Shocking News: ಬಾಲಕಿಯರೊಂದಿಗೆ ಸಾವಿನ 'ಕಣ್ಣಾಮುಚ್ಚಾಲೆ' ಆಟ! ಐಸ್ ಕ್ರೀಮ್ ಬಾಕ್ಸ್ ಒಳಗೆ ಕುಳಿತಿದ್ದ ಜವರಾಯ!
ಬೇಸಿಗೆ ರಜೆ (Summer Holiday) ಅಂತ ಕಣ್ಣಾಮುಚ್ಚಾಲೆ ಆಟ (Game) ಆಡುತ್ತಿದ್ದ ಬಾಲಕಿಯರಿಬ್ಬರು (Girls) ಸಾವನ್ನಪ್ಪಿದ್ಗಾರೆ. ಅದಕ್ಕೆ ಕಾರಣವಾಗಿದ್ದು ಐಸ್ ಕ್ರೀಮ್ ಬಾಕ್ಸ್ (Ice Cream Box) ಎಂದರೆ ನಿಮಗೆ ಆಶ್ಚರ್ಯ ಆಗಬಹುದು. ಹಾಗಿದ್ರೆ ಈ ಘಟನೆ ಏನು? ಹೇಗೆ ನಡೆಯಿತು? ಬಾಲಕಿಯರ ಸಾವಿಗೆ ಐಸ್ ಕ್ರೀಮ್ ಬಾಕ್ಸ್ ಹೇಗೆ ಕಾರಣವಾಯ್ತು ಎಂಬ ಬಗ್ಗೆ ಮಾಹಿತಿ ಇಲ್ಲಿದೆ…
ನಂಜನಗೂಡು, ಮೈಸೂರು: ಸಾವು (Death) ಹೇಗೆ ಬರುತ್ತೆ ಅಂತ ಅಂದಾಜು ಮಾಡುವುದಕ್ಕೇ ಆಗುವುದಿಲ್ಲ. ಹೊರಗೆಲ್ಲೋ ಹೋಗುವುದು ಬೇಡ, ನಮ್ಮ ಮನೆಯೊಳಗೇ ಬಂದು ಸಾವು ನಮ್ಮನ್ನು ಕರೆದೊಯ್ತುತ್ತದೆ. ಇದಕ್ಕೆ ಉದಾಹರಣೆ ಎನ್ನುವಂತೆ ಮೈಸೂರಿನ (Mysore) ನಂಜನಗೂಡು (Nanjanagud) ತಾಲೂಕಿನಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಬೇಸಿಗೆ ರಜೆ (Summer Holiday) ಅಂತ ಕಣ್ಣಾಮುಚ್ಚಾಲೆ ಆಟ (Game) ಆಡುತ್ತಿದ್ದ ಬಾಲಕಿಯರಿಬ್ಬರು (Girls) ಸಾವನ್ನಪ್ಪಿದ್ಗಾರೆ. ಅದಕ್ಕೆ ಕಾರಣವಾಗಿದ್ದು ಐಸ್ ಕ್ರೀಮ್ ಬಾಕ್ಸ್ (Ice Cream Box) ಎಂದರೆ ನಿಮಗೆ ಆಶ್ಚರ್ಯ ಆಗಬಹುದು. ಹಾಗಿದ್ರೆ ಈ ಘಟನೆ ಏನು? ಹೇಗೆ ನಡೆಯಿತು? ಬಾಲಕಿಯರ ಸಾವಿಗೆ ಐಸ್ ಕ್ರೀಮ್ ಬಾಕ್ಸ್ ಹೇಗೆ ಕಾರಣವಾಯ್ತು ಎಂಬ ಬಗ್ಗೆ ಮಾಹಿತಿ ಇಲ್ಲಿದೆ…
ನಂಜನಗೂಡಿನಲ್ಲಿ ನಡೆಯಿತು ಘೋರ ಘಟನೆ
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ಬಾಲಕಿಯರಿಬ್ಬರು ಉಸಿರುಗಟ್ಟಿ ಸಾವನ್ನಪಪಿದ್ದಾರೆ. ಗ್ರಾಮದ ತರಕಾರಿ ನಾಗರಾಜ ನಾಯ್ಕ ಹಾಗೂ ಚಿಕ್ಕದೇವಮ್ಮ ಎಂಬುವರ ಪುತ್ರಿ, 12 ವರ್ಷದ ಭಾಗ್ಯ ಹಾಗೂ ರಾಜು ನಾಯ್ಕ ಹಾಗೂ ಗೌರಮ್ಮ ಎಂಬುವರ 7 ವರ್ಷದ ಪುತ್ರಿ ಕಾವ್ಯ ಮೃತ ದುರ್ವೈವಿ ಬಾಲಕಿಯರು. ನಿನ್ನೆ ಕಣ್ಣಾಮುಚ್ಚಾಲೆ ಆಟ ಆಡುತ್ತಲೇ ಬಾಲಕಿಯರಿಬ್ಬರು ಪ್ರಾಣ ಬಿಟ್ಟಿದ್ದಾರೆ.
ಐಸ್ ಕ್ರೀಮ್ ಬಾಕ್ಸ್ನೊಳಗೆ ಬಚ್ಚಿಟ್ಟುಕೊಂಡ ಬಾಲಕಿಯರು
ಶಾಲೆಗೆ ಹೋಗುತ್ತಿದ್ದ ಬಾಲಕಿಯರು ಬೇಸಿಗೆ ರಜೆ ಪ್ರಾರಂಭವಾಗಿರುವುದಿಂದ ಆಟ ಆಡುತ್ತಾ ಇದ್ದರು. ನಿನ್ನೆಯೂ ಕೂಡ ಹಳ್ಳಿಯ ಸೊಗಡಿನ ಕಣ್ಣಾ ಮುಚ್ಚಾಲೆ ಆಟ ಆಡಲು ಪ್ರಾರಂಭಿಸಿದ್ದಾರೆ. ಈ ವೇಳೆ ತಗಡೂರು ಗ್ರಾಮದ ಹನುಮಂತ ನಾಯಕ ಎಂಬುವರಿಗೆ ಸೇರಿದ ಐಸ್ ಕ್ರೀಮ್ ಬಾಕ್ಸ್ ಕಾಣಿಸಿದೆ. ಇಬ್ಬರು ಬಾಲಕಿಯರು ಅದರೊಳಗೆ ಕುಳಿತು, ಬಾಗಿಲು ಲಾಕ್ ಮಾಡಿಕೊಂಡಿದ್ದಾರೆ.
ಕಣ್ಣಾ ಮುಚ್ಚಾಲೆ ಆಡುತ್ತಾ ಐಸ್ ಕ್ರೀಮ್ ಬಾಕ್ಸ್ ಒಳಗೆ ಕುಳಿತ ಬಾಲಕಿಯರು ಅಲ್ಲಿ ಲಾಕ್ ಮಾಡಿಕೊಂಡಿದ್ದಾರೆ. ಹೀಗಾಗಿ ಯಾರಿಗೂ ತಿಳಿಯಲಿಲ್ಲ. ಈ ವೇಳೆ ಅಲ್ಲಿ ಉಸಿರಾಡಲು ಸಾಧ್ಯವಾಗದೇ ಒದ್ದಾಡಿದ್ದಾರೆ. ಆದರೆ ಅವರ ಒದ್ದಾಟ, ಕೂಗು ಹೊರಕ್ಕೆ ಕೇಳಿಸದ ಕಾರಣ ಯಾರೂ ಅತ್ತ ಗಮನ ಕೊಡಲಿಲ್ಲ. ಹೀಗಾಗಿ ಉಸಿರಾಡಲು ಸಾಧ್ಯವಾಗದೇ ಒದ್ದಾಡುತ್ತಾ ಬಾಲಕಿಯರಿಬ್ಬರು ಪ್ರಾಣ ಬಿಟ್ಟಿದ್ದಾರೆ.
ಅರ್ಧ ಗಂಟೆ ಬಳಿಕ ಗಮನಿಸಿದ ಸ್ಥಳೀಯರು
ಸುಮಾರು ಅರ್ಧ ಗಂಟೆ ಸಮಯ ಕಳೆದರೂ ಬಾಲಕಿಯರಿಬ್ಬರ ಪತ್ತೆಯೇ ಆಗಿಲ್ಲ. ಹೀಗಾಗಿ ಆಟ ಆಡಲು ಬಂದಿದ್ದ ಇತರೇ ಮಕ್ಕಳು, ಅಕ್ಕ ಪಕ್ಕದ ಮನೆಯವರೆಲ್ಲ ಬಾಲಕಿಯರಿಗಾಗಿ ಹುಡುಕಿದ್ದಾರೆ. ಕೊನೆಗೆ ಐಸ್ ಕ್ರೀಮ್ ಬಾಕ್ಸ್ನಲ್ಲಿ ಇರುವುದು ಗೊತ್ತಾಗಿದೆ. ಕೊನೆಗೆ ಬಾಗಿಲು ತೆರೆದು ನೋಡಿದಾಗ ಅದಾಗಲೇ ಬಾಲಕಿಯರು ಇಬ್ಬರೂ ಉಸಿರುಗಟ್ಟಿ ಸಾವನ್ನಪ್ಪಿದ್ದರು.
ನಂಜನಗೂಡು ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿರುವ ಮಸಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆದರೂ ಈ ಪ್ರಕರಣದ ವಿಚಾರವಾಗಿ ಯಾವುದೇ ದೂರು ದಾಖಲಾಗಿಲ್ಲ. ಯಾವುದೆ ದೂರು ದಾಖಲಿಸದೆ ಹೆತ್ತವರು ಹಾಗೂ ಗ್ರಾಮಸ್ಥರು, ಸಂಬಂಧಿಕರು ಸೇರಿ ಮೃತ ಬಾಲಕಿಯರಿಬ್ಬರ ಶವ ಸಂಸ್ಕಾರ ನಡೆಸಿದ್ದಾರೆ. ಇನ್ನು ಬಾಲಕಿಯರನ್ನು ಕಳೆದುಕೊಂಡ ಹೆತ್ತವರು, ಕುಟುಂಬಸ್ಥರ ಶೋಕ ಮುಗಿಲು ಮುಟ್ಟಿದೆ. ಪುಟ್ಟ ಮಕ್ಕಳ ಸಾವಿನಿಂದಾಗಿ ಇಡೀ ಮಸಗೆ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ