HOME » NEWS » State » MYSURU DASARA 2020 5 ELEPHANTS ARE FINAL TO MYSURU DASARA LG

Mysuru Dasara 2020: ದಸರೆಗೆ ಆನೆಗಳ ಆಯ್ಕೆ ಅಂತಿಮ; ಅಕ್ಟೋಬರ್ 2ಕ್ಕೆ ಅರಮನೆ ಅಂಗಳ ಸೇರಲಿರುವ 5 ಆನೆಗಳು

Jambu Savari: ಅಂಬಾರಿ ಹೊರಲು ಅಭಿಮನ್ಯು ಆನೆಯನ್ನ ಆಯ್ಕೆ ಮಾಡಿದ್ದ ಮೈಸೂರು ಅರಣ್ಯಾ ಇಲಾಖೆ ಮನವಿಯನ್ನ ಪುರಸ್ಕರಿಸಿರುವ ಕೇಂದ್ರ ಅರಣ್ಯ ಇಲಾಖೆ, ಅಭಿಮನ್ಯು ಜೊತೆ ವಿಕ್ರಮ, ಗೋಪಿ, ವಿಜಯ ಹಾಗೂ ಕಾವೇರಿ ಆನೆಗಳನ್ನ ಈ ಬಾರಿ ದಸರೆಯಲ್ಲಿ ಭಾಗಿಯಾಗಲು ಕಾಡಿನಿಂದ ಕರೆತರಲು ಒಪ್ಪಿಗೆ ನೀಡಿದೆ.

news18-kannada
Updated:September 21, 2020, 3:43 PM IST
Mysuru Dasara 2020: ದಸರೆಗೆ ಆನೆಗಳ ಆಯ್ಕೆ ಅಂತಿಮ; ಅಕ್ಟೋಬರ್ 2ಕ್ಕೆ ಅರಮನೆ ಅಂಗಳ ಸೇರಲಿರುವ 5 ಆನೆಗಳು
ಅಭಿಮನ್ಯು ಆನೆ
  • Share this:
ಮೈಸೂರು(ಸೆ.21): ವಿಶ್ವವಿಖ್ಯಾತ ಮೈಸೂರು ದಸರಾ 2020ರ ಜಂಬೂಸವಾರಿಗೆ 5 ಆನೆಗಳ ಆಯ್ಕೆ ಅಂತಿಮವಾಗಿದೆ. ಮೈಸೂರು ಅರಣ್ಯ ಇಲಾಖೆ ಸಿಬ್ಬಂದಿ ಕಳುಹಿಸಿದ್ದ ಆನೆಗಳ ಹೆಸರನ್ನೇ ಕೇಂದ್ರ ಅರಣ್ಯ ಇಲಾಖೆ  ಅಂತಿಮಗೊಳಿಸಿದೆ. ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿಯನ್ನ ಅಭಿಮನ್ಯು ಹೆಗಲಿಗೆ ನೀಡಿದ್ದಾರೆ. ಅಕ್ಟೋಬರ್ 1ಕ್ಕೆ ಮೈಸೂರಿಗೆ ಬರಲಿರುವ ಆನೆಗಳು, ಅಕ್ಟೋಬರ್‌ 2ಕ್ಕೆ ಸಾಂಪ್ರದಾಯಿಕವಾಗಿ ಅರಮನೆ ಅಂಗಳ ಸೇರಲಿವೆ.  ಈ ಬಾರಿ ಸರಳ ದಸರಾಗೆ ನಿರ್ಧರಿಸಿರುವ ಸರ್ಕಾರದ ಸೂಚನೆಯಿಂದಾಗಿ ಜಂಬೂಸವಾರಿಯಲ್ಲಿ ಆನೆಗಳ ಸಂಖ್ಯೆಯೂ ಕಡಿಮೆ ಆಗಲಿದೆ. ಕೊರೋನಾದಿಂದಾಗಿ ದಸರಾ ಜಂಬೂಸವಾರಿ ಮೈಸೂರು ಅರಮನೆ ಅಂಗಳದ ಒಳಗೆ ನಡೆಯುವುದರಿಂದ ಕೇವಲ 5 ಆನೆಗಳು ಮಾತ್ರ ದಸರೆಯಲ್ಲಿ ಭಾಗಿಯಾಗಲು ಸರ್ಕಾರ ಅನುಮತಿ ನೀಡಿದೆ. ಅದಕ್ಕಾಗಿ ಆನೆಗಳ ಪಟ್ಟಿ ಮಾಡಿ ಕೇಂದ್ರ ಅರಣ್ಯ ಇಲಾಖೆಗೆ ಕಳುಹಿಸಿದ್ದ ಮೈಸೂರು ಅರಣ್ಯ ಇಲಾಖೆ ಅನುಮತಿ ನೀಡುವಂತೆ ಮನವಿ ಮಾಡಿತ್ತು.  ಇಂದು ಆನೆಗಳ ಆಯ್ಕೆ ಮಾಡಿ ಅನುಮತಿ ನೀಡಿರುವ ಕೇಂದ್ರ ಅರಣ್ಯಾಧಿಕಾರಿ 5 ಆನೆಗಳ ಹೆಸರು ಅಂತಿಮಗೊಳಿಸಿದೆ.

ಅಂಬಾರಿ ಹೊರಲು ಅಭಿಮನ್ಯು ಆನೆಯನ್ನ ಆಯ್ಕೆ ಮಾಡಿದ್ದ ಮೈಸೂರು ಅರಣ್ಯಾ ಇಲಾಖೆ ಮನವಿಯನ್ನ ಪುರಸ್ಕರಿಸಿರುವ ಕೇಂದ್ರ ಅರಣ್ಯ ಇಲಾಖೆ, ಅಭಿಮನ್ಯು ಜೊತೆ ವಿಕ್ರಮ, ಗೋಪಿ, ವಿಜಯ ಹಾಗೂ ಕಾವೇರಿ ಆನೆಗಳನ್ನ ಈ ಬಾರಿ ದಸರೆಯಲ್ಲಿ ಭಾಗಿಯಾಗಲು ಕಾಡಿನಿಂದ ಕರೆತರಲು ಒಪ್ಪಿಗೆ ನೀಡಿದೆ.

Karnataka Rain: ಮಳೆಯ ಆರ್ಭಟಕ್ಕೆ ನಲುಗಿದ ರಾಯಚೂರು; ಕೊಚ್ಚಿ ಹೋದ ಸೇತುವೆ, ಕುಸಿದ 500ಕ್ಕೂ ಹೆಚ್ಚು ಮನೆಗಳು

ಇನ್ನು ಅಂತಿಮವಾದ ಆನೆಗಳನ್ನು ಅಕ್ಟೋಬರ್ 1ರಂದು ಮೈಸೂರಿಗೆ ಕರೆತರಲಿದ್ದಾರೆ. ಈ ಬಾರಿ ಗಜಪಯಣ ಕಾರ್ಯಕ್ರಮ ಇರುವುದಿಲ್ಲ, ಹೀಗಾಗಿ ಅರಣ್ಯಭವನಕ್ಕೆ ಬಂದಿಳಿಯುವ ಆನೆಗಳು ಅಕ್ಟೋಬರ್ 2ರಂದು ಮೈಸೂರು ಅರಮನೆಗೆ ಬರಲಿವೆ. 5 ಆನೆಗಳ ಏಕೈಕ ತಂಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಾಂಪ್ರದಾಯಿಕ ಸ್ವಾಗತ ಕಾರ್ಯಕ್ರಮವನ್ನ ಸರಳವಾಗಿ ಮಾಡಲಾಗುವುದು. ಅಂದು ನಿಗದಿಯಾಗುವ ಶುಭಮೂಹೂರ್ತದಲ್ಲಿ ನಾವು ಆನೆಗಳನ್ನ ಅರಮನೆಗೆ ತರಲು ಸಿದ್ದತೆ ಮಾಡಿಕೊಂಡಿದ್ದೇವೆ. ನಂತರ 25 ದಿನಗಳ ಕಾಲ ಆನೆಗಳಿಗೆ ತಾಲೀಮು ನೀಡಿ ಅರಮನೆ ಅಂಗಳದಲ್ಲಿ ಜಂಬೂ ಸವಾರಿಗೆ ನಡೆಸಲು ನಾವು ಸಿದ್ದರಿದ್ದೇವೆ ಅಂತಾರೆ ಡಿಸಿಎಫ್‌ ಅಲೆಕ್ಸಾಂಡರ್‌.

ಒಟ್ಟಿನಲ್ಲಿ ಪ್ರತಿಬಾರಿಯಂತಿರದ ಈ ಬಾರಿಯ ದಸರಾದಲ್ಲಿ ಕಾರ್ಯಕ್ರಮಗಳ ಜೊತೆ ಆನೆಗಳ ಸಂಖ್ಯೆಯೂ ಇಳಿಮುಖವಾಗಿದೆ. ಹೊಸ ಜವಬ್ದಾರಿ ಹೊತ್ತಿರುವ ಅಭಿಮನ್ಯು ಆನೆ ಈ ಬಾರಿ ಜಂಬೂ ಸವಾರಿಯ ಕೇಂದ್ರಬಿಂದುವಾಗಿದ್ದಾನೆ. ಕೊರೋನಾ ಎಫೆಕ್ಟ್ ದಸರೆಯ ಸಂಭ್ರಮಗಳಿಗೆ ಕೊಕ್ಕೆ ಹಾಕಿದ್ದಂತು ಸುಳ್ಳಲ್ಲ.
Published by: Latha CG
First published: September 21, 2020, 3:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories