HOME » NEWS » State » MYSORE TOURISM FALLS DOWN DUE TO COVID SECOND WAVE PMTV SESR

Mysore: ಕೊರೋನಾ ಎರಡನೇ ಅಲೆ ಪರಿಣಾಮ; ಪಾತಾಳಕ್ಕೆ ಕುಸಿದ ಮೈಸೂರು ಪ್ರವಾಸೋದ್ಯಮ

ಪ್ರವಾಸಿಗರನ್ನೇ ನಂಬಿದ್ದ ವ್ಯಾಪಾರಸ್ಥರಿಗೆ ಕೊರೋನಾ ಹೊಡೆತ ಹೆಚ್ಚಾಗಿದ್ದು, ಬಾಡಿಗೆ ಕಟ್ಟಲಾಗದೆ, ಲೋನ್‌ ತೀರಿಸಲಾಗದೆ ಪರದಾಡುವಂತಾಗಿದೆ. 

news18-kannada
Updated:April 14, 2021, 5:47 PM IST
Mysore: ಕೊರೋನಾ ಎರಡನೇ ಅಲೆ ಪರಿಣಾಮ; ಪಾತಾಳಕ್ಕೆ ಕುಸಿದ ಮೈಸೂರು ಪ್ರವಾಸೋದ್ಯಮ
ಸಾಂದರ್ಭಿಕ ಚಿತ್ರ
  • Share this:
ಮೈಸೂರು (ಏ. 14): ಸಾಂಸ್ಕೃತಿಕ ನಗರಿ ವರ್ಷಪೂರ್ತಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ನಗರ. ದೇಶ ವಿದೇಶಗಳ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದ ನಗರ. ಪ್ರವಾಸೋದ್ಯಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಹೊಂದಿರುವ ಮೈಸೂರು ಇದೀಗ ಖಾಲಿ ಹೊಡೆಯುತ್ತಿದೆ. ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ತಾಣಗಳು ಬಿಕೋ ಎನ್ನುತ್ತಿದೆ. ಕೊರೋನಾ ಎರಡನೆ ಅಲೆಯಿಂದಾಗಿ ಮೈಸೂರು ಪ್ರವಾಸೋದ್ಯಮ ಪಾತಾಳಕ್ಕೆ ಕುಸಿದಿದೆ.  ಮೈಸೂರು ಪ್ರವಾಸೋದ್ಯಮವನ್ನೇ ನಂಬಿದ್ದವರನ್ನು ಕೊರೋನಾ ಆತಂಕದಲ್ಲಿ ಮುಳುಗಿಸಿದೆ. ನಗರ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳೆಲ್ಲಾ ಪ್ರವಾಸಿಗರಿಲ್ಲದೆ ಬಣ ಬಣಗುಡುತ್ತಿವೆ. ಸಾಲು ಸಾಲು ರಜೆ ಬಂದಾಗ ಜನರಿಂದ ತುಂಬಿತುಳುಕುತ್ತಿದ್ದ, ತಾಣಗಳು ಈಗ ಕೊರೋನಾ ಹಿನ್ನಲೆ ಖಾಲಿ ಖಾಲಿಯಾಗಿವೆ. 

ಜನರೇ ಇಲ್ಲದ ಸಂಪೂರ್ಣ ಖಾಲಿಮಯವಾದ ಮೈಸೂರು ಅರಮನೆ ಪ್ರವಾಸಿರನ್ನ ಕೈ ಬಿಸಿ ಕರೆಯುತ್ತಿದೆ. ಮೈಸೂರು ಮೃಗಾಲಯಕ್ಕೂ ಪ್ರಾಣಿ ಪ್ರಿಯರು ಭೇಟಿ ನೀಡುತ್ತಿ್ಲ್ಲ. ಚಾಮುಂಡಿಬೆಟ್ಟ, ಜಗನ್ಮೋಹನ ಅರಮನೆ, ಇತರೆ ಪ್ರದೇಶಕ್ಕೂ ಪ್ರವಾಸಿಗರ ಸಂಖ್ಯೆ ಇಳಿಕೆ ಕಂಡಿದೆ.  ಇದಕ್ಕೆ ಕಾರಣ ಕೊರೋನಾದ ಎರಡನೆ ಅಲೆ. ಪ್ರತಿನಿತ್ಯ 10 ಸಾವಿರ ಪ್ರವಾಸಿಗರು ಅರಮನೆ, ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದರು.  ಲಾಕ್‌ಡೌನ್ ನಂತರವು ಚೇತರಿಕೆ ಕಂಡಿದ್ದ ಪ್ರವಾಸೋದ್ಯಮ ಇದೀಗ ಎರಡನೆ ಅಲೆ ನಂತರ ಪ್ರವಾಸಿಗರ ಸಂಖ್ಯೆ 1000 ಗಡಿಯನ್ನ ದಾಟುತ್ತಿಲ್ಲ. ಕೊರೋನಾ ಎರಡನೇ ಅಲೆಯಿಂದಾಗಿ ಮತ್ತೆ ಪಾತಾಳಕ್ಕೆ  ಪ್ರವಾಸೋದ್ಯಮ ಕುಸಿದಿದ್ದು, ಪ್ರವಾಸೋದ್ಯಮವನ್ನೆ ನಂಬಿವರಿಗು ಆರ್ಥಿಕವಾಗಿ ನಷ್ಟ ಉಂಟಾಗಿದೆ. ಪ್ರವಾಸಿಗರನ್ನೇ ನಂಬಿದ್ದ ವ್ಯಾಪಾರಸ್ಥರಿಗೆ ಕೊರೋನಾ ಹೊಡೆತ ಹೆಚ್ಚಾಗಿದ್ದು, ಬಾಡಿಗೆ ಕಟ್ಟಲಾಗದೆ, ಲೋನ್‌ ತೀರಿಸಲಾಗದೆ ಪರದಾಡುವಂತಾಗಿದೆ.


ಟೂರಿಸಂ ಸೀಸನ್​ನಲ್ಲಿ ನಿತ್ಯವೂ 30ರಿಂದ 35 ಸಾವಿರ ಪ್ರವಾಸಿಗರು ಭೇಟಿ ಮೈಸೂರಿಗೆ ಭೇಟಿ ನೀಡುತ್ತಾರೆ ಅಷ್ಟೇ ಪ್ರಮಾಣದ ಪ್ರವಾಸಿಗರು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೂ ಬಂದು ಹೋಗುತ್ತಾರೆ. ಆದ್ರೀಗ ಸಾಲು ಸಾಲು ರಜೆ, ವೀಕೆಂಡ್ ಇದ್ದರೂ ಜನ ಬರುತ್ತಿಲ್ಲ. ಕೊರೋನಾ ಮಾರ್ಗಸೂಚಿ, ನೈಟ್ ಕರ್ಫ್ಯೂ  ಹಾಗೂ ನೆಗಟಿವ್‌ ರಿಪೋರ್ಟ್‌ ಕಡ್ಡಾಯ ಮಾಡಿದ್ದ ಹಲವು ವಿಚಾರ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಸಿರುವುದು ಇದಕ್ಕೆ ಪ್ರಮುಖ ಕಾರಣ.

ಕಳೆದ ಎರಡು ವಾರದಿಂದ ಮೈಸೂರು ಅರಮನೆ ಮೈದಾನ ಖಾಲಿ ಹೊಡೆಯುತ್ತಿತ್ತು. ಅದು ವಾರದ ದಿನಗಳಿಗೂ ವ್ಯತ್ಯಾಸ ಆಗಿಲ್ಲ.  ಮೃಗಾಲಯದ ಹೊರ ಹಾಗೂ ಒಳಾವರಣವೂ ಬಿಕೋ ಅನ್ನುವಂತಿತ್ತು. ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿರುವ ಕಾರಣ ರಾತ್ರಿ ಊಟ, ವಸತಿಗೆ ಸಮಸ್ಯೆ ಆಗುತ್ತದೆ ಅಂತ ಬಹುತೇಕರು ಟ್ರಿಪ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಇದರ ನಡುವೆಯೂ ಹೊಂದಷ್ಟು ಪ್ರವಾಸಿಗರು, ಕುಟುಂಬ ಸಮೇತರಾಗಿ ಬಂದು ಮೈಸೂರಿನ ಸೌಂದರ್ಯ ಸವಿಯುತ್ತಿದ್ದಾರೆ.

ಪ್ರವಾಸೋದ್ಯಮದಿಂದ ಸರ್ಕಾರಕ್ಕೆ ಭಾರಿ ಲಾಭವೇನೂ ಬರುತ್ತಿಲ್ಲ. ಅರಮನೆ ಆಡಳಿತ ಮಂಡಳಿ, ಕರ್ನಾಟಕ ಮೃಗಾಲಯ ಪ್ರಾಧಿಕಾರ ಮುಂತಾದವು ಕೊರೋನಾ ಕಾರಣಕ್ಕಾಗಿ ಉಂಟಾಗಿರುವ ನಷ್ಟ ಭರಿಸುವ ಗೋಜಿನಲ್ಲಿಯೇ ಮುಳುಗಿ ಹೋಗಿವೆ. ಪರಿಸ್ಥಿತಿ ಹೀಗಿರುವಾಗ ಪ್ರವಾಸಿಗರು ಹಿಂದೇಟು ಹಾಕುತ್ತಿರುವುದು ಗಾಯದ ಮೇಲೆ ಬರೆ ಎಳೆದಂತೆ ಕಾಣುತ್ತಿದೆ.
Published by: Seema R
First published: April 14, 2021, 5:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories