news18-kannada Updated:October 10, 2020, 3:32 PM IST
ಮೈಸೂರು ದಸರಾದ ಜಂಬೂ ಸವಾರಿಯ ದೃಶ್ಯ
ಮೈಸೂರು(ಅ.10): ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಏಳು ದಿನ ಬಾಕಿ ಇರುವಾಗ ದಸರಾ ಉದ್ಘಾಟಕರ ಹೆಸರು ಫೈನಲ್ ಆಗಿದೆ. 2020ರ ದಸರಾವನ್ನ ಕೊರೋನಾ ವಾರಿಯರ್ ಆಗಿರುವ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಉದ್ಘಾಟಿಸಲಿದ್ದಾರೆ. ಡಾ.ಮಂಜುನಾಥ್ ಹೆಸರನ್ನ ಘೋಷಿಸಿದ ಉಸ್ತುವಾರಿ ಸಚಿವರು, ಟೆಕ್ನಿಕಲ್ ಕಮಿಟಿ ನೀಡಿರುವ ಸಲಹೆಯಂತೆಯೇ ದಸರಾ ಉದ್ಘಾಟನೆಯನ್ನ 200 ಮಂದಿ ಸೇರಿಸಿಕೊಂಡು ಕಾರ್ಯಕ್ರಮ ಆಯೋಜಿಸುತ್ತೇವೆ ಎಂದು ಹೇಳಿದ್ದಾರೆ. ಇತ್ತ ಕಳೆದ ಬಾರಿ ದಸರಾ ಉದ್ಘಾಟಿಸಿದ್ದ ಸಾಹಿತಿ ಎಸ್.ಎಲ್. ಭೈರಪ್ಪ ಜಂಬೂಸವಾರಿಗೆ ಜನ ಯಾಕೆ ಬೇಕು? ಉದ್ಘಾಟನಾ ಕಾರ್ಯಕ್ರಮಕ್ಕೆ ಆ 200 ಮಂದಿಯೂ ಬೇಡ ಅಂತ ಆಕ್ಷೇಪ ವ್ಯಕ್ತಪಡಿಸಿದ್ದು, ಭೈರಪ್ಪ ಹೇಳಿಕೆಯೂ ಸರ್ಕಾರಕ್ಕೆ ತಲೆ ನೋವಾಗಿದೆ.
ಗೊಂದಲಗಳ ಗೂಡಾಗಿರುವ ಮೈಸೂರು ದಸರಾಗೆ ಇನ್ನು 7 ದಿನ ಮಾತ್ರ ಬಾಕಿ ಇದೆ. ಈ ನಡುವೆ ಮೈಸೂರು ದಸರಾ ಉದ್ಘಾಟಕರಾಗಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರನ್ನ ಆಯ್ಕೆ ಮಾಡಿದ್ದು, ಇನ್ನು 5 ಮಂದಿ ಕೊರೋನಾ ವಾರಿಯರ್ಸ್ಗೆ ಉದ್ಘಾಟನಾ ವೇದಿಕೆಯಲ್ಲೆ ಸನ್ಮಾನ ಮಾಡಿ ಗೌರವಿಸಲಾಗುತ್ತದೆ. ಡಾ.ಮಂಜುನಾಥ್ ಅವರ ಹೆಸರನ್ನ ಸಿಎಂ ಯಡ್ಯೂರಪ್ಪ ಅವರೇ ಫೈನಲ್ ಇಂದು ಅಧಿಕೃತವಾಗಿ ಮಂಜುನಾಥ್ ಅವರ ಹೆಸರನ್ನ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆ ಮಾಡಿದರು.

ಡಾ.ಸಿ.ಎನ್.ಮಂಜುನಾಥ್
ಡಾ.ಮಂಜುನಾಥ್ ಅವರು ದಸರಾ ಉದ್ಘಾಟನೆ ಮಾಡಿದರೆ ಇವರೊಂದಿಗೆ ಮರಗಮ್ಮ -ಪೌರಕಾರ್ಮಿಕರು, ಡಾ.ನವೀನ್ - ಆರೋಗ್ಯ ಇಲಾಖೆ ಮೆಡಿಕಲ್ ಆಫೀಸರ್, ರುಕ್ಮಿಣಿ - ಸ್ಟಾಫ್ ನರ್ಸ್, ನೂರ್ ಜಾನ್ - ಆಶಾ ಕಾರ್ಯಕರ್ತೆ, ಕುಮಾರ್ - ಮೈಸೂರು ನಗರ ಪೊಲೀಸ್ ಪೇದೆ ಹಾಗೂ ಅನಾಥ ಮೃತದೇಹಗಳ ಅಂತ್ಯ ಸಂಸ್ಕಾರ ಮಾಡುವ ಅಯೂಬ್ ಅಹಮದ್ ರನ್ನ ಸನ್ಮಾನ ಮಾಡುವ ಮೂಲಕ ಈ ಬಾರಿಯ ದಸರಾವನ್ನ ಉದ್ಘಾಟಿಸಲಾಗುವುದು ಎಂದು ಸಚಿವ ಸೋಮಶೇಖರ್ ಹೇಳಿದರು. ಇನ್ನು, ಪ್ರತಾಪ್ಸಿಂಹ ಡಾ.ಮಂಜುನಾಥ್ ಆಯ್ಕೆಯನ್ನ ಸೂಕ್ತ ಆಯ್ಕೆ ಎಂದು ಅಭಿನಂದಿಸಿದ್ದಾರೆ.
30 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು; ಎಂ.ತಿಮ್ಮಾಪುರ ಗ್ರಾಮದಲ್ಲಿ ವಿದ್ಯಾಗಮ ಕ್ಲಾಸ್ ಬಂದ್
ಇನ್ನು ಮೈಸೂರು ದಸರಾ 2020ರ ಬಗ್ಗೆ ಟಕ್ನಿಕಲ್ ಕಮಿಟಿ ನೀಡಿರುವ ವರದಿಯಂತೆಯೇ ದಸರಾ ಆಚರಿಸಲಾಗುವುದು ಅಂತ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಟೆಕ್ನಿಕಲ್ ಕಮಿಟಿ ನೀಡಿರುವ ವರದಿಯಂತೆ ದಸರಾ ಸಿದ್ದತೆ ಮಾಡ್ತಿವಿ, ಉದ್ಘಾಟನಾ ಕಾರ್ಯಕ್ರಮಕ್ಕೆ 200 ಮಂದಿ, ಜಂಬೂಸವಾರಿಗೆ 300 ಮಂದಿಗೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 50 ಮಂದಿ ಅವಕಾಶ ನೀಡಿದ್ದಾರೆ. ನಾವು ಇಷ್ಟೆ ಜನಕ್ಕೆ ಅವಕಾಶ ಮಾಡಿಕೊಡ್ತೀವಿ. ಟೆಕ್ನಿಕಲ್ ಕಮಿಟಿ ಅವರ ಸಲಹೆ ಬಿಟ್ಟು ಪರ್ಯಾಯ ವ್ಯವಸ್ಥೆ ಮಾಡುವುದಿಲ್ಲ ಎಂದು ಹೇಳಿದರು.
ಇನ್ನು ಸಂಸದ ಪ್ರತಾಪ್ ಸಿಂಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಜನರ ಜೀವನವನ್ನ ನಾವು ಅಪಾಯಕ್ಕೆ ತಳ್ಳೋಕೆ ಆಗೋಲ್ಲ, ಹಾಗಾಗಿ ಟೆಕ್ನಿಕಲ್ ಕಮಿಟಿ ವರದಿ ಸಲಹೆಯಂತೆ ದಸರಾ ಮಾಡ್ತೀವಿ ಎಂದು ತಿಳಿಸಿದರು.ಇವೆಲ್ಲದರ ನಡುವೆ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರೂ ಬೇಡ, ಜಂಬೂಸವಾರಿಯನ್ನ ಮಾವುತರೇ ಮಾಡ್ತಾರೆ. ಅದಕ್ಯಾಕೆ ಜನ ಬೇಕು ಅಂತ ಕಳೆದ ವರ್ಷ ದಸರಾ ಉದ್ಘಾಟಿಸಿದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಲ್ಲರು ಅವರ ಮನೆಯಲ್ಲೆ ದಸರಾ ಮಾಡಲಿ, ಬೆಟ್ಟದಲ್ಲಿ ಪೂಜೆ ಮಾಡಲಿ. ಅದಕ್ಕೆ 200 ಮಂದಿ ಯಾಕೆ ಭಾಗಿಯಾಗಬೇಕು. ಜಂಬೂಸವಾರಿ ನಡೆಸೋದು ಮಾವುತರು, ಅದಕ್ಕೂ ಜನರು ಬೇಕಾಗಿಲ್ಲ. ಕೆಲವರು ದಸರಾದಿಂದ ಬಿಸಿನೆಸ್ ಅಂತಾರೆ. ಜನರನ್ನ ಒಟ್ಟಾಗಿ ಸೇರಿಸಿ ಕೊರೊನಾ ಹೆಚ್ಚಾದರೆ ಹೊಣೆ ಯಾರು? ಬಿಸಿನೆಸ್ ಎಲ್ಲ ಬಿಟ್ಟು ಜನರ ಆರೋಗ್ಯದ ಬಗ್ಗೆ ಯೋಚಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಒಟ್ಟಾರೆ ಆಕ್ಷೇಪಗಳ ನಡುವೆ ಈ ಬಾರಿಯ ಸಿದ್ದತೆ ಆರಂಭವಾಗಿದ್ದು, ಸರಳ ದಸರಾ ಆದ್ರೂ ಜನರು ಹಾಗೂ ಗಣ್ಯರ ಭಾಗಿಗೆ ನಿಷೇಧ ಹೇರಲಾಗಿದೆ. ದಸರಾ ಉದ್ಘಾಟಕರ ಹೆಸರು ಸಹ ಅಂತಿಮವಾಗಿದ್ದು, ಕೊರೊನಾ ವಾರಿಯರ್ಸ್ರಿಂದ ಈ ಬಾರಿ ನಾಡದೇವಿಗೆ ಪುಷ್ಪರ್ಚನೆ ಆಗಲಿದೆ.
Published by:
Latha CG
First published:
October 10, 2020, 3:28 PM IST