Mysuru Dasara 2021: ಇಂದಿನಿಂದ ಆರಂಭ ದಸರೆಯ ವೈಭವ, ಸರಳ ದಸರೆಗೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಉದ್ಘಾಟನೆ

Dasara Festival: ಇಂದಿನಿಂದ 15ವರೆಗೆ ದಸರಾ ನಡೆಯಲಿದ್ದು,ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸಹ ಕಳೆದ ಬಾರಿಯಂತೆ ಸರಳವಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಮನೆ ಮನೆಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಇನ್ನು ಕಳೆದ ಬಾರಿಯಂತೆಯೆ ಈ ಬಾರಿ ಸಹ ಸರಳವಾಗಿ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಮಾರ್ಗಸೂಚಿಗಳನ್ನು(Dasara Guidelines) ಬಿಡುಗಡೆ ಮಾಡಲಾಗಿದೆ. 

ದಸರಾ ಉತ್ಸವಕ್ಕೆ ಚಾಲನೆ ನೀಡಿದ ಎಸ್​.ಎಂ.ಕೃಷ್ಣ

ದಸರಾ ಉತ್ಸವಕ್ಕೆ ಚಾಲನೆ ನೀಡಿದ ಎಸ್​.ಎಂ.ಕೃಷ್ಣ

  • Share this:
ವಿಶ್ವ ವಿಖ್ಯಾತ ಮೈಸೂರು ದಸರಾಗೆ(Mysuru Dasara) ವಿದ್ಯುಕ್ತ‌ ಚಾಲನೆ ನೀಡಲಾಗಿದ್ದು, ಚಾಮುಂಡೇಶ್ವರಿ ದೇವಿಗೆ  ಪುಷ್ಪಾರ್ಚನೆ ಮೂಲಕ‌ ಮಾಜಿ ಮುಖ್ಯಮಂತ್ರಿ  ಎಸ್.ಎಂ.ಕೃಷ್ಣ(S.M Krishna) ಈ ಬಾರಿ ದಸರಾಗೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ  ಸಿಎಂ ಬೊಮ್ಮಾಯಿ, ಸಚಿವರಾದ ಎಸ್.ಟಿ.ಸೋಮಶೇಖರ್, ಆರ್.ಅಶೋಕ್ , ಡಾ.ಕೆ.ಸುಧಾಕರ್, ಬಿ.ಸಿ.ಪಾಟೀಲ, ಸುನೀಲ್ ಕುಮಾರ್, ಶಿವರಾಂ ಹೆಬ್ಬಾರ್ ಸೇರಿದಂತೆ ಮೈಸೂರು ಭಾಗದ ಶಾಸಕರು, ಸಂಸದರು ಭಾಗಿಯಾಗಿದ್ದರು.  

ಇಂದಿನಿಂದ 15ವರೆಗೆ ದಸರಾ ನಡೆಯಲಿದ್ದು,ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸಹ ಕಳೆದ ಬಾರಿಯಂತೆ ಸರಳವಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಮನೆ ಮನೆಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಇನ್ನು ಕಳೆದ ಬಾರಿಯಂತೆಯೆ ಈ ಬಾರಿ ಸಹ ಸರಳವಾಗಿ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಮಾರ್ಗಸೂಚಿಗಳನ್ನು(Dasara Guidelines) ಬಿಡುಗಡೆ ಮಾಡಲಾಗಿದೆ. ಇನ್ನು ಈ ಬಾರಿ ಕೂಡ ಜಂಬೂ ಸವಾರಿ ಕೇವಲ ಅರಮನೆಗೆ ಮಾತ್ರ ಸೀಮಿತವಾಗಿದೆ.

ಮನುಕುಲಕ್ಕೆ ಬಂದ ದೊಡ್ಡ ಗಂಡಾಂತರ ಕೊರೊನಾ, ಈ ಗಂಡಾಂತರದಿಂದ ಪಾರು ಮಾಡಿ ಎಂದು ಚಾಮುಂಡಿದೇವಿಗೆ ಪೂಜೆ ಸಲ್ಲಿಸಿದ್ದೇವೆ ಎಂದು 411ನೇ‌ ಮೈಸೂರು ದಸರಾ ಉದ್ಘಾಟನೆ ಮಾಡಿದ ಬಳಿಕ ಎಸ್​.ಎಂ. ಕೃಷ್ಣ ಹೇಳಿಕೆ.  ದೊಡ್ಡ ಗೌರವ ನೀಡಿದ್ದೀರಿ ಎಂದು ಸಿಎಂ ಬೊಮ್ಮಾಯಿಗೆ ಧನ್ಯವಾದ ತಿಳಿಸಿದ ಅವರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಏನಿದೆ ಮಾರ್ಗಸೂಚಿಯಲ್ಲಿ? 

ಮೈಸೂರು ದಸರಾ ಬಿಟ್ಟು ರಾಜ್ಯದ ಯಾವುದೇ ಭಾಗದಲ್ಲಿ ಒಮ್ಮೆಲೆ 400 ಜನ ಸೇರುವಂತಿಲ್ಲ.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ.

ಆಯಾ ಜಿಲ್ಲೆಯ ಜಿಲ್ಲಾಡಳಿತ ಯಾವುದೇ ನಿಯಮಗಳನ್ನು ವಿಧಿಸುವ ಮುನ್ನ ಅದರ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ನೀಡಿರಬೇಕು.

ಇದನ್ನೂ ಓದಿ: ಇಂದು ನಾಡಹಬ್ಬ ದಸರಾ ಉದ್ಘಾಟನೆ; ಇಂದಿನಿಂದ 9 ದಿನಗಳ ಕಾಲ ಮೈಸೂರಿನಲ್ಲಿ ಸಡಗರ- ಸಂಭ್ರಮ!

ಸಾಮಾಜಿಕ ಅಂತರವಿಲ್ಲದೆ ಯಾವುದೇ ಕಾರ್ಯಕ್ರಮ ನಡೆಯುತ್ತಿರುವುದನ್ನ ಕಂಡು ಬಂದಲ್ಲಿ ಅದನ್ನು ನಿಷೇಧಿಸಲಾಗುತ್ತದೆ.

ಸರ್ಕಾರ ಹೊರಡಿಸಿರುವ ಕೊರೊನಾ ನಿಯಮಗಳನ್ನು ತಪ್ಪದೇ ಪಾಲನೆ ಮಾಡಬೇಕು.

ಯಾವುದೇ ರೀತಿಯ ಕಾನೂನು ಭಂಗ ಮಾಡದೇ ಶಾಂತಿಯಿಂದ ಹಬ್ಬ ಆಚರಣೆ ಮಾಡಬೇಕು.

ಈ ಬಾರಿ ಜಂಬೂಸವಾರಿಗೆ 8 ಆನೆಗಳು 

ಅಭಿಮನ್ಯು ನಾಯಕತ್ವದಲ್ಲಿ 8 ಆನೆಗಳು ಅರಮನೆ ಮೈದಾನ ಸೇರಲಿದೆ. ಕಳೆದ ವರ್ಷ ಕೇವಲ ಮೂರು ಗಂಡು ಮತ್ತು ಎರಡು ಹೆಣ್ಣು ಆನೆಗಳು ದಸರಾ ಆಚರಣೆಯಲ್ಲಿ ಭಾಗವಹಿಸಿದ್ದವು. ಈ ಬಾರಿ ಹೆಚ್ಚುವರಿಯಾಗಿ ಎರಡು ಗಂಡು ಮತ್ತು ಒಂದು ಹೆಣ್ಣು ಆನೆಯನ್ನು ಆ ಪಟ್ಟಿಗೆ ಸೇರಿಸಲಾಗಿದೆ. ಒಟ್ಟು 5 ಗಂಡು ಮತ್ತು 3 ಹೆಣ್ಣು ಆನೆಗಳು ಈ ಬಾರಿ ದಸರಾದಲ್ಲಿ ಭಾಗಿಯಾಗಲಿವೆ.

ಈ ಬಾರಿಯೂ ಅಭಿಮನ್ಯುವೇ ದಸರಾದ ಚಿನ್ನದ ಅಂಬಾರಿ ಹೊರಲಿದ್ದಾನೆ.  ಗೋಪಾಲಸ್ವಾಮಿ , ಆನೆಕಾಡು ಶಿಬಿರದ ವಿಕ್ರಮ, ದುಬಾರೆ ಶಿಬಿರದ ಕಾವೇರಿ, ಧನಂಜಯ, ನಾಗರಹೊಳೆಯ ದೊಡ್ಡಹರವೆ ಶಿಬಿರದ ಅಶ್ವತ್ಥಾಮ, ಬಂಡೀಪುರ ರಾಂಪುರ ಶಿಬಿರದ ಚೈತ್ರಾ ಹಾಗೂ ಲಕ್ಷ್ಮಿ ದಸರಾದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಇದೇ ಪ್ರಥಮವಾಗಿ 34 ವರ್ಷದ ಅಶ್ವತ್ಥಾಮ ದಸರಾಗೆ  ಪ್ರವೇಶ ಮಾಡಿರುವುದು ವಿಶೇಷ. ಕಿರಿಯ ಆನೆಯಾಗಿ ಲಕ್ಷ್ಮೀ ಎರಡನೇ ಬಾರಿಗೆ ದಸರಾದಲ್ಲಿ ಭಾಗಿಯಾಗುತ್ತಿದೆ.  

ದಿನವೂ ಸಾಂಸ್ಕೃತಿಕ ಕಾರ್ಯಕ್ರಮ
9 ದಿನಗಳ ಕಾಲ ಪ್ರತಿದಿನ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ನಂಜನಗೂಡಿನ ದೇವಸ್ಥಾನದ ಒಳಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಅಕ್ಟೋಬರ್​ 15ರ ಸಂಜೆ4.36 ರಿಂದ 4.44 ನಂದಿ ಪೂಜೆ ನಡೆಯಲಿದ್ದು, ಬಳಿಕ ಸಂಜೆ 5 ರಿಂದ 5.36 ಜಂಬೂ ಸವಾರಿ ಆರಂಭವಾಗಲಿದೆ.

ನಗರದಲ್ಲಿ ದೀಪಾಲಂಕಾರ
ಈ ಬಾರಿ ನಗರದ ಒಳಗೆ 100 ಮೀ ದೀಪಾಲಂಕಾರ ಮಾಡಲಾಗಿದ್ದು, ಒಟ್ಟು 157 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗುವುದು. ಜಂಬೂ ಸವಾರಿ ವೇಳೆ ಈ ಬಾರಿ ಸ್ಥಬ್ದಚಿತ್ರಗಳಿಗೆ ಅವಕಾಶ ನೀಡಲಾಗಿದೆ. ಚಾಮುಂಡಿ ಉತ್ಸಹ ಮೂರ್ತಿಯನ್ನು ಚಾಮುಂಡಿ ಬೆಟ್ಟದಿಂದ ಅರಮನೆಗೆ ಮೆರವಣಿಗೆ ಮೂಲಕ ತರಲಾಗುತ್ತದೆ.

 ಹೇಗಿರಲಿದೆ ಸರಳ ದಸರಾ?

ಇದನ್ನೂ ಓದಿ: ಜಂಬೂಸವಾರಿ ಗಜಪಡೆಗೆ ರಾಜಾತಿಥ್ಯ- ಪ್ರತಿದಿನ 300 ಕೆಜಿ ಸೊಪ್ಪು, ಬಗೆಬಗೆಯ ಭಕ್ಷ್ಯಗಳು.. ಏನೇನೆಲ್ಲಾ ತಿನ್ನುತ್ತಿವೆ ಗೊತ್ತಾ ಆನೆಗಳು

ಮೈಸೂರು ಅರಮನೆಯಲ್ಲಿ ನಡೆಯಬೇಕಾದ ಸಾಂಪ್ರದಾಯಿಕ ಆಚರಣೆಗಳು ಹಾಗೂ ಅರಮನೆ ಆವರಣ ಮತ್ತು ಚಾಮುಂಡಿ ಬೆಟ್ಟದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಯಾವುದೇ ಅಡ್ಡಿ ಇರುವುದಿಲ್ಲ. ಆದರೆ, ಸಾಂಸ್ಕೃತಿಕ, ಕಲೆ, ಸಂಗೀತ, ಕ್ರೀಡಾ ಚಟುವಟಿಕೆ, ಕುಸ್ತಿ ಪಂದ್ಯಾವಳಿ, ಪಂಜಿನ ಕವಾಯತು, ಸಿನಿಮೋತ್ಸವ, ರಂಗೋತ್ಸವ, ದೀಪೋತ್ಸವಗಳ ಆಚರಣೆಗಳಿಗೆ ಅವಕಾಶ ಇರುವುದು ಬಹುತೇಕ ಅನುಮಾನವಾಗಿದೆ. ಕಳೆದ ಬಾರಿಯಂತೆ ಖಾಸಗಿ ದರ್ಬಾರ್ ವೇಳೆ ರಾಜವಂಶಸ್ಥರು ಸೇರಿ ಕೆಲವೇ ಕೆಲವು ಮಂದಿಗೆ ಆಹ್ವಾನ ಇರುತ್ತದೆ.
Published by:Sandhya M
First published: