ಮೈಸೂರು ವಿವಿ Free Kashmir ಪ್ರಕರಣ; ನಿರೀಕ್ಷಣಾ ಜಾಮೀನು ಪಡೆದ ವಿದ್ಯಾರ್ಥಿನಿ ನಳಿನಿ, ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ

ನನಗೆ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷದ ಜೊತೆ ನಂಟಿಲ್ಲ. ನನ್ನ ಉದ್ದೇಶ ದ್ವೇಷ ಅಥವಾ ಸಂಚು ರೂಪಿಸುವುದು ಆಗಿರಲಿಲ್ಲ. ಕೆಲವರಲ್ಲಿ ಇರುವ ಪ್ರತ್ಯೇಕವಾದದ ಬಗ್ಗೆ ನನಗೆ ವಿರೋಧ ಇದೆ.‌ ಘಟನೆ ಬಗ್ಗೆ ನನ್ನ ಮೇಲೆ ದೇಶದ್ರೋಹದ ಕೇಸ್ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ. ಈ ಬಗ್ಗೆ ಯಾವುದೇ ವಿಚಾರಣೆಗೆ ನಾನು ಸಹಕರಿಸುತ್ತೇನೆ ಎಂದು ತನ್ನ ಪತ್ರಿಕಾಪ್ರಕಟಣೆಯಲ್ಲಿ ವಿದ್ಯಾರ್ಥಿನಿ ನಳಿನಿ ತಿಳಿಸಿದ್ದಾರೆ.

news18-kannada
Updated:January 10, 2020, 10:49 PM IST
ಮೈಸೂರು ವಿವಿ Free Kashmir ಪ್ರಕರಣ; ನಿರೀಕ್ಷಣಾ ಜಾಮೀನು ಪಡೆದ ವಿದ್ಯಾರ್ಥಿನಿ ನಳಿನಿ, ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ
ಮೈಸೂರು ವಿವಿಯಲ್ಲಿ Free Kashmir ಪೋಸ್ಟರ್
  • Share this:
ದೆಹಲಿಯ ಜವಹರ್​ ಲಾಲ್​ ವಿಶ್ವವಿದ್ಯಾಲಯಲ್ಲಿ ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಖಂಡಿಸಿ ಬುಧವಾರ ಮೈಸೂರು ವಿವಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಳಿನಿ ಬಾಲಕುಮಾರ್ ಎಂಬ ವಿದ್ಯಾರ್ಥಿನಿ Free Kashmir ಎಂಬ ಪ್ಲೇ ಕಾರ್ಡ್ ಪ್ರದರ್ಶಿಸುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. ಅಲ್ಲದೆ, ಯಾವುದೇ ಸಂದರ್ಭದಲ್ಲಿ ಬಂಧನದ ಭೀತಿಯನ್ನು ಎದುರಿಸಿದ್ದ ಅವರು ಇಂದು ನಿರೀಕ್ಷಣಾ ಜಮೀನು ಪಡೆಯುವ ಮೂಲಕ ಬಂಧನದಿಂದ ಸದ್ಯಕ್ಕೆ ತಪ್ಪಿಸಿಕೊಂಡಿದ್ದಾರೆ.

ಮೈಸೂರು ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ವಿದ್ಯಾರ್ಥಿ ನಳಿನಿ ಬಾಲಕುಮಾರ್ ಅವರಿಂದ 1 ಲಕ್ಷಕ್ಕೆ ಶ್ಯೂರಿಟಿ ಬಾಂಡ್​ ಪಡೆದು ಜಾಮೀನು ಮಂಜೂರು ಮಾಡಿದೆ.

ಜನವರಿ 8 ಸಂಜೆ ನಡೆದಿದ್ದ ಪ್ರತಿಭಟನೆಯಲ್ಲಿ ಮೈಸೂರು ವಿವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನಳಿನಿ ಬಾಲಕುಮಾರ್ ಭಾಗಿಯಾಗಿ ಫ್ರೀ ಕಾಶ್ಮಿರ್ ಪ್ಲೆಕಾರ್ಡ್ ಪ್ರದರ್ಶನ ಮಾಡಿದ್ದರು. ಜನವರಿ 9ರಂದು ಇದು ದೇಶಾದ್ಯಂತ ಸುದ್ದಿಯಾಗಿ ಜಯಲಕ್ಷೀಪುರಂ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ಕೇಸ್ ದಾಖಲಾಗಿತ್ತು. ರಾಜ್ಯಪಾಲರು ಸಹ ಮಧ್ಯಪ್ರವೇಶ ಮಾಡಿದ್ದು ವಿವಿಯಿಂದ ವರದಿ ಕೇಳಿದ್ದರು.

ಈ ಪ್ರಸಂಗದ ಭವಿಷ್ಯದಲ್ಲಿ ಉಂಟು ಮಾಡಬಹುದು ಅನಾಹುತವನ್ನು ಅರಿತ ನಳಿನಿ ನೇರವಾಗಿ ಮೈಸೂರು ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಜಾಮೀನಿಗಾಗಿ ಮನವಿ ಮಾಡಿದ್ದರು. ನಳಿನಿ ಮನವಿ ಪುರಸ್ಕರಿಸಿದ ನ್ಯಾಯಾಲಯ 1 ಲಕ್ಷ ಶ್ಯೂರಿಟಿಯೊಂದಿಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ನಳಿನ್:

ಮೈಸೂರು ವಿವಿಯಲ್ಲಿ ಪ್ರತಿಭಟನೆ ವೇಳೆ ಪ್ಲೇ ಕಾರ್ಡ್​ ಪ್ರದರ್ಶಿಸದ ಘಟನೆ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ನಳಿನಿ ಬಾಲಕುಮಾರ್​, "ಪ್ರತಿಭಟನೆಯಲ್ಲಿ ನಾನು ಸ್ವಯಂಪ್ರೇರಿತವಾಗಿ ಭಾಗವಹಿಸಿದ್ದೆ. ಯಾವುದೇ ಸಂಯೋಜಕರ ಒತ್ತಡಕ್ಕೆ ಮಣಿದು ಅವರ ಪ್ರೇರಣೆಯಿಂದ ಹೋರಾಟಕ್ಕೆ ಬಂದಿರಲಿಲ್ಲ. ನಾನು ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದು ನನಗೆ ದೇಶದ ಬಗ್ಗೆ ನಮ್ಮ ದೇಶದ ಜನರ ಬಗ್ಗೆ ಅತ್ಯಂತ ಕಾಳಜಿ ಮತ್ತು ಗೌರವವಿರುತ್ತದೆ.

ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕಾಶ್ಮೀರ ಬಿಡುಗಡೆಗೊಳಿಸಿ ಎಂಬುದನ್ನು ನಾನು ಖುದ್ದಾಗಿ ಬರೆದು ಹಿಡಿದುಕೊಂಡಿದ್ದೆ. ಇತರ ರಾಜ್ಯಗಳಲ್ಲಿ ಹೇಗೆ ಜನರು ನಿರ್ಭಯವಾಗಿ ಮತ್ತು ಸ್ವತಂತ್ರವಾಗಿ ಇದ್ದಾರೋ ಅದೇ ರೀತಿ ಜಮ್ಮು-ಕಾಶ್ಮೀರದಲ್ಲಿ ಸಹ ಜನ ಸ್ವತಂತ್ರ್ಯವಾಗಿ ನಿರ್ಭಯದಿಂದ ಬದುಕಬೇಕು. ಈ ಒಂದೇ ಒಂದು ಕಾರಣಕ್ಕಾಗಿಯೇ ನಾನು ಕಾಶ್ಮೀರ ಬಿಡುಗಡೆಗೊಳಿಸಿ ಎಂಬ ಪೋಸ್ಟರ್​ ಅನ್ನು ಹಿಡಿದುಕೊಂಡಿದ್ದೆ.ನನಗೆ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷದ ಜೊತೆ ನಂಟಿಲ್ಲ. ನನ್ನ ಉದ್ದೇಶ ದ್ವೇಷ ಅಥವಾ ಸಂಚು ರೂಪಿಸುವುದು ಆಗಿರಲಿಲ್ಲ. ಕೆಲವರಲ್ಲಿ ಇರುವ ಪ್ರತ್ಯೇಕವಾದದ ಬಗ್ಗೆ ನನಗೆ ವಿರೋಧ ಇದೆ.‌ ಘಟನೆ ಬಗ್ಗೆ ನನ್ನ ಮೇಲೆ ದೇಶದ್ರೋಹದ ಕೇಸ್ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ. ಈ ಬಗ್ಗೆ ಯಾವುದೇ ವಿಚಾರಣೆಗೆ ನಾನು ಸಹಕರಿಸುತ್ತೇನೆ ಎಂದು ತನ್ನ ಪತ್ರಿಕಾಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

ನಂತರ ವಿಡಿಯೋ ಮೂಲಕವು ಕ್ಷಮೆಯಾಚಿಸಿದ ನಳಿನ್ ಸಾರ್ವಜನಿಕರು ಹಾಗೂ ಪೊಲೀಸರ ಬಳಿ ಕ್ಷಮೆಯಾಚಿಸಿದ್ದಾರೆ. ತನ್ನ ಉದ್ದೇಶ ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಸೇರಿ ರದ್ದಾಗಿರುವ ಸೇವೆಗಳ‌ ಆರಂಭಿಸಿ ಎಂಬುದಾಗಿತ್ತು. ಅದಕ್ಕೆ ಫ್ರೀ ಕಾಶ್ಮೀರ ಎಂದು ಬರೆದುಕೊಂಡಿದ್ದೇ ಅದರಿಂದ ಉಂಟಾದ ಗೊಂದಲಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ. ಎಲ್ಲ ರೀತಿಯ ತನಿಖೆಗೆ ಸಹಕರಿಸುತ್ತೇನೆ ಎಂದು ವಿಡಿಯೋ ಮಾಡಿ ಕ್ಷಮೆಯಾಚಿಸಿದ್ದಾರೆ.‌

ಇದನ್ನೂ ಓದಿ : ಮಕ್ಕಳ ಊಟಕ್ಕಾಗಿ ಕೇವಲ 150 ರೂಪಾಯಿಗೆ ತನ್ನ ಕೂದಲನ್ನೇ ಮಾರಿಕೊಂಡ ಬಡತಾಯಿ; ತಮಿಳುನಾಡಿನಲ್ಲೊಂದು ಧಾರುಣ ಘಟನೆ
First published:January 10, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ