• Home
  • »
  • News
  • »
  • state
  • »
  • Mysuru Dasara 2022: ಕನ್ನಡದಲ್ಲಿಯೇ ದಸರಾ ಶುಭಾಶಯ ತಿಳಿಸಿದ ರಾಷ್ಟ್ರಪತಿಗಳು; ಅರಮನೆಯಲ್ಲಿ ಖಾಸಗಿ ದರ್ಬಾರ್

Mysuru Dasara 2022: ಕನ್ನಡದಲ್ಲಿಯೇ ದಸರಾ ಶುಭಾಶಯ ತಿಳಿಸಿದ ರಾಷ್ಟ್ರಪತಿಗಳು; ಅರಮನೆಯಲ್ಲಿ ಖಾಸಗಿ ದರ್ಬಾರ್

ದಸರಾ ಉದ್ಘಾಟನೆ

ದಸರಾ ಉದ್ಘಾಟನೆ

ದಸರಾ ಉದ್ಘಾಟನೆ ಬಳಿಕ ಮಾತನಾಡಿದ ರಾಷ್ಟ್ರಪತಿಗಳು ಕನ್ನಡದಲ್ಲಿಯೇ ಮಾತು ಆರಂಭಿಸಿ, ದಸರಾ ಹಬ್ಬದ ಶುಭಾಶಯ ತಿಳಿಸಿದರು. ತಾಯಿ ಚಾಮುಂಡೇಶ್ವರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ಇಲ್ಲಿಗೆ ಆಗಮಿಸಿದ ಎಲ್ಲ ಸಹೋದರಿಯರಿಗೆ ನಾನು ನಮಸ್ಕಾರ ಹೇಳುತ್ತೇನೆ‌.

  • Share this:

ವಿಶ್ವ ವಿಖ್ಯಾತ ಮೈಸೂರು ದಸರಾಗೆ (Mysuru Dasara 2022) ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಚಾಲನೆ ನೀಡಿದರು. ಇತ್ತ ಅರಮನೆಯಲ್ಲಿ ಖಾಸಗಿ ದರ್ಬಾರ್ (Darbar) ನಡೆಯಿತು. ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರು 7ನೇ ಬಾರಿ ಖಾಸಗಿ ದರ್ಬಾರ್ ನಡೆಸಿದರು. ಬೆಳಗ್ಗೆ 11.15ರಿಂದ ಆರಂಭವಾದ ಖಾಸಗಿ ದರ್ಬಾರ್ 45 ನಿಮಿಷಗಳಲ್ಲಿ ಮುಕ್ತಾಯವಾಯ್ತು. ಸಾಂಪ್ರದಾಯಿಕ ರಾಜ ಪೋಷಾಕಿನಲ್ಲಿ‌ ನವರಾತ್ರಿ ದರ್ಬಾರ್ ನಡೆಸಿದರು. ರಾಜಮನೆತನದ ಪಟ್ಟದ ಕತ್ತಿಯೊಂದಿಗೆ ಸಿಂಹಾಸನ ಅಲಂಕರಿಸಿದರು. ದರ್ಬಾರ್ ಸಂದರ್ಭದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ (Pramodadevi Wadiyar), ರಾಜಕುಮಾರಿ ತ್ರಿಷಿಕಾ (Trishika Wadiyar) ಹಾಜರಿದ್ದರು. ಇತ್ತ ರಾಷ್ಟ್ರಪತಿಗಳ ಆಗಮನ ಹಿನ್ನೆಲೆ ಬೆಳಗ್ಗೆ 11.30 ರವೆಗೆ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರನ್ನು ನಿರ್ಬಂಧಿಸಲಾಗಿತ್ತು. 11.30ರ ನಂತರ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ.


ಕನ್ನಡದಲ್ಲಿಯೇ ಶುಭಾಶಯ ತಿಳಿಸಿದ ರಾಷ್ಟ್ರಪತಿಗಳು


ದಸರಾ ಉದ್ಘಾಟನೆ ಬಳಿಕ ಮಾತನಾಡಿದ ರಾಷ್ಟ್ರಪತಿಗಳು ಕನ್ನಡದಲ್ಲಿಯೇ ಮಾತು ಆರಂಭಿಸಿ, ದಸರಾ ಹಬ್ಬದ ಶುಭಾಶಯ ತಿಳಿಸಿದರು. ತಾಯಿ ಚಾಮುಂಡೇಶ್ವರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ಇಲ್ಲಿಗೆ ಆಗಮಿಸಿದ ಎಲ್ಲ ಸಹೋದರಿಯರಿಗೆ ನಾನು ನಮಸ್ಕಾರ ಹೇಳುತ್ತೇನೆ‌. ನಾಡಹಬ್ಬ ದಸರಾ ಅಂಗವಾಗಿ ರಾಜ್ಯದ ಹಾಗೂ ಮೈಸೂರಿಗರಿಗೆ ನಾನು ಶುಭಾಶಯ ಕೋರುತ್ತೇನೆ. ಮಹಿಷಾಸುರನ್ನ ಸಂಹಾರ ಮಾಡಿದ ಪುಣ್ಯ ಕ್ಷೇತ್ರ ಇದು‌. ಇದರಿಂದ ನಾಡಹಬ್ಬ ದಸರಾವನ್ನ ಆಚರಣೆ ಮಾಡುತ್ತಾರೆ.


ಮೈಸೂರು ದಸರಾ ಉದ್ಘಾಟನೆ


ಧಾರ್ಮಿಕತೆಯ ಆಚರಣೆ ಕರ್ನಾಟಕದಲ್ಲಿ ಸಾಕಷ್ಟು ನಡೆದುಕೊಂಡು ಬಂದಿದೆ. ಬಸವಣ್ಣ ಅವರು ಅನುಭವ ಮಂಟಪ ಸ್ಥಾಪಿಸಿ ಎಲ್ಲರನ್ನ ಒಗ್ಗೂಡಿಸುವ ಕೆಲಸ ಮಾಡಿದರು‌. ಸಾಮಾಜಿಕ ಹಾಗೂ ಆಧ್ಯಾತ್ಮಿಕತೆಗೆ ಹೆಚ್ಚಿನ ಆದ್ಯತೆ ನೀಡಿದರು. ಕರ್ನಾಟಕ ಭಕ್ತಿ, ಸಮಾನತೆ, ಆದರ್ಶಕ್ಕೆ ಸಾಕ್ಷಿಯಾಗಿದೆ‌. ರಾಣಿ ಚೆನ್ನಮ್ಮ, ಅಬ್ಬಕ್ಕರಂತಹ ವೀರ ವನಿತೆಯರಿದ್ದಾರೆ. ಇಂತಹ ಐತಿಹಾಸಿಕ ಕಾರ್ಯಕ್ರಮಕ್ಕೆ ನನಗೆ ಆಮಂತ್ರಣ ನೀಡಿದ ಸಿಎಂ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.


ಬೊಮ್ಮಾಯಿ ಸರ್ಕಾರದ ಬಗ್ಗೆ ಮೆಚ್ಚುಗೆ ಮಾತುಗಳು


ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರ್ಕಾರ ಸರ್ವರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕರ್ನಾಟಕದ ಕೀರ್ತಿಯನ್ನು ವಿಶ್ವವ್ಯಾಪ್ತಿಗೆ ಹರಡಿದೆ. ರಾಜ್ಯ ಸರ್ಕಾರ ಸಾರ್ಟ್‌ಅಪ್‌ಗಳಿಗೆ ಪ್ರೋತ್ಸಾಹ ನೀಡಿದೆ. ನೀತಿ ಆಯೋಗದ 2020-2021ರ ಅಂಕಿ ಅಂಶಗಳ ಪ್ರಕಾರ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಪ್ರಾಥಮಿಕ ಶಿಕ್ಷಣದ ನೋಂದಣಿಯಲ್ಲಿ ಶೇ. 100ರಷ್ಟು ಸಾಧನೆ ಮಾಡಿದೆ. ಗ್ರಾಮೀಣ ಸಡಕ್ ಯೋಜನೆಯ ಪ್ರಗತಿಯಲ್ಲೂ ಶೇ. 100 ರಷ್ಟು ಪ್ರಗತಿ ಸಾಧಿಸಿದೆ.  ರಾಜ್ಯದ ನಿರಂತರ ವಿಕಾಸಕ್ಕೆ ಶ್ರಮಿಸುತ್ತಿದೆ ಎಂದು ಸರ್ಕಾರದ ಬಗ್ಗೆ ರಾಷ್ಟ್ರಪತಿಗಳು ಮೆಚ್ಚುಗೆ ಮಾತುಗಳನ್ನು ಆಡಿದರು.


ಮೈಸೂರು ದಸರಾ ಉದ್ಘಾಟನೆ


ಇದನ್ನೂ ಓದಿ:  Mysuru Dasara 2022: ನಾಡಹಬ್ಬ ದಸರಾಗೆ ಚಾಲನೆ ನೀಡಿದ ರಾಷ್ಟ್ರಪತಿಗಳು


ದಸರಾ ಆಚರಣೆ ಬಗ್ಗೆ ಸಿಎಂಮಾತು  


ದಸರಾ ಉದ್ಘಾಟನೆ ಬಳಿಕ ವೇದಿಕೆಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಈ ಬಾರಿ ದಸರಾ ಹಲವಾರು ವಿಶೇಷವಾಗಿ ಕೂಡಿದೆ. ಕಳೆದೆರಡು ವರ್ಷಗಳಲ್ಲಿ ಈ ಬಾರಿ ಗತವೈಭವವನ್ನ ಸೃಷ್ಠಿಸುವ ರೀತಿ ಆಚರಣೆ ಮಾಡಲಾಗುತ್ತಿದೆ. ನಮ್ಮ ನಾಡಿನ ಸಾಮಾನ್ಯ ಜನರು, ರೈತರು ಈ ದಸರಾವನ್ನ ಆಚರಣೆ ಮಾಡುತ್ತಾರೆ. ಈ ನಾಡು ಸುಭಿಕ್ಷವಾಗಿರಲಿ ಎಂದು ದಸರಾ ಆಚರಣೆ ಮಾಡುತ್ತವೆ ಎಂದು ತಿಳಿಸಿದರು.


ಚಾಮುಂಡೇಶ್ವರಿ ನಾಡಿಗೆ ಶಕ್ತಿಯನ್ನ ನೀಡಲಿದ್ದಾಳೆ. ನೈಸರ್ಗಿಕ ಸವಾಲುಗಳನ್ನ ಸಮರ್ಪಕವಾಗಿ ಎದುರಿಸಿದ್ದನ್ನು ತಾವೆಲ್ಲ ಗಮನಿಸಿದ್ದೀರಿ. ರಾಷ್ಟ್ರಪತಿಗಳು ಆಗಮಿಸಿರೋದು ಸಂತೋಷದ ವಿಚಾರ. ಈ ಹಿಂದೆ ಯಾವಾಗಲೂ ರಾಷ್ಟ್ರಪತಿಗಳು ದಸರಾ ಉದ್ಘಾಟನೆಗೆ ಬಂದಿದ್ದು ಇತಿಹಾಸ ಇಲ್ಲ. ಅತ್ಯಂತ ಸಂತೋಷದಿಂದ ದಸರಾ ಉದ್ಘಾಟಿಸಲು ರಾಷ್ಟ್ರಪತಿಗಳು ಒಪ್ಪಿದ್ದರು. ರಾಷ್ಟ್ರಪತಿ ಆದ ಬಳಿಕ ವಿಸಿಟ್ ಮಾಡ್ತಿರೋ ಮೊದಲ ರಾಜ್ಯ ಕರ್ನಾಟಕ ಎಂದು ದ್ರೌಪದಿ ಮುರ್ಮು ತಿಳಿಸಿದರು.


President Draupadi Murmu inaugurated Dasara mrq
ರಾಷ್ಟ್ರಪತಿಗಳನ್ನು ಸ್ವಾಗತಿಸಿದ ಸಿಎಂ ಬೊಮ್ಮಾಯಿ


ಕನ್ನಡ ನಾಡನ್ನ ಸರ್ವ ಶ್ರೇಷ್ಠವಾಗಿ ಕಟ್ಟುವಂತ ಕೆಲಸ ಮಾಡಬೇಕಾಗಿದೆ. ಸರ್ವರಿಗೂ ಒಳ್ಳೆಯದನ್ನ ಬಯಸುವ ಚಿಂತನೆಯನ್ನ ಆ ತಾಯಿ ನಮಗೆ ನೀಡಲಿ. ಇನ್ಮುಂದೆ ಯಾವುದೇ ರೀತಿಯ ಕೋವಿಡ್ ನಂತಹ ಮಾರಕ ರೋಗಗಳು ಬರದಂತೆ ತಾಯಿ ಕಾಪಾಡಲಿ ಎಂದು ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದರು.


ಇದನ್ನೂ ಓದಿ:  Pitru Paksha: ಪದೇ ಪದೇ ಕೆಟ್ಟು ಹೋಗುವ ಸರ್ಕಾರಿ ಕಚೇರಿಗಳ ಸರ್ವರ್​​ಗಳಿಗೆ ಪಿಂಡ ಇಟ್ಟ ಅರ್ಚಕ


ದಸರಾದಲ್ಲಿ ಭಾಗಿಯಾಗಿದ್ದು ಖುಷಿ ತಂದಿದೆ


ಇದೇ ವೇಳೆ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ಅವರು ಕನ್ನಡದಲ್ಲಿ ನೆರೆದವರಿಗೆ ನಮಸ್ಕಾರ ಹೇಳಿ ದಸರಾ ಹಬ್ಬದ ಶುಭಾಶಯ ತಿಳಿಸಿದರು. ಚಾಮುಂಡೇಶ್ವರಿ ಅಮ್ಮನ ದರ್ಶನ ಮಾಡಿದ್ದು ಖುಷಿ ತಂದಿದೆ. ರಾಷ್ಟ್ರಪತಿಗಳಿಗೆ ನಾವು ಕೊಟ್ಟ ಆಮಂತ್ರಣಕ್ಕೆ ಮೆಚ್ಚಿ ಬಂದಿದ್ದು ಖುಷಿ ತಂದಿದೆ. ಅವರಿಗೆ ನಾವು ಅಬಾರಿಯಾಗಿದ್ದೇವೆ. ನಾನು ಭಾಗ್ಯಶಾಲಿ ಇದ್ದೇನೆ, ನೇರವಾಗಿ ದಸರಾದಲ್ಲಿ ಭಾಗಿಯಾಗಿದ್ದೇನೆ. ಕೇವಲ ಟಿವಿಯಲ್ಲಿ ನೋಡಿ ಖುಷಿ ಪಡುತ್ತಿದ್ದೆ. ಆದರೆ ಇಂದು ರಾಷ್ಟ್ರಪತಿಗಳ ಜೊತೆ ದೇವಿಯ ದರ್ಶನ ಪಡೆದಿದ್ದು, ಸಂಪನ್ನನಾಗಿದ್ದೇನೆ.ಈ ಸಂಪ್ರದಾಯ ಹೀಗೆ ಮುಂದುವರೆಯಲಿ ಎನ್ನುವುದು ನನ್ನ ಆಶಯ ಎಲ್ಲರಿಗೂ ಒಳಿತಾಗಲಿ, ದೇಶದಲ್ಲಿ ನಾಡಲ್ಲಿ ಶಾಂತಿ ನೆಲಸಲಿ ದೇವಿ ಕಾಪಾಡಲಿ ಎಂದು ಪ್ರಾರ್ಥಿಸಿದರು.

Published by:Mahmadrafik K
First published: