Mysuru Dasara 2022: ಈ ಬಾರಿ ದಸರಾ ಗೋಲ್ಡ್ ಪಾಸ್ ಇಲ್ಲ; ನಾಳೆ ಗಜಪಡೆ ಪಯಣ ಶುರು

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಚಿವ ಎಸ್ .ಟಿ ಸೋಮಶೇಖರ್ (S.T Somashekhar), ಈ ಬಾರಿ ದಸರಾ ಗೋಲ್ಡ್ ಪಾಸ್ (Gold Pass) ಇರೋದಿಲ್ಲ ಎಂದು ಹೇಳಿದ್ದಾರೆ. ಗಣ್ಯರು  ಹಾಗೂ ವಿದೇಶಿಗರಿಗೆ ಗೋಲ್ಡ್​ ಪಾಸ್ ನೀಡಲಾಗುತ್ತಿತ್ತು. ಆದರೆ ಈ ಬಾರಿ ವಿವಿಐಪಿ ಪಾಸ್ ಹೊರತುಪಡಿಸಿ ಉಳಿದ ಎಲ್ಲಾ ಪಾಸ್‌ಗಳನ್ನು ರದ್ದು ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದ್ರು

ವಿಶ್ವವಿಖ್ಯಾತ ಮೈಸೂರು ಅರಮನೆ (ಚಿತ್ರ ಕೃಪೆ: Internet)

ವಿಶ್ವವಿಖ್ಯಾತ ಮೈಸೂರು ಅರಮನೆ (ಚಿತ್ರ ಕೃಪೆ: Internet)

  • Share this:
ಮೈಸೂರು (ಆ.06): ವಿಶ್ವವಿಖ್ಯಾತ ಮೈಸೂರು ದಸರಾ (Myosre Dasara) ಮಹೋತ್ಸವಕ್ಕೆ ಸಿದ್ಧತೆ ಆರಂಭವಾಗಿದೆ. ಈ ಬಾರಿ ಅದ್ಧೂರಿಯಾಗಿ ದಸರಾ ನಡೆಸಲು ಸರ್ಕಾರ ನಿರ್ಧಾರ ಮಾಡಿದೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಚಿವ ಎಸ್ .ಟಿ ಸೋಮಶೇಖರ್ (S.T Somashekhar), ಬಾರಿ ದಸರಾ ಗೋಲ್ಡ್ ಪಾಸ್ (Gold Pass) ಇರೋದಿಲ್ಲ ಎಂದು ಹೇಳಿದ್ದಾರೆ. ಗಣ್ಯರು  ಹಾಗೂ ವಿದೇಶಿಗರಿಗೆ ಗೋಲ್ಡ್​ ಪಾಸ್ ನೀಡಲಾಗುತ್ತಿತ್ತು. ಆದರೆ ಈ ಬಾರಿ ವಿವಿಐಪಿ ಪಾಸ್ ಹೊರತುಪಡಿಸಿ ಉಳಿದ ಎಲ್ಲಾ ಪಾಸ್‌ಗಳನ್ನು ರದ್ದು ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದ್ರು. ಪಾಸ್‌ಗಳಿಂದ ಗೋಲ್ಮಾಲ್ (Golmaal) ಉಂಟಾಗುವ ಆರೋಪಗಳಿವೆ. ಅಂತಹ ಘಟನೆಗಳಿಗೆ ಬಾರಿ ಅವಕಾಶ ಇಲ್ಲ. ಪಾಸಿನ ವಿಸ್ತೃತವಾದ ಚರ್ಚೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಸಚಿವ ಸೋಮಶೇಖರ್ ಹೇಳಿದ್ದಾರೆ.

ನಾಳೆ ದಸರಾ ಗಜಪಡೆ ಪ್ರಯಾಣ ಶುರು

ನಾಳೆ ದಸರಾ ಗಜಪಡೆ ಪಯಣ ಶುರುವಾಗಲಿದೆ ಎಂದು ಸಚಿವ ಎಸ್​ಟಿ ಸೋಮಶೇಖರ್​ ಹೇಳಿದ್ದಾರೆ.   ಆನೆಗಳನ್ನು ವೀರನ ಹೊಸಹಳ್ಳಿಯಿಂದ ಕರೆ ತರಲಾಗುತ್ತೆ. ಈ ಬಾರಿ 14 ಆನೆಗಳನ್ನು ಆಯ್ಕೆ ಮಾಡಿದ್ದು, 3 ಆನೆ ಶ್ರೀರಂಗಪಟ್ಟಣ ದಸರಾದಲ್ಲಿ ಪಾಲ್ಗೊಳ್ಳುತ್ತೆ. ಈ ಬಾರಿ ಚಾಮರಾಜನಗರ ದಸರಾದಲ್ಲೂ ಆನೆ ಪಾಲ್ಗೊಳ್ಳುತ್ತೆ. ದಸರಾ ಉದ್ಘಾಟಕರ ತೀರ್ಮಾನ ಸಿಎಂ‌ ಬಸವರಾಜ ಬೊಮ್ಮಾಯಿ ನಿರ್ಧಾರ ಮಾಡುತ್ತಾರೆ ಎಂದು ಎಸ್​.ಟಿ ಸೋಮಶೇಖರ್​ ಹೇಳಿದ್ದಾರೆ.

ಅಭಿಮನ್ಯು ನೇತೃತ್ವದಲ್ಲೇ ಅಂಬಾರಿ ಮೆರವಣಿಗೆ

ಈ ಬಾರಿಯೂ ಗಜನಾಯಕ ಅಭಿಮನ್ಯು ನೇತೃತ್ವದಲ್ಲೇ ವಿಶ್ವವಿಖ್ಯಾತ ಅಂಬಾರಿ ಮೆರವಣಿಗೆ ನೆರವೇರಲಿದೆ. 57 ವರ್ಷದ ಅಭಿಮನ್ಯು ಹಿರಿಯ ಆನೆಯಾಗಿದ್ದು, ಈಗಾಗಲೇ ಅಂಬಾರಿ ಹೊತ್ತು ಅನುಭವ ಇದೆ. ಅಲ್ಲದೇ ಮಾವುತನ ಮಾತು ಕೇಳುವ ಆನೆ ಅಂತಾನೇ ಹೆಸರು ಪಡೆದಿರುವ ಅಭಿಮನ್ಯು, ಇತರೇ ಆನೆಗಳನ್ನು ಸಂಭಾಳಿಸಲಿದೆ.

ಇದನ್ನೂ ಓದಿ: Mysore Dasara: ಅಭಿಮನ್ಯು ಸಾರಥ್ಯದಲ್ಲೇ ಅಂಬಾರಿ ಮೆರವಣಿಗೆ, ದಸರಾ ಗಜಪಡೆಗಳ ಪಟ್ಟಿ ಬಿಡುಗಡೆ

ಗಜಪಡೆಯಲ್ಲಿ ಯಾರ್ಯಾರು ಇದ್ದಾರೆ?
 ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಈ ಬಾರಿ 14 ಆನೆಗಳು ಇರಲಿವೆ. ಅಂಬಾರಿ ಹೊರುವ ಅಭಿಮನ್ಯು(57), ಭೀಮ (22), ಗೋಪಾಲಸ್ವಾಮಿ (39), ಅರ್ಜುನ (63), ವಿಕ್ರಮ (59), ಧನಂಜಯ (44), ಕಾವೇರಿ (45), ಗೋಪಿ (41), ವಿಜಯ (63), ಚೈತ್ರ (49), ಲಕ್ಷ್ಮೀ (21) ಸೇರಿದಂತೆ 14 ಆನೆಗಳಿವೆ.




ಗಜಪಡೆಯಲ್ಲಿ ಹಲವು ವಿಶೇಷತೆ

ಇನ್ನು ಇದರಲ್ಲಿ ಬಂಡೀಪುರದ ರಾಮಪುರ ಆನೆ ಶಿಬಿರದ ಪಾರ್ಥಸಾರಥಿ (18), ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದ ಶ್ರೀರಾಮ (40) ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದ ಮಹೇಂದ್ರ (39) ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿವೆ. ಇದರಲ್ಲಿ ಪಾರ್ಥಸಾರಥಿ ಅತಿ ಚಿಕ್ಕ ವಯಸ್ಸಿನ ಆನೆಯಾಗಿದೆ.


ವಿಶ್ವ ಮಟ್ಟದಲ್ಲಿ ಮೈಸೂರು ದಸರಾಗೆ ಪ್ರಚಾರ

ದಸರಾ ತಯಾರಿ ಹಾಗೂ ಉಸ್ತುವಾರಿಗೆ ಸಂಬಂಧಿಸಿದಂತೆ 16 ಕಮಿಟಿಗಳನ್ನು ರಚಿಸಿ, ಐಎಎಸ್ ಅಧಿಕಾರಿ ಒಳಗೊಂಡಂತೆ ಸದಸ್ಯರನ್ನು ಸೇರಿಸಲಾಗುತ್ತೆ. ಜೊತೆಗೆ ಈ ಬಾರಿಯ ಮೈಸೂರು ದಸರಾಗೆ ವಿಶ್ವ ಮಟ್ಟದಲ್ಲಿ ಪ್ರಚಾರ ಸಿಗುವಂತೆ ನೋಡಿಕೊಳ್ಳಲಾಗುತ್ತೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಅದ್ಧೂರಿ ದಸರಾ ಆಚರಣೆ ಇರಲಿದೆ ಎಂದು ಉಸ್ತುವಾರಿ ಸಚಿವ ಎಸ್‌.ಟಿ ಸೋಮಶೇಖರ್ ಹೇಳಿದ್ದಾರೆ.

ಇದನ್ನೂ ಓದಿ: Srirangapatna: ಶ್ರೀರಂಗಪಟ್ಟಣ ಮಸೀದಿ ವಿವಾದಕ್ಕೆ ಮತ್ತೆ ಜೀವ, ಮುಸ್ಲಿಮರಿಂದ ನಾಳೆ ಬೃಹತ್ ಜಾಥಾ

ಸದ್ಯದಲ್ಲಿ ಮೇಯರ್​ ಕುರಿತು ನಿರ್ಧಾರ

ಆಗಸ್ಟ್ 9ಕ್ಕೆ ಮೈಸೂರು ಮೇಯರ್ ಸ್ಥಾನದ ಮೀಸಲಾತಿ ಪ್ರಕಟ ಆಗಲಿದೆ. ಈ ಬಾರಿ ಮೈಸೂರು ಮೇಯರ್ ಯಾರಾಗಬೇಕು ಎಂಬುದನ್ನು ಮುಂದೆ ತೀರ್ಮಾನ ಆಗುತ್ತೆ ಎಂದು ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್ ಹೇಳಿಕೆ. ಸದ್ಯ ಬಿಜೆಪಿ, ಜೆಡಿಎಸ್ ಮೈತ್ರಿಯಲ್ಲಿರುವ ಪಾಲಿಕೆಯಲ್ಲಿ ಈ ಬಾರಿ ಜೆಡಿಎಸ್‌ನಿಂದ ಮೇಯರ್ ಆಯ್ಕೆ ಆಗಬೇಕಿದೆ.
Published by:Pavana HS
First published: