HOME » NEWS » State » MYSURU DASARA 2020 CORONA WARRIORS WILL BE INAUGURATE THIS MYSURU DASARA LG

Mysuru Dasara 2020: ಕೊರೋನಾ ವಾರಿಯರ್ಸ್​​ನಿಂದ ಮೈಸೂರು ದಸರಾ ಉದ್ಘಾಟನೆ; ಅರಮನೆ ಒಳಗೆ ಮಾತ್ರ ಜಂಬೂ ಸವಾರಿ

ಬಹುಮುಖ್ಯವಾದ ಸಂಗತಿ ಎಂದರೆ, ಈ ಬಾರಿಯ ಜಂಬೂ ಸವಾರಿ ಅರಮನೆ ಒಳಗೆ ಮಾತ್ರ ಇರುತ್ತದೆ.  ಜೊತೆಗೆ ಈ ಬಾರಿಯ ನಾಡಹಬ್ಬ ದಸರಾವನ್ನು ವಿಶೇಷವಾಗಿ  ಕೊರೋನಾ ವಾರಿಯರ್ಸ್​​​​​​ ಉದ್ಘಾಟನೆ ಮಾಡಲಿದ್ದಾರೆ.

news18-kannada
Updated:September 8, 2020, 12:25 PM IST
Mysuru Dasara 2020: ಕೊರೋನಾ ವಾರಿಯರ್ಸ್​​ನಿಂದ ಮೈಸೂರು ದಸರಾ ಉದ್ಘಾಟನೆ; ಅರಮನೆ ಒಳಗೆ ಮಾತ್ರ ಜಂಬೂ ಸವಾರಿ
ಮೈಸೂರು ದಸರಾದ ಜಂಬೂ ಸವಾರಿಯ ದೃಶ್ಯ
  • Share this:
ಬೆಂಗಳೂರು(ಸೆ.08): ಈ ಬಾರಿಯ ಮೈಸೂರು ದಸರಾ ಆಚರಣೆ ಹಾಗೂ ಜಂಬೂ ಸವಾರಿ ರೂಪುರೇಷೆ ಬಗ್ಗೆ ಇಂದು ಬೆಂಗಳೂರಿನಲ್ಲಿ ದಸರಾ ಉನ್ನತ ಮಟ್ಟದ ಸಭೆ ನಡೆಯಿತು. ಸಿಎಂ ಬಿಎಸ್​ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೈಸೂರು ದಸರಾ ಆಚರಣೆ ಕುರಿತಾಗಿ ಹಲವಾರು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.  ಮಾರಕ ಕೊರೋನಾ ವೈರಸ್​ ಹರಡುವ ಭೀತಿ ಇರುವುದರಿಂದ ಈ ಬಾರಿ ದಸರಾ ಆಚರಣೆಯನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಒಂದು ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇಂದಿನ ಸಭೆಯಲ್ಲಿ ಮೈಸೂರು ಭಾಗದ ಜನಪ್ರತಿನಿಧಿಗಳು, ಮೈಸೂರು ಜಿಲ್ಲಾಧಿಕಾರಿ ಹಾಗೂ ಇತರೆ ಸಚಿವರು ಪಾಲ್ಗೊಂಡಿದ್ದರು. ಇಂದು ನಡೆದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯ ಪ್ರಮುಖಾಂಶಗಳನ್ನು ಇಲ್ಲಿವೆ. ಈ ಬಾರಿಯ ದಸರಾ ಚಾಮುಂಡಿ ಬೆಟ್ಟ ಹಾಗೂ ಮೈಸೂರು ಅರಮನೆಗೆ ಮಾತ್ರ ಸೀಮಿತವಾಗಿರಬೇಕು. ಪ್ರತೀ ವರ್ಷದಂತೆ ಅರಮನೆಯಲ್ಲಿ ಸಂಪ್ರದಾಯದ ಕಾರ್ಯಕ್ರಮಗಳು ಇರುತ್ತವೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ.

Madikeri Dasara: ಈ ಬಾರಿ ಅದ್ದೂರಿ ಮಡಿಕೇರಿ ದಸರಾ ನಡೆಯುವುದು ಅನುಮಾನ

ಇನ್ನು, ಈ ಬಾರಿಯ ದಸರಾ ಮಹೋತ್ಸವದಲ್ಲಿ ಯುವ ದಸರಾ, ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ ಹಾಗೂ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸದಿರಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಬಹುಮುಖ್ಯವಾದ ಸಂಗತಿ ಎಂದರೆ, ಈ ಬಾರಿಯ ಜಂಬೂ ಸವಾರಿ ಅರಮನೆ ಒಳಗೆ ಮಾತ್ರ ಇರುತ್ತದೆ.  ಜೊತೆಗೆ ಈ ಬಾರಿಯ ನಾಡಹಬ್ಬ ದಸರಾವನ್ನು ವಿಶೇಷವಾಗಿ  ಕೊರೋನಾ ವಾರಿಯರ್ಸ್​​​​​​ ಉದ್ಘಾಟನೆ ಮಾಡಲಿದ್ದಾರೆ.

ಇನ್ನು, ಈ ಬಾರಿಯ ದಸರಾ ಹಬ್ಬದ ಬಜೆಟ್​ ಬಗ್ಗೆ ನೋಡುವುದಾರೆ, ಸರ್ಕಾರ ಪ್ರಾರಂಭಿಕವಾಗಿ ದಸರಾಗೆ 10 ಕೋಟಿ ಬಿಡುಗಡೆ ಮಾಡುವ ನಿರ್ಧಾರವನ್ನು ಕೈಗೊಂಡಿದೆ. ಗಡಿಯಲ್ಲಿ ಭಾರತ-ಚೀನಾ ಬಿಕ್ಕಟ್ಟು ಇರುವ ಪರಿಣಾಮ, ದಸರಾ ಮಹೋತ್ಸವದಲ್ಲಿ ಚೀನಿ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ಧರಿಸಲಾಗಿದೆ.

ಅಂತೆಯೇ ಈ ಬಾರಿ ದಸರಾ ಆನೆಗಳ ಸಂಖ್ಯೆಯಲ್ಲಿ ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಪ್ರತಿವರ್ಷ ದಸರಾ ಹಬ್ಬದಲ್ಲಿ 10ಕ್ಕೂ ಹೆಚ್ಚು ಆನೆಗಳು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದವು. ಈ ಬಾರಿ 10 ಆನೆಗಳಿಗಿಂತ ಕಡಿಮೆ ಆನೆಗಳನ್ನು ಬಳಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಯಾಕೆಂದರೆ ಈ ಬಾರಿ ಜಂಬೂ ಸವಾರಿ ಅರಮನೆ ಒಳಗೆ ಮಾತ್ರ ಸೀಮಿತವಾಗಿರುವುದರಿಂದ ಕಡಿಮೆ ಆನೆಗಳನ್ನು ಬಳಸಲು ಸಮಿತಿಯಲ್ಲಿ ಚರ್ಚೆ ನಡೆಸಲಾಗಿದೆ.
Published by: Latha CG
First published: September 8, 2020, 12:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories