ಮೈಸೂರು(ಅ.17): ಚಾಮುಂಡಿಬೆಟ್ಟದಲ್ಲಿ ವಿಶ್ವವಿಖ್ಯಾತ 410ನೇ ನಾಡಹಬ್ಬ ಮೈಸೂರು ದಸರಾಗೆ ಇಂದು ವಿದ್ಯುಕ್ತ ಚಾಲನೆ ನೀಡಲಾಯಿತು. ಕೊರೊನಾ ವಾರಿಯರ್ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ 2020ರ ಜಗದ್ವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದರು. ಶುಭ ತುಲಾ ಲಗ್ನದಲ್ಲಿ ಮೈಸೂರು ದಸರಾವನ್ನು ಉದ್ಘಾಟನೆ ಮಾಡಲಾಯಿತು. ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಐತಿಹಾಸಿಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವರು ಉದ್ಘಾಟಕರಿಗೆ ಜೊತೆಯಾದರು. ಕೊರೋನಾ ಹಿನ್ನೆಲೆ ಕಡಿಮೆ ಜನರಿಗೆ ದಸರಾ ಮಹೋತ್ಸವಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಸರಳ ದಸರಾ ಆಚರಣೆ ಮಾಡಲಾಗುತ್ತಿದೆ.
ದಸರಾ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದರು. ಉದ್ಘಾಟಕರಾದ ಡಾ.ಮಂಜುನಾಥ್ ಸಹ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರು. ಗಣ್ಯರು ರೇಷ್ಮೆ ಪಂಚೆ ಶಲ್ಯ ತೊಟ್ಟ ದಸರಾ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಎಸ್‌ಟಿ.ಸೋಮಶೇಖರ್ ಸಚಿವರಾದ ಹೆಚ್.ವಿಶ್ವನಾಥ್, ಬಿಸಿ.ಪಾಟೀಲ್, ಶಾಸಕರಾದ ಜಿಟಿ.ದಡೆವೇಗೌಡ, ಹರ್ಷವರ್ಧನ್, ಎಸ್‌ಎ.ರಾಮ್‌ದಾಸ್, ಸಂಸದ ಪ್ರತಾಪ್ ಸಿಂಹ ಸೇರಿ ಗಣ್ಯರು ಭಾಗಿಯಾಗಿದ್ದರು.
IPL 2020, MI vs KKR: ಡಿಕಾಕ್ ಭರ್ಜರಿ ಬ್ಯಾಟಿಂಗ್: ಕೆಕೆಆರ್ ಮಣಿಸಿ ಅಗ್ರಸ್ಥಾನಕ್ಕೇರಿದ ಮುಂಬೈ
ದಸರಾ ಉದ್ಘಾಟನಾ ವೇದಿಕೆಯಲ್ಲಿ ಆರು ಕೊರೋನಾ ವಾರಿಯರ್ಸ್‌ಗೆ ಸನ್ಮಾನ ಮಾಡಲಾಯಿತು. ಸಿಎಂ ಯಡ್ಯೂರಪ್ಪ ಹಾಗೂ ದಸರಾ ಉದ್ಘಾಟಕ ಸಿಎನ್ ಮಂಜುನಾಥ್ ಕೊರೋನಾ ವಾರಿಯರ್ಸ್‌ಗೆ ಸನ್ಮಾನ ಮಾಡಿದರು.
ಸನ್ಮಾನಿತರು
1. ಡಾ.ನವೀನ್ ಟಿ.ಆರ್.- ವೈದ್ಯಾಧಿಕಾರಿ.
2. ಶ್ರೀಮತಿ ರುಕ್ಮಿಣಿ - ಹಿರಿಯ ಶುಶ್ರುಷಾಧಿಕಾರಿ.
3. ಕುಮಾರ್ ಪಿ. ಪೊಲೀಸ್ ಕಾನ್ಸ್ಟೇಬಲ್.
4. ಶ್ರೀಮತಿ ಮರಗಮ್ಮ- ಪೌರಕಾರ್ಮಿಕರು.
5. ಶ್ರೀಮತಿ ನೂರ್ಜಾನ್ - ಆಶಾ ಕಾರ್ಯಕರ್ತೆ.
6. ಆಯೂಬ್ ಅಹ್ಮದ್ - ಸಮಾಜ ಸೇವಕರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ