Mysuru Dasara 2020: ಈ ಬಾರಿಯ ಸರಳ ದಸರಾಗೆ ಖರ್ಚಾದ ಹಣ ಎಷ್ಟು?; ಇಲ್ಲಿದೆ ಸಚಿವರು ಕೊಟ್ಟ ಲೆಕ್ಕ..!
ದಸರಾಕ್ಕೆ ಮೀಸಲಾಗಿದ್ದು 15 ಕೋಟಿ ರೂ., ಇದರಲ್ಲಿ 10 ಕೋಟಿ ಸರ್ಕಾರ ನೀಡಿದ್ರೆ, 5 ಕೋಟಿಯನ್ನ ಮೈಸೂರಿನ ಮುಡಾ ನೀಡಿತ್ತು. ಈ ಪೈಕಿ ಮೈಸೂರು ದಸರಾಗೆ ಖರ್ಚಾಗಿದ್ದು 2.05 ಕೋಟಿ ರೂ. ಒಟ್ಟಾರೆ ಖರ್ಚಾಗಿದ್ದು 2.91 ಕೋಟಿ ರೂ.ಗಳು. ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದೇವೆ ಎನ್ನುವ ಲೆಕ್ಕವನ್ನೂ ಸಚಿವ ಸೋಮಶೇಖರ್ ನೀಡಿದ್ದಾರೆ.
news18-kannada Updated:November 2, 2020, 11:01 AM IST

ಎಸ್.ಟಿ. ಸೋಮಶೇಖರ್
- News18 Kannada
- Last Updated: November 2, 2020, 11:01 AM IST
ಮೈಸೂರು(ನ.02): ದಸರಾ ಜನಸಾಮಾನ್ಯರ ಹಬ್ಬವಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದುಡ್ಡು ಮಾಡಿಕೊಳ್ಳುವ ಹಬ್ಬ ಎನ್ನುವ ಆರೋಪಗಳಿದ್ದವು. ಸಚಿವ ಎಸ್.ಟಿ.ಸೋಮಶೇಖರ್ ದಸರಾ ಮುಗಿದ ವಾರದಲ್ಲೇ ಲೆಕ್ಕ ಕೊಡುವ ಮೂಲಕ ಪಾರದರ್ಶಕತೆ ತೋರಿದ್ದಾರೆ. ಸರಳ ದಸರಾಗೆ 2 ಕೋಟಿ ಲೆಕ್ಕ ಕೊಟ್ಟಿರುವ ಸಚಿವರು ಹಾಗೂ ಜಿಲ್ಲಾಡಳಿತದ ನಡೆ ಬಗ್ಗೆ ಲೆಕ್ಕಾಚಾರಗಳ ಚರ್ಚೆ ಶುರುವಾಗಿದೆ. ವಿಶ್ವವಿಖ್ಯಾತ ದಸರಾ ಮಹೋತ್ಸವ ಅತ್ಯಂತ ಸರಳವಾಗಿ ನಡೆದು ಮುಕ್ತಾಯವಾಗಿದೆ. ಕೋವಿಡ್ ಕಾರಣಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಜನರಿಲ್ಲದ ದಸರಾ ಆಯೋಜಿಸಲಾಗಿತ್ತು. ಆದ್ರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಹೈಪವರ್ ಕಮಿಟಿ ದಸರಾಕ್ಕಾಗಿ 15 ಕೋಟಿ ರೂ. ಮೀಸಲಿಟ್ಟಿತ್ತು. ಉದ್ಘಾಟನೆ ಮತ್ತು ಜಂಬೂ ಸವಾರಿ ಬಿಟ್ಟು ಬೇರೆಲ್ಲ ಕಾರ್ಯಕ್ರಮಗಳೂ ರದ್ದಾಗಿವೆ. ಇಷ್ಟು ಸಿಂಪಲ್ ದಸರಾಕ್ಕೆ ಅಷ್ಟು ದೊಡ್ಡ ಮೊತ್ತ ಯಾಕೆ ಎನ್ನುವ ಪ್ರಶ್ನೆ ಕೇಳಿಬಂದಿತ್ತು. ಆ ಎಲ್ಲ ಪ್ರಶ್ನೆಗಳಿಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉತ್ತರ ಕೊಟ್ಟಿದ್ದಾರೆ. ದಸರಾ ಲೆಕ್ಕವನ್ನು ಮಾಧ್ಯಮ ಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ.
ಅಂದ್ರೆ, ದಸರಾಕ್ಕೆ ಮೀಸಲಾಗಿದ್ದು 15 ಕೋಟಿ ರೂ., ಇದರಲ್ಲಿ 10 ಕೋಟಿ ಸರ್ಕಾರ ನೀಡಿದ್ರೆ, 5 ಕೋಟಿಯನ್ನ ಮೈಸೂರಿನ ಮುಡಾ ನೀಡಿತ್ತು. ಈ ಪೈಕಿ ಮೈಸೂರು ದಸರಾಗೆ ಖರ್ಚಾಗಿದ್ದು 2.05 ಕೋಟಿ ರೂ. ಒಟ್ಟಾರೆ ಖರ್ಚಾಗಿದ್ದು 2.91 ಕೋಟಿ ರೂ.ಗಳು. ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದೇವೆ ಎನ್ನುವ ಲೆಕ್ಕವನ್ನೂ ಸಚಿವ ಸೋಮಶೇಖರ್ ನೀಡಿದ್ದಾರೆ. ದಸರಾ ಲೆಕ್ಕಾಚಾರದ ಹೈಲೈಟ್ ಇಲ್ಲಿದೆ. ದಸರಾ ಖರ್ಚು-ವೆಚ್ಚ
ಸಾಂಸ್ಕೃತಿಕ ಕಾರ್ಯಕ್ರಮ- 44 ಲಕ್ಷ ರೂ.
ಆನೆಗಳ ನಿರ್ವಹಣೆ- 35 ಲಕ್ಷ ರೂ.
ಉದ್ಘಾಟನೆ, ಜಂಬೂ ಸವಾರಿ- 41 ಲಕ್ಷ ರೂ.
ರಾಜವಂಶಸ್ಥರಿಗೆ ಗೌರವ ಧನ- 40 ಲಕ್ಷ ರೂ.ಶ್ರೀರಂಗಪಟ್ಟಣ ದಸರಾ- 50 ಲಕ್ಷ ರೂ.
ಚಾಮರಾಜನಗರ ದಸರಾಗೆ 36 ಲಕ್ಷ
ಒಟ್ಟು- 2,91,83,167 ರೂ.
ಕಾಂಗ್ರೆಸ್ ಛಿದ್ರ, ಕಮಲ ಭದ್ರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಕ್ಷೇತ್ರ ಬಾಚಿಕೊಳ್ಳುತ್ತಿದೆ ಬಿಜೆಪಿ..!
ಈ ಲೆಕ್ಕದಲ್ಲೂ ಹಲವು ಹುಳುಕುಗಳಿರಬಹುದು. ಆದ್ರೆ 10 ಕೋಟಿ ರೂ.ಗಳಲ್ಲಿ ಮೂರು ಕೋಟಿ ರೂ. ಮಾತ್ರ ಖರ್ಚಾಗಿದೆ ಅನ್ನೋದು ಮೇಲ್ನೋಟಕ್ಕೆ ಒಪ್ಪಿಕೊಳ್ಳಬಹುದಾದ ಲೆಕ್ಕ. ಇನ್ನುಳಿದ ಹಣ ಏನಾಯ್ತು ಎನ್ನುವ ಪ್ರಶ್ನೆಯೂ ಸಹಜವಾಗಿಯೇ ಕೇಳಿಬರುತ್ತೆ. ಈ ಬಗ್ಗೆ ಮಾತನಾಡಿದ ಸಚಿವ ಸೋಮಶೇಖರ್, ಮುಖ್ಯಮಂತ್ರಿ ಗಮನಕ್ಕೆ ತಂದು ಆ ಹಣವನ್ನ ಬಳಸುತ್ತೇವೆ ಎಂದು ಉತ್ತರಿಸಿದ್ದಾರೆ.
ಸರಳ ದಸರಾಗೆ ಎರಡು ಕೋಟಿ ಲೆಕ್ಕಾಚಾರ ಹಿನ್ನಲೆಯಲ್ಲಿ ಸಚಿವರು ಕೊಟ್ಟ ಲೆಕ್ಕಕ್ಕೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾಗಿದೆ. ಸರಳ ದಸರಾಗೆ ಇಷ್ಟೊಂದು ಖರ್ಚಾಗುತ್ತೆ ಎಂದರೆ ಹೇಗೆ ಸಾಧ್ಯ? ಇದನ್ನ ತಜ್ಞರ ಸಮಿತಿ ಮೂಲಕ ಲೆಕ್ಕ ಕೊಡಬೇಕಿದೆ ಮನಸ್ಸೋ ಇಚ್ಚೆ ಲೆಕ್ಕ ಕೊಡೋದು ಎಂದರೆ ಹೇಗೆ? ಈ ಬಗ್ಗೆ ತನಿಖೆ ಮಾಡಿಸಿ ಲೆಕ್ಕಾಚಾರ ಮಾಡಿ ಮತ್ತೊಮ್ಮೆ ಕೊಡಿ, ಇವರು ಖರ್ಚು ಮಾಡಿರೋದನ್ನ ನೋಡಿದ್ರೆ ಹೊಸದಾಗಿ ಖರೀದಿ ಮಾಡಬಹುದಿತ್ತು. ಇವರ ಲೆಕ್ಕದ ಹಣವೆಲ್ಲ ಸಾರ್ವಜನಿಕರ ತೆರಿಗೆ ಹಣ ಎಂದು ಕನ್ನಡಪರ ಹೋರಾಟಗಾರು ದಸರಾ ಲೆಕ್ಕಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಪ್ರತಿ ಬಾರಿಯೂ ದಸರಾಗೆ ಎಷ್ಟು ಹಣ ಬಿಡುಗಡೆ ಆಯ್ತು, ಎಷ್ಟು ಖರ್ಚಾಯ್ತು ಎನ್ನುವುದು ಬೆಟ್ಟದಂತಹ ಪ್ರಶ್ನೆಯಾಗಿತ್ತು. ಹಿಂದಿನ ಬಹುತೇಕ ಸರ್ಕಾರಗಳು ಲೆಕ್ಕ ಕೊಡುವ ಹೊಣೆಗಾರಿಕೆ ತೋರಿಸಿರಲಿಲ್ಲ. ಕಳೆದ ವರ್ಷ ಮೈಸೂರು ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ಕೂಡ ನಾಳೆ ಕೊಡ್ತೀನಿ, ನಾಳಿದ್ದು ಕೊಡ್ತೀನಿ ಅಂತಾನೆ ಹೇಳಿದ್ರು. ಆದ್ರೆ ಸಚಿವ ಎಸ್.ಟಿ.ಸೋಮಶೇಖರ್ ದಸರಾ ಮುಗಿದ ವಾರದಲ್ಲೇ ದಸರಾ ಲೆಕ್ಕ ಕೊಟ್ಟಿರೋದು ಶ್ಲಾಘನೀಯ ಬೆಳವಣಿಗೆ. ಈ ನಡುವೆ ಸರಳ ದಸರಾಗೆ ಇಷ್ಟೊಂದು ಹಣ ಬೇಕಿತ್ತಾ ಅನ್ನೋ ಪ್ರಶ್ನೆಯೂ ಸಹ ಜೊತೆ ಜೊತೆಗೆ ಮೂಡಿದೆ.
ಅಂದ್ರೆ, ದಸರಾಕ್ಕೆ ಮೀಸಲಾಗಿದ್ದು 15 ಕೋಟಿ ರೂ., ಇದರಲ್ಲಿ 10 ಕೋಟಿ ಸರ್ಕಾರ ನೀಡಿದ್ರೆ, 5 ಕೋಟಿಯನ್ನ ಮೈಸೂರಿನ ಮುಡಾ ನೀಡಿತ್ತು. ಈ ಪೈಕಿ ಮೈಸೂರು ದಸರಾಗೆ ಖರ್ಚಾಗಿದ್ದು 2.05 ಕೋಟಿ ರೂ. ಒಟ್ಟಾರೆ ಖರ್ಚಾಗಿದ್ದು 2.91 ಕೋಟಿ ರೂ.ಗಳು. ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದೇವೆ ಎನ್ನುವ ಲೆಕ್ಕವನ್ನೂ ಸಚಿವ ಸೋಮಶೇಖರ್ ನೀಡಿದ್ದಾರೆ. ದಸರಾ ಲೆಕ್ಕಾಚಾರದ ಹೈಲೈಟ್ ಇಲ್ಲಿದೆ.