HOME » NEWS » State » MYSURU DASARA 2020 THIS YEAR MORE RESPONSIBILITY TO MYSORE PALACE BOARD LG

Mysuru Dasara 2020: ಅರಮನೆಗೆ ಸೀಮಿತವಾದ ಜಂಬೂ ಸವಾರಿ; ಅರಮನೆ ಮಂಡಳಿಗೆ ಹೆಚ್ಚಿದ ಜವಾಬ್ದಾರಿ

15 ವರ್ಷದ ಹಿಂದೆಯೂ ಅರಮನೆ ಒಳಗೆ ಜಂಬೂ ಸವಾರಿ ಮಾಡಿದ್ದ ಇತಿಹಾಸ ಇದೆ. ಅಂದಿನ ಕಾಲಕ್ಕೂ ಇಂದಿಗೂ ಸಾಕಷ್ಟು ವ್ಯತ್ಯಾಸ ಇದೆ‌. ಈ ಜೊತೆಗೆ ರಾಜಮನೆತನಕ್ಕೆ ಅವರ ಸಂಪ್ರದಾಯಕ್ಕೆ ತಕ್ಕಂತೆ ಅವರ ಪೂಜಾ ಕೈಂಕರ್ಯಕ್ಕೆ ಅನುವು ಮಾಡಿ ಕೊಡಬೇಕಾಗಿದೆ. ಈ ಬಾರಿ ಅರಮನೆಯಲ್ಲೇ ಫ್ಲವರ್ ಶೋ ಆಯೋಜನೆಯಾಗಲಿದೆ.

news18-kannada
Updated:September 9, 2020, 4:18 PM IST
Mysuru Dasara 2020: ಅರಮನೆಗೆ ಸೀಮಿತವಾದ ಜಂಬೂ ಸವಾರಿ; ಅರಮನೆ ಮಂಡಳಿಗೆ ಹೆಚ್ಚಿದ ಜವಾಬ್ದಾರಿ
ಮೈಸೂರು ಅರಮನೆ
  • Share this:
ಮೈಸೂರು(ಸೆ.09): ನಾಡಹಬ್ಬ ಮೈಸೂರು ದಸರಾ ಈ ಬಾರಿ ಸರಳ ಎನ್ನುವುದು ನಿನ್ನೆಯಷ್ಟೇ ಸಿಎಂ ಸಮ್ಮುಖದಲ್ಲಿ ತೀರ್ಮಾನ ಆಗಿದೆ. ಕೇವಲ ಚಾಮುಂಡಿ ಬೆಟ್ಟ ಹಾಗೂ ಅರಮನೆಗೆ ಮಾತ್ರ ಈ ಬಾರಿಯ ದಸರಾ ಸೀಮಿತವಾಗಿದೆ. ಸಿಎಂ ಬಿಎಸ್​​ ಯಡಿಯೂರಪ್ಪನವರ ಈ ನಿರ್ಧಾರದಿಂದ ಅರಮನೆ ಮಂಡಳಿಗೆ ಈ ಬಾರಿ ಜವಾಬ್ದಾರಿ ಹೆಚ್ಚಾಗಿದೆ. ಸೆ.11ರಂದು ಮೈಸೂರಿನಲ್ಲಿ ಈ ಬಗ್ಗೆ ಉಸ್ತುವಾರಿ ಸಚಿವರ ಸಭೆ ಕೂಡ ಇದೆ. ಜಂಬೂ ಸವಾರಿ ದಿನದಂದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಅರಮನೆ ಮುಂಭಾಗದಲ್ಲೇ ‌ನವರಾತ್ರಿಯ 9 ದಿನ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಮೈಸೂರು ದಸರಾ ಎಷ್ಟೊಂದು ಸುಂದರ. ಆದ್ರೆ ಈ ಬಾರಿಯ ದಸರಾ ಮಾತ್ರ ಸರಳವಾಗಿ ನಡೆಯಲಿದೆ. ಕೊರೊನಾ ಆರ್ಭಟದ ನಡುವೆ ದಸರಾ ನಡೆಯೋತ್ತೊ ಇಲ್ವೋ ಅನ್ನೋ ಅನುಮಾನಗಳ ಮಧ್ಯೆಯೇ ಈ ವರ್ಷದ ದಸರಾವನ್ನ ಚಾಮುಂಡಿ ಬೆಟ್ಟ ಹಾಗೂ ಅರಮನೆಗೆ ಮಾತ್ರ ಸೀಮಿತ ಮಾಡಿ ಸರ್ಕಾರ ನಿರ್ಧಾರ ಮಾಡಿದೆ. ಅರಮನೆ ಮುಂಭಾಗದಲ್ಲೇ 9 ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಸರ್ಕಾರ ಮಾರ್ಗಸೂಚಿಯ ಷರತ್ತು ವಿಧಿಸಿದೆ.

ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಅರಮನೆಗೆ ಬಂದು ಹೋಗಲು ಸಾಧ್ಯವೇ? ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಷ್ಟು ಮಂದಿ ಕೂರಲು ಅವಕಾಶ ನೀಡಬೇಕು?, ದಸರಾ ಜಂಬೂಸವಾರಿ ನಡೆಸಲು ಯಾವ ಮಾರ್ಗಸೂಚಿ ಅನುಸರಿಸಬೇಕು? ಎನ್ನುವ ಚಿಂತನೆಯಲ್ಲಿ ಅರಮನೆ ಮಂಡಳಿ ತೊಡಗಿದೆ. ನಿನ್ನೆಯಷ್ಟೆ ಸಭೆ ಮುಗಿಸಿ ಬಂದ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಇಂದು ಯಾವ್ಯಾವ ರೀತಿಯ ಪರ್ಯಾಯ ಮಾರ್ಗಗಳನ್ನ ಹುಡುಕಬಹುದು ಅನ್ನೋ ಕಾರ್ಯಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ. ಸದ್ಯ ದೇಶದಲ್ಲಿ ಅನ್‌ಲಾಕ್‌ 4.0 ಜಾರಿಯಲ್ಲಿದೆ. ಜಂಬೂಸವಾರಿ ನಡೆಯುವ ಸಮಯಕ್ಕೆ ಅನ್​ಲಾಕ್ 5.0 ಕೂಡ ಜಾರಿಯಾಗುವ ಸಾಧ್ಯತೆ ಕೂಡ ಇದೆ.  ಇದರಿಂದ ಅರಮನೆ ಆಡಳಿತ ಮಂಡಳಿಗೆ ದಸರಾ ಜವಾಬ್ದಾರಿ ಹೆಚ್ಚಾಗಿದ್ದು, ಸೆ.11ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯೋ ದಸರಾ ಪೂರ್ವಭಾವಿ ಸಭೆಯಲ್ಲಿ ದಸರಾದಲ್ಲಿ ಏನೆಲ್ಲ ಇರಬೇಕು ಇರಬಾರದು ಎಂಬುದರ ಬಗ್ಗೆ ತೀರ್ಮಾನ ಆಗಲಿದೆ.

EPFO: ಇಂದು ನೌಕರರ ಭವಿಷ್ಯ ನಿಧಿ ಮಂಡಳಿಯ ಸಭೆ; ಏನೆಲ್ಲಾ ನಿರೀಕ್ಷೆಗಳಿವೆ?

ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ, ಅಂಬಾರಿ ಹೊತ್ತ ಆನೆ ಜೊತೆಗೆ 5 ರಿಂದ 8 ಟ್ಯಾಬ್ಲೋಗಳು ಹಾಗೂ ಅಶ್ವರೋಹಿದಳಕ್ಕೆ‌ಮಾತ್ರ ಅವಕಾಶ ಕಲ್ಪಿಸುವ ‌ಸಾಧ್ಯತೆ ಇದೆ. ಅರಮನೆಯ ತ್ರಿನೇಶ್ವರ ಸ್ವಾಮಿ ದೇವಾಲಯದಿಂದ ಅಥವ ವರಹಾ ಸ್ವಾಮಿ ದೇವಾಲಯದ ಮುಂಭಾದಿಂದ ಮೆರವಣಿಗೆ ಹೊರಟು, ಬಲರಾಮ ಗೇಟ್‌ನಲ್ಲಿ ಜಂಬೂಸವಾರಿ ಅಂತ್ಯವಾಗುವ ಸಾಧ್ಯತೆ ಇದೆ. ಕೊರೋನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕೇಂದ್ರದ ಮಾರ್ಗಸೂಚಿ ಪಾಲಿಸಿ ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಆಸನ ವ್ಯವಸ್ಥೆ ಮಾಡಿ, ಆ ನಂತರ ಮೆರವಣಿಗೆಯ ಚಾರ್ಟ್‌ಸಿದ್ದವಾಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಅರಮನೆ ಮುಂಭಾಗದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸುವ ಚಿಂತನೆಯೂ ಅರಮನೆ ಮಂಡಳಿಗೆ ಇದೆ ಅಂತಾರೆ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ.

15 ವರ್ಷದ ಹಿಂದೆಯೂ ಅರಮನೆ ಒಳಗೆ ಜಂಬೂ ಸವಾರಿ ಮಾಡಿದ್ದ ಇತಿಹಾಸ ಇದೆ. ಅಂದಿನ ಕಾಲಕ್ಕೂ ಇಂದಿಗೂ ಸಾಕಷ್ಟು ವ್ಯತ್ಯಾಸ ಇದೆ‌. ಈ ಜೊತೆಗೆ ರಾಜಮನೆತನಕ್ಕೆ ಅವರ ಸಂಪ್ರದಾಯಕ್ಕೆ ತಕ್ಕಂತೆ ಅವರ ಪೂಜಾ ಕೈಂಕರ್ಯಕ್ಕೆ ಅನುವು ಮಾಡಿ ಕೊಡಬೇಕಾಗಿದೆ. ಈ ಬಾರಿ ಅರಮನೆಯಲ್ಲೇ ಫ್ಲವರ್ ಶೋ ಆಯೋಜನೆಯಾಗಲಿದೆ.

ಒಟ್ಟಾರೆ ಈ ಬಾರಿ ಸರಳ ದಸರಾ ಆದ್ರು ಸಹ ಕೋವಿಡ್ ಹಿನ್ನಲೆಯಲ್ಲಿ ಹೆಚ್ಚಿ‌ನ ನಿಗಾ ವಹಿಸುವ ಜವಾಬ್ದಾರಿ ಅರಮನೆ ಆಡಳಿತ ಮಂಡಳಿ ಸೇರಿದಂತೆ ಸರ್ಕಾರಕ್ಕೂ ಇದೆ. ಆದರೆ ಈ ಬಾರಿ ಅರಮನೆ ಆವರಣದಲ್ಲೇ ನಡೆಯಲಿರುವ ಸರಳ ದಸರಾಗೆ ಹೆಚ್ಚಿನ ಜವಬ್ದಾರಿ ಹೊತ್ತ ಅರಮನೆ ಆಡಳಿತ ಮಂಡಳಿ ಹೇಗೆ ಇದನ್ನೆಲ್ಲಾ ನಿಭಾಯಿಸುತ್ತದೆ ಎಂಬುದೇ ಕುತೂಹಲದ ಪ್ರಶ್ನೆ.
Published by: Latha CG
First published: September 9, 2020, 4:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories