Mysuru Dasara 2020: ಮೈಸೂರು ದಸರಾಗೆ ಸಕಲ ಸಿದ್ಧತೆ; ನಾಳೆ ಗಜಪಡೆ ಆಗಮನ

Mysore Dasara 2020 Date: ನಾಳೆ ಮೈಸೂರಿನ ಅರಣ್ಯ ಭವನದ ಅಂಗಳಕ್ಕೆ ಬರಲಿರುವ ಆನೆಗಳನ್ನು ಅಕ್ಟೋಬರ್ 2ರಂದು ಅರಮನೆಗೆ ಬರಮಾಡಿಕೊಳ್ಳಲಾಗುವುದು. ಅಂಬಾರಿ ಹೊರಲಿರುವ ಅಭಿಮನ್ಯು, ಆತನ ಜೊತೆಗೆ ಹೆಜ್ಜೆ ಹಾಕಲಿರುವ ವಿಕ್ರಮ, ಗೋಪಿ, ವಿಜಯಾ, ಕಾವೇರಿ ಆನೆಗಳು ನಾಳೆ ಮೈಸೂರಿಗೆ ಬರಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೈಸೂರು (ಸೆ. 30): ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ಕೆಲವೇ ದಿನಗಳು ಬಾಕಿ ಇವೆ. ಈ ಬಾರಿ ಕೊರೋನಾದಿಂದಾಗಿ ಸರಳವಾಗಿ ಕೊರೋನಾ ಆಚರಿಸಲು ನಿರ್ಧರಿಸಲಾಗಿದೆ. ಅರಮನೆಯ ಆವರಣದಲ್ಲೇ ಈ ಬಾರಿ ಜಂಬೂ ಸವಾರಿ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ನಾಳೆ ಗಜಪಡೆ ಮೈಸೂರಿಗೆ ಆಗಮಿಸಲಿದೆ. ಕೊರೊನಾ ಹಿನ್ನೆಲೆಯಲ್ಲಿ ಸರಳ, ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ನಾಳೆ ವೀರನಹೊಸಹಳ್ಳಿಯಿಂದ ಬೆಳಗ್ಗೆ 10ರಿಂದ 11ರ ಒಳಗೆ ಗಜಪಯಣಕ್ಕೆ ಪೂಜೆ ಸಲ್ಲಿಕೆಯಾಗಲಿದೆ.

ಸಾಂಪ್ರದಾಯಿಕ ಪೂಜೆ ಬಳಿಕ ಅಂಬಾರಿ ಆನೆಗಳಾದ ಅಭಿಮನ್ಯು ಮತ್ತು ತಂಡದವರು ಮೈಸೂರಿಗೆ ಪಯಣ ಬೆಳೆಸಲಿದ್ದಾರೆ. ನಾಳೆ ಮೈಸೂರಿನ ಅರಣ್ಯ ಭವನದ ಅಂಗಳಕ್ಕೆ ಬರಲಿರುವ ಆನೆಗಳನ್ನು ಅಕ್ಟೋಬರ್ 2ರಂದು ಅರಮನೆಗೆ ಬರಮಾಡಿಕೊಳ್ಳಲಾಗುವುದು. ಜಂಬೂ ಸವಾರಿಯಲ್ಲಿ ಈ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು, ಆತನ ಜೊತೆಗೆ ಹೆಜ್ಜೆ ಹಾಕಲಿರುವ ವಿಕ್ರಮ, ಗೋಪಿ, ವಿಜಯಾ, ಕಾವೇರಿ ಆನೆಗಳು ನಾಳೆ ಮೈಸೂರಿಗೆ ಬರಲಿವೆ. ಗಜಪಯಣದ ಬಳಿಕ ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಲಿದೆ.

ಇದನ್ನೂ ಓದಿ: Mysuru Dasara 2020: ಮೈಸೂರು ದಸರಾ; ಅಂಬಾರಿ ಹೊರಲು ಗಜಪಡೆಯ ಹೊಸ ಕ್ಯಾಪ್ಟನ್ ಅಭಿಮನ್ಯು ಸಜ್ಜು

ಈ ಬಾರಿ ಸರಳ ಮತ್ತು ಸಾಂಪ್ರದಾಯಕ ದಸರಾ ಆಚರಣೆ ಹಿನ್ನೆಲೆಯಲ್ಲಿ ಜಂಬೂ ಸವಾರಿ ಅರಮನೆ ಅವರಣಕ್ಕೆ ಸೀಮಿತವಾಗಿದೆ. ಆನೆಗಳು ಅರಮನೆ ಆವರಣದಲ್ಲೆ ತಾಲೀಮು ನಡೆಸಲಿವೆ. ಅರಮನೆಯಂಗಳದಲ್ಲಿ ಫಿರಂಗಿ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. 7 ಫಿರಂಗಿ ಗಾಡಿಗಳನ್ನ ಕುಶಾಲತೋಪು ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದಾರೆ. ಶುಕ್ರವಾರ ಫಿರಂಗಿ ಗಾಡಿಗಳಿಗೆ ಪೂಜೆ ನಡೆಯಲಿದೆ. ಗಜಪಡೆ, ಅಶ್ವಾರೋಹಿ ಪಡೆಗೆ ಫಿರಂಗಿ ಶಬ್ದ ಪರಿಚಯಿಸಲು ಎಂದಿನಂತೆ ಫಿರಂಗಿ ತಾಲೀಮು ನಡೆಸಲಾಗುವುದು. ಜಂಬೂ ಸವಾರಿಯಂದು 21 ಕುಶಾಲತೋಪು ಸಿಡಿಸುವ ಕಾರ್ಯ ನಡೆಯಲಿದೆ.

2020ರ ನಾಡಹಬ್ಬ ದಸರಾ ಸಿಂಪಲ್ ಆಗಿ ಆಚರಿಸುತ್ತಿದ್ದರೂ ಸಾಂಪ್ರದಾಯಿಕತೆಗೆ ಧಕ್ಕೆ ಬಾರದಂತೆ ನಿಗಾ ವಹಿಸಲಾಗಿದೆ. ಈ‌ ನಡುವೆ ಕಾಡಿನಿಂದ ನಾಡಿಗೆ ಬರುವ ಐದು ಆನೆಗಳಿಗೆ ವಾಕಿಂಗ್ ಎಲ್ಲವೂ ಅರಮನೆ ಆವರಣದಲ್ಲೇ‌ ನಡೆಯಲಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ದಸರಾ ಗಜಪಡೆಯ ಆನೆಗಳಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಿದ್ದು, ಸ್ವಚ್ಚತೆ ಹಾಗೂ ಆನೆಗಳ ತಾಲೀಮಿಗೆ ಭರ್ಜರಿ ಸಿದ್ದತೆ ಮಾಡಿಕೊಂಡಿದೆ. ಕಾಡಿನಿಂದ ನಾಡಿಗೆ ಬಂದ ಆನೆಗಳು ನಗರ ಪ್ರದೇಶ ಹಾಗೂ ರಸ್ತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಸ್ವಲ್ಪ ಸಮಯವಕಾಶ ಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಅರಮನೆಯ ಅಂಗಳದಲ್ಲಿ ಆನೆಗಳನ್ನು ಇರಿಸುವ ಸ್ಥಳದಲ್ಲಿ ಕಾಂಕ್ರೀಟ್ ರಸ್ತೆ ಸಿದ್ದಪಡಿಸಿದ್ದು, ಜಂಬೂ ಸವಾರಿ ದಿನ ಇದೇ ಮಾದರಿಯ ರಸ್ತೆಯಲ್ಲಿ ಆನೆಗಳು ಹೆಜ್ಜೆ ಹಾಕಲಿವೆ. ಈ ಹಿನ್ನೆಲೆಯಲ್ಲಿ ಈ ಅರಮನೆ ಆವರಣದಲ್ಲಿ ಈ‌ ಅದೇ ರೀತಿಯ ವಾತಾವರಣವನ್ನು ಸೃಷ್ಟಿ ಮಾಡಲಾಗಿದೆ.
Published by:Sushma Chakre
First published: