ಫ್ರೀ ಕಾಶ್ಮಿರ್‌ ಪೋಸ್ಟರ್ ಪ್ರಕರಣ: ಬರೋಬ್ಬರಿ ಎರಡೂವರೆ ಗಂಟೆ ನಳಿನಿ ಜಾಮೀನು ಅರ್ಜಿ ವಿಚಾರಣೆ

ಅಂತಿಮವಾಗಿ ಎರಡು ಕಡೆ ವಾದ ಆಲಿಸಿದ ನ್ಯಾಯಾಧೀಶರು ತೀರ್ಪನ್ನು ಜನವರಿ 27ಕ್ಕೆ ಕಾಯ್ದಿರಿಸಿ ಕಲಾಪವನ್ನು ಮುಂದೂಡಿದರು. ಸೋಮವಾರ ನಳಿನಿಗೆ ಜಾಮೀನು ಸಿಗಲಿದೆಯಾ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.

news18-kannada
Updated:January 25, 2020, 12:29 PM IST
ಫ್ರೀ ಕಾಶ್ಮಿರ್‌ ಪೋಸ್ಟರ್ ಪ್ರಕರಣ: ಬರೋಬ್ಬರಿ ಎರಡೂವರೆ ಗಂಟೆ ನಳಿನಿ ಜಾಮೀನು ಅರ್ಜಿ ವಿಚಾರಣೆ
ನಳಿನಿ ಬಾಲಕುಮಾರ್​
  • Share this:
ಮೈಸೂರು: ಮೈಸೂರು ವಿವಿಯಲ್ಲಿ ಪ್ರತಿಭಟನೆ ವೇಳೆ ಫ್ರೀ ಕಾಶ್ಮಿರ ನಾಮಫಲಕ ಪ್ರದರ್ಶಿಸಿದ ಯುವತಿ ನಳಿನಿ ಅವರ ಜಾಮೀನು ಅರ್ಜಿ ವಿಚಾರಣೆ  ಇಂದು ಮೈಸೂರಿನ 2ನೇ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆಯಿತು. ಇತ್ತೀಚಿನ ವರ್ಷಗಳಲ್ಲಿ ಇಂದು ನಡೆದ ಜಾಮೀನು ಅರ್ಜಿ ವಿಚಾರಣೆ ದಾಖಲೆ ಪ್ರಮಾಣದ ವಾದಮಂಡನೆಯ ಸಮಯ ಪಡೆದುಕೊಂಡಿದೆ. ಕೇವಲ ಒಂದು ಜಾಮೀನು ಅರ್ಜಿ ವಿಚಾರಣೆ ಈ ಪರಿಯ ಕುತೂಹಲ ಮೂಡಿಸಿರೋದು ಸ್ವತಹ ವಕೀಲರಲ್ಲೂ ಅಚ್ಚರಿ ತಂದಿದೆ. 

ಹೌದು ಮೈಸೂರಿನ ಫ್ರೀ ಕಾಶ್ಮಿರ್ ಪ್ರಕರಣದಲ್ಲಿ ಆರೋಪಿತ ಯುವತಿ ನಳಿನಿಗೆ ಜಾಮೀನು ನೀಡಲು ಬರೋಬ್ಬರಿ 2.5 ಗಂಟೆಗಳ ಕಾಲ ವಾದವಿವಾದ ನಡೆದಿದೆ. ಬೆಂಗಳೂರಿನಿಂದ ಬಂದಿದ್ದ ವಕೀಲರ ತಂಡ ಹಾಗೂ ಸರ್ಕಾರಿ ವಕೀಲರ ವಾದ ಕೇಳಿದ ನ್ಯಾಯಾಧೀಶರು ತೀರ್ಪನ್ನ ಜನವರಿ 27ಕ್ಕೆ ಕಾಯ್ದೆರಿಸಿದೆ. ಫ್ರೀ ಕಾಶ್ಮೀರ ಪ್ಲ ಕಾರ್ಡ್ ಪ್ರದರ್ಶನ ಪ್ರಕರಣದ ಸಂಬಂಧ ಇಂದು ನಳಿನಿ  ವಕಾಲತ್ತು ವಹಿಸಲು ಬೆಂಗಳೂರಿನಿಂದ ತಂಡ ಆಗಮಿಸಿತ್ತು.

ನ್ಯಾಯಾಲಯಕ್ಕೆ ಆಗಮಿಸಿದ ವಕೀಲರು ಮುಖ್ಯು ಜಾಮೀನು ಅರ್ಜಿಯ ವಿಚಾರಣೆಯಲ್ಲಿ ಭಾಗಿಯಾದರು. ಕಲಾಪ ಆರಂಭವಾಗುತ್ತಿದ್ದಂತೆ ಅರ್ಜಿ ಮುಂದೂಡಿದ ನ್ಯಾಯಾಲಯ ಅರ್ಜಿ ವಿಚಾರಣೆಯನ್ನ ಮಧ್ಯಾಹ್ನ 3 ಕ್ಕೆ ಮುಂದೂಡಿದರು. ಕಲಾಪದಿಂದ ಹೊರಬಂದು ಮಾತನಾಡಿದ ನಳಿನಿ ಪರ ವಕೀಲ ಜಗದೀಶ್ ಫ್ರೀ ಕಾಶ್ಮೀರ ಪ್ಲಕಾರ್ಡ್ ಪ್ರದರ್ಶನ ಕೇಸ್ ವಿಚಾರವಾಗಿ ನಾವು ಮೈಸೂರು ವಕೀಲರ ಸಂಘದ ಪರವಾಗಿ ಯಾವುದೇ ಕಾಮೆಂಟ್ ಮಾಡಲ್ಲ. ಮೈಸೂರು ವಕೀಲರು ಬೆಂಗಳೂರಿಗೆ ಬರ್ತಾರೆ, ಅದೇ ರೀತಿ ನಾವು ಇಲ್ಲಿಗೆ ಬರ್ತಿವಿ ನಾವೆಲ್ಲರೂ ಅಣ್ಣತಮ್ಮಂರಿದ್ದಂತೆ. ನಮ್ಮ ವೃತ್ತಿ ಧರ್ಮ ನಾವು ಪಾಲಿಸುತ್ತಿದ್ದೆವೆ ನಳಿನಿ ದೇಶದ್ರೋಹಿ ಅಂತಾ ಸಾಬೀತು ಮಾಡಲಿಕ್ಕಾದರೂ ವಾದ ಮಾಡಬೇಕಲ್ಲವೇ? ನಾವು ಕೇಸ್ ಪರವಾಗಿ ವಕಾಲತ್ತು ವಹಿಸದಿದ್ರೆ ಯಾವುದು ಗೊತ್ತಾಗಲ್ಲ. ನಳಿನಿ ದೇಶದ್ರೋಹಿ ಅಥವಾ ದೇಶದ್ರೋಹಿಯಲ್ಲ ಅನ್ನೊದನ್ನ ನ್ಯಾಯಾಲಯ ನಿರ್ಧಾರ ಮಾಡುತ್ತದೆ, ಒಂದು ವೇಳೆ ನಳಿನಿ ದೇಶದ್ರೋಹಿಯಾಗಿದ್ರೆ ನಾವು ಅದಕ್ಕಾಗಿ ಹೆಲ್ಪ್ ಮಾಡ್ತಿದ್ದಿವಿ ಅಂತಾ ನಮ್ಮನ್ನ ಪ್ರಶಂಶಿಸಬೇಕು ಎಂದು ತಮ್ಮ ಬಗ್ಗೆ ಬರುತ್ತಿರುವ ಟೀಕೆಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ಆ ನಂತರ ಆರಂಭವಾದ ನಳಿನಿ ಮುಖ್ಯ ಜಾಮೀನು ಅರ್ಜಿ ವಿಚಾರಣೆ ಭಾರಿ ಚರ್ಚೆಗೆ ಕಾರಣವಾಯಿತು.  ಸುಧಿರ್ಘ ಎಡೂವರೆ ಗಂಟೆ ಕಾಲ ವಾದ ಮಂಡಿಸಿದ ವಕೀಲರು ನಳಿನಿಗೆ ಜಾಮೀನು ನೀಡುವ ವಿಚಾರದ ಮೇಲೆ ವಾದ ವಿವಾದ ಮಾಡಿದ್ರು. ಸರ್ಕಾರಿ ವಕೀಲರು ನಳಿನಿಗೆ ಜಾಮೀನು ನೀಡಬೇಡಿ ಎಂದು ಮನವಿ ಮಾಡಿದ್ರೆ. ನಳಿನಿ ಪರ ವಕೀಲರು ಇದು ಜಾಮೀನು ನೀಡುವಂತ ಪ್ರಕರಣ ಹಾಗಾಗಿ ಜಾಮೀನು ನೀಡಿ ಎಂದು ಕೇಳಿಕೊಂಡರು.

ಇದನ್ನೂ ಓದಿ: ಬಿಜೆಪಿಗರ ಜೀನ್​ ಪಾಕಿಸ್ತಾನದಲ್ಲಿರಬಹುದು, ನನ್ನ ಜೀನ್ ಈ ಮಣ್ಣಿನಲ್ಲಿದೆ; ಕೊಲೆ ಬೆದರಿಕೆ ಬಗ್ಗೆ ಎಚ್​ಡಿಕೆ

ವಾದ ಮಂಡನೆ ವೇಳೆ ಕಾಶ್ಮಿರದಲ್ಲಿನ ಪರಿಸ್ಥಿತಿ ಆರ್ಟಿಕಲ್ 370 ರದ್ದು ವಿಚಾರ ಹಾಗೂ ಇತರೆ ವಿಚಾರಗಳು ಚರ್ಚೆಗೆ ಬಂದವು. ಒಬ್ಬರಾದ ನಂತರ ಒಬ್ಬರು ನಳಿನಿ ಪರ ವಿರುದ್ದ ಚರ್ಚೆ ಮಾಡುತ್ತಾ ಕೋರ್ಟ್‌ ಆವರಣವನ್ನ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ರು. ಹಿಂದೆಂದೂ ಒಂದು ಜಾಮೀನು ಅರ್ಜಿ ವಿಚಾರಣೆ ವೇಳೆ ಈ ಪರಿಯ ವಾದ ಪ್ರತಿವಾದ ನಡೆದಿರೋದನ್ನ ನಾನಂತು ಕಂಡಿಲ್ಲ ಅಂತ ಹಿರಿಯ ವಕೀಲರೊಬ್ಬರು ತಮ್ಮ ಅಭಿಪ್ರಾಯ ಹೇಳಿದರು.

ಇದನ್ನೂ ಓದಿ: ಜಮ್ಮು-ಕಾಶ್ಮೀರ: ಇಂದಿನಿಂದ 2G ಮೊಬೈಲ್​​ ಇಂಟರ್​ನೆಟ್​ ಮತ್ತು ಬ್ರಾಡ್​ಬ್ಯಾಂಡ್​​ ಸೇವೆಗಳ ಮರುಸ್ಥಾಪನೆಅಂತಿಮವಾಗಿ ಎರಡು ಕಡೆ ವಾದ ಆಲಿಸಿದ ನ್ಯಾಯಾಧೀಶರು ತೀರ್ಪನ್ನು ಜನವರಿ 27ಕ್ಕೆ ಕಾಯ್ದಿರಿಸಿ ಕಲಾಪವನ್ನು ಮುಂದೂಡಿದರು.

ಈ ಮೊದಲು ನಳಿನಿ ವಿರುದ್ದ ದಾಖಲಾಗಿದ್ದ ಕೇಸು ಕುತೂಹಲವಾಗಿದ್ರೆ ಇದೀಗ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯೂ ಕುತೂಹಲವಾಗಿದೆ. ನಳಿನಿ ಪರ ವಕೀಲರು ನಳಿನಿಗೆ ಜಾಮೀನು ಕೊಡಿಸಲು ಮುಂದಾಗಿದ್ದರೆ, ಸರ್ಕಾರಿ ವಕೀಲರು ಜಾಮೀನು ಸಿಗದಲಿರಲು ವಾದ ಮಾಡಿದ್ದಾರೆ. ಸದ್ಯ ಸೋಮವಾರದವರೆಗೆ ತೀರ್ಪು ಕಾಯಬೇಕಿದ್ದು ಏನಾಗಲಿದೆ ಎಂಬ ಕುತೂಹಲ ಮನೆ ಮಾಡಿದೆ.
First published: January 25, 2020, 12:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading