• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mysuru Dasara: ಜಂಬೂಸವಾರಿ ಗಜಪಡೆಗೆ ರಾಜಾತಿಥ್ಯ- ಪ್ರತಿದಿನ 300 ಕೆಜಿ ಸೊಪ್ಪು, ಬಗೆಬಗೆಯ ಭಕ್ಷ್ಯಗಳು.. ಏನೇನೆಲ್ಲಾ ತಿನ್ನುತ್ತಿವೆ ಗೊತ್ತಾ ಆನೆಗಳು

Mysuru Dasara: ಜಂಬೂಸವಾರಿ ಗಜಪಡೆಗೆ ರಾಜಾತಿಥ್ಯ- ಪ್ರತಿದಿನ 300 ಕೆಜಿ ಸೊಪ್ಪು, ಬಗೆಬಗೆಯ ಭಕ್ಷ್ಯಗಳು.. ಏನೇನೆಲ್ಲಾ ತಿನ್ನುತ್ತಿವೆ ಗೊತ್ತಾ ಆನೆಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Mysuru Dasara Elephant Food: ಕಳೆದ ಬಾರಿ ಅಂಬಾರಿ ಹೊತ್ತು  ಮೆರೆದಿದ್ದ, ಅಭಿಮನ್ಯು ವಿಜಯದಶಮಿಯಂದು ಅಂಬಾರಿ ಹೊರಲಿದ್ದಾನೆ. ಇನ್ನು ಅಂಬಾರಿ ಹೊರಲಿರುವ ಅಭಿಮನ್ಯುವಿಗೆ ಹೆಚ್ಚಿನ ಕಾಳಜಿಯ ಅವಶ್ಯಕತೆ ಇದ್ದು,  ಒಳ್ಳೆಯ ಆಹಾರ ನೀಡುವ ಮೂಲಕ ತಾಲೀಮು ನೀಡಲಾಗುತ್ತಿದೆ.

  • Share this:

ಮೈಸೂರು ದಸರಾ (Mysuru Dasara)ಎಂದರೆ ಅದೇನೋ ಉತ್ಸಾಹ, ಆನಂದ. ಕೊರೊನಾ ಕಾರಣದಿಂದ ಕಳೆದ ಬಾರಿ ದಸರವನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು, ಈ ಬಾರಿ ಕೂಡ ಜಂಬೂ ಸವಾರಿ ಸೇರಿದಂತೆ ಪ್ರತಿಯೊಂದು ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಕಾಡಿನಿಂದ ಆನೆಗಳನ್ನು ಮೈಸೂರಿಗೆ ಕರೆತರಲಾಗಿದ್ದು, ಅರಮನೆ ಆವರಣದಲ್ಲಿ ಜಂಬೂಸವಾರಿಗೆ(Jambu Savari) ಗಜಪಡೆಯನ್ನು ತಾಲೀಮು ಮೂಲಕ ಸಜ್ಜುಗೊಳಿಸಲಾಗುತ್ತಿದೆ.  ಕೇವಲ ತಾಲೀಮು ಮಾತ್ರವಲ್ಲದೇ ಅವುಗಳಿಗೆ  ಪೌಷ್ಠಿಕ ಆಹಾರಗಳನ್ನು ನೀಡಿ ದೈಹಿಕ ಆರೋಗ್ಯ ಮತ್ತು ಶಕ್ತಿ ಸಾಮರ್ಥ್ಯವನ್ನು ವೃದ್ಧಿಸುವುದು ಸಹ ಮುಖ್ಯವಾಗುತ್ತದೆ.  


ಈ ಬಾರಿಯ ದಸರಾದಲ್ಲಿ ಒಟ್ಟು 8 ಆನೆಗಳು ಭಾಗವಹಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆನೆಗಳನ್ನು  ಆಟ ಮತ್ತು ಅದರ ತರಬೇತಿ ನೋಡುವುದು ಕಣ್ಣಿಗೆ ಮುದ ನೀಡುತ್ತದೆ.  ಅವುಗಳು ತಮ್ಮ ಮಾವುತರ ಜೊತೆ ಅರಮನೆ ಆವರಣದಲ್ಲಿ ಖುಷಿಯಿಂದ ಆಡುವುದಲ್ಲದೆ, ಆರಾಮವಾಗಿವೆ. ಆನೆಗಳಿಗೆ ಕಾಡಿನಲ್ಲಿ ನೀಡುವ ಆಹಾರಗಳಿಗಿಂತ ಹೆಚ್ಚಿನ ರುಚಿಕರವಾದ ಆಹಾರವನ್ನು ನೀಡಲಾಗುತ್ತದೆ.  ಅವುಗಳಿಗೆ ಜಂಬೂ ಸವಾರಿಯ ಸಮಯದಲ್ಲಿ ಹೆಚ್ಚಿನ ಶಕ್ತಿಯ ಅವಶ್ಯಕತೆ ಇರುತ್ತದೆ. ಹಾಗಾಗಿ ಗಜ ಪಡೆಗೆ ರಾಜಾತಿಥ್ಯ  ನೀಡಲಾಗುತ್ತಿದೆ.


ಕಳೆದ ಬಾರಿ ಅಂಬಾರಿ ಹೊತ್ತು  ಮೆರೆದಿದ್ದ, ಅಭಿಮನ್ಯು ವಿಜಯದಶಮಿಯಂದು ಅಂಬಾರಿ ಹೊರಲಿದ್ದಾನೆ. ಇನ್ನು ಅಂಬಾರಿ ಹೊರಲಿರುವ ಅಭಿಮನ್ಯುವಿಗೆ ಹೆಚ್ಚಿನ ಕಾಳಜಿಯ ಅವಶ್ಯಕತೆ ಇದ್ದು,  ಒಳ್ಳೆಯ ಆಹಾರ ನೀಡುವ ಮೂಲಕ ತಾಲೀಮು ನೀಡಲಾಗುತ್ತಿದೆ.


ಇದನ್ನೂ ಓದಿ: ಮೈಸೂರು ದಸರಾ: ಅರ್ಜುನ ಬದಲು ಅಭಿಮನ್ಯು ಮೇಲೆ ಅಂಬಾರಿ


ಗಜಪಡೆಗೆ ಹೊತ್ತಿಗೆ ಸರಿಯಾಗಿ ಆಹಾರವನ್ನು ಒದಗಿಸುವುದು  ಸವಾಲಿನ ಕೆಲಸ. ಅದರಲ್ಲೂ ದಸರಾ ಗಜಪಡೆಗೆ  ಸರಿಯಾದ ಸಮಯಕ್ಕೆ ಮತ್ತು ನಿಯಮಿತ ಪೌಷ್ಠಿಕಾಂಶವುಳ್ಳ ಆಹಾರವನ್ನು  ತಯಾರಿಸುವುದು ನಿಜಕ್ಕೂ ಕಠಿಣವಾದ ಕೆಲಸ.


ಗಜಪಡೆಗೆ ವಿವಿಧ ತರಕಾರಿ, ಧಾನ್ಯಗಳು, ಬೆಣ್ಣೆ, ಗ್ಲುಕೋಸ್ ಹೀಗೆ ವಿವಿಧ ಆಹಾರಗಳನ್ನು  ನೀಡಲಾಗುತ್ತದೆ. ಕಾಡಿನಲ್ಲಿ ಸೊಪ್ಪುಗಳನ್ನು ತಿಂದು ಅಭ್ಯಾಸವಾಗಿರುವುದರಿಂದ ಅವುಗಳಿಗೆ ಇದನ್ನು ಅಭ್ಯಾಸ ಮಾಡಿಸುವುದು  ಬಳ ಕಷ್ಟದ ಕೆಲಸ. ಈ ಮೊದಲು ದಸರಾದಲ್ಲಿ ಭಾಗವಹಿಸಿರುವ ಆನೇಕಗಳಿಗೆ ಇದು ಅಷ್ಟು ಸಮಸ್ಯೆ ಮಾಡುವುದಿಲ್ಲ. ಆದರೆ ಹೊಸದಾಗಿ ನಾಡಿಗೆ ಬಂದಿರುವ ಆನೆಗಳನ್ನುತಾಲೀಮುಗೊಳಿಸುವುದು ಮತ್ತು ಅವುಗಳಿಗೆ ಆಹಾರ ನೀಡುವುದು ಸುಲಭವಲ್ಲ.


ಜಂಬೂಸವಾರಿಯ ಹೆಚ್ಚು ಹಣ ಆನೆಗಳ ಆಹಾರಕ್ಕೆ ಖರ್ಚು


ಜಂಬೂಸವಾರಿ ಎಂದರೆ ಹೆಚ್ಚು ಹಣ ಖರ್ಚಾಗುವುದು ಸಾಮಾನ್ಯ. ಆದರೆ ಒಂದು ಅಚ್ಚರಿಯ ವಿಚಾರ ಎಂದರೆ ಆ ಹಣದಲ್ಲಿ ಬಹುಪಾಲು ಆನೆಗಳ ಆಹಾರಕ್ಕೆ ಖರ್ಚಾಗುತ್ತದೆ. ಯಾಕೆಂದರೆ ಆನೆಗಳಿಗೆ ಹೆಚ್ಚು ಆಹಾರದ ಅವಶ್ಯಕತೆ ಇದೆ. ಅವುಗಳ ವಯಸ್ಸು ಮತ್ತು ಆಕಾರದ ಅನುಸಾರ ಆಹಾರ ನೀಡಬೇಕಾಗುತ್ತದೆ. ಅವುಗಳನ್ನು ಈ ಸಮಯದಲ್ಲಿ ಹೇಗೆ ನೋಡಿಕೊಳ್ಳುತ್ತೇವೆ ಎಂಬುದರ ಮೇಲೆ ಅವುಗಳು ಜಂಬೂಸವಾರಿಯ ದಿನ ಅವುಗಳು ಹೇಗೆ ವರ್ತಿಸುತ್ತದೆ ಎಂಬುದು ನಿರ್ಧಾರವಾಗುತ್ತದೆ.


ಬೆಳಿಗ್ಗೆ ತಾಲೀಮು ನಡೆಸುವ ಮುನ್ನ ಕುಸುರೆ ಎಂದು ಕರೆಯುವ ಹೆಸರು ಕಾಳು, ಹುರುಳಿ ಕಾಳು, ಗೋಧಿ, ಕುಸುಲಕ್ಕಿ ಇವೆಲ್ಲವನ್ನು ಬೇಯಿಸಿ ಉಂಡೆ ಮಾಡಿ  ಆನೆಗಳಿಗೆ ಕೊಡಲಾಗುತ್ತದೆ.  ಹಸಿರುಸೊಪ್ಪು,  ತರಕಾರಿಗಳನ್ನ ಅರ್ಧ ಕೆಜಿ ಬೆಣ್ಣೆಯಲ್ಲಿ ಬೇಯಿಸಿ ಕೊಡಲಾಗುತ್ತದೆ. ಇವೆಲ್ಲ ಕೇವಲ ಬೆಳಗಿನ ಉಪಹಾರ ಮಾತ್ರ. ಇದರ ನಂತರ ಮಧ್ಯಾಹ್ನದಿಂದ ಸಂಜೆಯವರೆಗೆ ಕೆಲವೊಮ್ಮೆ ಇದನ್ನೇ ಸೇವನೆ ಮಾಡುತ್ತವೆ. ಆದರೆ ಅದು ಖಾಲಿಯಾದಲ್ಲಿ ಅವುಗಳಿಗೆ ಮತ್ತೆ ಆಹಾರವನ್ನು ನೀಡಬೇಕಾಗುತ್ತದೆ.


ಇದನ್ನೂ ಓದಿ: ಅ.7ರಂದು ಮೈಸೂರು ದಸರಾ ಉದ್ಘಾಟನೆ, ಸರಳ ಆಚರಣೆಗೆ 6 ಕೋಟಿ ಹಣ ನಿಗದಿ


ಇನ್ನು ನಂತರ ಸಂಜೆ ಸಮಯದಲ್ಲಿ ಭತ್ತದ ಹುಲ್ಲಿನಲ್ಲಿ ಕುಸುರೆಯ ಸುತ್ತಿ ಭತ್ತವನ್ನ ಬೇಯಿಸಿ ಅದಕ್ಕೆ ಬೆಲ್ಲ ಹಿಂಡಿ, ತೆಂಗಿನ ಕಾಯಿ, ಈರುಳ್ಳಿ, ಬೇಯಿಸಿ ಆನೆಗಳಿಗೆ ತಿನ್ನಲು ನೀಡಲಾಗುತ್ತದೆ. . ಕನಿಷ್ಠ ಪ್ರತಿ ಆನೆಗೆ 12 ಕೆಜಿ ಭತ್ತ, 250 ಗ್ರಾಂ ಬೆಲ್ಲ, 2 ತೆಂಗಿನ ಕಾಯಿ, ಅರ್ಧ ಕೆ.ಜಿ ಬೆಣ್ಣೆ  ಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಒಂದು ಆನೆ ಪ್ರತಿ ದಿನ ಮುನ್ನೂರರಿಂದ ಐನೂರು ಕೆಜಿಯಷ್ಟು ಹಸಿರು ಸೊಪ್ಪನ್ನು ತಿನ್ನುತ್ತವೆ ಎಂದು ಮಾವುತರು ಹೇಳುತ್ತಾರೆ.

top videos
    First published: