ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಬಲಭೀಮ; ದಸರಾಗೆ ಬರುವ 5 ಆನೆಗಳ ಸಂಪೂರ್ಣ‌ ವಿವರ ಇಲ್ಲಿದೆ

ಮೂರು ಗಂಡಾನೆಗಳ ಜತೆಗೆ ಎರಡು ಹೆಣ್ಣಾನೆಗಳನ್ನು ಆಯ್ಕೆ ಮಾಡಲಾಗಿದೆ. ಕಾವೇರಿ ಮತ್ತು ವಿಜಯಾ ಕಳೆದ ಬಾರಿಯೂ ಕುಮ್ಕಿ ಆನೆಗಳಾಗಿದ್ದವು. ಈ ಬಾರಿಯೂ ಅಂಬಾರಿ ಆನೆಯ ಎಡ, ಬಲದಲ್ಲಿ ಹೆಜ್ಜೆ ಹಾಕಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೈಸೂರು(ಸೆ.23): ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಆನೆಗಳು. ಪ್ರತಿ ವರ್ಷ ನಾಡಹಬ್ಬಕ್ಕಾಗಿ 12-13 ಸಾಕಾನೆಗಳನ್ನು ಕರೆಸಿಕೊಳ್ಳಲಾಗುತ್ತಿತ್ತು. ಈ ಬಾರಿ ಸರಳ ದಸರಾ ಹಿನ್ನೆಲೆಯಲ್ಲಿ ಐದು ಆನೆಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಅವುಗಳ ಪ್ರೊಫೈಲ್ ಏನು? ಎಷ್ಟು ಬಾರಿ ದಸರಾದಲ್ಲಿ ಪಾಲ್ಗೊಂಡಿವೆ? ಈ ಬಾರಿ ಯಾವ ಜವಾಬ್ದಾರಿ ನಿರ್ವಹಿಸಲಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ವಿಶ್ವವಿಖ್ಯಾತ ದಸರಾ ಮಹೋತ್ಸವ ಕರೊನಾ ಕಾರಣಕ್ಕಾಗಿ ಕಳೆಗುಂದಿದೆ. ಜಂಬೂ ಸವಾರಿಗಾಗಿ ಪ್ರತಿ ವರ್ಷ 12-13 ಸಾಕಾನೆಗಳನ್ನು ತರಲಾಗುತ್ತಿತ್ತು. ಆದ್ರೆ ಈ ಬಾರಿ ಸರಳ ದಸರಾ ಆಚರಣೆಗೆ ಸರ್ಕಾರ ನಿರ್ಧಾರ ಮಾಡಿದೆ. ಸರ್ಕಾರದ ಸೂಚನೆ ಮೇರೆಗೆ ಅರಣ್ಯ ಇಲಾಖೆ, ಅಭಿಮನ್ಯು, ವಿಕ್ರಮ, ಗೋಪಿ, ಕಾವೇರಿ ಮತ್ತು ವಿಜಯಾ ಆನೆಗಳನ್ನು ಆಯ್ಕೆ ಮಾಡಿದೆ. ಅರಣ್ಯ ಇಲಾಖೆಯ ಆನೆ ಶಿಬಿರಗಳಲ್ಲಿ ಸಾಕಷ್ಟು ಆನೆಗಳಿದ್ದರೂ ಈ ಐದು ಆನೆಗಳನ್ನೇ ಆಯ್ಕೆ ಮಾಡಿದ್ದು ಯಾಕೆ ಗೊತ್ತಾ ? ಕಳೆದ ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನಿಗೆ 60 ವರ್ಷ ವಯಸ್ಸಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, 60 ವರ್ಷ ತುಂಬಿದ ಆನೆ ಹೆಗಲ ಮೇಲೆ ಹೆಚ್ಚು ಭಾರ ಹೊರಿಸುವಂತಿಲ್ಲ. ಹೀಗಾಗಿ ತಾಯಿ ಚಾಮುಂಡೇಶ್ವರಿ ಅಮ್ಮನವರ ಉತ್ಸವ ಮೂರ್ತಿ ಹೊತ್ತು ಸಾಗುವ ಸುಯೋಗ ಅಭಿಮನ್ಯುವಿಗೆ ದೊರಕಿದೆ.

ಅಂಬಾರಿ ಆನೆ ಹೆಸರು: ಅಭಿಮನ್ಯು

ವಯಸ್ಸು 54,

ಅಂದಾಜು ತೂಕ 5290 ಕೆ.ಜಿ.,

ದಸರಾ ಅನುಭವ 21 ವರ್ಷ,

ವಿಶೇಷತೆ: ಕಾಡಾನೆ, ಹುಲಿ ಸೆರೆ ಕಾರ್ಯಾಚರಣೆ

ಜವಾಬ್ದಾರಿ: ಅಂಬಾರಿ ಆನೆ

ವಿಕ್ರಮ ಹಾಗೂ ಗೋಪಿ ಆನೆಗಳು ಅಂಬಾರಿ ಹೊರುವ ಜವಾಬ್ದಾರಿ ಹೊತ್ತುಕೊಳ್ಳಲಿರುವ ಸೆಕೆಂಡ್ ಜನರೇಷನ್ ಆನೆಗಳು. ಆದ್ದರಿಂದ ಇವುಗಳ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ.

ಪಟ್ಟದ ಆನೆ ಹೆಸರು: ವಿಕ್ರಮ

ವಯಸ್ಸು: 47

ಅಂದಾಜು ತೂಕ: 3820 ಕೆ.ಜಿ.

ದಸರಾ ಅನುಭವ: 4 ವರ್ಷ

ವಿಶೇಷತೆ: ಕಟ್ಟು ಮಸ್ತಾದ ಆನೆ, ಶಾಂತ ಸ್ವಭಾವ

ಜವಾಬ್ದಾರಿ: ಪಟ್ಟದ ಆನೆ

ಚಾಮರಾಜನಗರ: ಚಾಮುಲ್ ಅಕ್ರಮ ನೇಮಕಾತಿ ತನಿಖಾ ವರದಿ ಸಲ್ಲಿಸಿ 6 ತಿಂಗಳಾದರೂ ಕ್ರಮವಿಲ್ಲ

ನಿಶಾನೆ ಆನೆ

ಹೆಸರು: ಗೋಪಿ

ವಯಸ್ಸು: 38

ಅಂದಾಜು ತೂಕ: 3710 ಕೆ.ಜಿ.

ದಸರಾ ಅನುಭವ: 10 ವರ್ಷ

ವಿಶೇಷತೆ: ಯೌವ್ವನದ ವಯಸ್ಸು

ಸಫಾರಿ ಆನೆ ಜವಾಬ್ದಾರಿ: ನಿಶಾನೆ ಆನೆ

ಮೂರು ಗಂಡಾನೆಗಳ ಜತೆಗೆ ಎರಡು ಹೆಣ್ಣಾನೆಗಳನ್ನು ಆಯ್ಕೆ ಮಾಡಲಾಗಿದೆ. ಕಾವೇರಿ ಮತ್ತು ವಿಜಯಾ ಕಳೆದ ಬಾರಿಯೂ ಕುಮ್ಕಿ ಆನೆಗಳಾಗಿದ್ದವು. ಈ ಬಾರಿಯೂ ಅಂಬಾರಿ ಆನೆಯ ಎಡ, ಬಲದಲ್ಲಿ ಹೆಜ್ಜೆ ಹಾಕಲಿವೆ.

ಕುಮ್ಕಿ ಆನೆ

ಹೆಸರು: ವಿಜಯಾ

ವಯಸ್ಸು: 61

ಅಂದಾಜು ತೂಕ: 3250 ಕೆ.ಜಿ.

ದಸರಾ ಅನುಭವ: 13 ವರ್ಷ

ವಿಶೇಷತೆ: ಇಳಿ ವಯಸ್ಸಿನ ಆನೆ, ಸಾಧು ಸ್ವಭಾವ

ಜವಾಬ್ದಾರಿ: ಪಟ್ಟದ ಆನೆ

ಕುಮ್ಕಿ ಆನೆ

ಹೆಸರು: ಕಾವೇರಿ

ವಯಸ್ಸು: 42

ಅಂದಾಜು ತೂಕ: 3220 ಕೆ.ಜಿ.

ದಸರಾ ಅನುಭವ: 9 ವರ್ಷ

ವಿಶೇಷತೆ: ಮುದ್ದಾದ ಆನೆ

ಜವಾಬ್ದಾರಿ: ಕುಮ್ಕಿ ಆನೆ

ಇದು ಈ ಬಾರಿ ದಸರಾದಲ್ಲಿ ಭಾಗಿಯಾಗುವ ಆನೆಗಳ ಪ್ರೊಫೈಲ್.  ಪ್ರತಿ ಆನೆಗೂ ತನ್ನದೇ ಗುಣ ವಿಶೇಷಗಳಿವೆ. ಅಪಾರ ಅನುಭವ ಹೊಂದಿವೆ. ಸರಳ ದಸರಾವಾದರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಚ್ಚುಕಟ್ಟಾಗಿ ಜಂಬೂ ಸವಾರಿ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಳೆದು ತೂಗಿ ಆನೆಗಳನ್ನು ಆಯ್ಕೆ ಮಾಡಿದೆ. ಅಕ್ಟೋಬರ್ 2ರಂದು ಆನೆಗಳು ಮೈಸೂರು ಅರಮನೆಗೆ ಆಗಮಿಸಲಿವೆ.
Published by:Latha CG
First published: