ಮೈಸೂರು ದಸರಾಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಿದ ನಿಯೋಗ

ಮೈಸೂರು ದಸರಾ 2019: ಮೈಸೂರು ‌ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ, ಜೆಡಿಎಸ್ ಶಾಸಕ ಜಿಟಿ ದೇವೇಗೌಡ , ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಹರ್ಷವರ್ಧನ್ ನೇತೃತ್ವದ ನಿಯೋಗದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ.

G Hareeshkumar | news18
Updated:September 14, 2019, 7:17 PM IST
ಮೈಸೂರು ದಸರಾಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಿದ ನಿಯೋಗ
ಸಿಎಂ ಯಡಿಯೂರಪ್ಪ ಅವರಿಗ ಸಚಿವ ಸೋಮಣ್ಣ ಪುಸ್ಪಗುಚ್ಛ ನೀಡಿದರು
  • News18
  • Last Updated: September 14, 2019, 7:17 PM IST
  • Share this:
ಬೆಂಗಳೂರು(ಸೆ.14): ಮೈಸೂರು ಜಿಲ್ಲಾ ಉಸ್ತುವಾರಿ ‌ಸಚಿವ ವಿ ಸೋಮಣ್ಣ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮೈಸೂರು ದಸರಾಗೆ ಅಧಿಕೃತವಾಗಿ ಆಹ್ವಾನ ನೀಡಿದರು.

ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಮೈಸೂರು ‌ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ, ಜೆಡಿಎಸ್ ಶಾಸಕ ಜಿಟಿ ದೇವೇಗೌಡ , ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಹರ್ಷವರ್ಧನ್ ನೇತೃತ್ವದ ನಿಯೋಗದಿಂದ 2019ರ ದಸರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಹ್ವಾನಿಸಿದ್ದಾರೆ.

ಮೈಸೂರು ದಸರಾ ಸ್ವಾಗತ ಸಮಿತಿಯಿಂದ ಸಿಎಂ ಯಡಿಯೂರಪ್ಪ ಅವರಿಗೆ ಅಧಿಕೃತ ಆಹ್ವಾನ ಕೊಟ್ಟಿದ್ದೇವೆ. ಮೈಸೂರಿನ‌ ಎಲ್ಲ ಪಕ್ಷಗಳ ಶಾಸಕರು ಜಿಲ್ಲಾಧಿಕಾರಿಗಳು ಸೇರಿ ಸಿಎಂಗೆ ಆಹ್ವಾನಿಸಿದ್ದೇವೆ. ಸೆ. 29 ರ ಬೆಳಗ್ಗೆ 9 ಗಂಟೆ ನಂತರ ಚಾಮುಂಡೇಶ್ವರಿ ಪೂಜೆ ಬಳಿಕ ದಸರಾ ಉದ್ಘಾಟನೆ ನಡೆಯಲಿದೆ. ಅಕ್ಟೋಬರ್ 8 ರವರೆಗೂ ವಿವಿಧ ಕಾರ್ಯಕ್ರಮ ಗಳು ನಡೆಯುತ್ತವೆ ಎಂದು ಸಚಿವ ವಿ ಸೋಮಣ್ಣ ತಿಳಿಸಿದರು.

ರಾಜ್ಯಪಾಲರನ್ನು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಈಗಾಗಲೇ ಆಹ್ವಾನ ಕೊಟ್ಟಿದ್ದೇವೆ. ದಸರ ಉತ್ಸವವನ್ನು ವ್ಯವಸ್ಥಿತವಾಗಿ ನಡೆಯುವಂತೆ ಯೋಜಿಸಿದ್ದೇವೆ. ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧೂ ಅವರನ್ನು ಆಹ್ವಾನಿಸಲು ಒಂದು ನಿಯೋಗ ಹೋಗಿದೆ ಪಿ‌ ವಿ ಸಿಂಧೂ ಸರ್ಕಾರಿ ಅತಿಥಿಯಾಗಿ ದಸರಾದಲ್ಲಿ ಭಾಗವಹಿಸುತ್ತಾರೆ ಎಂದರು.

ಇದನ್ನೂ ಓದಿ : ಮೈಸೂರು ದಸರಾ 2019: ನಾಳೆ ಅರಮನೆ ನಗರಿಗೆ ಎರಡನೇ ಹಂತದ ಗಜಪಡೆ ಆಗಮನ

ಶಾಸಕ ಎಸ್ ಎ ರಾಮದಾಸ್ ಅವರಿಗೆ ದಸರಾ ಸಮಿತಿಯಲ್ಲಿ ಬೇರೆ ಬೇರೆ ಜವಾಬ್ದಾರಿಗಳಿವೆ ಹಾಗಾಗಿ ಇವತ್ತು ನಮ್ಮ ಜತೆ ಅವರು ಬಂದಿಲ್ಲ. ಶಾಸಕ ಜಿ ಟಿ ದೇವೇಗೌಡರು ಹಿರಿಯರು, ದಸರಾ ನಡೆಸಿ ಅನುಭವ ಇರೋರು ಹಾಗಾಗಿ ಜಿಟಿಡಿಯವರೂ ನಮಗೆ ಉತ್ತಮ ಸಹಕಾರ ಕೊಡುತ್ತಾರೆ ಎಂದು ಹೇಳಿದರು.

First published:September 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ