Mysuru Dasara 2020: ದಸರಾಗಾಗಿ ಮೈಸೂರು ಅರಮನೆಯಲ್ಲಿ ಬಲ್ಬ್‌ಗಳ ಬದಲಾವಣೆ; ಫ್ಲವರ್ ಶೋಗೂ ಭಾರೀ ಸಿದ್ಧತೆ

Mysore Dasara 2020 Date: ಮೈಸೂರಿನ ದಸರಾ ವೇಳೆ ಚಿನ್ನದ ಹೊಳಪು ಸೂಸುವ ಬೆಳಕಿನ ಚಿತ್ತಾರದಿಂದ ಕಂಗೊಳಿಸುವ ಅರಮನೆಯನ್ನು ನೋಡಲು ದೇಶ-ವಿದೇಶದಿಂದ ಪ್ರವಾಸಿಗರು ಬರುತ್ತಾರೆ. ಅರಮನೆಯನ್ನು ಚಿನ್ನದ ದೀಪದ ಬೆಳಕಿನಲ್ಲಿ ನೋಡೋದೇ ಒಂದು ಅದ್ಭುತ.

news18-kannada
Updated:September 24, 2020, 2:39 PM IST
Mysuru Dasara 2020: ದಸರಾಗಾಗಿ ಮೈಸೂರು ಅರಮನೆಯಲ್ಲಿ ಬಲ್ಬ್‌ಗಳ ಬದಲಾವಣೆ; ಫ್ಲವರ್ ಶೋಗೂ ಭಾರೀ ಸಿದ್ಧತೆ
ದಸರಾ ಸಂಭ್ರಮಾಚರಣೆಗೆ ಸಜ್ಜಾದ ಮೈಸೂರು ಅರಮನೆ
  • Share this:
ಮೈಸೂರು (ಸೆ. 24): ನಾಡಹಬ್ಬ ದಸರಾಗೆ ಕಳೆ ಕಟ್ಟಲು ಅರಮನೆಗೆ ಗಜಪಡೆ ಪ್ರವೇಶವೊಂದೇ ಬಾಕಿಯಿದೆ. ಅದಕ್ಕೂ ಮೊದಲು ಅರಮನೆಯಲ್ಲಿ ಸಿಂಗಾರದ ಕೆಲಸ ಜೋರಾಗಿ ಸಾಗುತ್ತಿದೆ. ಈಗಾಗಲೇ ಅರಮನೆಯ 20 ಸಾವಿರ ಇನ್‌ಕ್ಯಾಂಡಲ್ ಬಲ್ಬ್‌ಗಳ ಬದಲಾವಣೆ ಹಾಗೂ ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಿದ್ದತೆ ನಡೆಯುತ್ತಿದ್ದು, ದಸರಾದ ಅಂದ ಹೆಚ್ಚಿಸಲು ಈ ಬಾರಿ 5 ಸಾವಿರ ಗುಲಾಬಿ ಹೂವುಗಳ ಸ್ವಾಗತ ಪ್ರವಾಸಿಗರಿಗೆ ಮುದ ನೀಡಲಿದೆ. ದಸರಾ ಎಂದರೆ ಅದೊಂದು ಸಂಭ್ರಮ. ಆ ಸಂಭ್ರಮದಲ್ಲಿ ಕೇವಲ ಒಂದೆರಡು ಕಾರ್ಯಕ್ರಮಗಳು ಇರುವುದಿಲ್ಲ, ಬದಲಿಗೆ ಬಗೆಬಗೆಯ ಕಾರ್ಯಕ್ರಮಗಳು ಪ್ರವಾಸಿಗರು ಹಾಗೂ ಮೈಸೂರಿಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತವೆ. ಅದರಲ್ಲಿ ಮೈಸೂರಿಗೆ ಪ್ರಮುಖ ಆಕರ್ಷಣೆಯಾಗಿ ನಿಲ್ಲೋದು ವಿಶ್ವವಿಖ್ಯಾತ ಮೈಸೂರು ಅರಮನೆ.

ಹೌದು, ಚಿನ್ನದ ಹೊಳಪು ಸೂಸುವ ಈ ಬೆಳಕಿನ ಚಿತ್ತಾರದಿಂದ ಕಂಗೊಳಿಸುವ ಅರಮನೆಯನ್ನು ನೋಡಲು ದೇಶ-ವಿದೇಶದಿಂದ ಪ್ರವಾಸಿಗರು ಬರುತ್ತಾರೆ. ಅರಮನೆಯನ್ನು ಚಿನ್ನದ ದೀಪದ ಬೆಳಕಿನಲ್ಲಿ ನೋಡೋದೇ ಒಂದು ಅದ್ಭುತ. ಆದರೆ, ಈ ವೇಳೆ ಸಾಕಷ್ಟು ಬಲ್ಬ್‌ಗಳು ಬರ್ನ್ ಆಗುತ್ತವೆ.‌ ಹೀಗೆ ಬರ್ನ್ ಆದ ಬಲ್ಬ್‌ಗಳನ್ನ ವರ್ಷಕ್ಕೊಮ್ಮೆ ದಸರಾ ವೇಳೆ ಗಜಪಡೆಯ ಆಗಮನಕ್ಕೂ ಮುನ್ನ ಬದಲಾವಣೆ ಮಾಡಿ, ನವರಾತ್ರಿ ವೇಳೆ‌ ಅರಮನೆಯ ಅಂದ ಹೆಚ್ಚಿಸಲಾಗುತ್ತದೆ.

Mysore Dasara 2020 Date: Mysore Palace Getting Ready for Mysuru Dasara Celebration.
ದಸರಾಗೆ ಸಿದ್ಧವಾಗುತ್ತಿರುವ ಹೂವಿನ ಗಿಡಗಳು


ಅದರಂತೆ ಇದೀಗ ಒಂದು ಲಕ್ಷ ಬಲ್ಬ್​ಗಳಿಂದ ಅಂದ ಹೆಚ್ಷಿಸಿಕೊಳ್ಳುವ ಅರಮನೆಗೆ ಇದೀಗ 20 ಸಾವಿರದಷ್ಟು ಬಲ್ಬ್‌ಗಳ ಬದಲಾವಣೆ‌ ಕಾರ್ಯ ಶುರುವಾಗಿದ್ದು, ಗಜಪಡೆ ಆಗಮನಕ್ಕೂ ಮುನ್ನ ಈ‌ ಕೆಲಸ ಮಾಡಿ ಮುಗಿಸಲು ಅರಮನೆ ಆಡಳಿತ ಮಂಡಳಿ‌ ನಿರ್ಧರಿಸಿದೆ. ಅದರಂತೆ ಆ ಕೆಲಸವು ಶುರುವಾಗಿದ್ದು ಇದಕ್ಕಾಗಿ ಸ್ಪೆಷಲ್ ಆದ ಇನ್‌ಕ್ಯಾಂಡಲೆನ್ಸ್ ಬಲ್ಬ್‌ಗಳ ಬದಲಾವಣೆ ಆಗಲಿದೆ.

ಇದನ್ನೂ ಓದಿ: Mysuru Dasara 2020: ಈ ಬಾರಿ ಅರಮನೆಯಲ್ಲೇ ಜಂಬೂಸವಾರಿ; ದಸರಾ ಆನೆಗಳಿಗೆ ನಿರ್ಮಾಣವಾಯ್ತು ಹೊಸ ರಸ್ತೆ

ಕೇವಲ ಬಲ್ಬ್‌ಗಳು ಮಾತ್ರ ಬದಲಾವಣೆ ಆಗುತ್ತಿಲ್ಲ. ದಸರಾ ವೇಳೆ 9 ದಿನದ ನವರಾತ್ರಿ ಹಬ್ಬ ಹಾಗೂ ಅದು ಮುಗಿದ ಬಳಿಕವೂ ಅರಮನೆಯಲ್ಲಿ ಮತ್ತಷ್ಟು ಆಕರ್ಷಿಸುವುದು ಫಲಪುಷ್ಪ ಪ್ರದರ್ಶನ. ಹೌದು, ಅರಮನೆಯಲ್ಲಿ ವಿವಿಧ ಪ್ರಕಾರದ ಹೂವಿನಲ್ಲಿ ಸಿಂಗಾರ ಮಾಡಿದ ಆಕೃತಿ ಸೇರಿದಂತೆ ರಾಜ ಮಹಾರಾಜರ ಪುತ್ಥಳಿಯನ್ನ ಹೂವಿನಲ್ಲಿ ನಿರ್ಮಾಣ ಮಾಡಲಾಗುತ್ತೆ. ಈ ಬಾರಿ ವಿಶೇಷವಾಗಿ 5 ಸಾವಿರ ಗುಲಾಬಿ ಹೂಗಳ ಘಮಲು ಹರಿಸಲು ಅರಮನೆ ಆಡಳಿತ ಮಂಡಳಿ ಸಿದ್ದತೆ ಮಾಡಿಕೊಂಡಿದ್ದು, ಅರಮನೆ ಮುಂಭಾಗದಲ್ಲಿರುವ ತೋಟದಲ್ಲಿ ಇದು ಸಿದ್ದವಾಗ್ತಿದೆ. ಇದಕ್ಕಾಗಿ ಈಗಾಗಲೇ ಸಿದ್ದತೆ ನಡೆಯುತ್ತಿದ್ದು ಈ ಬಾರಿ ಅರಮನೆಯಿಂದಾಚೆ ಫಲಪುಷ್ಪ ಪ್ರದರ್ಶನ ಕೊರೋನಾದಿಂದ ರದ್ದಾಗಿದೆ. ಈ ಹಿನ್ನಲೆಯಲ್ಲಿ ಅರಮನೆಯಲ್ಲಿ ಅಂದವಾಗಿ ಚೆಂದವಾಗಿ ಫಲಪುಷ್ಪ ಪ್ರದರ್ಶನ ಅಚ್ಚುಕಟ್ಟಾಗಿ ಮಾಡಲು ಅರಮನೆ ಆಡಳಿತ ಮಂಡಳಿ ನಿರ್ಧರಿಸಿದೆ.
ಒಟ್ಟಾರೆ, ಗಜಪಡೆ ಅರಮನೆ ಅಂಗಳಕ್ಕೆ ಎಂಟ್ರಿಗೂ ಮುನ್ನವೇ ಇನ್‌ಕ್ಯಾಂಡಲ್ ಬಲ್ಬ್‌ಗಳ‌ ಬದಲಾವಣೆ ಹಾಗೂ ಫಲಪುಷ್ಪ ಪ್ರದರ್ಶನದ ಸಿದ್ದತೆ ಭರ್ಜರಿಯಾಗಿ ಸಾಗ್ತಿದ್ದು, ಈ ಬಾರಿ ದಸರಾದಲ್ಲಿ ಅರಮನೆಯೇ ಆಕರ್ಷಣೆಯ ಕೇಂದ್ರಬಿಂದು ಆಗುವುದಂತೂ ಸುಳ್ಳಲ್ಲ.
Published by: Sushma Chakre
First published: September 24, 2020, 2:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading