿ ಭಾಗಿಯಾಗುವುದರಿಂದ ಮೊದಲ ದಿನದ ಆಹ್ವಾನ ಪತ್ರಿಕೆ ಇಂಗ್ಲಿಷ್​ನಲ್ಲಿ ಮುದ್ರಣ ಮಾಡಲಾಗುತ್ತದೆ ಎಂದು ಸಚಿವ ಎಸ್​.ಟಿ ಸೋಮಶೇಖರ್​ ತಿಳಿಸಿದ್ರು. 

ಸಚಿವ ಎಸ್​.ಟಿ ಸೋಮಶೇಖರ್​

ಸಚಿವ ಎಸ್​.ಟಿ ಸೋಮಶೇಖರ್​

  • Share this:
ವಿಶ್ವ ವಿಖ್ಯಾತ ಮೈಸೂರು ದಸರಾ (Mysuru Dasara) ಸಂಭ್ರಮ ಮನೆ ಮಾಡಿದೆ. ದಸರಾ ಕಾರ್ಯಕ್ರಮದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ (Minister S T Somashekar) ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಈ ಬಾರಿ ಇಂಗ್ಲೀಷ್ ನಲ್ಲಿ ಆಹ್ವಾನ ಪತ್ರಿಕೆ ಇರಲಿದೆ.  ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ದಸರಾ ಉದ್ಘಾಟನೆಯಲ್ಲಿ ಭಾಗಿಯಾಗುವುದರಿಂದ ಮೊದಲ ದಿನದ ಆಹ್ವಾನ ಪತ್ರಿಕೆ (Invitation letter) ಇಂಗ್ಲಿಷ್ ನಲ್ಲಿ (English) ಮುದ್ರಣ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ರು. ರೈತ ಹಾಗೂ ಗ್ರಾಮೀಣಾ ದಸರಾ (Raita and Gramina Dasara) ಸೆಪ್ಟಂಬರ್ 23ಕ್ಕೆ ಆರಂಭಗೊಂಡು‌ 25ಕ್ಕೆ ಅಂತ್ಯವಾಗಲಿದೆ. ಈ ಕಾರ್ಯಕ್ರಮವನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ (BC Patil) ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದ್ರು.

8 ದಿನಗಳ ಕಾಲ ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ 

8 ದಿನಗಳ ಕಾಲ ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. 26ಕ್ಕೆ ಯೋಗ ದಸರಾ ನಡೆಯಲಿದ್ದು, 7 ದಿನಗಳ ಯೋಗ ದಸರಾ ನಡೆಯಲಿದೆ ಎಂದು ಎಸ್​.ಟಿ ಸೋಮಶೇಖರ್​ ತಿಳಿಸಿದ್ದಾರೆ. 10 ದಿನಗಳ ಆಹಾರ ಮೇಳ ನಡೆಯಲಿದೆ.

ಅಪ್ಪು ನೆನಪಿಗಾಗಿ ಪುನೀತ್​ ಹಾಡಿನ ಕಾರ್ಯಕ್ರಮ

27ರಿಂದ ಯುವ ದಸರಾ ಕಾರ್ಯಕ್ರಮ ಶುರುವಾಗಲಿದ್ದು, ಯುವ ಜನರಿಗೆ ರಂಗು ತುಂಬಲಿದೆ. 7 ದಿನಗಳ ಕಾಲ ಯುವ ದಸರಾ ನಡೆಯಲಿದೆ. ಒಂದು ದಿನ ಅಪ್ಪು ಹಾಡಿಗೆ ಮೀಸಲಿಡಲಾಗಿದೆ ಎಂದು ಎಸ್​.ಟಿ ಸೋಮಶೇಖರ್​ ತಿಳಿದ್ರು. ಎಲ್ಲರ ಒತ್ತಾಯದ ಮೇರೆಗೆ ಅಪ್ಪು ನೆನಪಿಗಾಗಿ ಅಪ್ಪು ಹಾಡಿನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಚಲನಚಿತ್ರೋತ್ಸವ ಕಾರ್ಯಕ್ರಮ

ಯುವ ದಸರಾ ಉದ್ಘಾಟಕರು ಸೇರಿದಂತೆ ಕಾರ್ಯಕ್ರಮದ ಕುರಿತ ಸೋಮವಾರ ಅಂತಿಮ ಪಟ್ಟಿ ಸಿದ್ದವಾಗಲಿದೆ. ಚಲನಚಿತ್ರೋತ್ಸವ ಕಾರ್ಯಕ್ರಮವನ್ನ ಅಶ್ವಿನಿ ಪುನೀತ್ ರಾಜ್ ಕುಮಾರ್ ಉದ್ಘಾಟಿಸಲಿದ್ದಾರೆ. ಬೆಟ್ಟದ ಹೂ ಸಿನಿಮಾವನ್ನ ಶಕ್ತಿಧಾಮದ ಮಕ್ಕಳೊಂದಿಗೆ ನೋಡಲಿದ್ದಾರೆ ಎಂದು ಎಸ್​.ಟಿ ಸೋಮಶೇಖರ್​ ತಿಳಿಸಿದ್ರು.

ಇದನ್ನೂ ಓದಿ: Mysuru Dasara 2022: ಯುವ ಸಂಭ್ರಮಕ್ಕೆ ರಂಗು ತುಂಬಿದ ಡಾಲಿ ಧನಂಜಯ್​; ಕುಣಿದು ಕುಪ್ಪಳಿಸಿದ ಸಚಿವ ಸೋಮಶೇಖರ್​

[caption id="attachment_837050" align="alignnone" width="1600"]Karnataka Tourism Corporation with 13 tourist package for dasara ಸಾಂದರ್ಭಿಕ ಚಿತ್ರ[/caption]

ರಾಷ್ಟ್ರಪತಿಗಳು ಆಗಮನ ಹಿನ್ನೆಲೆ ಟೈಟ್​ ಸೆಕ್ಯೂರಿಟಿ

ರಾಷ್ಟ್ರಪತಿಗಳು ದಸರಾ ಉದ್ಘಾಟನೆಗೆ ಬರುತ್ತಿರುವ ಹಿನ್ನಲೆ. ವೇದಿಕೆ ಮೇಲೆ ಯಾರು ಇರಬೇಕೆಂದು ಜಿಲ್ಲಾಧಿಕಾರಿಗಳು ನಿರ್ಧರಿಸುತ್ತಾರೆ. ಈಗಾಗಲೇ ಸ್ಥಳೀಯ ಶಾಸಕರು, ಸಚಿವರಿಗೆ ಅವಕಾಶ ಕೊಡಬೇಕೆಂದು ರಾಷ್ಟ್ರಪತಿ ಕಚೇರಿಗೆ ಮಾಹಿತಿ ನೀಡಿದ್ದಾರೆ. ಈ ಹಿಂದೆ 43 ಜನರು ವೇದಿಕೆಯಲ್ಲಿರುತ್ತಿದ್ದರು. ಈ ಬಾರಿ ಕೇವಲ 10 ಜನರಿಗೆ ಮಾತ್ರ ವೇದಿಕೆ ಮೇಲೆ ಅವಕಾಶ ಅಂತಿದ್ದಾರೆ.

ಗೋಲ್ಡ್ ಪಾಸ್​ ನೀಡುವಂತೆ ಒತ್ತಡ

ಗೋಲ್ಡ್ ಪಾಸ್​ ನೀಡುವಂತೆ ಒತ್ತಡ ಹೆಚ್ಚಾಗಿದೆ. ಅರಮನೆಯಲ್ಲಿ ದಸರಾ ವೀಕ್ಷಣೆ ಹಾಗೂ ಪಂಚಿನ ಕವಾಯತು ಮೈದಾನಕ್ಕೆ ಪಾಸ್ ವ್ಯವಸ್ಥೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಎಷ್ಟು ಪಾಸ್ ಕೊಡಬೇಕು ಎಂಬುದು ತೀರ್ಮಾನಿಸಲಾಗುವುದು. ದಸರಾ ಉದ್ಘಾಟನೆ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇರುತ್ತದೆ. ಎರಡೆರಡು ಸಾವಿರ ಜನರಿಗೆ ಅವಕಾಶ ಕೊಡುವ ಸಾಧ್ಯತೆ ಇದೆ.

ಇದನ್ನೂ ಓದಿ: Mysore Dasara: ಭರ್ಜರಿಯಾಗಿ ರೆಡಿಯಾಗ್ತಿದೆ ಅಭಿಮನ್ಯು ಆ್ಯಂಡ್​ ಟೀಂ, ಇಲ್ಲಿದೆ ಗಜಪಡೆ ಊಟದ​ ಮೆನು

ಈ‌ ಬಾರಿ ದಸರಾ ಪಾಸ್ ನಲ್ಲಿ ಗೊಂದಲ ಆಗುವುದಿಲ್ಲ. ಎಂಎಲ್ಎ, ಎಂ.ಪಿ, ಸಂಸದರು ಪಾಲಿಕೆ ಸದಸ್ಯರಿಗೆ ಎಷ್ಟು ಪಾಸ್ ಕೊಡಬೇಕು ಎಂಬುದನ್ನ ತೀರ್ಮಾನ ಮಾಡುತ್ತೇವೆ. ಅವರು ಕೇಳಿದಷ್ಟು ಪಾಸ್ ಕೊಡುವುದಿಲ್ಲ. ನನ್ನ ಕ್ಷೇತ್ರದ ಜನರಿಗೆ ಪಾಸ್ ಕೊಡುವುದಿಲ್ಲ. ನಾನು ಈಗಾಗಲೇ ಕ್ಷೇತ್ರದ ಜನರಿಗೆ ದಸರಾ ಜಂಬೂಸವಾರಿ ಹಾಗೂ ಪಂಚಿನ ಕವಾಯತು ಕಾರ್ಯಕ್ರಮದ ಪಾಸ್ ಕೇಳಬೇಡಿ ಎಂದಿದ್ದೇನೆ. ಹಿಂದೆ ಏನೆಲ್ಲಾ ಗೊಂದಲಗಳಾಗಿದೆ ನನಗೆ ತಿಳಿದಿದೆ ಎಂದು ಎಸ್​ ಟಿ ಸೋಮಶೇಖರ್​ ಹೇಳಿದ್ದಾರೆ.
Published by:ಪಾವನ ಎಚ್ ಎಸ್
First published: