Mysuru Politics: ಇಂದು ಮೈಸೂರು ಅಭಿವೃದ್ಧಿ ಕ್ರೆಡಿಟ್ ಪಾಲಿಟಿಕ್ಸ್ (Credit Politics) ಮತ್ತೊಂದು ಹಂತಕ್ಕೆ ತಲುಪಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ (Congress And BJP Leaders) ತೀವ್ರ ವಾಕ್ಸಮರಕ್ಕೆ ಸಾಕ್ಷಿ ಆಯ್ತು. ಸವಾಲು ಮತ್ತು ಪಾಟಿ ಸವಾಲು ಹಾಕಿಕೊಂಡ ನಾಯಕರಿಬ್ಬರೂ ಚರ್ಚೆಗೆ ಮುಂದಾಗಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರು ಮೈಸೂರು ಅಭಿವೃದ್ಧಿ (Mysuru Development) ಕುರಿತ ಬಹಿರಂಗ ಚರ್ಚೆಗೆ ಸಂಸದ ಪ್ರತಾಪ್ ಸಿಂಹ (MP Pratap Simha) ಅವರನ್ನು ಆಹ್ವಾನಿಸಿದ್ರು. ಆದರೆ ಈ ಚರ್ಚೆಗೆ ಪಕ್ಷದ ವಕ್ತಾರರನ್ನು ಕಳುಹಿಸೋದಾಗಿ ಸಿದ್ದರಾಮಯ್ಯ ಹೇಳಿದ್ರು. ಇತ್ತ ಪ್ರತಾಪ್ ಸಿಂಹ ಮೈಸೂರು ಅಭಿವೃದ್ಧಿ ಚರ್ಚೆಗೆ ವೇದಿಕೆ ಸಿದ್ಧಪಡಿಸುವಂತೆ ಹೇಳಿ ಕಾಂಗ್ರೆಸ್ ನೀಡಿದ್ದ ಸವಾಲನ್ನು ಸ್ವೀಕರಿಸಿದ್ರು.
ಈ ಹೇಳಿಕೆಗಳ ಬೆನ್ನಲ್ಲೇ ಕಾಂಗ್ರೆಸ್ ಇಂದು ಬಹಿರಂಗ ಚರ್ಚೆ ನಡೆಸಲು ಬಿಜೆಪಿಗೆ ಆಹ್ವಾನ ನೀಡಿತ್ತು. ಮೈಸೂರು ಅಭಿವೃದ್ಧಿ ಚರ್ಚೆಗೆ ಕಾಂಗ್ರೆಸ್ ಪಕ್ಷದಿಂದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ನೇಮಕಗೊಂಡಿದ್ದರು. ಕಾಂಗ್ರೆಸ್ ಸಂಸದರ ಕಚೇರಿ ಮುಂಭಾಗದಲ್ಲಿ ಚರ್ಚೆಗೆ ಸ್ಥಳ ನಿಗದಿ ಮಾಡಿತ್ತು.
ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಪಾದಯಾತ್ರೆ
ಈ ಹಿನ್ನೆಲೆ ಕಾಂಗ್ರೆಸ್ ನಾಯಕರು ತಾವೇ ಕುರ್ಚಿ ಮತ್ತು ಟೇಬಲ್ ತೆಗೆದುಕೊಂಡು ಬರೋದಾಗಿ ಹೇಳಿತ್ತು. ಇತ್ತ ಕಾಂಗ್ರೆಸ್ ನಾಯಕರಿಗೆ ಟಕ್ಕರ್ ಕೊಡಲು ಬಿಜೆಪಿ ಯುವಮೋರ್ಚಾ ನಗರದ ಮೆಟ್ರೊಪೋಲ್ ಸರ್ಕಲ್ ನಿಂದ ಕಾಂಗ್ರೆಸ್ ಕಚೇರಿಯವರೆಗೆ ಪಾದಯಾತ್ರೆ ಹಮ್ಮಿಕೊಂಡಿತ್ತು.
ಇದನ್ನೂ ಓದಿ: Puttur: ಸಮಾಧಿ ಮೇಲಿನ ಕಲ್ಲುಗಳಿಗೆ ಶಿವಲಿಂಗವನ್ನು ಹೋಲಿಸಿದ ಕಾಂಗ್ರೆಸ್ ನಾಯಕ; ದಾಖಲಾಯ್ತು ದೂರು
ಪಾದಯಾತ್ರೆ ಮೂಲಕ ಬಂದ ಬಿಜೆಪಿ ಕಾರ್ಯರ್ತರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ಪರಿಸ್ಥಿತಿ ತಿಳಿಗೊಳಿಸಿದರು.
ಮೇಜು, ಕುರ್ಚಿ ಹಿಡಿದು ಕಾಂಗ್ರೆಸ್ ಪಾದಯಾತ್ರೆ
ಇತ್ತ ಕಾಂಗ್ರೆಸ್ ಲಕ್ಷ್ಮಣ್ ಅವರ ನೇತೃತ್ವದಲ್ಲಿ ಬಿಜೆಪಿ ಕಚೇರಿಯತ್ತ ಹೊರಟಿತ್ತು. ತಮಾಟೆ ನಗಾರಿ ಬಾರಿಸುತ್ತಾ ಮೇಜು, ಕುರ್ಚಿ ಹಿಡಿದು ಹೊರಟ ಕಾಂಗ್ರೆಸ್ ನಾಯಕರನ್ನು ಪೊಲೀಸರು ದಾಸಪ್ಪ ವೃತ್ತದ ಬಳಿಯೇ ತಡೆದು, ವಶಕ್ಕೆ ಪಡೆದರು.
ನೀವು ಯಾಕೆ ಹಂದಿ ಏರಿ ಬರುವುದಕ್ಕೆ ಮುಂದಾಗಿದ್ದಿರಿ?
ಈ ಎಲ್ಲ ಬೆಳವಣಿಗೆ ಕುರಿತು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ನಾನು ಸಿದ್ದರಾಮಯ್ಯ, ಡಾ. ಎಚ್.ಸಿ. ಮಹದೇವಪ್ಪ ಜೊತೆ ಚರ್ಚೆಗೆ ಸಿದ್ಧನಿದ್ದೇನೆ. ವೀರರು ಶೂರರು ಕುದುರೆ ಏರಿ ಯುದ್ಧಕ್ಕೆ ಬರುತ್ತಾರೆ. ನೀವು ಯಾಕೆ ಹಂದಿ ಏರಿ ಬರುವುದಕ್ಕೆ ಮುಂದಾಗಿದ್ದಿರಿ? ಗುದ್ದಾಡಿದರೆ ಗಂಧದ ಜೊತೆ ಗುದ್ದಾಡಬೇಕು. ಹಂದಿ ಜೊತೆ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ನೀವು ನನ್ನ ಜೊತೆ ಚರ್ಚೆಗೆ ಹಂದಿ ಕಳಿಸಿದ್ದೀರಿ. ಅದಕ್ಕೆ ನಾವು ಹಂದಿ ಹೊಡೆಯುವವರನ್ನು ಕಳಿಸಿದ್ದೇವೆ. ಹಂದಿ ಹೊಡೆದು ಬಾ ಹೋಗು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನನ್ನೆ ಕಳುಹಿಸಿದ್ದೆ, ಹೊಡೆದು ಬಂದಿದ್ದಾರೆ.
ಖಾಲಿಯಾಗಿ ಕೂತಿದ್ದಿರಿ ಚರ್ಚೆಗೆ ಬನ್ನಿ
ಡಾ. ಮಹದೇವಪ್ಪ ನಿಮಗೆ ಈಗ ಏನೂ ಕೆಲಸ ಇದೆ ಹೇಳಿ ಸರ್.? ನೀವು ಯಾಕೆ ಚರ್ಚೆಗೆ ಬರಬಾರದು, ಬನ್ನಿ ಚರ್ಚೆಗೆ, ಮೈಸೂರು - ಬೆಂಗಳೂರು ರಸ್ತೆಗೆ 9 ಪೈಸೆ ನೀವು ಕೊಟ್ಟಿದ್ದಾರೆ ಬನ್ನಿ ಚರ್ಚೆ ಮಾಡೋಣಾ. ಖಾಲಿಯಾಗಿ ಕೂತಿದ್ದಿರಿ ಒಳ್ಳೆ ಚರ್ಚೆ ಮಾಡೋಣಾ ಬನ್ನಿ ಎಂದು ಆಹ್ವಾನಿಸಿದರು.
ಇದನ್ನೂ ಓದಿ: Udaipur Case: ಬಿಜೆಪಿ ಹಿಂದೂಗಳಿಗೆ ವಿಷ ಕೊಟ್ಟು ಬಿಡಲಿ: ಪ್ರಮೋದ್ ಮುತಾಲಿಕ್ ಕೆಂಡ
ಇದೇ ವೇಳೆ ಉದಯಪುರ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಈ ಹತ್ಯೆ ಪೈಶಾಚಿಕವಾದ ಕೊಲೆ. ಮುಸ್ಲಿಂ ಮೂಲಭೂತವಾದಿಗಳ ದೇಶದ ಶಾಂತಿ ಕೆಡಿಸುವ ಯತ್ನವಿದು. ದನಗಳ್ಳರಿಗೆ ಎರಡೇಟು ಬಿದ್ದರೆ ಆಕಾಶ ಭೂಮಿ ಒಂದಾಗುವ ರೀತಿ ಬೊಬ್ಬೆ ಹಾಕುವವರು ಈಗ ಎಲ್ಲಿದ್ದಾರೆ.? ಏನ್ಮಾಡ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ