• Home
 • »
 • News
 • »
 • state
 • »
 • Mysore Palace: ಮೈಸೂರು ಅರಮನೆ ನೋಡ್ಬೇಕು ಅಂದ್ರೆ ಎರಡೂ ಲಸಿಕೆ ತೆಗೆದುಕೊಂಡಿರ್ಲೇಬೇಕು

Mysore Palace: ಮೈಸೂರು ಅರಮನೆ ನೋಡ್ಬೇಕು ಅಂದ್ರೆ ಎರಡೂ ಲಸಿಕೆ ತೆಗೆದುಕೊಂಡಿರ್ಲೇಬೇಕು

ಮೈಸೂರು ಅರಮನೆ

ಮೈಸೂರು ಅರಮನೆ

Corona Vaccine: ಮೈಸೂರಿನಲ್ಲಿ ಇನ್ನ ಪ್ರವಾಸಿತಾಣಗಳಲ್ಲಿ ಸಾಕಷ್ಟು ಮುಂಜಾಗ್ರತೆ ಕ್ರಮ ಕೈಗೊಳ್ಳುವುದರ ಜೊತೆಗೆ ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿಯೂ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ..ಯಾರು ಕಡ್ಡಾಯವಾಗಿ ಕೊರೊನಾ ಲಸಿಕೆಯನ್ನು ಪಡೆದುಕೊಂಡಿರುತ್ತಾರೋ ಅಂಥವರಿಗೆ ಮಾತ್ರ ಮೈಸೂರು ಅರಮನೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ

ಮುಂದೆ ಓದಿ ...
 • Share this:

  ಮುಂದಿನ ಎರಡು ವಾರ ಭಾರತಕ್ಕೆ (India) ನಿರ್ಣಾಯಕವಾಗಿದ್ದು, ಇಡೀ ದೇಶವನ್ನು ಕೊರೊನಾ ವೈರಸ್ (Corona Virus) ಸಂಪೂರ್ಣವಾಗಿ ಆವರಿಸಿಕೊಳ್ಳಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಭಾರತ ಸರ್ಕಾರವನ್ನು(Indian Government) ಎಚ್ಚರಿಸಿದೆ. ಇದರ ಬೆನ್ನಲ್ಲೇ ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 90,928 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ.. ರಾಜ್ಯದಲ್ಲೂ ಸಹ ಪತ್ತೆಯಾಗಿರುವ ಪ್ರಕರಣಗಳ ಸಂಖ್ಯೆ 4000 ಗಡಿದಾಟಿದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು (State Government) ಮತ್ತು ಹೆಚ್ಚಾಗದಂತೆ ತಡೆಯಲು ನಾನ ಪ್ರಯತ್ನಗಳನ್ನು ಮಾಡುತ್ತಿವೆ. ರಾಜ್ಯ ಸರ್ಕಾರ ಹಲವು ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು ಅವುಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಮುಂದಾಗಿದೆ.. ಅದರಲ್ಲೂ ರಾಜ್ಯದ ಪ್ರವಾಸಿ ತಾಣಗಳಿಗೆ ಸೋಂಕಿನ ನಡುವೆಯೂ ಅಧಿಕ ಜನರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿತಾಣಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ 2 ಡೋಸ್ ಲಸಿಕೆ ಪಡೆದುಕೊಂಡವರಿಗೆ ಮಾತ್ರ ಪ್ರವಾಸಿ ತಾಣಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ.


  ಲಸಿಕೆ ಪಡೆದುಕೊಂಡವರಿಗೆ ಮಾತ್ರ ಮೈಸೂರು ಅರಮನೆಗೆ ಪ್ರವೇಶ


  ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಹೀಗೆ ಬಂದ ಪ್ರವಾಸಿಗರು ವಿಶ್ವವಿಖ್ಯಾತ ಮೈಸೂರು ಅರಮನೆಯನ್ನು ನೋಡದೆ ಹೋಗುವುದಿಲ್ಲ.. ಹೀಗಾಗಿ ಮೈಸೂರಿನಲ್ಲಿ ಇನ್ನ ಪ್ರವಾಸಿತಾಣಗಳಲ್ಲಿ ಸಾಕಷ್ಟು ಮುಂಜಾಗ್ರತ ಕ್ರಮ ಕೈಗೊಳ್ಳುವುದರ ಜೊತೆಗೆ ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿಯೂ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.. ಯಾರು ಕಡ್ಡಾಯವಾಗಿ ಕೊರೊನಾ ಲಸಿಕೆಯನ್ನು ಪಡೆದುಕೊಂಡಿರುತ್ತಾರೋ ಅಂಥವರಿಗೆ ಮಾತ್ರ ಮೈಸೂರು ಅರಮನೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮೈಸೂರು ಅರಮನೆ ಆಡಳಿತ ಮಂಡಳಿ ಆದೇಶ ಮಾಡಿದೆ.


  ಇದನ್ನೂ ಓದಿ: ನಾಲ್ವಡಿಯವರು ಕಟ್ಟಿದ ಈ ಊರಿಗೆ ಈಗ 100 ವರ್ಷದ ಸಂಭ್ರಮ; ಮೈಸೂರಿನಲ್ಲೊಂದು ಅಪರೂಪದ ಶತಮಾನೋತ್ಸವ


  ಕಳೆದ ಬಾರಿ ಕೊರೊನಾದಿಂದ ಮೈಸೂರು ಪ್ರವಾಸೋದ್ಯಮಕ್ಕೆ ಹೊಡೆತ


  ಇನ್ನು ಕಳೆದ ಬಾರಿ ಕೊರೋನಾ ವೇಳೆ ಮೈಸೂರು ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿತು.. ಹೀಗಾಗಿ ಅರಮನೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಕುಸಿತವಾಗಿ ಮೈಸೂರು ಅರಮನೆ ಆಡಳಿತ ಮಂಡಳಿಗೆ ಬರುತ್ತಿದ್ದ ಆದಾಯ ಕಡಿಮೆಯಾಗಿತ್ತು.. ಈಗ ಕೊರೋನಾ ಮೂರನೇ ಅಲೆ ಬಂದಿರುವುದರಿಂದ, ಮುಂಜಾಗೃತ ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಮೈಸೂರು ಅರಮನೆ ಆಡಳಿತ ಮಂಡಳಿ ಲಸಿಕೆ ಪಡೆದುಕೊಂಡವರಿಗೆ ಅಷ್ಟೇ ಅರಮನೆ ಪ್ರವೇಶಕ್ಕೆ ಅನುಮತಿ ನೀಡಿದೆ.


  ಕೆಲವು ದಿನಗಳ ಹಿಂದಷ್ಟೇ ಅರಮನೆ ಆವರಣದಲ್ಲಿ ನಡೆದಿದ್ದ ಫಲಪುಷ್ಪ ಪ್ರದರ್ಶನ


  ಇನ್ನು ಕೊರೊನಾ ಆರ್ಭಟ ಹೆಚ್ಚಾಗುವ ಮೊದಲೇ ಮೈಸೂರು ಅರಮನೆ ಆವರಣದಲ್ಲಿ ಕೆಲವು ದಿನಗಳ ಹಿಂದಷ್ಟೇ ಮೈಸೂರು ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿತ್ತು… ಈ ಫಲಪುಷ್ಪ ಪ್ರದರ್ಶನ ಮುಕ್ತಾಯವಾದ ಬೆನ್ನಲ್ಲೇ ಮೈಸೂರು ಅರಮನೆ ಆಡಳಿತ ಮಂಡಳಿ ಅರಮನೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕೊರೊನಾ ಲಸಿಕೆ ಪಡೆದುಕೊಂಡರೆ ಮಾತ್ರ ಅವಕಾಶ ಎಂಬ ನಿರ್ಧಾರ ಮಾಡಿದೆ.


  ಇದನ್ನೂ ಓದಿ: ಶತಮಾನದ ಸಂಭ್ರಮದಲ್ಲಿ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್


  ವೀಕೆಂಡ್ ಕರ್ಫ್ಯೂ ವೇಳೆ ಮೃಗಾಲಯಕ್ಕೆ ಪ್ರವಾಸಿಗರ ನಿರ್ಬಂಧ


  ಇನ್ನು ಕೊರೊನಾ ಲಸಿಕೆ ಪಡೆದವರಿಗೆ ಮಾತ್ರ ಮೈಸೂರು ಅರಮನೆ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದರೆ ವೀಕೆಂಡ್ ಕರ್ಫ್ಯೂ ವೇಳೆ ಪ್ರಸಿದ್ಧ ಚಾಮರಾಜೇಂದ್ರ ಮೃಗಾಲಯ ಮತ್ತು ಕಾರಂಜಿ ಪ್ರಕೃತಿ ಉದ್ಯಾನವನದ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇನ್ನು ಕಾರಂಜಿ ಕೆರೆಗೆ ಮಂಗಳವಾರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಸಾಮಾನ್ಯವಾಗಿ ಪ್ರತಿವಾರವೂ ಮಂಗಳವಾರ ಮೃಗಾಲಯ ಮತ್ತು ಕಾರಂಜಿಕೆರೆಗೆ ರಜೆಯಿದ್ದು, ಆ ದಿನ ಪ್ರವೇಶ ನಿರ್ಬಂಧಿಸಲಾಗುತ್ತಿತ್ತು. ಆದರೆ ವೀಕೆಂಡ್ ಕರ್ಫ್ಯೂ ಜಾರಿಯಾಗಿರುವ ಕಾರಣ ಶನಿವಾರ ಮತ್ತು ಭಾನುವಾರದ ಬದಲಿಗೆ ಮಂಗಳವಾರ ವೀಕ್ಷಕರಿಗೆ ಅವಕಾಶ ಮಾಡಿಕೊಡಲಾಗಿದೆ.ಸರ್ಕಾರ ಎರಡು ವಾರಗಳ ಕಾಲ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಿರುವ ಕಾರಣ ಜನವರಿ 8, 9, 15 ಮತ್ತು 16ರಂದು ಮೃಗಾಲಯಕ್ಕೆ ಪ್ರವೇಶವಿರುವುದಿಲ್ಲ. ಬದಲಿಗೆ ಜನವರಿ 11 ಮತ್ತು 18ರಂದು ಮಂಗಳವಾರ ಪ್ರವಾಸಿಗರು ಭೇಟಿ ನೀಡಬಹುದಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

  Published by:ranjumbkgowda1 ranjumbkgowda1
  First published: