Mysore: ಮೊಹಮ್ಮದ್ ನಲಪಾಡ್​ಗೆ ಸೇರಿದ ಹೋಟೆಲ್​ನಲ್ಲಿ ಮಹಿಳೆ ಮೇಲೆ ಹಲ್ಲೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

3 ವರ್ಷಕ್ಕೆಂದು ಕೃತಿಕಾ ಗೌಡ ಹೋಟೆಲ್​ನನ್ನು ಗುತ್ತಿಗೆಗೆ ಪಡೆದಿದ್ರು.  ಆದರೆ ರೆಸ್ಟೋರೆಂಟ್ ಆರಂಭಸಿ ಒಂದು ವರ್ಷ ಕೂಡ ಕಳೆದಿಲ್ಲ ಅವಧಿಗೂ ಮೊದಲೇ ರೆಸ್ಟೋರೆಂಟ್ ಖಾಲಿ ಮಾಡುವಂತೆ ಹೋಟೆಲ್ ಮುಖ್ಯಸ್ಥ ಸಯ್ಯದ್ ರಿಯಾಜ್ ಜಗಳ ತೆಗೆದಿದ್ದಾನೆ

ಸಿಸಿಟಿವಿ ದೃಶ್ಯ

ಸಿಸಿಟಿವಿ ದೃಶ್ಯ

  • Share this:
ಮೈಸೂರು (ಮಾ.29):  ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Nalapad) ಮಾಲೀಕತ್ವದ ಹೋಟೆಲ್ ನಲ್ಲಿ (Hotel) ಯುವತಿಯೊಬ್ಬಳ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದಾರೆ. ಮೈಸೂರಿನ (Mysore) ಹೈವೆ ಸರ್ಕಲ್ ನಲ್ಲಿರುವ ನಲಪಾಡ್ ಹೋಟೆಲ್ ನಲ್ಲಿ ಕೃತಿಕಾ ಗೌಡ (Krutika Gowda) ಎಂಬ ಯುವತಿ 20 ಲಕ್ಷ ಕೊಟ್ಟ ಲೀಸ್ ನಲ್ಲಿ ರೆಸ್ಟೋರೆಂಟ್​ ನಡೆಸುತ್ತಿದ್ದರು. ಇದಕ್ಕೆ ಕಸ್ತೂರಿ ರೆಸ್ಟೋರೆಂಟ್ ಎಂಬ ಹೆಸರಿಡಲಾಗಿತ್ತು. ಹೋಟೆಲ್​ ಉಸ್ತುವಾರಿ ಸಯ್ಯದ್ ರಿಯಾಜ್​ (Syed Riaz) ಎಂಬಾತ ಹೋಟೆಲ್​ ಖಾಲಿ ಮಾಡುವಂತೆ ಜಗಳ ತೆಗೆದಿದ್ದಾನೆ. ಕೃತಿಕಾಗಳನ್ನು ಎಳೆದಾಡಿರೋ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ. ಹೋಟೆಲ್​ ಗಲಾಟೆ ವಿಚಾರ ನನಗೆ ಗೊತ್ತಿಲ್ಲ. ಈಗಾಲೇ ವಿಷಯ ಗೊತ್ತಾಗಿದ್ದು, ಇಬ್ಬರ ಬಳಿಯೂ ಮಾತಾಡಿ ಸಮಸ್ಯೆ ಬಗೆಹರಿಸುವೇ. ಇದಕ್ಕೆ ಬೇರೆ ಆಯಾಮ ಕೊಡ್ಬೇಡಿ ಎಂದು ನಲಪಾಡ್​ ಹೇಳಿದ್ದಾರೆ.

ಹೋಟೆಲ್​ ಖಾಲಿ ಮಾಡುವಂತೆ ಗಲಾಟೆ

3 ವರ್ಷಕ್ಕೆಂದು ಕೃತಿಕಾ ಗೌಡ ಹೋಟೆಲ್​ನನ್ನು ಗುತ್ತಿಗೆಗೆ ಪಡೆದಿದ್ರು.  ಆದರೆ ರೆಸ್ಟೋರೆಂಟ್ ಆರಂಭಸಿ ಒಂದು ವರ್ಷ ಕೂಡ ಕಳೆದಿಲ್ಲ ಅವಧಿಗೂ ಮೊದಲೇ ರೆಸ್ಟೋರೆಂಟ್ ಖಾಲಿ ಮಾಡುವಂತೆ ಹೋಟೆಲ್ ಮುಖ್ಯಸ್ಥ ಸಯ್ಯದ್ ರಿಯಾಜ್ ಜಗಳ ತೆಗೆದಿದ್ದಾನೆ. ವಾಗ್ವಾದ ನಡೆಯುವ ವೇಳೆ ಆತ ಕೃತಿಕಾ ಗೌಡ ಮೇಲೆ ಹಲ್ಲೆ ಮಾಡಿ ಎಳೆದಾಡಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗ್ತಿದೆ.

ಸೈಯದ್​ ಮೇಲೆ ಕೃತಿಕಾ ಗೌಡ ಆರೋಪ

ನಾನು ನಲಪಾಡ್​ ಅವರ ಹೋಟೆಲ್​ನನ್ನು ಮೂರು ವರ್ಷಕ್ಕೆ ಗುತ್ತಿಗೆ ಪಡೆದಿದ್ದೇನೆ.  ಅಗ್ರಿಮೆಂಟ್​ ಮಾಡಿಕೊಂಡು 1 ವರ್ಷವಾಗಿದೆ ಅಷ್ಟೆ, ಹೋಟೆಲ್​ ಮುಖ್ಯಸ್ಥ ಸಯ್ಯದ್​  ಹೋಟೆಲ್ ಖಾಲಿ ಮಾಡುವಂತೆ ಜಗಳ ತೆಗೆದು ಧಮ್ಕಿ ಹಾಕಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಅಂತ ಕೃತಿಕಾ ಗೌಡ ಆರೋಪಿಸಿದ್ದಾರೆ. ಇನ್ನು ನಲಪಾಡ್​ ಅವರನ್ನು  ಸಂಪರ್ಕಿಸಲು ಯತ್ನಿಸಿದ್ದೆ ಆದ್ರೆ ಸಾಧ್ಯವಾಗಿಲ್ಲ ಮೆಸೇಜ್​ ಮಾಡಿದ್ದೇನೆ ಮಹಮದ್​ ನಲಪಾಡ್​ ಅವರಿಂದ ನಮಗೆ ನ್ಯಾಯ ಸಿಗಬೇಕಿದೆ ಅಂತ ಕೃತಿಕಾ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: Shivamogga ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ; NIA ತಂಡದಿಂದ ತನಿಖೆ ಆರಂಭ

ಹಲ್ಲೆ ಮಾಡಿಲ್ಲ ಎಂದ ಸಯ್ಯದ್ ರಿಯಾಜ್​

ನಾನು ಕೃತಿಕಾ ಮೇಲೆ ಹಲ್ಲೆ ಮಾಡಿಲ್ಲ ಎಂದು ಹೋಟೆಲ್​ ಮುಖ್ಯಸ್ಥ ಸಯ್ಯದ್​ ಹೇಳಿದ್ದಾರೆ. ಕೃತಿಕಾ ಹೋಟೆಲ್​ನನ್ನು ಸರಿಯಾಗಿ ನಡೆಸಿಕೊಂಡು ಹೋಗ್ತಿಲ್ಲ, ಹೋಟೆಲ್​ಗೆ ಲಾಸ್​ ಮಾಡ್ತಿದ್ದಾಳೆ. ನಮಗೆ 30 ಲಕ್ಷ ಕೊಡಬೇಕಿದೆ. ಸಿಬ್ಬಂದಿಗಳಿಗೂ ಸಂಬಳ ಕೊಡ್ತಿಲ್ಲ. ಕೇಳಿದ್ರೆ ಜಗಳ ಮಾಡ್ತಾಳೆ. ಅನೇಕರಿಗೆ ಮೋಸ ಮಾಡಿದ್ದಾಳೆ. ಹೋಟೆಲ್​ಗೆ ಲಾಸ್ ಮಾಡಿದ ವಿಚಾರವನ್ನು ಕೇಳೋಕೆ ಹೋದ್ರೆ ಆಕೆಯೇ ಜಗಳ ತೆಗೆದು ಏನೇನೋ ಆರೋಪ ಮಾಡಿದ್ದಾಳೆಂದು ಸಯ್ಯದ್ ರಿಯಾಜ್ ಆರೋಪಿಸಿದ್ದಾರೆ.

‘ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ’- ನಲಪಾಡ್​

ಹೋಟೆಲ್​ ಗಲಾಟೆ ವಿಚಾರ ನನಗೆ ಗೊತ್ತಿಲ್ಲ. ಈಗಾಲೇ ವಿಷಯ ಗೊತ್ತಾಗಿದ್ದು, ಇಬ್ಬರ ಬಳಿಯೂ ಮಾತಾಡಿ ಸಮಸ್ಯೆ ಬಗೆಹರಿಸುವೇ. ಇದಕ್ಕೆ ಬೇರೆ ಆಯಾಮ ಕೊಡ್ಬೇಡಿ, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕೂಡಲೇ ಅವರೊಂದಿಗೆ ಮಾತಾಡಿ ಸಮಸ್ಯೆ ಬಗೆಹರಿಸುವೆ ಎಂದು ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್​ ಹೇಳಿದ್ದಾರೆ.

ಇದನ್ನೂ ಓದಿ; Bengaluru: ರಸ್ತೆ ಪಕ್ಕದಲ್ಲೇ ಮಲಗಿದ್ದ ಬಾಲಕಿ ಮೇಲೆ ಹರಿದ ಟೆಂಪೋ; 7 ವರ್ಷದ ಬಾಲಕಿ ಸಾವು

ಶಾಸಕ ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಹಲವು ಗಲಾಟೆ, ಹಲ್ಲೆ ವಿಚಾರಗಳಲ್ಲಿ ಸುದ್ದಿಯಾಗಿದ್ದಾರೆ. ಹಾಗಾಗೆ ಹಲವು ವಿವಾದಗಳನ್ನು  ಮೈ ಮೇಲೆ ಎಳೆದುಕೊಳ್ತಾರೆ. ಈಗ ಆತನ ಮಾಲೀಕತ್ವದ ಹೋಟೆಲ್ ಗಳಲ್ಲಿ ಕೂಡ ಒಂದಲ್ಲಾ ಒಂದು ಗಲಾಟೆ ನಡೆಯುತ್ತಿದೆ. ಈ ಮೂಲಕ ನಲಪಾಡ್ ಯಾವುದಾದರೊಂದು ವಿಚಾರದಲ್ಲಿ ಸುದ್ಧಿಯಾಗ್ತಿದ್ದಾರೆ.
Published by:Pavana HS
First published: