HOME » NEWS » State » MYSORE VACCINE SHORTAGE IN MYSORE DISTRICT PMTV KVD

ಸಾಂಸ್ಕೃತಿಕ ನಗರಿ ಜನತೆಗೆ ಸಿಗುತ್ತಿಲ್ಲ ಲಸಿಕೆ; ಸದ್ಯ ಮೊದಲ ಡೋಸ್ ಹಾಕಿಸಿಕೊಂಡವರಿಗೆ ಮಾತ್ರ ಆದ್ಯತೆ!

ಮೈಸೂರಲ್ಲಿ 20 ಸಾವಿರ ಡೋಸ್ ಮಾತ್ರ ಬಾಕಿ ಇದೆ.  ರಾಜ್ಯ ಸರ್ಕಾರದ ಬಳಿ 5 ಲಕ್ಷ ಡೋಸ್ ಗೆ ಬೇಡಿಕೆ ಇಡಲಾಗಿದೆ. ಒಂದೇ ದಿನಕ್ಕೆ ಜಿಲ್ಲೆಯಲ್ಲಿ ಇರುವ ವ್ಯಾಕ್ಸಿನ್ ಖಾಲಿಯಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

news18-kannada
Updated:May 12, 2021, 10:03 PM IST
ಸಾಂಸ್ಕೃತಿಕ ನಗರಿ ಜನತೆಗೆ ಸಿಗುತ್ತಿಲ್ಲ ಲಸಿಕೆ; ಸದ್ಯ ಮೊದಲ ಡೋಸ್ ಹಾಕಿಸಿಕೊಂಡವರಿಗೆ ಮಾತ್ರ ಆದ್ಯತೆ!
ಮೈಸೂರಲ್ಲಿ ವ್ಯಾಕ್ಸಿನ್​ ಕೊರತೆ
  • Share this:
ಮೈಸೂರು: ಕೊರೋನಾ ಸೋಂಕಿಗೆ ರಾಮಬಾಣವಾಗಿರುವ ವಾಕ್ಸಿನ್‌ ಪಡೆಯೋಕೆ 18 ವರ್ಷ ಮೇಲ್ಪಟ್ಟ ಎಲ್ಲರು ಅರ್ಹರು ಎಂದು ಸರ್ಕಾರ ಘೋಷಿಸಿದೆ. ಹೀಗಾಗಿ ಪ್ರತಿಯೊಬ್ಬರು ವಾಕ್ಸಿನ್‌ ಪಡೆಯೋಕೆ ಮುಂದಾಗುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕೊರೊನಾ ವಾಕ್ಸಿನ್‌ಗಳು ಅಲಭ್ಯವಾಗಿದ್ದು, ಸರ್ಕಾರದಿಂದ ಉಚಿತವಾಗಿ ವಾಕ್ಸಿನ್ ಹಂಚಿಕೆ ಘೋಷಣೆಯಾಗಿದ್ದರು ಪರಿಪೂರ್ಣವಾಗಿ ವಾಕ್ಸಿನ್‌ ಲಭ್ಯವಾಗುತ್ತಿಲ್ಲ. ಮೈಸೂರಿನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದೇ ಇಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಮೊದಲ ಡೋಸ್ ಹಾಕಿಸಿಕೊಂಡವರಿಗೆ ಎರಡನೆ ಡೋಸ್‌  ನೀಡುವುದೇ ಜಿಲ್ಲಾಡಳಿತದ ಮೊದಲ ಆದ್ಯತೆ ಆಗಿದೆ ಎನ್ನುತ್ತಿದ್ದಾರೆ.  

ಮೈಸೂರು ಜಿಲ್ಲೆಯ ಜನಸಂಖ್ಯೆ 33 ಲಕ್ಷದ 90 ಸಾವಿರದ 266 ಇದೆ. ಇದರಲ್ಲಿ ವ್ಯಾಕ್ಸಿನ್ ಟಾರ್ಗೆಟ್ 8,51,628 ಮಂದಿಗೆ ಎಂದು ಅಂದಾಜಿಸಲಾಗಿದೆ.  ವ್ಯಾಕ್ಸಿನ್ ಹಾಕಿಸಿಕೊಂಡಿರುವವರ ಸಂಖ್ಯೆ- 5,78, 797 ಆಗಿದ್ದು, 18 ವರ್ಷ ಮೇಲ್ಪಟ್ಟವರ ಸಂಖ್ಯೆ- 24 ಲಕ್ಷ ಇದ್ದು,  ಸದ್ಯ 18 ವರ್ಷ ಮೇಲ್ಪಟ್ಟವರಿಗೆ ಬಂದಿರುವ ವ್ಯಾಕ್ಸಿನ್- 8500 ಅಷ್ಟೇ.   45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ - 20 ಸಾವಿರ ವ್ಯಾಕ್ಸಿನ್ ಬಾಕಿ ಇದೆ,  ಎರಡನೇ ಡೋಸ್ - 1,04,217 ಮಂದಿಗೆ ಹಾಕಬೇಕಿದೆ.  ಸದ್ಯ 1 ಲಕ್ಷದಷ್ಟು ಜನರಿಗೆ ಎರಡನೇ ಡೋಸ್ ಕೊಡಬೇಕಿದ್ದು,  ಜಿಲ್ಲೆಯಲ್ಲಿ 20 ಸಾವಿರ ಡೋಸ್ ಮಾತ್ರ ಬಾಕಿ ಇದೆ.  ರಾಜ್ಯ ಸರ್ಕಾರದ ಬಳಿ 5 ಲಕ್ಷ ಡೋಸ್ ಗೆ ಬೇಡಿಕೆ ಇಡಲಾಗಿದೆ. ಒಂದೇ ದಿನಕ್ಕೆ ಜಿಲ್ಲೆಯಲ್ಲಿ ಇರುವ ವ್ಯಾಕ್ಸಿನ್ ಖಾಲಿಯಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿ ವ್ಯಾಕ್ಸಿನ್ ಪಡೆಯಲು ಬರುತ್ತಿರುವ ಜನರನ್ನ ನಿಯಂತ್ರಿಸೋದೆ ಕಷ್ಟವಾಗುತ್ತಿದೆ.  ಆಸ್ಪತ್ರೆಗಳಲ್ಲಿ ಎರಡನೇ ಡೋಸ್ ಮಾತ್ರ ವಿತರಣೆಯಾಗುತ್ತಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತಿದೆ. ನಿತ್ಯ 10 ಗಂಟೆಯಿಂದ ಪ್ರಾರಂಭವಾಗಲಿರುವ ವ್ಯಾಕ್ಸಿನೇಷನ್‌ ಅಭಿಯಾನಕ್ಕೆ ಬರುವ ಜನರು ಸರತಿ ಸಾಲಿನಲ್ಲಿ ನಿಂತು ವಾಕ್ಸಿನ್ ಪಡೆಯುತ್ತಿದ್ದಾರೆ.  ಮೈಸೂರಿ‌ನ ಮೇಟಗಳ್ಳಿಯ ಆಯುರ್ವೇದ ಆಸ್ಪತ್ರೆಗೆ ಮೊದಲ ಡೋಸ್ ಹಾಕಿಸಿಕೊಳ್ಳಲು ಬಂದವರನ್ನ ವಾಪಸ್ಸು ಕಳುಹಿಸಲಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ದಿನವೊಂದಕ್ಕೆ 150 ಮಂದಿಗೆ ಅವಕಾಶ ನೀಡಲಾಗಿದ್ದು, ಅದು ಸಹ ರಿಜಿಸ್ಟರ್ ಮಾಡಿಕೊಂಡವರಿಗೆ ಮಾತ್ರ ಮೊದಲ ಡೋಸ್ ಗೆ ಅವಕಾಶ ಎಂದು ಸಿಬ್ಬಂದಿಗಳು ಸೂಚಿಸುತ್ತಿದ್ದಾರೆ. ಇದಲ್ಲದೆ ನನಗೆ 45 ವರ್ಷವಾಗಿದೆ ರಿಜಿಸ್ಟರ್ ಮಾಡಿಕೊಂಡಿದ್ದೇನೆ ಎನ್ನುತ್ತಿರುವ  ಹಿರಿಯ ನಾಗರೀಕರಿಗು ಮೊದಲ ಡೋಸ್‌ ನೀಡುತ್ತಿಲ್ಲ.  ಕೇವಲ‌ ಸೆಕೆಂಡ್ ಡೋಸ್ ಅಷ್ಟೆ ಎಂದು ಹೇಳಿ ಕಳುಹಿಸಲಾಗುತ್ತಿದೆ.

ಇನ್ನು ಮೈಸೂರಿನಲ್ಲಿ ವ್ಯಾಕ್ಸಿನ್ ಬೇಕು ಅಂದ್ರು ಹಾಕಿಸಿಕೊಳ್ಳಲು ಸಾಧ್ಯವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆ್ಯಪ್ ಮೂಲಕ ಈಗಾಗಲೆ ರಿಜಿಸ್ಟರ್ ಮಾಡಿಕೊಂಡಿರುವ ಜನರು ವಾಕ್ಸಿನ್‌ಗಾಗಿ ಕಾಯುತ್ತಿದ್ದರೂ, ಇನ್ನು ಒಂದು ವಾರದ ವರೆಗೆ ಯಾವುದೇ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಶೆಡ್ಯೂಲ್ ತೋರಿಸುತ್ತಿಲ್ಲ.  ಒಂದು ವಾರದ ಮಾಹಿತಿ ತೋರಿಸುತ್ತಿರುವ ಕೋವಿನ್ ಆ್ಯಪ್  ವ್ಯಾಕ್ಸಿನ್ ಗಾಗಿ ಬುಕಿಂಗ್ ಮಾಡುವವರಿಗೆ ಅವಕಾಶವಿಲ್ಲ ಎಂದು ಬಿತ್ತರಿಸುತ್ತಿದೆ. ಬುಕಿಂಗ್ ಪುಲ್ ಎಂದು ತೋರಿಸುತ್ತಿರುವ ಆ್ಯಪ್ ಕಂಡು ವಾಕ್ಸಿನ್‌ ಹಾಕಿಸಿಕೊಳ್ಳಲು ಸಿದ್ದರಿದ್ದ ಜನರು ಸಿಡಿಮಿಡಿಗೊಂಡಿದ್ದಾರೆ.
ಇವೇಲ್ಲದರ ನಡುವೆ ದುಡ್ಡು ಕೊಟ್ಟ ಕಡೆ 18 ಹಾಗೂ 45 ಎಲ್ಲರಿಗೂ ಲಸಿಕೆ ಲಭ್ಯವಾಗುತ್ತಿದೆ.

ಮೈಸೂರಿನ ಹಲವು ಖಾಸಗಿ ಆಸ್ಪತ್ರೆಯಲ್ಲಿ ಪೇಯ್ಡ್‌ ವಾಕ್ಸಿನ್‌ ಅಭಿಯಾನ ನಡೆಯುತ್ತಿದೆ. ಅಪೊಲೊ ಆಸ್ಪತ್ರೆ ಲಸಿಕಾ ಕೇಂದ್ರ ಫುಲ್ ರಶ್ ಆಗಿದ್ದು, ಜ್ಞಾನ ಭಾರತಿ ಸಭಾಂಗಣದಲ್ಲಿ ನಡೆಯುತ್ತಿರುವ ಲಸಿಕೆ ಅಭಿಯಾನಕ್ಕೆ ಜನ ಮುಗಿಬಿದ್ದು ಹೋಗ್ತಿದ್ದಾರೆ. ದುಡ್ಡು ಕೊಟ್ರು ಕೋವಾಕ್ಸಿನ್ ಲಸಿಕೆ ಸಿಗ್ತಲ್ಲ, ಸದ್ಯ ಕೋವಿಶೀಲ್ಡ್ ಲಸಿಕೆ ನೀಡುತ್ತಿರುವ ಆಸ್ಪತ್ರೆ ಸಿಬ್ಬಂದಿ, ಒಂದು ಡೋಸ್ ಬೆಲೆ 850 ರೂ ನಿಗದಿ ಮಾಡಿದೆ. ವ್ಯಾಕ್ಸಿನ್ ಪಡೆಯಲು ಸಾಲುಗಟ್ಟಿ ನಿಂತರೂ ದಿನಕ್ಕೆ 500 ಮಂದಿಗಷ್ಟೆ ಅವಕಾಶ ಎಂದು ಹೇಳಿ ಜನರನ್ನ ವಾಪಸ್‌ ಕಳುಹಿಸುತ್ತಿದ್ದಾರೆ. ಇವೇಲ್ಲವನ್ನ ನೋಡಿದ್ರೆ ಮೈಸೂರಿನಲ್ಲಿ ವಾಕ್ಸಿನ್‌ಗಾಗಿ ಹಾಹಕಾರ ಬಂದಿರೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.
Published by: Kavya V
First published: May 12, 2021, 10:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories