ಮೈಸೂರು (ಸೆ. 23): ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಸರಳವಾಗಿದ್ದರೂ ಸಂಭ್ರಮದಿಂದ ನಡೆಸೋಕೆ ಅರಮನೆ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಸರ್ವ ರೀತಿಯಲ್ಲು ಸನ್ನದ್ಧವಾಗಿದೆ. ಈ ನಡುವೆ ಅರಮನೆ ಅಂಗಳಕ್ಕೆ ಅ. 2ರಂದು 5 ಆನೆಗಳು ಬರಲಿದ್ದು, ಆನೆಗಳ ತಾಲೀಮಿಗೆ ಅರಮನೆ ಆಡಳಿತ ಮಂಡಳಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿಸಿದೆ. ಈ ಮೂಲಕ ಆನೆಯ ತಾಲೀಮು ಹಾಗೂ ಕೋವಿಡ್ ಎಚ್ಚರಿಕೆಯನ್ನು ನಾಜೂಕಾಗಿ ನಿಬಾಯಿಸಲು ಮುಂದಾಗಿದ್ದು, ಅರಮನೆಯಲ್ಲಿ ಶುಚಿತ್ವದ ಕಾಮಗಾರಿ ಕೆಲಸ ಸಹ ಭರದಿಂದ ಸಾಗುತ್ತಿದೆ.
2020ರ ನಾಡಹಬ್ಬ ದಸರಾ ಸಿಂಪಲ್ ಆಗಿ ಆಚರಿಸುತ್ತಿದ್ದರೂ ಸಾಂಪ್ರದಾಯಿಕತೆಗೆ ಧಕ್ಕೆ ಬಾರದಂತೆ ನಿಗಾ ವಹಿಸಲಾಗಿದೆ. ಈ ನಡುವೆ ಕಾಡಿನಿಂದ ನಾಡಿಗೆ ಬರುವ ಐದು ಆನೆಗಳಿಗೆ ವಾಕಿಂಗ್ ಎಲ್ಲವೂ ಅರಮನೆ ಆವರಣದಲ್ಲೇ ನಡೆಯಲಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ದಸರಾ ಗಜಪಡೆಯ ಆನೆಗಳಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಿದ್ದು, ಸ್ವಚ್ಚತೆ ಹಾಗೂ ಆನೆಗಳ ತಾಲೀಮಿಗೆ ಭರ್ಜರಿ ಸಿದ್ದತೆ ಮಾಡಿಕೊಂಡಿದೆ. ಮೈಸೂರು ಅರಮನೆಗೆ ಲಗ್ಗೆ ಇಡುವ ಗಜಪಡೆಗೆ ವಾಕಿಂಗ್ ಮಾಡಲು ಅನುಕೂಲವಾಗುವಂತೆ ಕಾಂಕ್ರೀಟ್ ರಸ್ತೆಯನ್ನ ಮಾಡಿಸಿದ್ದು, ಆನೆ ಬರುವುದರೊಳಗೆ ಸ್ವಚ್ಚತೆ ಹಾಗೂ ಕ್ಲೀನಿಂಗ್ ಕಾರ್ಯ ಶುರು ಮಾಡಿಕೊಂಡಿದೆ.
ಈಗಾಗಲೇ ಜೆಸಿಬಿ ಮೂಲಕ ಗಿಡಗಂಟೆಗಳ ಶುಚಿತ್ವ ಕಾರ್ಯ ಭರದಿಂದ ಸಾಗಿದ್ದು, ಕೋವಿಡ್ ಹಿನ್ನಲೆಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಹಾಗಾಗಿ ಅರಮನೆ ಅಂಗಳಕ್ಕೆ ಆನೆ ಬರುವ ಮುನ್ನವೇ ಅರಮನೆಯಲ್ಲಿ ಆನೆ ಇರಿಸುವ ಸ್ಥಳ, ಸ್ನಾನ ಮಾಡಿಸುವ ಸ್ಥಳ ಸೇರಿದಂತೆ ಸುತ್ತಮುತ್ತಲಿನ ವಾತಾವರಣ ಕ್ಲೀನ್ ಆಗುತ್ತಿದೆ. ಈ ಬಾರಿ ಕೋವಿಡ್ ಹಿನ್ನಲೆಯಲ್ಲಿ ಸಾಕಷ್ಟು ಮುಂಜಾಗ್ರತೆ ಕ್ರಮ ಕೈಗೊಂಡಿದ್ದೇವೆ ಅಂತಾರೆ ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕರು.
ಇದನ್ನೂ ಓದಿ: Mysuru Dasara 2020: ಮೈಸೂರು ದಸರಾ; ಅಂಬಾರಿ ಹೊರಲು ಗಜಪಡೆಯ ಹೊಸ ಕ್ಯಾಪ್ಟನ್ ಅಭಿಮನ್ಯು ಸಜ್ಜು
ಇನ್ನು, ಕಾಡಿನಿಂದ ನಾಡಿಗೆ ಬಂದ ಆನೆಗಳು ನಗರ ಪ್ರದೇಶ ಹಾಗೂ ರಸ್ತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಸ್ವಲ್ಪ ಸಮಯವಕಾಶ ಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಅರಮನೆಯ ಅಂಗಳದಲ್ಲಿ ಆನೆಗಳನ್ನು ಇರಿಸುವ ಸ್ಥಳದಲ್ಲಿ ಕಾಂಕ್ರೀಟ್ ರಸ್ತೆ ಸಿದ್ದಪಡಿಸಿದ್ದು, ಜಂಬೂ ಸವಾರಿ ದಿನ ಇದೇ ಮಾದರಿಯ ರಸ್ತೆಯಲ್ಲಿ ಆನೆಗಳು ಹೆಜ್ಜೆ ಹಾಕಲಿವೆ. ಈ ಹಿನ್ನೆಲೆಯಲ್ಲಿ ಈ ಅರಮನೆ ಆವರಣದಲ್ಲಿ ಈ ಅದೇ ರೀತಿಯ ವಾತಾವರಣವನ್ನು ಸೃಷ್ಟಿ ಮಾಡಲಾಗಿದೆ. ವಿಶೇಷವೆಂದರೆ ಮಾವುತ, ಕಾವಾಡಿಗಳ ಆರೋಗ್ಯಕ್ಕೂ ಸೂಕ್ತ ಕ್ರಮ ವಹಿಸಿದ್ದು, ಕುಡಿಯುವ ನೀರು ಸೇರಿದಂತೆ ಸರಿಯಾದ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇವೆ ಎಂಬುದು ಅರಮನೆ ಮಂಡಳಿ ಭರವಸೆಯಾಗಿದೆ.
ಒಟ್ಟಾರೆ, ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಬಳಿಕ ಅರಮನೆಗೆ ಮಾತ್ರ ಸೀಮಿತವಾಗಿರೋ ನಾಡಹಬ್ಬ ದಸರಾ ಕಳೆ ಕಟ್ಟಲು ಅರಮನೆ ಆಡಳಿತ ಮಂಡಳಿ ಸಾಕಷ್ಟು ಕ್ರಮ ವಹಿಸುತ್ತಿದ್ದು, ಇದೀಗಾ ಆನೆಗಳ ವಾಕಿಂಗ್ ಪಾಥ್ ಮಾಡಿಸಿ, ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ. ಕೋವಿಡ್ನಲ್ಲೂ ಸರಳ ದಸರಾ ಮಾಡುತ್ತಿರೋ ಸರ್ಕಾರ ಈ ರೀತಿಯ ಸೂಕ್ಷ್ಮ ರೀತಿಯಲ್ಲಿ ಎಚ್ಚರ ವಹಿಸಿರೋದು ವಿಶೇಷ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ