Mysuru Dasara: ಪ್ರಯಾಣಿಕರೇ ಗಮನಿಸಿ, ಮೈಸೂರು ಪ್ರವೇಶಿಸುವ, ನಿರ್ಗಮಿಸುವ ಬಸ್​ಗಳ ಮಾರ್ಗ ಬದಲಾವಣೆ

ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ KSRTC ಗ್ರಾಮಾಂತರ ಮತ್ತು ನಗರ ಸಾರಿಗೆಗಳಿಗೆ ಅನ್ವಯವಾಗುವಂತೆ ಮಾರ್ಗದಲ್ಲಿ ಕೆಲವು ಬದಲಾವಣೆಗಳನ್ನ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಶ್ವ ವಿಖ್ಯಾತ ದಸರಾ  (Mysuru Dasara 2022) ಕಣ್ತುಂಬಿಕೊಳ್ಳಲು ಬೇರೆಯ ರಾಜ್ಯಗಳಿಂದಲೂ ಜನರು ಮೈಸೂರು (Mysuru) ನಗರ ಮತ್ತು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ (Tourist) ಬರುತ್ತಾರೆ. ಈ ಸಮಯದಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿರುತ್ತದೆ. ದಸರಾ (Dasara 2022) ಅಂಗವಾಗಿ ಒಂದು ವಾರಕ್ಕೂ ಹೆಚ್ಚು ಮೈಸೂರು (Mysuru City) ನಗರದಲ್ಲಿ ವಾಹನಗಳ ಸಂಚಾರ ಹೆಚ್ಚಾಗುತ್ತದೆ. ಈ ಹಿನ್ನೆಲೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ KSRTC ಗ್ರಾಮಾಂತರ ಮತ್ತು ನಗರ ಸಾರಿಗೆಗಳಿಗೆ ಅನ್ವಯವಾಗುವಂತೆ ಮಾರ್ಗದಲ್ಲಿ ಕೆಲವು ಬದಲಾವಣೆಗಳನ್ನ ಮಾಡಲಾಗಿದೆ.

ದಿನಾಂಕ 26-09-2022 ರಿಂದ 03-10-2022 ರವರೆಗೆ  ಪ್ರತಿದಿನ ಸಂಜೆ 4 ರಿಂದ ರಾತ್ರಿ 11 ಗಂಟೆಗಳವೆಗೆರೆ ಈ ಮಾರ್ಗ ಬದಲಾವಣೆ ಇರಲಿದೆ. ಮಾರ್ಗ ಬದಲಾವಣೆ ಹೀಗಿದೆ.

ಮೈಸೂರು -ಬೆಂಗಳೂರು ಮಾರ್ಗವಾಗಿ  ಆಗಮಿಸುವ, ನಿರ್ಗಮಿಸುವ ಬಸ್‌ಗಳ ಮಾರ್ಗ :

ಆಗಮನ

ಬೆಂಗಳೂರು ರಸ್ತೆ-ನಾಡಪ್ರಭು ಕೆಂಪೇಗೌಡ ವೃತ್ತ- ಎಡ ತಿರುವು- ರಿಂಗ್ ರಸ್ತೆ  ಮೂಲಕ ಮಹದೇವಪುರ ರಿಂಗ್ ಜಂಕ್ಷನ್ (ಸಾತಗಳ್ಳಿ ಬಸ್ ಡಿಪೋ)- ಮಹದೇವಪುರ ರಸ್ತೆ-ನೆಕ್ಸಸ್ ಸೆಂಟರ್ ಸಿಟಿ ಮಾಲ್ ಜಂಕ್ಷನ್-ಕಾಳಿಕಾಂಬಾ ದೇವಸ್ಥಾನ ರಸ್ತೆ ಜಂಕ್ಷನ್- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್-ನವಾಬ್ ಹೈದರಾಲಿ ಖಾನ್ ವೃತ್ತ-ಬಿಎನ್ ರಸ್ತೆ-KSRTC ಬಸ್ ನಿಲ್ದಾಣ (ಸಿದ್ದಲಿಂಗಪುರ ಬಳಿ ಎಡಭಾಗದ ಸರ್ವಿಸ್ ರಸ್ತೆಯಲ್ಲಿ ಏಟ್ರಿಯಂ ಹೋಟೆಲ್ ಮುಂಭಾಗ ಬಂದು ನಾಡಪ್ರಭು ಜಂಕ್ಷನ್​ಲ್ಲಿ Free Left Turn ತೆಗೆದುಕೊಳ್ಳುವುದು)

ನಿರ್ಗಮನ

KSRTC ಬಸ್ ನಿಲ್ದಾಣ, ನವಾಬ್ ಹೈದರಾಲಿ ಖಾನ್ ವೃತ್ತ-ಸರ್ಕರಿ ಭವನದ ಉತ್ತರ ದ್ವಾರದ ಜಂಕ್ಷನ್-ಡಾ.ಬಿ.ಆರ್.ಅಂಬೇಡ್ಕರ್ ವೃತ್ತ (FTS))-ಡಾ ರಾಜ್​​ಕುಮಾರ್ ವೃತ್ತ (ಫೌಂಟೇನ್ ಸರ್ಕಲ್)- ಟಿಎನ್ ನರಸಿಂಹಮೂರ್ತಿ ವೃತ್ತ(LIC ವೃತ್ತ)-ಬನ್ನಿ ಮಂಟಪ ರಸ್ತ-ನಂದಿ ಬಸಪ್ಪ ಗೋರಿ ಜಂಕ್ಷನ್-ಟೋಲ್ ಗೇಟ್-ನಾಡಪ್ರಭು ಕೆಂಪೇಗೌಡ ವೃತ್ತ- ಬೆಂಗಳೂರು ರಸ್ತೆ ಮೂಲಕ ಸಾಗುವುದು

ಇದನ್ನೂ ಓದಿ:  Traffic Rules: ಹುಷಾರ್‌! ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಬೀಳುತ್ತೆ 1 ಲಕ್ಷ ದಂಡ

ಮಡಿಕೇರಿ, ಹಾಸನ ಕಡೆಯಿಂದ ಹುಣಸೂರು ಮಾರ್ಗವಾಗಿ ಮೈಸೂರು ನಗರಕ್ಕೆ ಆಗಮಿಸುವ, ನಿರ್ಗಮಿಸುವ ಬಸ್​​ಗಳ ಮಾರ್ಗ :

ಆಗಮನ ನಿರ್ಗಮನ

ಹುಣಸೂರು ರಸ್ತೆ-ಫೀಲ್ಡ್​ ಮಾರ್ಷಲ್ ಕಾರ್ಯಪ್ಪ ವೃತ್ತ (ಮೆಟ್ರೋಪೋಲ್ ವೃತ್ತ)-ದಾಸಪ್ಪ ವೃತ್ತ-ಬಾಬು ಜಗಜೀವನರಾಂ ವೃತ್ತ (ರೈಲ್ವೇ ನಿಲ್ದಾಣ ವೃತ್ತ)-ಪುಟ್ಟು ಗೋಪಾಲಕೃಷ್ಣ ಶೆಟ್ಟಿ ವೃತ್ತ (ಜೆಕೆ ಗ್ರೌಂಡ್)-ಶೇಷಾದ್ರಿ ಅಯ್ಯರ ರಸ್ತೆ- ಸುಭಾಸ್ ಚಂದ್ರ ಭೋಸ್ ವೃತ್ತ(ಆರ್​ಎಂಸಿ) ಅಬ್ದುಲ್ ಕಲಾಂ ಅಜಾದ್ ವೃತ್ತ (ಹೈವೇ ಸರ್ಕಲ್)- ನೆಲ್ಸನ್ ಮಂಡೇಲಾ ವೃತ್ತ- ಟಿಎನ್ ನರಸಿಂಹಮೂರ್ತಿ ವೃತ್ತ (LIC ವೃತ್ತ)-ಲಿಂಕ್ ರಸ್ತೆ-ಟಿಪ್ಪು ವೃತ್ತ- ಡಾ ರಾಜ್​​ಕುಮಾರ್ ವೃತ್ತ- ಸರ್ಕಾರಿ ಭವನದ ಉತ್ತ ದ್ವಾರದ ಜಂಕ್ಷನ್-ನವಾಜ್ ಹೈದರಾಲಿ ಖಾನ್ ವೃತ್ತ- ಬಿಎನ್ ರಸ್ತೆ- KSRTC ಬಸ್ ನಿಲ್ದಾಣ

ತೆರಿಗೆ ರಿಯಾಯ್ತಿ

ಮೈಸೂರು ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಈಗಾಗಲೇ ಮೈಸೂರು ನಗರಕ್ಕೆ ಮೂರು ವಿಶೇಷ ರೈಲುಗಳನ್ನು (Railways) ಕಲ್ಪಿಸಲಾಗಿದೆ.

mysuru today news update 19 september 2022 mrq
ದಸರಾ ಸಿದ್ಧತೆ


ಬೇರೆ ರಾಜ್ಯಗಳಿಂದ ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ, ಕೆಆರ್‌ಎಸ್‌ ವೀಕ್ಷಿಸಲು ಆಗಮಿಸುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ (Tax) ನೀಡಿ ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 6ರವರೆಗೆ ಈ ವಿನಾಯಿತಿ ಸೌಲಭ್ಯ ಇರಲಿದೆ.

ಇದನ್ನೂ ಓದಿ:  Congress Protest: ಪೇಸಿಎಂ ಪೋಸ್ಟರ್ ಅಂಟಿಸಿದ ಸಿದ್ದು, ಡಿಕೆಶಿ, ಸುರ್ಜೇವಾಲರನ್ನು ವಶಕ್ಕೆ ಪಡೆದ ಪೊಲೀಸರು!

ಮೈಸೂರು ದಸರೆಗೆ ಮೂರು ವಿಶೇಷ ರೈಲುಗಳು

ಕೋವಿಡ್-19 ಕರಿ ಛಾಯೆ ಹಿನ್ನೆಲೆ ಎರಡು ವರ್ಷ ಸರಳವಾಗಿ ದಸರಾ ಆಚರಿಸಲಾಗಿತ್ತು. ಎರಡು ವರ್ಷಗಳ ಬಳಿಕ ಅದ್ಧೂರಿಯಾಗಿ ದಸರಾ ಆಚರಣೆಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ದಸರಾ ಹಿನ್ನೆಲೆ ಮೈಸೂರು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ.

Mysuru city etrance route change for dasara mrq
ಸಾಂಕೇತಿಕ ಚಿತ್ರ


ಈ ಹಿನ್ನೆಲೆ ಪ್ರವಾಸಿಗರಿಗಾಗಿ ರೈಲ್ವೇ ಇಲಾಖೆ ಮೂರು ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ಕಲ್ಪಿಸಿದೆ. ರೈಲುಗಳ ಸಂಖ್ಯೆ ಹೀಗಿದೆ 06215, 07302 ಮತ್ತು 06248
Published by:Mahmadrafik K
First published: