• Home
  • »
  • News
  • »
  • state
  • »
  • Mysuru Dasara 2022: ಇಂದು ದಸರಾ ಮಹೋತ್ಸವಕ್ಕೆ ಚಾಲನೆ; ಇಂದು ಯಾವ ಕಾರ್ಯಕ್ರಮ? ಇಲ್ಲಿದೆ ಸಂಪೂರ್ಣ ಮಾಹಿತಿ

Mysuru Dasara 2022: ಇಂದು ದಸರಾ ಮಹೋತ್ಸವಕ್ಕೆ ಚಾಲನೆ; ಇಂದು ಯಾವ ಕಾರ್ಯಕ್ರಮ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂದು ಪಟ್ಟದ ಆನೆ, ಹಸು, ಒಂಟೆ, ಕುದುರೆಗಳಿಗೆ ಪೂಜೆ ನಡೆಯಲಿದೆ.  8ನೇ ಬಾರಿಗೆ ಯದುವೀರ್ ರಿಂದ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

  • Share this:

ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಇಂದು ಮೈಸೂರು ದಸರಾಗೆ (Mysuru Dasara) ಚಾಲನೆ ನೀಡಲಿದ್ದಾರೆ. ರಾಷ್ಟ್ರಪತಿಯಾದ ನಂತರ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ (Karnataka) ಆಗಮಿಸುತ್ತಿರುವ ದ್ರೌಪದಿ ಮುರ್ಮು ಇಂದು ಮೈಸೂರಿಗೆ ಬಂದಿಳಿಯಲಿದ್ದಾರೆ. ಬೆಳಗ್ಗೆ 9 ಗಂಟೆಗೆ ರಾಷ್ಟ್ರಪತಿ ಆಗಮಿಸಲಿದ್ದು, ಚಾಮುಂಡಿ ಬೆಟ್ಟಕ್ಕೆ (Chamundi Hill) ತೆರಳಿ ದೇವಿ (Goddess Chamundeshwari) ದರ್ಶನ ಪಡೆದು, ಬೆಳಗ್ಗೆ 10ಕ್ಕೆ ದೇವಿಗೆ ಪುಷ್ಪಾರ್ಚನೆ ಮೂಲಕ ದಸರಾ ಮಹೋತ್ಸವವನ್ನ (Dasara Mahotsava) ಅದ್ಧೂರಿಯಾಗಿ ಉದ್ಘಾಟನೆ ಮಾಡಲಿದ್ದಾರೆ. ಇನ್ನು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಭಾನುವಾರ ರಾತ್ರಿಯೇ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಷ್ಟೇ ಅಲ್ಲದೆ ನಿನ್ನೆ ರಾತ್ರಿ ಮೈಸೂರಲ್ಲಿ ನೈಟ್​ ರೌಂಡ್ಸ್ ಹೊಡೆದು ಲೈಟಿಂಗ್ ಪರಿಶೀಲನೆ ಮಾಡಿದ್ರು. ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಎಲ್ಲಾ ಸಿದ್ಧತೆಗಳನ್ನು ಸಿಎಂ ಪರಿಶೀಲನೆ ಮಾಡಿದರು.


ಮೈಸೂರಿನಲ್ಲಿ ಭಾನುವಾರ ನಡೆದ ‘ಮೋದಿ ಯುಗ ಉತ್ಸವ’ದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ರು. ಸಿಎಂ ಬೊಮ್ಮಾಯಿಗೆ ಪೂರ್ಣ ಕುಂಭ ಸ್ವಾಗತ ಕೋರಲಾಯ್ತು. ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.


ರಾಜಕಾರಣದಲ್ಲಿ ಎರಡು ವಿಧಗಳಿವೆ. ಒಂದು ಅಭಿವೃದ್ಧಿ ಪರ ರಾಜಕಾರಣ. ಮತ್ತೊಂದು ಕಾಲು ಎಳೆಯುವ ರಾಜಕಾರಣ. ಅವರಿಗೆ ಅವಕಾಶ ಕೊಟ್ಟಾಗ ಏನು‌ ಮಾಡಲಿಲ್ಲ. ಈಗ ಬಡಾಯಿ ಕೊಚ್ಚಿಕೊಳ್ತಾರೆ ಅಂತ ಸಿಎಂ ಗುಡುಗಿದರು.


ವಿದ್ಯುತ್ ದೀಪಾಲಂಕಾರ ವಿಸ್ತರಣೆ


ಈ ಬಾರಿ ವಿದ್ಯುತ್ ದೀಪಾಲಂಕಾರವನ್ನ 90 ಕಿ.ಮೀ ಉದ್ದದಿಂದ 124 ಕಿ.ಮೀಗೆ ವಿಸ್ತರಿಸಲಾಗಿದೆ. 56 ವೃತ್ತಗಳಲ್ಲಿ ದೀಪಾಂಲಕಾರದ ವ್ಯವಸ್ಥೆ ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ದಸರಾ ಸರಳವಾಗಿ ನಡೆದಿತ್ತು. ಈ ಬಾರಿ ದಸರಾ ತನ್ನ ಗತವೈಭವ ಮರುಕಳಿಸುವ ರೀತಿ ಮಾಡಲಾಗಿದೆ.


Mysuru Dasara 2022 begins today mrq
ವಿದ್ಯುತ್ ದೀಪಾಲಂಕಾರ (ಫೋಟೋ ಕೃಪೆ: ಟ್ವಿಟರ್)


ಇದನ್ನೂ ಓದಿ:  Hubballi: ಮುರ್ಮು ಭೇಟಿ; ಕ್ಲೀನ್, ಗ್ರೀನ್ ಸಿಟಿಯಾಗಿ ಬಿಂಬಿಸಲು ಹರಸಾಹಸ, ಡ್ರೈನೇಜ್​​​​ಗಳಿಗೂ ಹಸಿರು ಹೊದಿಕೆ


ಮೈಸೂರು ದಸರಾ-ಇಂದು ಯಾವ ಕಾರ್ಯಕ್ರಮ?


ಮಧ್ಯಾಹ್ನ 12: ಕೈಗಾರಿಕಾ ದಸರಾ ಉದ್ಘಾಟನೆ


ಮಧ್ಯಾಹ್ನ 12:30 : ಶಿವರಾಜ್​ಕುಮಾರ್​ರಿಂದ ಚಲನಚಿತ್ರೋತ್ಸವ ಉದ್ಘಾಟನೆ


ಮಧ್ಯಾಹ್ನ12.30: ಫಲಪುಷ್ಪ ಪ್ರದರ್ಶನ ಉದ್ಘಾಟನೆ


ಮಧ್ಯಾಹ್ನ 1: ಆಹಾರ ಮೇಳ ಉದ್ಘಾಟನೆ


ಮಧ್ಯಾಹ್ನ 3:30: ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟನೆ


ಮಧ್ಯಾಹ್ನ 4:00:  ದಸರಾ ವಸ್ತು ಪ್ರದರ್ಶನ ಉದ್ಘಾಟನೆ


ಸಂಜೆ 5: ಯೋಗ ದಸರಾ ಉದ್ಘಾಟನೆ


ಸಂಜೆ 6: ಅರಮನೆ ವೇದಿಕೆ ಕಾರ್ಯಕ್ರಮ, ಸಿಎಂ ಉದ್ಘಾಟನೆ


ಸಂಜೆ‌ 6:30 : ವಿದ್ಯುತ್ ದೀಪಾಲಂಕಾರ ಉದ್ಘಾಟನೆ


ಇಂದು ದರ್ಬಾರ್ ಹಾಲ್‌ನಲ್ಲಿ ವಿಶೇಷ ಪೂಜೆ ಪುನಸ್ಕಾರ


ಇಂದು ಸಿಂಹಾಸನಕ್ಕೆ ವಜ್ರ ಖಚಿತ ಸಿಂಹದ ತಲೆ ಜೋಡಣೆ ಮಾಡಲಾಗುತ್ತದೆ. ನಂತರ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ಕಳಶ ತಂದು, ಚಾಮುಂಡಿ ತೊಟ್ಟಿಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಕಂಕಣ ಧಾರಣೆ ಮಾಡಲಿದ್ದಾರೆ. ಇಂದು ಪಟ್ಟದ ಆನೆ, ಹಸು, ಒಂಟೆ, ಕುದುರೆಗಳಿಗೆ ಪೂಜೆ ನಡೆಯಲಿದೆ.  8ನೇ ಬಾರಿಗೆ ಯದುವೀರ್ ರಿಂದ ಖಾಸಗಿ ದರ್ಬಾರ್ ನಡೆಸಲಿದ್ದಾರೆ.


Mysuru Dasara 2022 begins today mrq
ಸಿಂಹಾಸನ (ಫೋಟೋ ಕೃಪೆ: ಟ್ವಿಟರ್)


ಇದನ್ನೂ ಓದಿ:  Mohammed Haris Nalapad: ಯಾವನೋ, ಗೀವನೋ ಅಂದ್ರೆ ಸರಿ ಇರಲ್ಲ; ಏಕವಚನ ಬಳಸಿದ್ದ ನಲಪಾಡ್​ಗೆ ರೈತನ ಎಚ್ಚರಿಕೆ


ಕುದ್ರೋಳಿಯಲ್ಲಿ ದಸರಾ ಉತ್ಸವಕ್ಕೆ ಕ್ಷಣಗಣನೆ


ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ದಸರಾ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಬೆಳಗ್ಗೆ 11.15ಕ್ಕೆ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಉದ್ಘಾಟನೆಯಾಗಲಿದೆ. ಗಣಪತಿ, ಶಾರದಾಮಾತೆ, ನವದುರ್ಗೆಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ 9 ದಿನಗಳ ಕಾಲ ನವದುರ್ಗೆಯರ ಆರಾಧನೆ ನಡೆಯಲಿದೆ.


ಇನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ದಸರಾವನ್ನು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಉದ್ಘಾಟಿಸಲಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ, ಮಹಾಲಿಂಗ ನಾಯ್ಕ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು