HOME » NEWS » State » MYSORE YASHTEL COMPANY PROVIDING OXYGEN CONCENTRATOR HOME DELIVERY IN MYSORE PMTV KVD

ಚಿಂತೆ ಬೇಡ ಮನೆ ಬಾಗಿಲಿಗೆ ತಲುಪಲಿದೆ ಆಕ್ಸಿಜನ್; ವಿನೂತನ ಸೇವೆ ಆರಂಭಿಸಿದ ಯಶ್​ಟೆಲ್​​ ಸಂಸ್ಥೆ

ಯಶ್‌ಟೆಲ್ ಸಂಸ್ಥೆ ನೀಡಿರುವ ಕಂಟ್ರೋಲ್ ರೂಂ‌ ನಂಬರ್​​ಗೆ ಕರೆ ಮಾಡಿದ ತಕ್ಷಣ ವೈದ್ಯಕೀಯ ತಂಡದ ಜೊತೆಗೆ ಸಲಹೆ ಪಡೆದುಕೊಳ್ಳುತ್ತಾರೆ. ರೋಗಿಯ ದೇಹಕ್ಕೆ ಬೇಕಾದ ಆಕ್ಸಿಜನ್ ಪ್ರಮಾಣವನ್ನ ತಿಳಿದುಕೊಂಡು, ತತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲಿಸುವವರೆಗು ಆಕ್ಸಿಜನ್ ಸಪ್ಲೈಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.

news18-kannada
Updated:May 17, 2021, 4:29 PM IST
ಚಿಂತೆ ಬೇಡ ಮನೆ ಬಾಗಿಲಿಗೆ ತಲುಪಲಿದೆ ಆಕ್ಸಿಜನ್; ವಿನೂತನ ಸೇವೆ ಆರಂಭಿಸಿದ ಯಶ್​ಟೆಲ್​​ ಸಂಸ್ಥೆ
ಉಚಿತವಾಗಿ ಹೋಂ ಡಿಲಿವರಿ
  • Share this:
ಮೈಸೂರು: ದೇಶದ್ಯಾಂತ ಕೊರೊನಾ ಆರ್ಭಟ ಹೆಚ್ಚಾದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ. ಕೊರೊನಾ ಎರಡನೇ ಅಲೆಯಲ್ಲಿ ಆಕ್ಸಿಜನ್ ಸಮಸ್ಯೆ ಇಡೀ ದೇಶವನ್ನೆ ಕಾಡಿದ್ದು, ರಾಜ್ಯದಲ್ಲೂ ಆಕ್ಸಿಜನ್ ಕೊರತೆ ಉಂಟಾಗಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ 24 ಮಂದಿ ಸಾವನ್ನಪ್ಪಿದ ದುರಂತದ ನಂತರ ಆಕ್ಸಿಜನ್ ಬೇಡಿಕೆ ಹೆಚ್ಚಾಗಿ ಕಂಡು ಬರುತ್ತಿದೆ. ಈ ಹಿನ್ನೆಲೆ ಮೈಸೂರಿನಲ್ಲಿ ಯಶ್‌ಟೆಲ್ ಸಮೂಹ ಸಂಸ್ಥೆಗಳು ಆಕ್ಸಿಜನ್ ಕೊರತೆ ನೀಗಿಸಲು ಮನೆ ಬಾಗಿಲಿಗೆ ಆಕ್ಸಿಜನ್ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. 5 ಮತ್ತು 10 ಲೀಟರ್‌ನ ಆಕ್ಸಿಜನ್ ಯಂತ್ರಗಳು ತಕ್ಷಣಕ್ಕೆ‌ ರೋಗಿಯ ಮನೆ ಬಾಗಿಲಿಗೆ ತಲುಪಲಿವೆ.

ಯಶ್‌ಟೆಲ್, ಯೂ ಡಿಜಿಟಲ್, ವಿ ಕೇರ್ ಫೌಂಡೇಶನ್ ಸಂಸ್ಥೆಗಳಿಂದ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸದ್ಯಕ್ಕೆ 10 ನೂತನ ಆಕ್ಸಿಜನ್ ಯಂತ್ರಗಳನ್ನ ಉಚಿತ ಸೇವೆಗೆ ನೀಡುತ್ತಿದ್ದಾರೆ. ಇವುಗಳು 5 ಲೀಟರ್ ಹಾಗೂ 10 ಲೀಟರ್ ಸಾಮಾರ್ಥ್ಯ ಹೊಂದಿದ್ದು, ತಂಡವೊಂದು ಮನೆ ಮನೆಗೆ ತೆರಳಿ ಆಕ್ಸಿಜನ್ ಸೇವೆ ನೀಡಲಿದೆ. ಇದಕ್ಕಾಗಿ ಮೈಸೂರು ನಗರದ ರೋಗಿಗಳು ಯಶ್‌ಟೆಲ್ ಸಂಸ್ಥೆ ನೀಡಿರುವ ಕಂಟ್ರೋಲ್ ರೂಂ‌ ನಂಬರ್​​ಗೆ ಕರೆ ಮಾಡಿದ ತಕ್ಷಣ ವೈದ್ಯಕೀಯ ತಂಡದ ಜೊತೆಗೆ ಸಲಹೆ ಪಡೆದುಕೊಳ್ಳುತ್ತಾರೆ. ರೋಗಿಯ ದೇಹಕ್ಕೆ ಬೇಕಾದ ಆಕ್ಸಿಜನ್ ಪ್ರಮಾಣವನ್ನ ತಿಳಿದುಕೊಂಡು, ತತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲಿಸುವವರೆಗು ಆಕ್ಸಿಜನ್ ಸಪ್ಲೈಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.

ಕರೆ ಮಾಡಿದ ಸಂದರ್ಭದಲ್ಲಿ ವಾಟ್ಸಪ್‌ನಲ್ಲಿ ರೋಗಿಯ ಸದ್ಯದ ಸ್ಥಿತಿಯ ಪೋಟೋಗಳನ್ನ ಕಳುಹಿಸದರೆ ಕ್ಷಿಪ್ರವಾಗಿ ಅವರ ಮನೆ ತಲುಪಲು ತಂಡ ಸನ್ನದ್ಧವಾಗಲಿದೆ. ಇಷ್ಟೇ ಅಲ್ಲದೆ ಆ ರೋಗಿಯ ಆಕ್ಸಿಜನ್ ಸಮಸ್ಯೆಯನ್ನ ನಿಭಾಯಿಸುವಷ್ಟರಲ್ಲಿ ಜಿಲ್ಲಾಡಳಿತದ ವಾರ್‌ ರೂಂಗೆ ಕರೆ ಮಾಡಿ, ರೋಗಿಗೆ ಅಗತ್ಯವಿರುವ ಬೆಡ್ ಬುಕ್ ಮಾಡುವ ಜವಬ್ದಾರಿಯನ್ನ ನಿಭಾಯಿಸುತ್ತಿದ್ದಾರೆ. ಮೈಸೂರು ನಗರದಲ್ಲಿ ಮಾತ್ರ ಈ‌ ಸೇವೆ ಲಭ್ಯವಿದ್ದು, ನಗರ ಪ್ರದೇಶದಲ್ಲಿ ಹೆಚ್ಚಿನ ಕೊರೊನಾ ಕೇಸ್ ಹಾಗೂ ಆಕ್ಸಿಜನ್ ಕೊರತೆ ಉಂಟಾಗಿರುವ ಕಾರಣ ಈ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ.

ವಿ.ಕೇರ್ ಸಂಸ್ಥೆ ಇದರ ಬಳಕೆಗೆ ಬೇಕಾದ ಸಿಬ್ಬಂದಿಯನ್ನು ನಿಯೋಜಿಸಿದ್ದು, ಯಶ್‌ಟೆಲ್ ಸಂಸ್ಥೆಯ ಸಹಕಾರದೊಂದಿಗೆ ಕಂಟ್ರೋಲ್ ರೂಂ‌ ಮೂಲಕ ಸೇವೆ ನೀಡಲಿದೆ.  ಜನರು ಇತ್ತಿಚಿಗೆ ಆಕ್ಸಿಜನ್ ಬಗ್ಗೆ ಸಾಕಷ್ಟು ಗೊಂದಲ ಹೊಂದಿದ್ದಾರೆ, ಅವರಿಗೆ ಪೂರಕ ಆಕ್ಸಿಜನ್ ಸಿಗದಿದ್ದಾಗ ಆತಂಕದಿಂದ ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ  ಅಲೆದಾಡುತ್ತಿದ್ದಾರೆ.‌ ಇಂತಹ ಪ್ರಕರಣಗಳು ಮರುಕಳಿಸದಂತೆ ಅಗತ್ಯವಿರುವ ಜನರಿಗೆ ಆಕ್ಸಿಜನ್ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನ ಜಾರಿಗೆ ತರಲಾಗಿದೆ.

ಇದನ್ನೂ ಓದಿ: 12 ವರ್ಷದೊಳಗಿನ ಮಕ್ಕಳೇ ಕೊರೋನಾ 3ನೇ ಅಲೆಯ ಟಾರ್ಗೆಟ್!? ಪೋಷಕರು ಇಂದೊಂದು ಕೆಲಸ ಮಾಡಲೇಬೇಕಂತೆ!

ಇಂದು ಯಶ್‌ಟೆಲ್ ಸಂಸ್ಥೆ ಮುಂಭಾಗದಿಂದ ಯೋಜನೆಗೆ ಹಸಿರು ನಿಶಾನೆ ತೋರಿಸಿದ್ದು ಇಂದಿನಿಂದಲೇ ಸೇವೆಯ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಜನರು 8884442102 ಸಂಖ್ಯೆಗೆ ಕರೆ ಅಥವಾ ವಾಟ್ಸಪ್ ಮೂಲಕ ಸಂಪರ್ಕಿಸಬಹುದು ಎಂದು ಯಶ್‌ಟೆಲ್ ಸಂಸ್ಥೆ ತಿಳಿಸಿದೆ.
Published by: Kavya V
First published: May 17, 2021, 4:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories